Friday, February 27, 2026

ಪೂರಿ ಮತ್ತು ಅಹಂಕಾರ

 #ತರಲೆ##ನಾವು ತಿನ್ನೋ ಪೂರಿಗೆ ಸಿಕ್ಕಾಪಟ್ಟೆ ಅಹಂಕಾರ ಅಲ್ವಾ? ಯಾರ ಮನೇಲಿ ಅಥವಾ ಹೋಟೆಲ್ ಅಲ್ಲಿ ತಯಾರಿ ಮಾಡಿದ್ರೂ ಅದರ ಮುಖ ಉದಿಕೊಂಡೇ ಇರತ್ತೆ 🤣🤣**ಶ್ರೀ**

Wednesday, February 25, 2026

ಹಣ ಹಣ

 ##ತರಲೆ##ನಾವು ಹಣಕ್ಕೆ ಪ್ರಾಮುಖ್ಯತೆ ಕೊಡಲೇಬಾರದು... ಯಾಕಂದ್ರೆ ನಮ್ಮ ಹತ್ರ ಹಣ ನಿನ್ನೆನೂ ಇರ್ಲಿಲ್ಲ, ಇವತ್ತೂ ಇಲ್ಲ, ನಾಳೇನು ಖಂಡಿತವಾಗಿಯೂ ಇರಲ್ಲ. ಅಷ್ಟು ಭರವಸೆ ನಮ್ಮ ಅದೃಷ್ಟದ ಬಗ್ಗೆ...🤣🤣🤣**ಶ್ರೀ**

ನಾವು ಮತ್ತೆ AI

 #ತರಲೆ##ಎಷ್ಟೋ ಸಲ ಮೊಬೈಲ್ ಎಲ್ಲಿಟ್ಟೆ ಅಂತ ಅದೇ Mobile ಅಲ್ಲಿ light ಹಾಕಿ ಹುಡುಕ್ತಾ ಇರ್ತೀವಿ....ಇನ್ನು ನಮ್ ಕೈಗೆ AI ಕೊಟ್ರೆ ಹೇಗಿರಬಹುದು?🤣🤣**ಶ್ರೀ**

Monday, February 23, 2026

ಸಂಬಳ ಹೈಕು ಇತ್ಯಾದಿ

 #ತರಲೆ## Emi ಲಕ್ಷಗಳಲ್ಲಿ, ಸಂಬಳ ಸಾವಿರಗಳಲ್ಲಿ, bonus ನೂರುಗಳಲ್ಲಿ, hike ಚಿಲ್ಲರೆಯಲ್ಲಿ... ಒಟ್ಟಿನಲ್ಲಿ ನಾವು ಸದಾ ಚಿಂತೆಯಲ್ಲಿ 🤣🤣🤣**ಶ್ರೀ**

Thursday, February 19, 2026

Crash course

 #ತರಲೆ##ಇತ್ತೀಚೆಗೆ ಎಲ್ಲಾ ಸೂಪರ್ ಫಾಸ್ಟು. ಬೇಗ ಕಲಿಯಕ್ಕೆ ಎಲ್ಲದ್ರಲ್ಲೂ crash ಕೋರ್ಸ್ ಇದೆ. ಆದ್ರೆ pilot ಟ್ರೈನಿಂಗ್ ಗು crash ಕೋರ್ಸ್ ಶುರು ಮಾಡದಿದ್ರೆ ಸಾಕು. ಟ್ರೈನಿಂಗ್ ಇರೋದೇ ಪ್ಲೇನ್ crash ಆಗದೇ ಇರೋ ತರ  ಓಡಿಸೋಕೆ, ಅದನ್ನೇ crash ಮಾಡಿದ್ರೆ 🤣🤣🤣**ಶ್ರೀ**

Wednesday, February 18, 2026

Laptop

 ##ತರಲೆ## Laptop ಆನ್ ಆಗ್ತಾ ಇಲ್ಲ ಅಂತ ಸಿಸ್ಟಮ್ ಅಡ್ಮಿನ್ ಹತ್ರ ಹೋದ್ರೆ ... ಅವ್ರು ಒಮ್ಮೆ ಆನ್ ಮಾಡಿ ತೋರಿಸಿ,  ಏನ್ ಪ್ರಾಬ್ಲಮ್ ಇದೆ  ಅಂತ ನೋಡೋಣ ಅಂತ ನಮಗೇ ಹೇಳೋದ? 🤣🤣**ಶ್ರೀ *

Friday, February 13, 2026

ಅರ್ಥ ಮಾಡಿಕೊಳ್ಳೋ ಪ್ರಯತ್ನದಲ್ಲಿ

 #ತರಲೆ##ಜನರನ್ನು ಜಾಸ್ತಿ ಅರ್ಥ ಮಾಡಿಕೊಳ್ಳಕ್ಕೆ ಪ್ರಯತ್ನ ಪಡೋದೇ ತಪ್ಪು... ಅರ್ಥವಾದಷ್ಟು ಅವರಿಂದ ದೂರ ಇರಬೇಕು ಅನ್ನಿಸುತ್ತೆ 🤣🤣**ಶ್ರೀ**

Wednesday, February 11, 2026

Honeymoon

 ##ತರಲೆ##Honeymoon ಜಾಸ್ತಿ ಸಮಯ ನೆನಪಲ್ಲಿ ಉಳೀಬೇಕು ಅಂದ್ರೆ ಏನು ಮಾಡಬೇಕು? ಸಾಲ ತಗೊಂಡು ಟ್ರಿಪ್ ಹೋಗಬೇಕು, EMI ಕಟ್ಟೋವಾಗಲೆಲ್ಲ ನೆನಪಾಗ್ತಾ ಇರತ್ತೆ 🤣🤣**ಶ್ರೀ**

Thursday, February 5, 2026

ಒಳ್ಳೆಯವ್ರು

 #ತರಲೆ##ಒಳ್ಳೇ ಮನುಷ್ಯರುಗಳದ್ದು ಒಂದೇ use... ಅದೇನಪ್ಪ ಅಂದ್ರೆ ಸಿಕ್ ಸಿಕ್ಕಿದವರೆಲ್ಲ ಇವ್ರನ್ನು ಮಾಡೋದು misuse🤣🤣🤣**ಶ್ರೀ**

Wednesday, February 4, 2026

ಆಟೋ ಮತ್ತು app

 ##ತರಲೆ## ಬೆಂಗಳೂರು ಆಟೋ ಡ್ರೈವರ್ ಹತ್ರ App ಅಲ್ಲಿ 70 ರೂಪಾಯಿ ತೋರಿಸ್ತಾ ಇದೆ ನೀವು 150 ಕೇಳ್ತಾ ಇದೀರಾ ಅಂತಾ ಹೇಳಿದ್ರೆ.... ನೀವು app ಅಲ್ಲೇ ಕೂತ್ಕೊಂಡು ಹೋಗಿ ಅನ್ನೋದ??🤣🤣??**ಶ್ರೀ**

Tuesday, February 3, 2026

ಟಿಕೆಟ್

 ##ತರಲೆ##ಮೆಟ್ರೋದಲ್ಲಿ ದಿನಕ್ಕೆ ಒಂದೇ ಸರ್ತಿ ಹೋಗಿ ಬರೋ ನಮ್ಮ ಹತ್ರ ಟಿಕೆಟ್ ವಸೂಲಿ ಮಾಡ್ತಾರೆ, ದಿನವಿಡೀ ಅದ್ರಲ್ಲೇ ಓಡಾಡೋ ಮೆಟ್ರೋ ಡ್ರೈವರ್ ಹತ್ರ ಯಾರೂ ಕಾಸು ತಗೋಳಲ್ಲ.... ಇದು ಅನ್ಯಾಯ ಅಲ್ವಾ 🤣🤣🤣**ಶ್ರೀ**