Tuesday, July 7, 2026

Innovation

 ##ತರಲೆ##ಕಂಪನಿಯಲ್ಲಿ ಯಾವಾಗ್ಲೂ ಏನಾದ್ರೂ Innovation ಮಾಡಿ ಅಂತಾ ಇರ್ತಾರೆ.... ಯಾರಾದ್ರೂ ಇದನ್ನು ಸೀರಿಯಸ್ ಆಗಿ ತಗೊಂಡು AI ಅಂತದ್ದೇನಾದ್ರೂ invent ಮಾಡ್ತಾರೆ. ಆಮೇಲೆ Evacuation drive ಅಂತ ಹೇಳಿ ಕಂಪನಿಯಿಂದ ಹೊರಗೆ ಹಾಕಿ bye bye ಹೇಳ್ತಾರೆ 🤣🤣**ಶ್ರೀ**

Monday, July 6, 2026

ಸೊಳ್ಳೆ ಅನ್ನೋ ಡ್ರೋನ್

 #ತರಲೆ##ಮಳೆಗಾಲ.....ಸೊಳ್ಳೆ ಅನ್ನೋ ಡ್ರೋನ್,  ರೋಗಗಳ war head ಹೊತ್ಕೊಂಡು ನಮ್ಮ ಮನೆಗಳ ಮೇಲೆ attack ಶುರು. ಡ್ರೋನ್ attack ಆದ್ರೆ ಡೆಂಗ್ಯೂ ಮಲೇರಿಯ ಗ್ಯಾರಂಟಿ. ಇನ್ನು counter attack ಗೆ ಸೊಳ್ಳೆ ಬ್ಯಾಟ್ ಅನ್ನೋ brahmos ತಗೊಳ್ಳೋದೋ, goodnight ಅನ್ನೋ missile ತಗೊಳ್ಳೋದೋ ಅಥವಾ ಬರೀ ಕೈಲಿ ಮಷೀನ್ ಗನ್ ತರ ಹೊಸಕಿ ಹಾಕೋದೋ ಅಂತ ಮನೇಲಿರೋ ಸೈನಿಕರು ನಿರ್ಧಾರ ಮಾಡಬೇಕು ಅಷ್ಟೇ🤣🤣**ಶ್ರೀ**

Thursday, July 2, 2026

Surge pricing

 #ತರಲೆ## ಈ ಓಲಾ ಉಬರ್ Surge pricing ಹೇಗೆ ಅನ್ನಿಸುತ್ತೆ ಅಂದ್ರೆ,  ಈ ಥಿಯೇಟರ್ ನವ್ರು ಅವ್ರೇ ಹೊರಗೆ ಬಂದು ತಮ್ಮದೇ ಟಿಕೆಟ್ ಅನ್ನು ಬ್ಲಾಕ್ ಅಲ್ಲಿ ಡಬಲ್ ರೇಟ್ ಅಲ್ಲಿ ಸೇಲ್ ಮಾಡಿದ ಹಾಗೇ 🤣🤣🤣**ಶ್ರೀ **

Wednesday, July 1, 2026

Passion ಫಾಲೋ ಮಾಡೋದು

 **ತರಲೆ**ಫ್ರೆಂಡ್ ಒಬ್ಬ ಟ್ರಾವೆಲ್ಲಿಂಗ್ ನನ್ನ passion ಅದನ್ನು follow ಮಾಡ್ತೀನಿ ಅಂತಿದ್ದ...... ಈಗ ola ಕ್ಯಾಬ್ ಓಡಿಸ್ತಾ ಇದಾನೆ🤣🤣🤣**ಶ್ರೀ **

Monday, June 29, 2026

ಹೊಟ್ಟೆ ಮತ್ತು ಮೆಟ್ರೋ

 ##ತರಲೆ##gym membership ಕಾರ್ಡ್ ತೋರಿಸಿದ್ರೆ ಮೆಟ್ರೋ ಟಿಕೆಟ್ ದರದಲ್ಲಿ 5% ಡಿಸ್ಕೌಂಟ್ ಇದೆಯಂತೆ, ಯಾಕಂದ್ರೆ ಪೀಕ್ hours ಅಲ್ಲಿ ಮೆಟ್ರೋ ಡೋರ್ ಕ್ಲೋಸ್ ಅಗ್ತಾ ಇಲ್ವಂತೆ, ಜನರ ಹೊಟ್ಟೆ ಅಡ್ಡ ಬರ್ತಾ ಇದ್ಯಂತೆ 🤣🤣**ಶ್ರೀ **

Tuesday, June 16, 2026

ಟ್ರಂಪೇಶ್ವರ

 ##ತರಲೆ##ಮೊದ್ಲು ಇದು ಕಸ, ಸುಟ್ಟು ತೆಗೀಬೇಕು ಅಂತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದು, ಆಮೇಲೆ ಈ ಕಸ ತುಂಬಾ ಡೇಂಜರ್ ಅಂತಾ ಬೇರೆಯವರ ಕೈಲೂ ಪೆಟ್ರೋಲ್ ಹಾಕಿಸೋದು. ಬೆಂಕಿ ಜೋರಾದಾಗ ಕಂಟ್ರೋಲ್ ಮಾಡಿಲ್ಲ ಅಂದ್ರೆ ಎಲ್ರಿಗೂ ದೊಡ್ಡ ಪ್ರಾಬ್ಲಮ್ ಆಗತ್ತೆ ಅಂತಾ ಆರಿಸೋಕೆ ಇನ್ನಷ್ಟು ಜನರನ್ನು ಸೇರಿಸಿಕೊಳ್ಳೋದು. ಕಡೆಗೊಂದು ದಿನ ಪೆಟ್ರೋಲ್ ಸುರಿಯೋದನ್ನು ನಿಲ್ಲಿಸಿ ಬೆಂಕಿ ಆರಿಸಿ ನಿಮ್ಮೆಲ್ಲರ ಪರವಾಗಿ ನಾನು ಬೆಂಕಿ ಆರಿಸಿದ್ದೇನೆ ಅನ್ನೋದು... ಟ್ರಂಪೇಶ್ವರ 🤣🤣**ಶ್ರೀ **


ಹೊಟ್ಟೆ ಮತ್ತು ಫೋಟೋ....

##ತರಲೆ##ಫೋನ್ ಕ್ಯಾಮರದಲ್ಲಿ ಅದೆಷ್ಟೇ AI ಇದ್ರೂ, ಫೋಟೋ ದಲ್ಲಿ ಮುಖ ಚೆನ್ನಾಗಿ ಬಂದಿಲ್ಲ ಅಂದ್ರೂ ಹೊಟ್ಟೆ ಮಾತ್ರ ಗುಂಡು ಗುಂಡಾಗಿ ಚೆನ್ನಾಗಿ ಬರುತ್ತೆ....ಅವಸ್ಥೆ ಮಾರ್ರೆ 🤣🤣🤣**ಶ್ರೀ**

Thursday, June 11, 2026

ಜಲ್ಲಿಕಟ್ಟು ಮತ್ತು ತಾಳಿ ಕಟ್ಟು

 ##ತರಲೆ## ಯಾರೋ ಅಂತಿದ್ರು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಅಂತಾ ಒಂದು ಕ್ರೀಡೆ ಇದೆ, ಅದು ಸಿಕ್ಕಾಪಟ್ಟೆ ಡೇಂಜರಸ್ ಅಂತ... ನಾನಂದೆ ನಮ್ಮ ದೇಶವಿಡೀ ಇದಕ್ಕಿಂತ ಡೇಂಜರ್ ಆಗಿರೋ ಕ್ರೀಡೆ ಇದೆ... ಅದರ ಹೆಸರು "ತಾಳಿಕಟ್ಟು "" ಅಂತಾ 🤣🤣**ಶ್ರೀ**

Wednesday, June 10, 2026

ಬೆಂಗಳೂರು ಮತ್ತು ಟ್ರಾಫಿಕ್

 ##ತರಲೆ##ಬೆಂಗಳೂರಿಗೆ ಬಂದು 20 ವರ್ಷಗಳು ತುಂಬಿದೆ.... ವಿಪರ್ಯಾಸ ಅಂದ್ರೆ ಅದರಲ್ಲಿ 10 ವರ್ಷ ಟ್ರಾಫಿಕ್ ಅಲ್ಲಿ ಕಳೆದಿದೆ 🤣🤣**ಶ್ರೀ**

Friday, June 5, 2026

ಡಿವೋರ್ಸ್

 ##ತರಲೆ##ಡೈವೋರ್ಸ್ ಗಳನ್ನು ಕಡಿಮೆ ಮಾಡಬೇಕು ಅಂದ್ರೆ ಏನು ಮಾಡಬೇಕು? ಮದ್ವೆ ಆದ ಕೂಡ್ಲೇ ಇಬ್ರು ಸೇರಿ joint ಹೋಂ ಲೋನ್ ಮಾಡಬೇಕು... ಅಕಸ್ಮಾತ್ ಗಂಡ ಹೆಂಡಿರ ಜಗಳ ವಿಕೋಪಕ್ಕೆ ಹೋದ್ರೆ ಬ್ಯಾಂಕಿಂದ relationship ಮ್ಯಾನೇಜರ್ ಓಡೋಡಿ ಬಂದು ಜಗಳ ಬಿಡಿಸ್ತಾನೆ... ಲೋನ್ ಮುಗಿಯೋವಷ್ಟರಲ್ಲಿ ವೃದ್ದಾಶ್ರಮ ಸೇರೋ ಟೈಮ್ ಆಗಿರತ್ತೆ, ಡಿವೋರ್ಸ್ ಯೋಚ್ನೆ ನೇ ಬರಲ್ಲ 🤣🤣**ಶ್ರೀ **


Thursday, June 4, 2026

Cibil ಸ್ಕೋರು

 ##ತರಲೆ##ಸ್ಕೂಲ್, ಕಾಲೇಜುಗಳಲ್ಲಿ ಅದೆಷ್ಟು score ಮಾಡಿದ್ರೂ ಕಡೆಗೆ ಲೈಫು ನಡೆಯೋದು CIBIL Score ಇಂದ ಮಾತ್ರ🤣🤣🤣 **ಶ್ರೀ**

Monday, June 1, 2026

ಕಪ್ ನಮ್ದೇ

 ##ತರಲೆ##ಯಾರೋ ಹೋಟೆಲ್ ಅಲ್ಲಿ ಟೀ ಕುಡೀತಾ ಇದ್ದಾಗ ಜೋರಾಗಿ ಹೇಳ್ತಾ ಇದ್ರಂತೆ, ಅಂತೂ ಈ ಸಲ "ಕಪ್ ನಮ್ದೇ" ಅಂತಾ.... ವೇಟರ್ ಓಡೋಡಿ ಬಂದು ಹೇಳಿದ್ನಂತೆ ನೀವು ಟೀ ಗೆ ಮಾತ್ರ ಕಾಸು ಕೊಟ್ಟಿದ್ದು "ಕಪ್ ನಮ್ದು" ಅಂತಾ 🤣🤣**ಶ್ರೀ **


Friday, May 29, 2026

ಕಂಪನಿ ಮತ್ತು expectation

 ##ತರಲೆ##ಕಂಪನಿಯವರು employee ಗಳಿಗೆ ಸಂಬಳ ಕೊಡೋದು chinese ಬ್ಯಾಟರಿಗೆ ಆಗೋವಷ್ಟು ಕಾಸು... Performance Expectation ಮಾತ್ರ Duracell ದು 🤣🤣**ಶ್ರೀ **


Wednesday, May 27, 2026

ಪರಂಪರಾಗತ ಆಸ್ತಿ

 ##ತರಲೆ## Middle class ಅನ್ನೋದು.....ಯಾವುದೇ ವಿಲ್ ಅಥವಾ ಅಗ್ರಿಮೆಂಟ್ ಇಲ್ದೇ ಅಪ್ಪ ಅಮ್ಮನಿಂದ ಮಕ್ಕಳಿಗೆ ಬರೋ ಪರಂಪರಾಗತ ಆಸ್ತಿ🤣🤣**ಶ್ರೀ**

Tuesday, May 26, 2026

ನಾಳೆ ಮತ್ತು ಗಣೇಶ

 ತರಲೆ ##ನನಗೆ ಗಣೇಶ ಅಂದ್ರೆ ಅಚ್ಚು ಮೆಚ್ಚು... ಅದ್ಕೇ ಎಲ್ಲಾ ಕೆಲಸಗಳನ್ನು ನಾಳೆಗೆ postpone ಮಾಡ್ತಾ ಇರ್ತೀನಿ.....ಅವನೂ ತುಂಬಾ ಹುಷಾರೂ, ಮಗನೇ ಒಳ್ಳೇ ದಿನಗಳು ಕೂಡ ನಾಳೆಯಿಂದಲೇ ಆರಂಭ ಅಂತಾ ದಿನಾ ಹೇಳ್ತಾ ಇರ್ತಾನೆ 🤣🤣**ಶ್ರೀ**

Monday, May 25, 2026

ಹೊಸ ಸಂಧಿ

 ##ತರಲೆ##ಕನ್ನಡ ವ್ಯಾಕರಣದಲ್ಲಿ ಹೊಸ  ಸಂದಿಯ ಸೇರ್ಪಡೆ....... ಇರಾನ್ X ಅಮೇರಿಕಾ =ಹೊರ್ಮುಜ್ ಸಂದಿ 🤣🤣**ಶ್ರೀ **

Friday, May 22, 2026

ಕೂದಲು

##ತರಲೆ## ತಲೆ ಕೂದಲು ಉದುರೋ ಸಮಸ್ಯೆಗೆ ಎರಡು ಬೆಸ್ಟ್ ಉಪಾಯಗಳು. ಒಂದು ಕನ್ನಡಿ ನೋಡೋದನ್ನು ಬಿಡೋದು, ಇನ್ನೊಂದು ಉದುರಿರೋ ಕೂದಲನ್ನು ನೋಡಿ ಯಾರು ನನ್ನ ಬಿಟ್ಟು ಹೋದ್ರೂ ನಾನು ತಲೆ ಕೆಡಿಸ್ಕೊಳ್ಳಲ್ಲ ಅಂತ ಯೋಚ್ನೆ ಬಿಟ್ಟು ಬಿಡೋದು....ಇಷ್ಟು ಮಾಡಿದ್ರೆ ಸಾಕು, ಖುಷಿ ಖುಷಿಯಾಗಿ bald ಆಗಬಹುದು 🤣🤣🤣**ಶ್ರೀ**

Thursday, May 21, 2026

ನೀರು....

 ##ತರಲೆ##ಬೇಸಿಗೆಯಲ್ಲಿ ಬೇಕು ಅಂದ್ರೂ ನಳ್ಳಿಯಲ್ಲಿ ನೀರು ಬರೋದಿಲ್ಲ, ಮಳೆಗಾಲದಲ್ಲಿ ಚರಂಡಿ ನೀರು ಬೇಡ ಅಂದ್ರು ಎಲ್ಲಾ ರೂಮುಗಳ ಒಳಗೂ ಬರುತ್ತೆ, ಇನ್ನು ಚಳಿಗಾಲ ಬಂದ್ರೆ ಕೋಲ್ಡ್ ಆಗಿ ಮೂಗಿಂದ ನೀರು ಬರತ್ತೆ 🤣🤣🤣**ಶ್ರೀ**

Tuesday, May 19, 2026

ಧರ್ಮ ಮತ್ತು ಕರ್ಮ

 #ತರಲೆ## ಭಗವದ್ಗೀತೆ ಯಲ್ಲಿ ಅವತ್ತು ಕೃಷ್ಣ ಅರ್ಜುನನಿಗೆ ಹೇಳಿದ್ದ, ಇವತ್ತು ಕಂಪನಿಯವರು ಕೆಲಸದವರಿಗೆ ಹೇಳ್ತಾ ಇದ್ದಾರೆ "ನೀನು ನಿನ್ನ ಕೆಲಸ ಮಾಡು, ಪ್ರತಿಫಲದ ಬಗ್ಗೆ ಚಿಂತಿಸಬೇಡ " ಅಂತ. ಅವತ್ತಿದ್ದು ಧರ್ಮ, ಈಗದ್ದು ನಮ್ಮ ಕರ್ಮ ಅಷ್ಟೇ 🤣🤣**ಶ್ರೀ**


ತತ್ಕಾಲ್ ಟಿಕೆಟ್

 #ತರಲೆ## ಕಾದು ಕಾದು ತತ್ಕಾಲ್ ಟಿಕೆಟ್ ಕೂಡ ಸಿಗದಿದ್ದಾಗ, ಹೀಗೆ ಬೈಕೋಬೋದೇನೋ....ತತ್.... ಕಾಲ ನೇ ಸರಿ ಇಲ್ಲ ಅಂತ 🤣🤣**ಶ್ರೀ **

Wednesday, May 13, 2026

ಗೋಲ್ಡ್

 ##ತರಲೆ##ಗೋಲ್ಡ್ ತಗೋಬೇಡಿ ಅಂದಿದ್ದಕ್ಕೆ ಈ ಸಲ ಹೆಣ್ಮಕ್ಳು ಮೋದಿಗೆ ವೋಟ್ ಹಾಕ್ಬೇಕಾ ಬೇಡ್ವಾ ಅಂತ ಯೋಚ್ನೆ ಮಾಡ್ತಾರೆ. ವರ್ಕ್ ಫ್ರಮ್ ಹೋಮ್ ಮಾಡಿ ಅಂದಿದ್ದಕ್ಕೆ ಮತ್ತೆ ಹೆಂಡ್ತಿ ಮಕ್ಕಳ ಕೈಲಿ ಬೈಸಿಕೊಳ್ಳಬೇಕಾ ಅಂತ ಗಂಡಸರೂ ವೋಟ್ ಮಾಡ್ಬೇಕಾ ಅಂತ ಯೋಚ್ನೆ ಮಾಡ್ತಾರೆ. ಅವಸ್ಥೆ ಮಾರ್ರೆ 🤣🤣**ಶ್ರೀ**

Friday, May 8, 2026

ಬೇಸಿಗೆ ಜೀವನ

 #ತರಲೆ##ನಮ್ಮೂರಿನ ಬೇಸಿಗೆ ಜೀವನ...ಸಿಲಿಂಡರ್ ಇಲ್ಲ ಅಂದ್ರೆ ಅಷ್ಟೇನೂ ಪ್ರಾಬ್ಲಮ್ ಇಲ್ಲ .... ಮೀನು ಮಸಾಲೆ ಹಚ್ಚಿ ಬಿಸಿಲಿಗಿಟ್ರೆ ಫ್ರೈ ರೆಡಿ , ಫ್ರಿಡ್ಜ್ ಅಲ್ಲಿ ಇಟ್ಟಿದ್ದನ್ನು ತೆಗೆದು ಬಿಸಿ ಮಾಡಬೇಕು ಅಂತೇನಿಲ್ಲ, ಹೊರಗಿಟ್ರೆ 10 ನಿಮಿಷದಲ್ಲಿ ಹೊಗೆ ಬರೋದು ಮಾತ್ರ ಬಾಕಿ. ನಾವು ದಿನಕ್ಕೆರಡು ಸಲ ಸ್ನಾನ ಮಾಡಿದ್ರೆ ಸೂರ್ಯ ಇಪ್ಪತ್ತು ಸಲ ಬೆವರಿನ ಸ್ನಾನ ಮಾಡಿಸ್ತಾನೆ 🤣🤣**ಶ್ರೀ**


Wednesday, April 29, 2026

ಲೈಟು ಮತ್ತು ಫೋನು

##ತರಲೆ## ಲೈಟ್ ಹಾಕಿ ಹುಡುಕಿದ್ರೂ ಮೊಬೈಲ್ ಸಿಕ್ತಾನೇ ಇರ್ಲಿಲ್ಲ .... ಮೊಬೈಲ್ ಅಲ್ಲಿ ಲೈಟ್ ಆಫ್ ಮಾಡಿದ ಮೇಲೆನೇ ಗೊತ್ತಾಗಿದ್ದು ಇಷ್ಟು ಹೊತ್ತು ಫೋನ್ ಕೈಲೇ ಇತ್ತು ಅಂತ😂😂... **ಶ್ರೀ**

Saturday, April 25, 2026

ಸೆಕೆ

 ##ತರಲೆ## ಯಾರೋ ಕೇಳಿದ್ರು ಊರಲ್ಲಿ ಸೆಕೆ ಇದೆಯಾ ಆಂತ. ನಾನಂದೇ ಇತ್ತೀಚಿನ ಕೆಲವು ವರ್ಷಗಳಿಂದ ಊರಲ್ಲಿ ಸೆಕೆ ಅನ್ನೋದೇ ಇಲ್ಲ......... ಬರೀ ಬೆಂಕಿಯ ಕಾವು ಅಷ್ಟೇ ಅಂತ 😭**ಶ್ರೀ**

Tuesday, April 21, 2026

ಅಕ್ಷಯ ತೃತೀಯ

 ##ತರಲೆ##ಹೆಂಡ್ತಿ ಹೇಳ್ತಾ ಇದ್ಲು ಅಕ್ಷಯ ತ್ರಿತೀಯಕ್ಕೆ ಮನೆಗೆ ಹೊಸದು ಏನಾದ್ರೂ ತಂದ್ರೆ  ಅದು ಶುಭ ಸಂಕೇತವಂತೆ.  1-2 ಗ್ರಾಂ ಅಂತ ಸಣ್ಣ ಚಿನ್ನದ coin ಏನು ತರೋದು ಅಂತ ಈ ಸಲ ದೊಡ್ಡ ಐಟಂ ತಂದೆ......35ಕೆಜಿ ತೂಗೋ Almera....ಮತ್ತೇನು, ಅಡುಗೆ ಮನೇಲಿ ಲಘು ಭೂಕಂಪದ ಅನುಭವ🤣🤣**ಶ್ರೀ**

Friday, April 10, 2026

ಶಾರುಖ್ ಮತ್ತೆ ರೋಮ್ಯಾನ್ಸ್

 #ತರಲೆ## ಶಾರುಕ್ ಖಾನ್ ರೋಮ್ಯಾಂಟಿಕ್ ಅನ್ನೋ ಹೆಣ್ಮಕ್ಕಳಿಗೆ. ಅವ್ನು ರೋಮ್ಯಾನ್ಸ್ ಮಾಡಕ್ಕೆ ಕೋಟಿ ಕೋಟಿ ಹಣ ಕೊಡ್ತಾರೆ... ಅದಕ್ಕಿಂತ ಮುಖ್ಯ ಅಂದ್ರೆ ಅವ್ನಿಗೆ ರೋಮ್ಯಾನ್ಸ್ ಮಾಡೋಕ್ಕೆ ಪ್ರತೀ ಸಲ ಬೇರೆ ಬೇರೆ ಹುಡುಗೀರು. ಅದ್ಕೇ ರೋಮ್ಯಾನ್ಸ್ ಹೊಳೆ ಹರಿಯುತ್ತೆ 🤣🤣.. **ಶ್ರೀ**

Thursday, April 9, 2026

ಆಟೋ ಡ್ರೈವರ್

 ##ತರಲೆ##ಆಟೋದಲ್ಲಿ ವಿಡಿಯೋ ನೋಡ್ತಾ ಇದ್ದ ಡ್ರೈವರ್ ಮಹಾರಾಜನ ಹತ್ರ ಕೇಳಿದ್ರಂತೆ "ಮೆಜೆಸ್ಟಿಕ್ ಗೆ ಬರ್ತೀರಾ" ಅಂತ. ಅವ್ನು ಹೇಳಿದ್ನಂತೆ ನಾನು ಬ್ಯುಸಿ ಇದೀನಿ ನೀವು ಹೋಗಿ ಬನ್ನಿ ಅಂತ 🤣🤣**ಶ್ರೀ**

Thursday, April 2, 2026

ಯೋಗ ಪ್ಯಾಂಟ್

 #ತರಲೆ##ಕಾಲೇ ಹೊರಗೆ ಬರುತ್ತೇನೋ ಅನ್ನೋವಷ್ಟು ಟೈಟ್ ಆಗಿರೋ ಯೋಗ ಪ್ಯಾಂಟ್ ಹಾಕಿರೋರನ್ನು ನೋಡಿದಾಗ ಅನ್ನಿಸೋದು... ಇವರು ಪ್ಯಾಂಟ್ stitch ಮಾಡಿ ಹಾಕ್ಕೋತಾರ ಅಥವಾ ಹಾಕಿಕೊಂಡು stitch ಮಾಡ್ತಾರಾ ಅಂತ. 🤣🤣**ಶ್ರೀ *

Wednesday, April 1, 2026

ಟ್ಯಾಕ್ಸ್

 #ತರಲೆ##ನಾವು ಮಾಡೋ ಕೆಲಸದ ಸಂಬಳದಿಂದ, ಸಂಬಂದವೇ ಇರದ ಜನ ಇಂತಿಷ್ಟು ಅಂತ ನಿಗದಿ ಮಾಡಿ, ನಮ್ಮ ಅಭಿಪ್ರಾಯ ಕೇಳದೆ ಕಿತ್ತುಕೊಂಡು, ಅಭಿವೃದ್ಧಿ ಅನ್ನೋ ತ್ರಿಶಂಕು ಸ್ವರ್ಗದ ಹೆಸರಲ್ಲಿ ಮಾಡೋ ವ್ಯವಸ್ಥಿತ ಲೂಟಿಗೆ ಟ್ಯಾಕ್ಸ್ ಅನ್ನಬಹುದೇ?🤣🤣**ಶ್ರೀ **

Tuesday, March 31, 2026

Start up

 #ತರಲೆ##company ಮತ್ತೆ start up ಗೆ ಏನು ವ್ಯತ್ಯಾಸ? ಕಂಪನಿಯಲ್ಲಿ ಕೆಲಸ ಮಾಡೋರಿಗೆ ಮೊದಲು probationary period ಇರತ್ತೆ. ಆದ್ರೆ Start up ಅಲ್ಲಿ company ನೇ probationary ಅಲ್ಲಿ ಇರತ್ತೆ, ಯಾವಾಗ ಏನು ಬೇಕಾದ್ರೂ ಆಗಬಹುದು 🤣🤣**ಶ್ರೀ **

Monday, March 30, 2026

ಹೊಂಡ

 #ತರಲೆ##ಕೆಳಗೆ ಹೊಂಡ ಇದ್ಯಾ ಅಂತ ನೋಡ್ಕೊಂಡು ಹೋದ್ರೆ ಮೇಲೆ ನೇತು ಹಾಕಿರೋ ಬೋರ್ಡ್ ತಲೆಗೆ ಹೊಡಿಯತ್ತೆ , ಮೇಲೆ ನೋಡ್ಕೊಂಡು ನಡೆದ್ರೆ ಹೊಂಡಕ್ಕೆ ಬಿದ್ದಿರ್ತೀವಿ. ಇದ್ಯಾಕೋ ಸರಿ ಇಲ್ಲ ಅಂತ ಮುಂದೆ ನೋಡ್ಕೊಂಡ್ ಹೋಗ್ತಾ ಇದ್ರೆ ಇನ್ಸ್ಟಾಗ್ರಾಮ್ ನೋಡ್ತಾ ಬರ್ತಿರೋ ಪುಣ್ಯಾತ್ಮ ಡಿಕ್ಕಿ ಹೊಡೀತಾನೆ ...ಬೆಂಗಳೂರು ಡೇಂಜರ್ ಮಾರ್ರೆ 🤣🤣**ಶ್ರೀ**

Tuesday, March 24, 2026

ಆತ್ಮಹತ್ಯೆ

 ತರಲೆ-ಶ್ರೀ--ಅದ್ಯಾರೋ ಪುಣ್ಯಾತ್ಮ 5 ಲಕ್ಷ ಸಾಲ ಇತ್ತು ಅಂತ tension ಅಲ್ಲಿ ವಿಷ ತಗೊಂಡನಂತೆ, ಮನೆಯವರು ಆಸ್ಪತ್ರೆಗೆ ಸೇರಿಸಿ ಮತ್ತೆ 10ಲಕ್ಷ ಸಾಲ ಮಾಡಿ ಉಳಿಸಿಕೊಂಡರಂತೆ... ಆ ಲೆಕ್ಕದಲ್ಲಿ ಪಾಪ ಅವ್ನು ಮೂರು ಸಲ ಆತ್ಮಹತ್ಯೆ ಮಾಡ್ಕೋಬೇಕು 🤣🤣**ಶ್ರೀ**

Friday, March 20, 2026

Future plan

 ##ತರಲೆ## ನಮ್ದು ಎಷ್ಟು ಮುಂದಾಲೋಚನೆ ಅಂದ್ರೆ.....My future plan is, to plan my future ಅನ್ನುವಷ್ಟು 🤣🤣**ಶ್ರೀ **

Thursday, March 19, 2026

ಮಗು ಮತ್ತು ಸಿಲಿಂಡರ್ ಡೆಲಿವೆರಿ

 #ತರಲೆ##ಮಗು Normal ಡೆಲಿವರಿ ಆಗಿಲ್ಲ ಅಂದ್ರೇ Cesarean ಡೆಲಿವರಿ ಮಾಡಿಸಬೋದು... ಈಗ ಗ್ಯಾಸ್ ಸಿಲಿಂಡರ್ ಡೆಲಿವರಿ ಆಗಿಲ್ಲ ಅಂದ್ರೇ Cesarean ಯಾರಿಗೆ ಮಾಡಿಸೋದು?🤣🤣**ಶ್ರೀ **

Sunday, March 15, 2026

ಕಕ್ಕಾಬಿಕ್ಕಿ

 ##ತರಲೆ##ಮಗಳಿಗೆ ಕನ್ನಡ exam, "ಕಕ್ಕಾಬಿಕ್ಕಿ" ಪದದ ಅರ್ಥ ಮಗಳಿಗೆ ಹೇಳಿಕೊಡಿ ಅಂದ್ಲು ಹೆಂಡ್ತಿ.... ನಾನಂದೆ piles ಆದವರಿಗೆ ಅದು ಚೆನ್ನಾಗಿ ಗೊತ್ತಿರತ್ತೆ ಅಂತ. ಕಕ್ಕ-ಬಿಕ್ಕಿ ಬಿಕ್ಕಿ... ಆಮೇಲೆ ಅಡುಗೆ ಮನೇಲಿ ಭೂಕಂಪ 🤣🤣**ಶ್ರೀ**

Saturday, March 14, 2026

ಯುದ್ಧ.. ಗಾದೆ remix

 #ತರಲೆ## ಸದ್ಯದ remix ಗಾದೆಗಳು....ಸಿಲಿಂಡರ್ ಇದ್ದೋನೇ ಬಾಸು, ಸಿಲಿಂಡರ್ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಸಿಲಿಂಡರ್ ಗೆ ಹೋದ ಮಾನ ಕೋಟಿ ಕೊಟ್ಟರೂ ಬಾರದು, ಸೌದೆಗೊಂದು ಕಾಲ ಗ್ಯಾಸ್ ಗೆ ಒಂದು ಕಾಲ 🤣🤣**ಶ್ರೀ**

ವಯಸ್ಸು ಮತ್ತು ಯುದ್ಧ

 #ತರಲೆ##ನೇತಾನ್ಯಹು ,ಟ್ರಂಪ್ ,ಪುಟಿನ್,ಕಮೀನೇನಿ ಇವರೆಲ್ಲಾ 70-80 ವರ್ಷದವ್ರು. ಈ ವಯಸ್ಸಲ್ಲಿ ಸುಮ್ನೆ ಮಕ್ಕಳಾಡಿಸ್ತಾ ಮನೇಲಿರೋದು ಬಿಟ್ಟು ಯುದ್ಧ ಅಂತೆ. ಯುವಕರು ಅನ್ನಿಸಿಕೊಂಡ ನಮಗೇ ಒಂದು ದಿನ ಕ್ರಿಕೆಟ್ ಆಡಿದ್ರೆ ಸುಧಾರಿಸೋಕೆ ಒಂದು ವಾರ ಬೇಕು, ಇವ್ರಿಗೆ Bp, ಶುಗರ್ ಏನೂ ಇಲ್ವಾ, ಯಾವ ಅಕ್ಕಿ ಗುರು ಇವರು ತಿನ್ನೋದು🤣🤣**ಶ್ರೀ**

Tuesday, March 10, 2026

ಚಾಟ್ಸ್ ಮತ್ತೆ GPT

 ##ತರಲೆ##ಚಾಟ್ಸ್ ಅಲ್ಲಿ ಇರೋ ಕಿಕ್ಕು AI ಅಲ್ಲೂ ಇರ್ಲಿ ಅಂತ Chat-GPT ಅಂತ ಹೆಸ್ರು ಇಟ್ಟಿರಬಹುದಾ?? 🤣🤣**ಶ್ರೀ **

Wednesday, March 4, 2026

ಪಬ್ಲಿಕ್ ಫಿಗರ್

 #ತರಲೆ##ಇತ್ತೀಚಿನ ದಿನಗಳಲ್ಲಿ ಕೆಲವು ಸೆಲೆಬ್ರಿಟಿಗಳು Public ಫಿಗರ್ ಆಗಿದ್ದಾರೆ ...... figure public ಮಾಡಿ ಮಾಡಿ 🤣🤣**ಶ್ರೀ**

ಸರಿ ಇಲ್ಲ

 ##ತರಲೆ##ಮಕ್ಳಳ ಹತ್ರ ಅಪ್ಪ ಸರಿ ಇಲ್ಲ ಕೇಳಿದ್ದು ಕೊಡಿಸಲ್ಲ ಅಂತಾನೋ, ಅಪ್ಪ ಅಮ್ಮನ ಕೈಯಲ್ಲಿ ಇವ್ನು ಸರಿ ಇಲ್ಲ ಹೇಳಿದ್ದು ಕೇಳೋದೇ ಇಲ್ಲ ಅಂತಾನೋ, ಅಕ್ಕ ಪಕ್ಕದ ಮನೆಯವ್ರ ಹತ್ರ ಇವ್ನು ಯಾಕೋ ಸರಿ ಇಲ್ಲ ವಿಚಿತ್ರವಾಗಿ ಆಡ್ತಾನೇ ಅಂತಾನೋ ಬಯ್ಯಿಸಿಕೊಂಡು ವರ್ಷದ ಕೊನೆಗೆ ಮ್ಯಾನೇಜರ್ ಕೈಯ್ಯಲ್ಲೂ ನೀನು ಸರಿ ಇಲ್ಲ ಅಂತ ಹೇಳಿಸಿಕೊಂಡ್ರೆ ಅನಿಸೋದು, ನನ್ನಲ್ಲೇ ನಿಜವಾಗ್ಲೂ ಏನಾದ್ರೂ problem ಇದೆಯಾ ಅಂತ 🤣🤣🤣**ಶ್ರೀ **

Monday, March 2, 2026

ಟ್ರಂಪ್

 #ತರಲೆ##ನಾವು ಶಾಲೆಗೆ ಹೋಗ್ತಾ ಇದ್ದಾಗ ಕೆಲವು ಹುಡುಗರು ಇದ್ರು, ಯಾವುದಾದ್ರೂ ವಿಷಯ ಎತ್ಕೊಂಡು, ಕಾಲು ಕೆರ್ಕೊಂಡು ಜಗಳ ಮಾಡ್ತಾ, ಹೊಡೆದಾಡ್ತಾ ಇದ್ರು... ಈ ಟ್ರಂಪ್ ಅದೇ ಗ್ರೂಪಿನ ಹುಡುಗ ಅನ್ಸುತ್ತೆ. ಕಡ್ಡಿ ಕೀರೋದು, ಬೆಂಕಿ ಹಚ್ಚೋದು ಎರಡೇ ಕೆಲಸ🤣🤣**ಶ್ರೀ**

Friday, February 27, 2026

ಪೂರಿ ಮತ್ತು ಅಹಂಕಾರ

 #ತರಲೆ##ನಾವು ತಿನ್ನೋ ಪೂರಿಗೆ ಸಿಕ್ಕಾಪಟ್ಟೆ ಅಹಂಕಾರ ಅಲ್ವಾ? ಯಾರ ಮನೇಲಿ ಅಥವಾ ಹೋಟೆಲ್ ಅಲ್ಲಿ ತಯಾರಿ ಮಾಡಿದ್ರೂ ಅದರ ಮುಖ ಉದಿಕೊಂಡೇ ಇರತ್ತೆ 🤣🤣**ಶ್ರೀ**

Wednesday, February 25, 2026

ಹಣ ಹಣ

 ##ತರಲೆ##ನಾವು ಹಣಕ್ಕೆ ಪ್ರಾಮುಖ್ಯತೆ ಕೊಡಲೇಬಾರದು... ಯಾಕಂದ್ರೆ ನಮ್ಮ ಹತ್ರ ಹಣ ನಿನ್ನೆನೂ ಇರ್ಲಿಲ್ಲ, ಇವತ್ತೂ ಇಲ್ಲ, ನಾಳೇನು ಖಂಡಿತವಾಗಿಯೂ ಇರಲ್ಲ. ಅಷ್ಟು ಭರವಸೆ ನಮ್ಮ ಅದೃಷ್ಟದ ಬಗ್ಗೆ...🤣🤣🤣**ಶ್ರೀ**

ನಾವು ಮತ್ತೆ AI

 #ತರಲೆ##ಎಷ್ಟೋ ಸಲ ಮೊಬೈಲ್ ಎಲ್ಲಿಟ್ಟೆ ಅಂತ ಅದೇ Mobile ಅಲ್ಲಿ light ಹಾಕಿ ಹುಡುಕ್ತಾ ಇರ್ತೀವಿ....ಇನ್ನು ನಮ್ ಕೈಗೆ AI ಕೊಟ್ರೆ ಹೇಗಿರಬಹುದು?🤣🤣**ಶ್ರೀ**

Monday, February 23, 2026

ಸಂಬಳ ಹೈಕು ಇತ್ಯಾದಿ

 #ತರಲೆ## Emi ಲಕ್ಷಗಳಲ್ಲಿ, ಸಂಬಳ ಸಾವಿರಗಳಲ್ಲಿ, bonus ನೂರುಗಳಲ್ಲಿ, hike ಚಿಲ್ಲರೆಯಲ್ಲಿ... ಒಟ್ಟಿನಲ್ಲಿ ನಾವು ಸದಾ ಚಿಂತೆಯಲ್ಲಿ 🤣🤣🤣**ಶ್ರೀ**

Thursday, February 19, 2026

Crash course

 #ತರಲೆ##ಇತ್ತೀಚೆಗೆ ಎಲ್ಲಾ ಸೂಪರ್ ಫಾಸ್ಟು. ಬೇಗ ಕಲಿಯಕ್ಕೆ ಎಲ್ಲದ್ರಲ್ಲೂ crash ಕೋರ್ಸ್ ಇದೆ. ಆದ್ರೆ pilot ಟ್ರೈನಿಂಗ್ ಗು crash ಕೋರ್ಸ್ ಶುರು ಮಾಡದಿದ್ರೆ ಸಾಕು. ಟ್ರೈನಿಂಗ್ ಇರೋದೇ ಪ್ಲೇನ್ crash ಆಗದೇ ಇರೋ ತರ  ಓಡಿಸೋಕೆ, ಅದನ್ನೇ crash ಮಾಡಿದ್ರೆ 🤣🤣🤣**ಶ್ರೀ**

Wednesday, February 18, 2026

Laptop

 ##ತರಲೆ## Laptop ಆನ್ ಆಗ್ತಾ ಇಲ್ಲ ಅಂತ ಸಿಸ್ಟಮ್ ಅಡ್ಮಿನ್ ಹತ್ರ ಹೋದ್ರೆ ... ಅವ್ರು ಒಮ್ಮೆ ಆನ್ ಮಾಡಿ ತೋರಿಸಿ,  ಏನ್ ಪ್ರಾಬ್ಲಮ್ ಇದೆ  ಅಂತ ನೋಡೋಣ ಅಂತ ನಮಗೇ ಹೇಳೋದ? 🤣🤣**ಶ್ರೀ *

Friday, February 13, 2026

ಅರ್ಥ ಮಾಡಿಕೊಳ್ಳೋ ಪ್ರಯತ್ನದಲ್ಲಿ

 #ತರಲೆ##ಜನರನ್ನು ಜಾಸ್ತಿ ಅರ್ಥ ಮಾಡಿಕೊಳ್ಳಕ್ಕೆ ಪ್ರಯತ್ನ ಪಡೋದೇ ತಪ್ಪು... ಅರ್ಥವಾದಷ್ಟು ಅವರಿಂದ ದೂರ ಇರಬೇಕು ಅನ್ನಿಸುತ್ತೆ 🤣🤣**ಶ್ರೀ**

Wednesday, February 11, 2026

Honeymoon

 ##ತರಲೆ##Honeymoon ಜಾಸ್ತಿ ಸಮಯ ನೆನಪಲ್ಲಿ ಉಳೀಬೇಕು ಅಂದ್ರೆ ಏನು ಮಾಡಬೇಕು? ಸಾಲ ತಗೊಂಡು ಟ್ರಿಪ್ ಹೋಗಬೇಕು, EMI ಕಟ್ಟೋವಾಗಲೆಲ್ಲ ನೆನಪಾಗ್ತಾ ಇರತ್ತೆ 🤣🤣**ಶ್ರೀ**

Thursday, February 5, 2026

ಒಳ್ಳೆಯವ್ರು

 #ತರಲೆ##ಒಳ್ಳೇ ಮನುಷ್ಯರುಗಳದ್ದು ಒಂದೇ use... ಅದೇನಪ್ಪ ಅಂದ್ರೆ ಸಿಕ್ ಸಿಕ್ಕಿದವರೆಲ್ಲ ಇವ್ರನ್ನು ಮಾಡೋದು misuse🤣🤣🤣**ಶ್ರೀ**

Wednesday, February 4, 2026

ಆಟೋ ಮತ್ತು app

 ##ತರಲೆ## ಬೆಂಗಳೂರು ಆಟೋ ಡ್ರೈವರ್ ಹತ್ರ App ಅಲ್ಲಿ 70 ರೂಪಾಯಿ ತೋರಿಸ್ತಾ ಇದೆ ನೀವು 150 ಕೇಳ್ತಾ ಇದೀರಾ ಅಂತಾ ಹೇಳಿದ್ರೆ.... ನೀವು app ಅಲ್ಲೇ ಕೂತ್ಕೊಂಡು ಹೋಗಿ ಅನ್ನೋದ??🤣🤣??**ಶ್ರೀ**

Tuesday, February 3, 2026

ಟಿಕೆಟ್

 ##ತರಲೆ##ಮೆಟ್ರೋದಲ್ಲಿ ದಿನಕ್ಕೆ ಒಂದೇ ಸರ್ತಿ ಹೋಗಿ ಬರೋ ನಮ್ಮ ಹತ್ರ ಟಿಕೆಟ್ ವಸೂಲಿ ಮಾಡ್ತಾರೆ, ದಿನವಿಡೀ ಅದ್ರಲ್ಲೇ ಓಡಾಡೋ ಮೆಟ್ರೋ ಡ್ರೈವರ್ ಹತ್ರ ಯಾರೂ ಕಾಸು ತಗೋಳಲ್ಲ.... ಇದು ಅನ್ಯಾಯ ಅಲ್ವಾ 🤣🤣🤣**ಶ್ರೀ**

Wednesday, January 14, 2026

ಸಂಬಳ

 

ತರಲೆ## ಕಾಲೇಜ್ ಅಲ್ಲಿರೋವಾಗ ಅಂದುಕೊಂಡಿದ್ದು,ತಿಂಗಳಿಗೆ 50 ಸಾವಿರ ಸಂಬಳ ಅಂದ್ರೆ ಎರಡೇ ತಿಂಗಳಿಗೆ ಒಂದು ಲಕ್ಷ ಕೈಲಿರತ್ತೆ ಅಂತ.... ಈಗ ಗೊತ್ತಾಗ್ತಾ ಇದೆ ಆ ಲಕ್ಷವನ್ನೆಲ್ಲ ಸರಕಾರದ ಟ್ಯಾಕ್ಸ್ ಮತ್ತೆ ಬ್ಯಾಂಕ್ ಲೋನ್ emi ಅಂತ ಕಿತ್ಕೊಂಡು ಕಡೆಗೆ 50 ಪೈಸೆನೂ ಉಳಿಸಲ್ಲ ಅಂತ🤣🤣**ಶ್ರೀ**

Wednesday, January 7, 2026

Otp ಮತ್ತು ಯಮರಾಜ

 ##ತರಲೆ## ಇತ್ತೀಚಿಗೆ ಎಲ್ಲದಕ್ಕೂ OTP ಕೇಳ್ತಾರೆ..... ಎಲ್ಲಿಯವರೆಗೆ ಅಂದ್ರೆ ಹೊಗೆ ಹಾಕಿಸಿಕೊಳ್ಳೋ ಟೈಮ್ ಬಂದಾಗ ಯಮರಾಜರು ಬಂದು OTP ಕೇಳ್ತಾರೆ, ಕಡೆಗೆ ಯಮಲೋಕಕ್ಕೆ ಕರ್ಕೊಂಡು ಹೋಗೋದಕ್ಕಿಂತ ಮೊದಲು 5 ಸ್ಟಾರ್ ರೇಟಿಂಗ್ ಕೇಳಿದ್ರು ಕೇಳಬಹುದು... 🤣🤣**ಶ್ರೀ**

Monday, January 5, 2026

Trump New business

 ##ತರಲೆ## Trump started a new side business, ""Kidnapping"" ##Venezuela ##.....🤣🤣**ಶ್ರೀ **