Friday, November 28, 2025

ಏಳು ಜನ್ಮದ ಸಂಬಂಧ

 #ತರಲೆ## ಮದುವೆ ಅನ್ನೋದು ಏಳು ಜನ್ಮದ ಸಂಬಂಧ ಯಾಕೆ ಅಂತಾರೆ ಅಂತ ಯೋಚ್ನೆ ಮಾಡ್ತಾ ಇದ್ದೆ, ಆಮೇಲೆ ಅನ್ನಿಸ್ತು ಹೆಂಗಸರಿಗೆ ಗಂಡಸರನ್ನು ಪಳಗಿಸೋಕೆ 3 ಜನ್ಮ, ಬಡಪಾಯಿ ಗಂಡಂದಿರಿಗೆ ಸುಧಾರಿಸಿಕೊಳ್ಳೋಕೆ 3 ಜನ್ಮ.... ಈ ಸಂಬಂಧ ಸರಿಯಾಗಿ ಹೋಗ್ತಾ ಇದ್ಯಾ ಅಂತ ಯೋಚ್ನೆ ಮಾಡೋಕೆ ಇನ್ನೊಂದು.... 🤣🤣**ಶ್ರೀ**

Monday, November 24, 2025

ಮರೆವು

 ##ತರಲೆ##ಮರೆವು ಯಾವ್ ಲೆವೆಲ್ ಗೆ ಅಂದ್ರೆ ಮುಂಚೆ ಗಾಡಿಯ key ಮರೀತಾ ಇದ್ವಿ,  ಈಗ ಎಲ್ಲಾದ್ರೂ ಹೋಗಿದ್ದಾಗ ಗಾಡಿ ತಂದಿದೀವಿ ಅನ್ನೋದನ್ನೇ ಮರೀತಾ ಇದೀವಿ 🤣🤣**ಶ್ರೀ**

Wednesday, November 12, 2025

Break up

##ತರಲೆ##ಇತ್ತೀಚಿಗೆ ಬ್ರೇಕ್ ಅಪ್ ಆದ ಫ್ರೆಂಡ್ ಹೇಳಿದ್ದು... ಆಫೀಸ್ ಅಲ್ಲಿ resign ಮಾಡಿದ್ರೆ ನೋಟೀಸ್ ಪಿರಿಯಡ್ ಅಲ್ಲಿ new joinee ಗೆ  knowledge transfer ಮಾಡಿ ಹೋಗ್ತಾರೆ ಅಲ್ವಾ ಅದೇ ರೀತಿ ಬ್ರೇಕ್ ಮಾಡಿ ಹೋಗ್ಬೇಕಾದ್ರೆ ಹಳೇ ಗರ್ಲ್ ಫ್ರೆಂಡ್ ಹೊಸ ಗರ್ಲ್ ಫ್ರೆಂಡ್ ಗೆ ಹಳೇ relationship ಬಗ್ಗೆ knowledge transfer ಮಾಡಿ ಹೋಗಬೇಕಲ್ವಾ ಅಂತ....🤣🤣🤣**ಶ್ರೀ**

Tuesday, November 11, 2025

ಹೆಣ್ ಮಕ್ಕಳೇ ಸ್ಟ್ರಾಂಗ್

 #ತರಲೆ##Eon musk ಅಂತಾ richest ಮನುಷ್ಯನದ್ದು ಡೈವೋರ್ಸ್ ಆಗಿದೆ, 6pack ಇರೋ ಹೃತಿಕ್ ದು ಡೈವೋರ್ಸ್ ಆಗಿದೆ, Fastest bowler ಶಮಿ ದು ಆಗಿದೆ. ಪರಿಸ್ಥಿತಿ ಹೀಗಿರೋವಾಗ ಡೈವೋರ್ಸ್ ಆಗದೆ ಅದೆಷ್ಟೋ ಸಂಸಾರ ಮುಂದುವರೀತಿದೆ ಅಂದ್ರೆ ಒಂದೇ ಗಂಡ ಸಕಲ ಕಲಾ ವಲ್ಲಭ ಆಗಿರ್ಬೇಕು ಇಲ್ಲ ಅಂದ್ರೆ ಹೆಂಡ್ತಿ ಏನೇ ಹೇಳಿದ್ರೂ ಕೇಳಿ ಸುಮ್ಮನಿರೋ ಹೃದಯ ಶ್ರೀಮಂತಿಕೆ ಇರ್ಬೇಕು🤣🤣**ಶ್ರೀ**

Thursday, November 6, 2025

Emi....

 ##ತರಲೆ##ಲೋನ್ ತಗೊಂಡು EMI ಕಟ್ಟಕ್ಕೆ ಆಗದೆ suicide ಮಾಡಿಕೊಂಡಿದ್ನಂತೆ... ಅವನ ಆತ್ಮ ಸ್ವರ್ಗಕ್ಕೆ ಹೋಗೋದ ಅಥವಾ ನರಕಕ್ಕೆ ಹೋಗೋದಾ ಅಂತ ಯೋಚ್ನೆ ಮಾಡ್ತಾ ಇರ್ಬೇಕಾದ್ರೆ ಅಲ್ಲಿನೂ ಲೋನ್ ಬೇಕಾ ಅಂತ bajaj finance ಮತ್ತೆ hdfc ಬ್ಯಾಂಕ್ ಇಂದ ಕಾಲ್ ಬಂತಂತೆ... ಅಷ್ಟು ಪ್ರೀತಿ ಇವ್ರಿಗೆ 🤣🤣**ಶ್ರೀ**

Tuesday, November 4, 2025

ಯೋಗ ಪ್ಯಾಂಟ್

 ##ತರಲೆ## ದೇಹಕ್ಕೆ ಅಂಟಿಕೊಂಡಂತೆ ಯೋಗ ಪ್ಯಾಂಟ್ ಹಾಕಿಕೊಂಡು catwalk ಮಾಡೋರನ್ನು ನೋಡಿದಾಗ ಮನಸ್ಸಿನಲ್ಲಿ ಬರೋ ಪ್ರಶ್ನೆ...ಇದನ್ನು ಸ್ಟಿಚ್ ಮಾಡಿ ಹಾಕ್ಕೋತಾರಾ ಅಥವಾ ಹಾಕಿಕೊಂಡು ಸ್ಟಿಚ್ ಮಾಡ್ತಾರಾ ಅಂತ 🤣🤣🤣**ಶ್ರೀ**

Monday, November 3, 2025

Chat gpt....

#ತರಲೆ ## Chat- gpt ಕ್ರಿಯೇಟ್ ಮಾಡ್ತಾ ಇದ್ದ ಬಡ್ಡಿ ಮಗನಿಗೆ ಆ app, ಮದ್ಯದಲ್ಲೇ ಅವನಿಗೇ ಗೊತ್ತಿಲ್ಲದ ಹಾಗೆ ಅವ್ನ ಹೆಸರಲ್ಲಿ ಒಂದು resignation ಲೆಟರ್ ಟೈಪ್ ಮಾಡಿ ಅವ್ನ ಬಾಸ್ ಗೆ ಕಳಿಸಿದ್ದರೆ ಅದೆಷ್ಟು ಜನ ಖುಷಿ ಪಡ್ತಾ ಇದ್ರೇನೋ🤣🤣**ಶ್ರೀ**