##ತರಲೆ##ಹೆಂಡ್ತಿ ಹೇಳ್ತಾ ಇದ್ಲು ಅಕ್ಷಯ ತ್ರಿತೀಯಕ್ಕೆ ಮನೆಗೆ ಹೊಸದು ಏನಾದ್ರೂ ತಂದ್ರೆ ಅದು ಶುಭ ಸಂಕೇತವಂತೆ. 1-2 ಗ್ರಾಂ ಅಂತ ಸಣ್ಣ ಚಿನ್ನದ coin ಏನು ತರೋದು ಅಂತ ಈ ಸಲ ದೊಡ್ಡ ಐಟಂ ತಂದೆ......35ಕೆಜಿ ತೂಗೋ Almera....ಮತ್ತೇನು, ಅಡುಗೆ ಮನೇಲಿ ಲಘು ಭೂಕಂಪದ ಅನುಭವ🤣🤣**ಶ್ರೀ**
Tuesday, April 21, 2026
Friday, April 10, 2026
ಶಾರುಖ್ ಮತ್ತೆ ರೋಮ್ಯಾನ್ಸ್
#ತರಲೆ## ಶಾರುಕ್ ಖಾನ್ ರೋಮ್ಯಾಂಟಿಕ್ ಅನ್ನೋ ಹೆಣ್ಮಕ್ಕಳಿಗೆ. ಅವ್ನು ರೋಮ್ಯಾನ್ಸ್ ಮಾಡಕ್ಕೆ ಕೋಟಿ ಕೋಟಿ ಹಣ ಕೊಡ್ತಾರೆ... ಅದಕ್ಕಿಂತ ಮುಖ್ಯ ಅಂದ್ರೆ ಅವ್ನಿಗೆ ರೋಮ್ಯಾನ್ಸ್ ಮಾಡೋಕ್ಕೆ ಪ್ರತೀ ಸಲ ಬೇರೆ ಬೇರೆ ಹುಡುಗೀರು. ಅದ್ಕೇ ರೋಮ್ಯಾನ್ಸ್ ಹೊಳೆ ಹರಿಯುತ್ತೆ 🤣🤣.. **ಶ್ರೀ**
Thursday, April 9, 2026
ಆಟೋ ಡ್ರೈವರ್
##ತರಲೆ##ಆಟೋದಲ್ಲಿ ವಿಡಿಯೋ ನೋಡ್ತಾ ಇದ್ದ ಡ್ರೈವರ್ ಮಹಾರಾಜನ ಹತ್ರ ಕೇಳಿದ್ರಂತೆ "ಮೆಜೆಸ್ಟಿಕ್ ಗೆ ಬರ್ತೀರಾ" ಅಂತ. ಅವ್ನು ಹೇಳಿದ್ನಂತೆ ನಾನು ಬ್ಯುಸಿ ಇದೀನಿ ನೀವು ಹೋಗಿ ಬನ್ನಿ ಅಂತ 🤣🤣**ಶ್ರೀ**
Thursday, April 2, 2026
ಯೋಗ ಪ್ಯಾಂಟ್
#ತರಲೆ##ಕಾಲೇ ಹೊರಗೆ ಬರುತ್ತೇನೋ ಅನ್ನೋವಷ್ಟು ಟೈಟ್ ಆಗಿರೋ ಯೋಗ ಪ್ಯಾಂಟ್ ಹಾಕಿರೋರನ್ನು ನೋಡಿದಾಗ ಅನ್ನಿಸೋದು... ಇವರು ಪ್ಯಾಂಟ್ stitch ಮಾಡಿ ಹಾಕ್ಕೋತಾರ ಅಥವಾ ಹಾಕಿಕೊಂಡು stitch ಮಾಡ್ತಾರಾ ಅಂತ. 🤣🤣**ಶ್ರೀ *
Wednesday, April 1, 2026
ಟ್ಯಾಕ್ಸ್
#ತರಲೆ##ನಾವು ಮಾಡೋ ಕೆಲಸದ ಸಂಬಳದಿಂದ, ಸಂಬಂದವೇ ಇರದ ಜನ ಇಂತಿಷ್ಟು ಅಂತ ನಿಗದಿ ಮಾಡಿ, ನಮ್ಮ ಅಭಿಪ್ರಾಯ ಕೇಳದೆ ಕಿತ್ತುಕೊಂಡು, ಅಭಿವೃದ್ಧಿ ಅನ್ನೋ ತ್ರಿಶಂಕು ಸ್ವರ್ಗದ ಹೆಸರಲ್ಲಿ ಮಾಡೋ ವ್ಯವಸ್ಥಿತ ಲೂಟಿಗೆ ಟ್ಯಾಕ್ಸ್ ಅನ್ನಬಹುದೇ?🤣🤣**ಶ್ರೀ **
Tuesday, March 31, 2026
Start up
#ತರಲೆ##company ಮತ್ತೆ start up ಗೆ ಏನು ವ್ಯತ್ಯಾಸ? ಕಂಪನಿಯಲ್ಲಿ ಕೆಲಸ ಮಾಡೋರಿಗೆ ಮೊದಲು probationary period ಇರತ್ತೆ. ಆದ್ರೆ Start up ಅಲ್ಲಿ company ನೇ probationary ಅಲ್ಲಿ ಇರತ್ತೆ, ಯಾವಾಗ ಏನು ಬೇಕಾದ್ರೂ ಆಗಬಹುದು 🤣🤣**ಶ್ರೀ **
Monday, March 30, 2026
ಹೊಂಡ
#ತರಲೆ##ಕೆಳಗೆ ಹೊಂಡ ಇದ್ಯಾ ಅಂತ ನೋಡ್ಕೊಂಡು ಹೋದ್ರೆ ಮೇಲೆ ನೇತು ಹಾಕಿರೋ ಬೋರ್ಡ್ ತಲೆಗೆ ಹೊಡಿಯತ್ತೆ , ಮೇಲೆ ನೋಡ್ಕೊಂಡು ನಡೆದ್ರೆ ಹೊಂಡಕ್ಕೆ ಬಿದ್ದಿರ್ತೀವಿ. ಇದ್ಯಾಕೋ ಸರಿ ಇಲ್ಲ ಅಂತ ಮುಂದೆ ನೋಡ್ಕೊಂಡ್ ಹೋಗ್ತಾ ಇದ್ರೆ ಇನ್ಸ್ಟಾಗ್ರಾಮ್ ನೋಡ್ತಾ ಬರ್ತಿರೋ ಪುಣ್ಯಾತ್ಮ ಡಿಕ್ಕಿ ಹೊಡೀತಾನೆ ...ಬೆಂಗಳೂರು ಡೇಂಜರ್ ಮಾರ್ರೆ 🤣🤣**ಶ್ರೀ**
Tuesday, March 24, 2026
ಆತ್ಮಹತ್ಯೆ
ತರಲೆ-ಶ್ರೀ--ಅದ್ಯಾರೋ ಪುಣ್ಯಾತ್ಮ 5 ಲಕ್ಷ ಸಾಲ ಇತ್ತು ಅಂತ tension ಅಲ್ಲಿ ವಿಷ ತಗೊಂಡನಂತೆ, ಮನೆಯವರು ಆಸ್ಪತ್ರೆಗೆ ಸೇರಿಸಿ ಮತ್ತೆ 10ಲಕ್ಷ ಸಾಲ ಮಾಡಿ ಉಳಿಸಿಕೊಂಡರಂತೆ... ಆ ಲೆಕ್ಕದಲ್ಲಿ ಪಾಪ ಅವ್ನು ಮೂರು ಸಲ ಆತ್ಮಹತ್ಯೆ ಮಾಡ್ಕೋಬೇಕು 🤣🤣**ಶ್ರೀ**
Friday, March 20, 2026
Future plan
##ತರಲೆ## ನಮ್ದು ಎಷ್ಟು ಮುಂದಾಲೋಚನೆ ಅಂದ್ರೆ.....My future plan is, to plan my future ಅನ್ನುವಷ್ಟು 🤣🤣**ಶ್ರೀ **
Thursday, March 19, 2026
ಮಗು ಮತ್ತು ಸಿಲಿಂಡರ್ ಡೆಲಿವೆರಿ
#ತರಲೆ##ಮಗು Normal ಡೆಲಿವರಿ ಆಗಿಲ್ಲ ಅಂದ್ರೇ Cesarean ಡೆಲಿವರಿ ಮಾಡಿಸಬೋದು... ಈಗ ಗ್ಯಾಸ್ ಸಿಲಿಂಡರ್ ಡೆಲಿವರಿ ಆಗಿಲ್ಲ ಅಂದ್ರೇ Cesarean ಯಾರಿಗೆ ಮಾಡಿಸೋದು?🤣🤣**ಶ್ರೀ **
Sunday, March 15, 2026
ಕಕ್ಕಾಬಿಕ್ಕಿ
##ತರಲೆ##ಮಗಳಿಗೆ ಕನ್ನಡ exam, "ಕಕ್ಕಾಬಿಕ್ಕಿ" ಪದದ ಅರ್ಥ ಮಗಳಿಗೆ ಹೇಳಿಕೊಡಿ ಅಂದ್ಲು ಹೆಂಡ್ತಿ.... ನಾನಂದೆ piles ಆದವರಿಗೆ ಅದು ಚೆನ್ನಾಗಿ ಗೊತ್ತಿರತ್ತೆ ಅಂತ. ಕಕ್ಕ-ಬಿಕ್ಕಿ ಬಿಕ್ಕಿ... ಆಮೇಲೆ ಅಡುಗೆ ಮನೇಲಿ ಭೂಕಂಪ 🤣🤣**ಶ್ರೀ**
Saturday, March 14, 2026
ಯುದ್ಧ.. ಗಾದೆ remix
#ತರಲೆ## ಸದ್ಯದ remix ಗಾದೆಗಳು....ಸಿಲಿಂಡರ್ ಇದ್ದೋನೇ ಬಾಸು, ಸಿಲಿಂಡರ್ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಸಿಲಿಂಡರ್ ಗೆ ಹೋದ ಮಾನ ಕೋಟಿ ಕೊಟ್ಟರೂ ಬಾರದು, ಸೌದೆಗೊಂದು ಕಾಲ ಗ್ಯಾಸ್ ಗೆ ಒಂದು ಕಾಲ 🤣🤣**ಶ್ರೀ**
ವಯಸ್ಸು ಮತ್ತು ಯುದ್ಧ
#ತರಲೆ##ನೇತಾನ್ಯಹು ,ಟ್ರಂಪ್ ,ಪುಟಿನ್,ಕಮೀನೇನಿ ಇವರೆಲ್ಲಾ 70-80 ವರ್ಷದವ್ರು. ಈ ವಯಸ್ಸಲ್ಲಿ ಸುಮ್ನೆ ಮಕ್ಕಳಾಡಿಸ್ತಾ ಮನೇಲಿರೋದು ಬಿಟ್ಟು ಯುದ್ಧ ಅಂತೆ. ಯುವಕರು ಅನ್ನಿಸಿಕೊಂಡ ನಮಗೇ ಒಂದು ದಿನ ಕ್ರಿಕೆಟ್ ಆಡಿದ್ರೆ ಸುಧಾರಿಸೋಕೆ ಒಂದು ವಾರ ಬೇಕು, ಇವ್ರಿಗೆ Bp, ಶುಗರ್ ಏನೂ ಇಲ್ವಾ, ಯಾವ ಅಕ್ಕಿ ಗುರು ಇವರು ತಿನ್ನೋದು🤣🤣**ಶ್ರೀ**
Tuesday, March 10, 2026
ಚಾಟ್ಸ್ ಮತ್ತೆ GPT
##ತರಲೆ##ಚಾಟ್ಸ್ ಅಲ್ಲಿ ಇರೋ ಕಿಕ್ಕು AI ಅಲ್ಲೂ ಇರ್ಲಿ ಅಂತ Chat-GPT ಅಂತ ಹೆಸ್ರು ಇಟ್ಟಿರಬಹುದಾ?? 🤣🤣**ಶ್ರೀ **
Wednesday, March 4, 2026
ಪಬ್ಲಿಕ್ ಫಿಗರ್
#ತರಲೆ##ಇತ್ತೀಚಿನ ದಿನಗಳಲ್ಲಿ ಕೆಲವು ಸೆಲೆಬ್ರಿಟಿಗಳು Public ಫಿಗರ್ ಆಗಿದ್ದಾರೆ ...... figure public ಮಾಡಿ ಮಾಡಿ 🤣🤣**ಶ್ರೀ**
ಸರಿ ಇಲ್ಲ
##ತರಲೆ##ಮಕ್ಳಳ ಹತ್ರ ಅಪ್ಪ ಸರಿ ಇಲ್ಲ ಕೇಳಿದ್ದು ಕೊಡಿಸಲ್ಲ ಅಂತಾನೋ, ಅಪ್ಪ ಅಮ್ಮನ ಕೈಯಲ್ಲಿ ಇವ್ನು ಸರಿ ಇಲ್ಲ ಹೇಳಿದ್ದು ಕೇಳೋದೇ ಇಲ್ಲ ಅಂತಾನೋ, ಅಕ್ಕ ಪಕ್ಕದ ಮನೆಯವ್ರ ಹತ್ರ ಇವ್ನು ಯಾಕೋ ಸರಿ ಇಲ್ಲ ವಿಚಿತ್ರವಾಗಿ ಆಡ್ತಾನೇ ಅಂತಾನೋ ಬಯ್ಯಿಸಿಕೊಂಡು ವರ್ಷದ ಕೊನೆಗೆ ಮ್ಯಾನೇಜರ್ ಕೈಯ್ಯಲ್ಲೂ ನೀನು ಸರಿ ಇಲ್ಲ ಅಂತ ಹೇಳಿಸಿಕೊಂಡ್ರೆ ಅನಿಸೋದು, ನನ್ನಲ್ಲೇ ನಿಜವಾಗ್ಲೂ ಏನಾದ್ರೂ problem ಇದೆಯಾ ಅಂತ 🤣🤣🤣**ಶ್ರೀ **
Monday, March 2, 2026
ಟ್ರಂಪ್
#ತರಲೆ##ನಾವು ಶಾಲೆಗೆ ಹೋಗ್ತಾ ಇದ್ದಾಗ ಕೆಲವು ಹುಡುಗರು ಇದ್ರು, ಯಾವುದಾದ್ರೂ ವಿಷಯ ಎತ್ಕೊಂಡು, ಕಾಲು ಕೆರ್ಕೊಂಡು ಜಗಳ ಮಾಡ್ತಾ, ಹೊಡೆದಾಡ್ತಾ ಇದ್ರು... ಈ ಟ್ರಂಪ್ ಅದೇ ಗ್ರೂಪಿನ ಹುಡುಗ ಅನ್ಸುತ್ತೆ. ಕಡ್ಡಿ ಕೀರೋದು, ಬೆಂಕಿ ಹಚ್ಚೋದು ಎರಡೇ ಕೆಲಸ🤣🤣**ಶ್ರೀ**
Friday, February 27, 2026
ಪೂರಿ ಮತ್ತು ಅಹಂಕಾರ
#ತರಲೆ##ನಾವು ತಿನ್ನೋ ಪೂರಿಗೆ ಸಿಕ್ಕಾಪಟ್ಟೆ ಅಹಂಕಾರ ಅಲ್ವಾ? ಯಾರ ಮನೇಲಿ ಅಥವಾ ಹೋಟೆಲ್ ಅಲ್ಲಿ ತಯಾರಿ ಮಾಡಿದ್ರೂ ಅದರ ಮುಖ ಉದಿಕೊಂಡೇ ಇರತ್ತೆ 🤣🤣**ಶ್ರೀ**
Wednesday, February 25, 2026
ಹಣ ಹಣ
##ತರಲೆ##ನಾವು ಹಣಕ್ಕೆ ಪ್ರಾಮುಖ್ಯತೆ ಕೊಡಲೇಬಾರದು... ಯಾಕಂದ್ರೆ ನಮ್ಮ ಹತ್ರ ಹಣ ನಿನ್ನೆನೂ ಇರ್ಲಿಲ್ಲ, ಇವತ್ತೂ ಇಲ್ಲ, ನಾಳೇನು ಖಂಡಿತವಾಗಿಯೂ ಇರಲ್ಲ. ಅಷ್ಟು ಭರವಸೆ ನಮ್ಮ ಅದೃಷ್ಟದ ಬಗ್ಗೆ...🤣🤣🤣**ಶ್ರೀ**
ನಾವು ಮತ್ತೆ AI
#ತರಲೆ##ಎಷ್ಟೋ ಸಲ ಮೊಬೈಲ್ ಎಲ್ಲಿಟ್ಟೆ ಅಂತ ಅದೇ Mobile ಅಲ್ಲಿ light ಹಾಕಿ ಹುಡುಕ್ತಾ ಇರ್ತೀವಿ....ಇನ್ನು ನಮ್ ಕೈಗೆ AI ಕೊಟ್ರೆ ಹೇಗಿರಬಹುದು?🤣🤣**ಶ್ರೀ**
Monday, February 23, 2026
ಸಂಬಳ ಹೈಕು ಇತ್ಯಾದಿ
#ತರಲೆ## Emi ಲಕ್ಷಗಳಲ್ಲಿ, ಸಂಬಳ ಸಾವಿರಗಳಲ್ಲಿ, bonus ನೂರುಗಳಲ್ಲಿ, hike ಚಿಲ್ಲರೆಯಲ್ಲಿ... ಒಟ್ಟಿನಲ್ಲಿ ನಾವು ಸದಾ ಚಿಂತೆಯಲ್ಲಿ 🤣🤣🤣**ಶ್ರೀ**
Thursday, February 19, 2026
Crash course
#ತರಲೆ##ಇತ್ತೀಚೆಗೆ ಎಲ್ಲಾ ಸೂಪರ್ ಫಾಸ್ಟು. ಬೇಗ ಕಲಿಯಕ್ಕೆ ಎಲ್ಲದ್ರಲ್ಲೂ crash ಕೋರ್ಸ್ ಇದೆ. ಆದ್ರೆ pilot ಟ್ರೈನಿಂಗ್ ಗು crash ಕೋರ್ಸ್ ಶುರು ಮಾಡದಿದ್ರೆ ಸಾಕು. ಟ್ರೈನಿಂಗ್ ಇರೋದೇ ಪ್ಲೇನ್ crash ಆಗದೇ ಇರೋ ತರ ಓಡಿಸೋಕೆ, ಅದನ್ನೇ crash ಮಾಡಿದ್ರೆ 🤣🤣🤣**ಶ್ರೀ**
Wednesday, February 18, 2026
Laptop
##ತರಲೆ## Laptop ಆನ್ ಆಗ್ತಾ ಇಲ್ಲ ಅಂತ ಸಿಸ್ಟಮ್ ಅಡ್ಮಿನ್ ಹತ್ರ ಹೋದ್ರೆ ... ಅವ್ರು ಒಮ್ಮೆ ಆನ್ ಮಾಡಿ ತೋರಿಸಿ, ಏನ್ ಪ್ರಾಬ್ಲಮ್ ಇದೆ ಅಂತ ನೋಡೋಣ ಅಂತ ನಮಗೇ ಹೇಳೋದ? 🤣🤣**ಶ್ರೀ *
Friday, February 13, 2026
ಅರ್ಥ ಮಾಡಿಕೊಳ್ಳೋ ಪ್ರಯತ್ನದಲ್ಲಿ
#ತರಲೆ##ಜನರನ್ನು ಜಾಸ್ತಿ ಅರ್ಥ ಮಾಡಿಕೊಳ್ಳಕ್ಕೆ ಪ್ರಯತ್ನ ಪಡೋದೇ ತಪ್ಪು... ಅರ್ಥವಾದಷ್ಟು ಅವರಿಂದ ದೂರ ಇರಬೇಕು ಅನ್ನಿಸುತ್ತೆ 🤣🤣**ಶ್ರೀ**
Wednesday, February 11, 2026
Honeymoon
##ತರಲೆ##Honeymoon ಜಾಸ್ತಿ ಸಮಯ ನೆನಪಲ್ಲಿ ಉಳೀಬೇಕು ಅಂದ್ರೆ ಏನು ಮಾಡಬೇಕು? ಸಾಲ ತಗೊಂಡು ಟ್ರಿಪ್ ಹೋಗಬೇಕು, EMI ಕಟ್ಟೋವಾಗಲೆಲ್ಲ ನೆನಪಾಗ್ತಾ ಇರತ್ತೆ 🤣🤣**ಶ್ರೀ**
Thursday, February 5, 2026
ಒಳ್ಳೆಯವ್ರು
#ತರಲೆ##ಒಳ್ಳೇ ಮನುಷ್ಯರುಗಳದ್ದು ಒಂದೇ use... ಅದೇನಪ್ಪ ಅಂದ್ರೆ ಸಿಕ್ ಸಿಕ್ಕಿದವರೆಲ್ಲ ಇವ್ರನ್ನು ಮಾಡೋದು misuse🤣🤣🤣**ಶ್ರೀ**
Wednesday, February 4, 2026
ಆಟೋ ಮತ್ತು app
##ತರಲೆ## ಬೆಂಗಳೂರು ಆಟೋ ಡ್ರೈವರ್ ಹತ್ರ App ಅಲ್ಲಿ 70 ರೂಪಾಯಿ ತೋರಿಸ್ತಾ ಇದೆ ನೀವು 150 ಕೇಳ್ತಾ ಇದೀರಾ ಅಂತಾ ಹೇಳಿದ್ರೆ.... ನೀವು app ಅಲ್ಲೇ ಕೂತ್ಕೊಂಡು ಹೋಗಿ ಅನ್ನೋದ??🤣🤣??**ಶ್ರೀ**
Tuesday, February 3, 2026
ಟಿಕೆಟ್
##ತರಲೆ##ಮೆಟ್ರೋದಲ್ಲಿ ದಿನಕ್ಕೆ ಒಂದೇ ಸರ್ತಿ ಹೋಗಿ ಬರೋ ನಮ್ಮ ಹತ್ರ ಟಿಕೆಟ್ ವಸೂಲಿ ಮಾಡ್ತಾರೆ, ದಿನವಿಡೀ ಅದ್ರಲ್ಲೇ ಓಡಾಡೋ ಮೆಟ್ರೋ ಡ್ರೈವರ್ ಹತ್ರ ಯಾರೂ ಕಾಸು ತಗೋಳಲ್ಲ.... ಇದು ಅನ್ಯಾಯ ಅಲ್ವಾ 🤣🤣🤣**ಶ್ರೀ**
Wednesday, January 14, 2026
ಸಂಬಳ
ತರಲೆ## ಕಾಲೇಜ್ ಅಲ್ಲಿರೋವಾಗ ಅಂದುಕೊಂಡಿದ್ದು,ತಿಂಗಳಿಗೆ 50 ಸಾವಿರ ಸಂಬಳ ಅಂದ್ರೆ ಎರಡೇ ತಿಂಗಳಿಗೆ ಒಂದು ಲಕ್ಷ ಕೈಲಿರತ್ತೆ ಅಂತ.... ಈಗ ಗೊತ್ತಾಗ್ತಾ ಇದೆ ಆ ಲಕ್ಷವನ್ನೆಲ್ಲ ಸರಕಾರದ ಟ್ಯಾಕ್ಸ್ ಮತ್ತೆ ಬ್ಯಾಂಕ್ ಲೋನ್ emi ಅಂತ ಕಿತ್ಕೊಂಡು ಕಡೆಗೆ 50 ಪೈಸೆನೂ ಉಳಿಸಲ್ಲ ಅಂತ🤣🤣**ಶ್ರೀ**
Wednesday, January 7, 2026
Otp ಮತ್ತು ಯಮರಾಜ
##ತರಲೆ## ಇತ್ತೀಚಿಗೆ ಎಲ್ಲದಕ್ಕೂ OTP ಕೇಳ್ತಾರೆ..... ಎಲ್ಲಿಯವರೆಗೆ ಅಂದ್ರೆ ಹೊಗೆ ಹಾಕಿಸಿಕೊಳ್ಳೋ ಟೈಮ್ ಬಂದಾಗ ಯಮರಾಜರು ಬಂದು OTP ಕೇಳ್ತಾರೆ, ಕಡೆಗೆ ಯಮಲೋಕಕ್ಕೆ ಕರ್ಕೊಂಡು ಹೋಗೋದಕ್ಕಿಂತ ಮೊದಲು 5 ಸ್ಟಾರ್ ರೇಟಿಂಗ್ ಕೇಳಿದ್ರು ಕೇಳಬಹುದು... 🤣🤣**ಶ್ರೀ**
Monday, January 5, 2026
Trump New business
##ತರಲೆ## Trump started a new side business, ""Kidnapping"" ##Venezuela ##.....🤣🤣**ಶ್ರೀ **
Monday, December 15, 2025
ಮನ ಸ್ಥಿತಿ, ಮನೆ ಸ್ಥಿತಿ, ಮನಿ ಸ್ಥಿತಿ
##ತರಲೆ## ಮನ ಸ್ಥಿತಿ, ಮನೆ ಸ್ಥಿತಿ ಮತ್ತೆ ಮನಿ (money) ಸ್ಥಿತಿ, ಈ ಮೂರು ಹೊಂದಾಣಿಕೆ ಇಲ್ದೇ ಇದ್ರೆ ಬಟ್ಟೆ ಹರ್ಕೊಂಡು ರೋಡಲ್ಲಿ ಓಡಾಡೋ ಪರಿಸ್ಥಿತಿ confirm 🤣🤣🤣**ಶ್ರೀ**
Thursday, December 11, 2025
ಇಂಡಿಗೋ
##ತರಲೆ## Indigo ಫ್ಲೈಟ್ cancel ಪ್ರಾಬ್ಲಮ್ solve ಮಾಡೋದು ಹೇಗೆ..... ಟಿಕೆಟಿಂಗ್ ಜವಾಬ್ದಾರಿ IRCTC ಗೆ ಕೊಟ್ಟರೆ ಆಯ್ತು... ಟಿಕೆಟ್ ಬುಕ್ ಆದ್ರೆ ತಾನೇ cancel ಆಗೋದು🤣🤣🤣**ಶ್ರೀ**
Wednesday, December 10, 2025
Indigo ಮತ್ತು IRCTC
##ತರಲೆ## ಕಾಸು ಕೊಟ್ಟು ಟಿಕೆಟ್ ತಗೊಂಡ್ರು airport ಅಲ್ಲಿ ನಮ್ಮನ್ನು ಕಾಯಿಸಿ ಕಾಯಿಸಿ ಜರ್ನಿ cancel ಮಾಡೋ Indigo airline ಗಿಂತ, IRCTC ಅಲ್ಲಿ try ಮಾಡಿ ಮಾಡಿ ಟಿಕೆಟ್ ಬುಕ್ ಆಗ್ದೇ ಇದ್ರೂ ಕರ್ಕೊಂಡು ಹೋಗೋ ರೈಲು ಪ್ರಯಾಣವೇ ವಾಸಿ ಅಲ್ವಾ🤣🤣**ಶ್ರೀ**
Thursday, December 4, 2025
ಜಾಕೆಟ್ ಮತ್ತೆ ಕೋಲ್ಡ್
##ತರಲೆ## ಒಬ್ರು ಹೊಸ ಹೀರೋಯಿನ್ interview ನೋಡ್ತಾ ಇದ್ದೆ....anchor ನಿಮ್ಮ ಜಾಕೆಟ್ ಚೆನ್ನಾಗಿದೆ ಅಂದ್ರೆ, ಅವ್ಳು ಹೇಳ್ತಾ ಇದ್ರು Feeling cold ಅದ್ಕೇ ಜಾಕೆಟ್ ಅಂತಾ...... ಆದ್ರೆ ಅವ್ಳು shorts ಹಾಕೊಂಡಿದ್ಲು, ಬಹುಷಃ ಕಾಲಿಗೆ ಚಳಿ ಅಗಲ್ವೇನೋ 🤣🤣🤣**ಶ್ರೀ**
Friday, November 28, 2025
ಏಳು ಜನ್ಮದ ಸಂಬಂಧ
#ತರಲೆ## ಮದುವೆ ಅನ್ನೋದು ಏಳು ಜನ್ಮದ ಸಂಬಂಧ ಯಾಕೆ ಅಂತಾರೆ ಅಂತ ಯೋಚ್ನೆ ಮಾಡ್ತಾ ಇದ್ದೆ, ಆಮೇಲೆ ಅನ್ನಿಸ್ತು ಹೆಂಗಸರಿಗೆ ಗಂಡಸರನ್ನು ಪಳಗಿಸೋಕೆ 3 ಜನ್ಮ, ಬಡಪಾಯಿ ಗಂಡಂದಿರಿಗೆ ಸುಧಾರಿಸಿಕೊಳ್ಳೋಕೆ 3 ಜನ್ಮ.... ಈ ಸಂಬಂಧ ಸರಿಯಾಗಿ ಹೋಗ್ತಾ ಇದ್ಯಾ ಅಂತ ಯೋಚ್ನೆ ಮಾಡೋಕೆ ಇನ್ನೊಂದು.... 🤣🤣**ಶ್ರೀ**
Monday, November 24, 2025
ಮರೆವು
##ತರಲೆ##ಮರೆವು ಯಾವ್ ಲೆವೆಲ್ ಗೆ ಅಂದ್ರೆ ಮುಂಚೆ ಗಾಡಿಯ key ಮರೀತಾ ಇದ್ವಿ, ಈಗ ಎಲ್ಲಾದ್ರೂ ಹೋಗಿದ್ದಾಗ ಗಾಡಿ ತಂದಿದೀವಿ ಅನ್ನೋದನ್ನೇ ಮರೀತಾ ಇದೀವಿ 🤣🤣**ಶ್ರೀ**
Wednesday, November 12, 2025
Break up
##ತರಲೆ##ಇತ್ತೀಚಿಗೆ ಬ್ರೇಕ್ ಅಪ್ ಆದ ಫ್ರೆಂಡ್ ಹೇಳಿದ್ದು... ಆಫೀಸ್ ಅಲ್ಲಿ resign ಮಾಡಿದ್ರೆ ನೋಟೀಸ್ ಪಿರಿಯಡ್ ಅಲ್ಲಿ new joinee ಗೆ knowledge transfer ಮಾಡಿ ಹೋಗ್ತಾರೆ ಅಲ್ವಾ ಅದೇ ರೀತಿ ಬ್ರೇಕ್ ಮಾಡಿ ಹೋಗ್ಬೇಕಾದ್ರೆ ಹಳೇ ಗರ್ಲ್ ಫ್ರೆಂಡ್ ಹೊಸ ಗರ್ಲ್ ಫ್ರೆಂಡ್ ಗೆ ಹಳೇ relationship ಬಗ್ಗೆ knowledge transfer ಮಾಡಿ ಹೋಗಬೇಕಲ್ವಾ ಅಂತ....🤣🤣🤣**ಶ್ರೀ**
Tuesday, November 11, 2025
ಹೆಣ್ ಮಕ್ಕಳೇ ಸ್ಟ್ರಾಂಗ್
#ತರಲೆ##Eon musk ಅಂತಾ richest ಮನುಷ್ಯನದ್ದು ಡೈವೋರ್ಸ್ ಆಗಿದೆ, 6pack ಇರೋ ಹೃತಿಕ್ ದು ಡೈವೋರ್ಸ್ ಆಗಿದೆ, Fastest bowler ಶಮಿ ದು ಆಗಿದೆ. ಪರಿಸ್ಥಿತಿ ಹೀಗಿರೋವಾಗ ಡೈವೋರ್ಸ್ ಆಗದೆ ಅದೆಷ್ಟೋ ಸಂಸಾರ ಮುಂದುವರೀತಿದೆ ಅಂದ್ರೆ ಒಂದೇ ಗಂಡ ಸಕಲ ಕಲಾ ವಲ್ಲಭ ಆಗಿರ್ಬೇಕು ಇಲ್ಲ ಅಂದ್ರೆ ಹೆಂಡ್ತಿ ಏನೇ ಹೇಳಿದ್ರೂ ಕೇಳಿ ಸುಮ್ಮನಿರೋ ಹೃದಯ ಶ್ರೀಮಂತಿಕೆ ಇರ್ಬೇಕು🤣🤣**ಶ್ರೀ**
Thursday, November 6, 2025
Emi....
##ತರಲೆ##ಲೋನ್ ತಗೊಂಡು EMI ಕಟ್ಟಕ್ಕೆ ಆಗದೆ suicide ಮಾಡಿಕೊಂಡಿದ್ನಂತೆ... ಅವನ ಆತ್ಮ ಸ್ವರ್ಗಕ್ಕೆ ಹೋಗೋದ ಅಥವಾ ನರಕಕ್ಕೆ ಹೋಗೋದಾ ಅಂತ ಯೋಚ್ನೆ ಮಾಡ್ತಾ ಇರ್ಬೇಕಾದ್ರೆ ಅಲ್ಲಿನೂ ಲೋನ್ ಬೇಕಾ ಅಂತ bajaj finance ಮತ್ತೆ hdfc ಬ್ಯಾಂಕ್ ಇಂದ ಕಾಲ್ ಬಂತಂತೆ... ಅಷ್ಟು ಪ್ರೀತಿ ಇವ್ರಿಗೆ 🤣🤣**ಶ್ರೀ**
Tuesday, November 4, 2025
ಯೋಗ ಪ್ಯಾಂಟ್
##ತರಲೆ## ದೇಹಕ್ಕೆ ಅಂಟಿಕೊಂಡಂತೆ ಯೋಗ ಪ್ಯಾಂಟ್ ಹಾಕಿಕೊಂಡು catwalk ಮಾಡೋರನ್ನು ನೋಡಿದಾಗ ಮನಸ್ಸಿನಲ್ಲಿ ಬರೋ ಪ್ರಶ್ನೆ...ಇದನ್ನು ಸ್ಟಿಚ್ ಮಾಡಿ ಹಾಕ್ಕೋತಾರಾ ಅಥವಾ ಹಾಕಿಕೊಂಡು ಸ್ಟಿಚ್ ಮಾಡ್ತಾರಾ ಅಂತ 🤣🤣🤣**ಶ್ರೀ**
Monday, November 3, 2025
Chat gpt....
#ತರಲೆ ## Chat- gpt ಕ್ರಿಯೇಟ್ ಮಾಡ್ತಾ ಇದ್ದ ಬಡ್ಡಿ ಮಗನಿಗೆ ಆ app, ಮದ್ಯದಲ್ಲೇ ಅವನಿಗೇ ಗೊತ್ತಿಲ್ಲದ ಹಾಗೆ ಅವ್ನ ಹೆಸರಲ್ಲಿ ಒಂದು resignation ಲೆಟರ್ ಟೈಪ್ ಮಾಡಿ ಅವ್ನ ಬಾಸ್ ಗೆ ಕಳಿಸಿದ್ದರೆ ಅದೆಷ್ಟು ಜನ ಖುಷಿ ಪಡ್ತಾ ಇದ್ರೇನೋ🤣🤣**ಶ್ರೀ**
Wednesday, October 29, 2025
ಫೈನ್, ಹೊಂಡ
##ತರಲೆ##ಕಿತ್ತು ಹೋಗಿರೋ ರೋಡಿನಲ್ಲಿ ಸಿಗ್ನಲ್ ಲೈನ್ ಕಿಂತ ಒಂದಿಂಚು ಮುಂದೆ ನಿಲ್ಲಿಸಿದ್ದಕ್ಕೆ ಫೈನ್ ಹಾಕ್ತಾರೆ, ಹಾಗಿದ್ರೆ ನಿಯತ್ತಾಗಿ ಟ್ಯಾಕ್ಸ್ ಕಟ್ಟಿದ ನಂತರವೂ ರೋಡಿನಲ್ಲಿ ಹೊಂಡ ಕಾಡುತ್ತೆ ಅಂದ್ರೆ ಇವರನ್ನು ಅದೇ ಹೊಂಡದಲ್ಲಿ ಹಾಕಿ ಮುಚ್ಚಬೇಕು ಅನ್ನಿಸೋದು ತಪ್ಪಾ?🤣🤣**ಶ್ರೀ**
Monday, October 20, 2025
ಪಕ್ಕದ್ಮನೆ ವಿಷ್ಯ
##ತರಲೆ##ಪಕ್ಕದ ಮನೇಲಿ ಏನು ನಡೀತಾ ಇದೆ ಅಂತ ತಿಳಿದುಕೊಳ್ಳೋ ಅತೀ ಕುತೂಹಲ ಎಲ್ಲರಿಗೂ ಇದೆ... ಎಷ್ಟರ ಮಟ್ಟಿಗೆ ಅಂದ್ರೆ ದೀಪಾವಳಿ ರಾಕೆಟ್ ಅನ್ನು ಎಷ್ಟೇ ನೆಟ್ಟಗೆ ನಿಲ್ಲಿಸಿ ಹಚ್ಚಿದ್ರೂ ಅದು ನುಗ್ಗೋದು ಪಕ್ಕದ ಮನೆ ಕಿಟಕಿ ಅಥವಾ ಬಾಗಿಲಿನ ಕಡೆಗೇನೇ🤣🤣**ಶ್ರೀ**
Thursday, October 16, 2025
ರಿಮೋಟು ಮತ್ತು ಸೋಂಬೇರಿತನ
##ತರಲೆ##ಅದೆಷ್ಟೋ ಸಲ TV ಅಲ್ಲಿ ಬರೋ ಕಿತ್ತು ಹೋಗಿರೋ ಪ್ರೋಗ್ರಾಮ್ ಅನ್ನು ಕೂಡ ನೋಡ್ತಾ ಇರ್ತೀವಿ ಅಂದ್ರೆ ನಮಗೆ ಟೇಸ್ಟ್ ಇಲ್ಲ ಅಂತ ಅರ್ಥ ಅಲ್ಲ, ಒಮ್ಮೆ ಎದ್ದು ಟೇಬಲ್ ಮೇಲಿರೋ ರಿಮೋಟ್ ಯಾರಪ್ಪಾ ತರ್ತಾರೆ ಅನ್ನೋ ಸೋಂಬೇರಿತನದಿಂದ ಅಷ್ಟೇ🤣🤣**ಶ್ರೀ**
Wednesday, October 15, 2025
Motivation
#ತರಲೆ##ಸದ್ಯಕ್ಕೆ ಜೀವನದಲ್ಲಿ Motivation ಕೊಡ್ತಾ ಇರೋರು ಲೋನ್ ಕೊಡ್ತೀವಿ ಅಂತ ಹಿಂದೆ ಬಿದ್ದಿರೋ HDFC ಮತ್ತೆ Bajaj ಫೈನಾನ್ಸ್ ಅವ್ರು, ನಮ್ಮ ಹೆಲ್ತ್ ಚೆನ್ನಾಗಿರಬೇಕು ಅಂತ insurance ಮಾಡಿಸೋ LIC ಯಂತ ಕಂಪನಿಗಳು, ನೋವೆಲ್ಲಾ ಮರೀರಿ ಅಂತ ಎಣ್ಣೆ ಹೊಡಿಸುತ್ತಿರೋ ಮಲ್ಯರವರ ಸಂಬಂದಿ ಕಂಪನಿಗಳು...🤣🤣**ಶ್ರೀ**
Tuesday, October 14, 2025
Monday, October 13, 2025
ರೋಡು....
##ತರಲೆ ## ಸದ್ಯದ ಪರಿಸ್ಥಿತಿ. ಕಾಣೆಯಾಗಿದ್ದಾರೆ "ಒಳ್ಳೆಯ ರೋಡು". ಕಪ್ಪು ಬಣ್ಣ, ಜಲ್ಲಿ-ಟಾರು ತುಂಬಿದ ಮೈಕಟ್ಟು ಇವರು ಕಳೆದ 3-4 ವರ್ಷಗಳಿಂದ ಕಾಣೆಯಾಗಿರುತ್ತಾರೆ. ಇವರೇನಾದರೂ ಕಂಡು ಬಂದಲ್ಲಿ ವಾಹನ ಸವಾರರಿಗೆ ದಯವಿಟ್ಟು ತಿಳಿಸಿ🤣🤣**ಶ್ರೀ**
Sunday, September 28, 2025
ಹೊಂಡ, ರೋಡು, ಕಾರು
##ತರಲೆ##ರೋಡಿನಲ್ಲಿ ಹೊಂಡ ಸಿಗೋದು ಸಾದಾರಣ ಸಂಗತಿ, ಆದರೆ ಊರಿಗೆ ಬರೋವಾಗ ಕಂಡಿದ್ದು ರೋಡಿನಲ್ಲಿ ಬಾವಿಯಂತ ಹೊಂಡಗಳು, ಆ ಬಾವಿಗಳಲ್ಲಿ ನೀರು. ಆ ನೀರಿನಲ್ಲಿ ಮುಳುಗೆದ್ದ ಬಡಪಾಯಿ ಕಾರಿನ ಕಣ್ಣಲ್ಲೂ ನೀರು🤣🤣**ಶ್ರೀ**
Friday, September 26, 2025
ಮದುವೆಯ ನೆನಪು
##ತರಲೆ##ಮದ್ವೆ ಆಗಿ 5 ವರ್ಷ ಆಗಿದ್ರೂ ಮದ್ವೆ ನೆನಪು ಹಾಗೇ ಇದೆ ಅಂತಿದ್ದ, ನಾನು ಇಲ್ಲಿ ಏನೋ ಮಿಸ್ ಹೊಡೀತಾ ಇದೆ ಅಂತ ಯೋಚ್ನೆ ಮಾಡ್ತಾ ಇದ್ದೆ... ಆಮೇಲೆ ಗೊತ್ತಾಯ್ತು ಲೋನ್ ತಗೊಂಡು ಮದ್ವೆ ಆಗಿದ್ನಂತೆ... Emi ಈಗ್ಲೂ ಕಟ್ಟುತ್ತಾ ಇದ್ದಾನೆ ಅಂತೆ, ಮತ್ತೆ ಮರಿಯೋದು ಹೇಗೆ 🤣🤣**ಶ್ರೀ**
Thursday, September 25, 2025
Parle-G
##ತರಲೆ##ದೇಶ ಎಷ್ಟು ಮುಂದುವರೆದಿದೆ ಅಂದ್ರೆ ನಾವು ಬಾಲ್ಯದಲ್ಲಿ ಖುಷಿ ಪಟ್ಟು ತಿಂತಾ ಇದ್ದ Parle-G ಬಿಸ್ಕೆಟ್ ಅನ್ನು ಈಗ ಜನ ಬೀದಿನಾಯಿಗೆ ಹಾಕ್ತಾ ಇದ್ದಾರೆ...ಉರಿಯೋದು ಯಾವಾಗ ಅಂದ್ರೆ ಒಮ್ಮೊಮ್ಮೆ ಆ ಬೀದಿನಾಯಿನೂ ಆ ಬಿಸ್ಕೆಟ್ ಮೂಸಿ ಬಿಟ್ಟು ಹೋದಾಗ🤣🤣**ಶ್ರೀ**
Wednesday, September 24, 2025
ಬಿಕ್ಷುಕರ ಹತ್ರ ಭಿಕ್ಷೆ ಬೇಡೋದು
##ತರಲೆ##ಸರಕಾರ ಮಿಡಲ್ ಕ್ಲಾಸ್ ಜನರ ಹತ್ರ tax ಸುಲಿಗೆ ಮಾಡೋದು ಹೇಗಿದೆ ಅಂದ್ರೆ ಬಿಕ್ಷುಕರ ಹತ್ರ ಹೋಗಿ ಭಿಕ್ಷೆ ಬೇಡಿದ ಹಾಗೆ🤣🤣**ಶ್ರೀ**
Tuesday, September 23, 2025
ಇಸ್ಪೀಟು
##ತರಲೆ ## ಜನ ಹೇಳೋದು ಇಸ್ಪೀಟ್ ಆಡಿದ್ರೆ ಮನೆ ಮಾರಿ ಹೋಗತ್ತೆ ಅಂತ... ಆದ್ರೆ ಒಬ್ಬ ಆಡಿ ಕಳ್ಕೊಂಡಿದ್ದಾನೆ ಅಂದ್ರೆ opposite ಆಡಿದವನು ಹಣ ಗಳಿಸಿದ್ದೂ ಕೂಡ ಸತ್ಯ ಅಲ್ವಾ.... ಆದ್ರೆ Online ಆಡಿದ್ರೆ ಹಣ ಕಳ್ಕೊಳೋದು confirm, ಹಣ ಗಳಿಸೋದು ಆಟದ ಬಗ್ಗೆ advertise ಕೊಟ್ಟ ಸೆಲೆಬ್ರಿಟಿ ಮಾತ್ರ 🤣🤣**ಶ್ರೀ**
Monday, September 22, 2025
ಜ್ಯುವೆಲರಿ ಶಾಪ್
##ತರಲೆ## ಜ್ಯುವೆಲರಿ ಶಾಪ್ ಅಲ್ಲಿ ಹೆಂಡ್ತಿ ಹೇಳಿದ್ಳಂತೆ ಅಲ್ಲಿ ಇಲ್ಲಿ ಎಲ್ಲಿ ನೋಡಿದ್ರೂ ಜ್ಯುವೆಲ್ಲರಿ ಪಳ ಪಳ ಹೊಳಿತಾ ಇದೆ ಅಂತ... ಗಂಡ ಹೇಳಿದ್ನಂತೆ ಬಿಲ್ ಬಗ್ಗೆ ಯೋಚ್ನೆ ಮಾಡಿ ನಂಗೆ ತಲೆ ಸುತ್ತಿ ಎಲ್ಲಾ ಕತ್ತಲು ಕತ್ತಲು ಅನ್ನಿಸ್ತಿದೆ ಅಂತ 🤣🤣🤣**ಶ್ರೀ**
Wednesday, September 17, 2025
ಎಲ್ಲಾ ಫಾಸ್ಟು
Loan 3 ನಿಮಿಷದಲ್ಲಿ, ಪಿಜ್ಜಾ 5 ನಿಮಿಷದಲ್ಲಿ, ಬಿರಿಯಾನಿ 15 ನಿಮಿಷದಲ್ಲಿ.... ನಮ್ಮ ಪುಣ್ಯ birthday ಮಾತ್ರ ಇನ್ನೂ 365 ದಿನಕ್ಕೆ ಒಮ್ಮೆ ಬರ್ತಾ ಇದೆ, ಇಲ್ಲಾ ಅಂದ್ರೆ ಇಷ್ಟೊತ್ತಿಗೆ retirement ಆಗಿ ಪರಲೋಕಕ್ಕೆ ಟಿಕೆಟ್ confirm ಆಗಿರ್ತಾ ಇತ್ತು 🤣🤣**ಶ್ರೀ ##
Tuesday, September 16, 2025
Self ಡ್ರೈವಿಂಗ್
##ತರಲೆ## ತಿಂಗಳುಗಟ್ಟಲೆ ಡ್ರೈವಿಂಗ್ ಕಲ್ತು, ವರ್ಷಗಟ್ಟಲೆ "L" ಬೋರ್ಡ್ ಹಾಕ್ಕೊಂಡು ರಸ್ತೆಯಲ್ಲಿ ಹೋಗೋ ಜನರೆಲ್ಲರ ಹತ್ರ ಬೈಸಿಕೊಂಡು, ಗಾಡಿಯ ಸುತ್ತಮುತ್ತ scratch ಮಾಡಿಕೊಂಡು, ಡ್ರೈವಿಂಗ್ ಅಲ್ಲಿ ಪಕ್ಕಾ ಆದವರಿಗೆ ಆ Elon Musk ಸೆಲ್ಫ್ ಡ್ರೈವಿಂಗ್ ಕಾರ್ ಮಾರ್ಕೆಟ್ ಗೆ ಬಿಟ್ರೆ ಉರಿಯಲ್ವಾ🤣🤣**ಶ್ರೀ**
Monday, September 15, 2025
Happy engineer's day
##ತರಲೆ##ಸದಾ ಹಾಳಾಗಿದ್ದನ್ನು ಸರಿ ಮಾಡ್ತಾ, ಸರಿ ಇದ್ದಿದ್ದನ್ನು ಹಾಳು ಮಾಡ್ತಾ, ಹಳೇಸಮಸ್ಯೆ ಬಗೆ ಹರಿಸಿ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಾ ನಿರಂತರ ಕಾರ್ಯನಿರತರಾಗಿರೋ ಇಂಜಿನಿಯರುಗಳೆಲ್ಲರಿಗೂ happy engineer's day 🤣🤣**ಶ್ರೀ **
Friday, September 12, 2025
ಮನೆ ಮತ್ತು ಸಂತೆ
##ತರಲೆ## ಹೆಣ್ಣು ಇಟ್ಟಿಗೆಯ ಕಟ್ಟಡವನ್ನು ಮನೆಯನ್ನಾಗಿಸ್ತಾಳೆ, ನಾವು ಗಂಡಸರು ಮತ್ತು ಮಕ್ಕಳ ಜವಾಬ್ದಾರಿ ಏನಂದ್ರೆ ಅದನ್ನು ಮನೆಯಿಂದ ಮತ್ತೆ ಸಂತೆಯನ್ನಾಗಿಸಿ ಗಬ್ಬು ಗಬ್ಬಾಗಿ ಇಡೋದು 🤣🤣**ಶ್ರೀ**
Wednesday, September 10, 2025
Rough book alli adrushta
##ತರಲೆ##ನಮ್ಮ ಅದೃಷ್ಟ ಎಷ್ಟು ಚೆನ್ನಾಗಿದೆ ಅಂದ್ರೆ ಒಮ್ಮೊಮ್ಮೆ ಅನಿಸುತ್ತೆ ಎಲ್ಲೋ ಆ ದೇವ್ರು ನಮ್ಮ ಹಣೆ ಬರಹವನ್ನು ಯಾವ್ದೋ rough ಬುಕ್ ಅಲ್ಲಿ ಬರೆದಿದ್ದಾರೋ ಏನೋ ಅಂತ 🤣🤣**ಶ್ರೀ**
Thursday, August 7, 2025
Frustration
##ತರಲೆ## ಟ್ರಾಫಿಕ್ಕು, ಆಫೀಸು, ಹೈಕು, ಟ್ಯಾಕ್ಸ್, ಮಳೆ ಇವೆಲ್ಲ ಸೇರಿ Frustration ಯಾವ ಲೆವೆಲ್ ಗೆ ಆಗಿದೆ ಅಂದ್ರೆ fire extinguisher ನೋಡಿದಾಗಲೆಲ್ಲ ಓಪನ್ ಮಾಡಿ ಒಳಗೆ ಪೆಟ್ರೋಲ್ ತುಂಬಿಸಿಬಿಡೋಣ ಅಂತ ಅನ್ನಿಸುವಷ್ಟು 🤣🤣**ಶ್ರೀ**
Wednesday, August 6, 2025
ಸುಗ್ಗಿ ಮತ್ತು swiggy
##ತರಲೆ##ಮೊದಲೆಲ್ಲ ಸುಗ್ಗಿ ಬಂದ್ರೆ ಖುಷಿ ಪಡ್ತಾ ಇದ್ವಿ, ಈಗ ಈ ಮಾಯಾ ನಗರಿಗೆ ಬಂದ ಮೇಲೆ Swiggy ಬಂದ್ರೆ ಖುಷಿ ಪಡೋ ತರ ಆಗಿದೆ🤣🤣**ಶ್ರೀ**
Friday, August 1, 2025
ಸೊಳ್ಳೆಯ ಟೈಮು
##ತರಲೆ##ಸಂಜೆ ಆರು ಘಂಟೆ ಟೈಮಿನಲ್ಲಿ ಮನೆಯ ಎಲ್ಲಾ ಕಿಟಕಿ ಹಾಕ್ದೆ ಇದ್ರೆ ಸೊಳ್ಳೆ ಎಲ್ಲಾ ಬಂದು ಒಳಗೆ ಸೇರಿಕೊಳ್ಳತ್ತೆ ಆಮೇಲೆ ರಾತ್ರೆ ಮಲಗಕ್ಕೆ ಬಿಡಲ್ಲ ಅಂದ್ಲು ಹೆಂಡ್ತಿ, ಒಹ್ ಸೊಳ್ಳೆ ಟೈಮ್ ನೋಡೋ ವಾಚ್ ಯಾವ ಕಂಪನಿದು ಅಂತ ಕೇಳಿದೆ😁😁... ಇದ್ದಕ್ಕಿದ್ದಂತೆ ಅಡಿಗೆ ಮನೇಲಿ ಭೂಕಂಪ🤨🤨 **ಶ್ರೀ**
Tuesday, July 29, 2025
ಆಂಟಿ ನ್ಯೂಸ್ ಚಾನೆಲ್
##ತರಲೆ##ಎಲ್ಲಕ್ಕಿಂತ ಸ್ಟ್ರಾಂಗ್ ಮೀಡಿಯಾ network ಯಾವ್ದು... ಮನೆ ಅಕ್ಕ ಪಕ್ಕದ ಆಂಟಿಯರದ್ದು. ಬೆಳಗ್ಗಿನಿಂದ ಸಂಜೆವರೆಗೆ ಜರ್ನಲಿಸ್ಟ್ ಆಗಿ ವಿಷಯ ಒಟ್ಟು ಮಾಡ್ತಾರೆ, ಸಂಜೆಯಷ್ಟರಲ್ಲಿ ಅವರೇ anchor ಆಗಿ broadcast ಶುರು. ಮದ್ಯ ಮದ್ಯದಲ್ಲಿ ಭೀಮ, ತನಿಷ್ಕ್, ಲಲಿತಾ ಜ್ಯುವೆಲರ್ ಆಫರ್ ಬಗ್ಗೆ ಮಾತಾಡ್ತಾ advertisement ಕೂಡ ಕೊಡ್ತಾರೆ🤣🤣 **ಶ್ರೀ**
Tuesday, July 22, 2025
Zepto ಮತ್ತು Zomato
##ತರಲೆ## Zepto ಮತ್ತೆ Zomato ಗೆ ಏನು difference...? ಅಡಿಗೆ ಮಾಡಬೇಕು ಅಂತ ಮನಸ್ಸು ಇದ್ರೆ Zepto, ಇಲ್ಲಾ ಅಂದ್ರೆ Zomato. ಒಂದ್ರಲ್ಲಿ order ಮಾಡಿದ್ರೆ ಬೇಯಿಸಿ ತಿನ್ಬೇಕು, ಇನ್ನೊಂದ್ರಲ್ಲಿ order ಮಾಡಿದ್ರೆ direct ತಿನ್ನಬಹುದು. Order ಮಾಡಕ್ಕೆ ಅಕೌಂಟ್ ಅಲ್ಲಿ ಕಾಸಿರಬೇಕು ಅಷ್ಟೇ 🤣🤣**ಶ್ರೀ **
Monday, July 21, 2025
Costly ಕಾರು
##ತರಲೆ##ಮಾರ್ಕೆಟಿಂಗ್ ಫೀಲ್ಡ್ ಅಲ್ಲಿ ಇರೋ ಫ್ರೆಂಡ್ ಕೇಳಿದ, car ತಗೋಬೇಕು ಅಂತ ಇದೀನಿ ಯಾವ್ದು ತಗೋಬೋದು ಅಂತ. Comfortable ಇರೋ ಯಾವುದಾದ್ರೂ high end ಕಾರ್ ತಗೋ ಅಂದೆ. ಫ್ಲಾಟ್ ಬುಕ್ ಮಾಡಿದೀನಿ, ಅಷ್ಟು costly ಕಾರಿಗೆ emi ಕಟ್ಟೋದು ಕಷ್ಟ ಆಗತ್ತೆ ಅಂದ. ಮನೆಗಿಂತ ಜಾಸ್ತಿ ಟೈಮು ಟ್ರಾಫಿಕ್ ಅಲ್ಲಿನೇ ಇರ್ತೀಯ, ಫ್ಲಾಟ್ cancel ಮಾಡಿ ಕಾರ್ ತಗೋ ಅಂದೆ... ಅದೃಷ್ಟ ಚೆನಾಗಿತ್ತು, ಅವ್ನು ದುರುಗುಟ್ಟಿ ನೋಡಿದ, ಪುಣ್ಯ ಹೊಡೀಲಿಲ್ಲ 🤣🤣🤣**ಶ್ರೀ **
Tuesday, July 15, 2025
Online order
##ತರಲೆ##ಮೊಬೈಲ್ ಅಲ್ಲಿ ಬುಕ್ ಮಾಡಿದ್ರೆ grocery, ಫುಡ್ಡು, ಬೆಡ್ಡು, ಟಿಕೆಟ್ ಎಲ್ಲಾನೂ ಬರತ್ತೆ. ಬುಕ್ ಮಾಡಿದ್ರೆ ಮಗು ಬರೋದು ಒಂದೇ ಬಾಕಿ.... ಅದಕ್ಕೆ 9 ತಿಂಗಳು ಬೇಕಲ್ಲ... 9 ನಿಮಿಷದಲ್ಲಿ ಆಗಿದ್ರೆ ಅದೂ ಬರ್ತಾ ಇತ್ತು ಅನ್ಸತ್ತೆ 🤣🤣**ಶ್ರೀ**
Friday, July 11, 2025
ಹೆಣ್ಣು ಹೊನ್ನು ಮಣ್ಣು
##ತರಲೆ##ಹೆಣ್ಣು ಹೊನ್ನು ಮಣ್ಣು...... ಹೆಣ್ಣಿಗೆ ಹೊನ್ನು ಕೊಡಿಸಿ ಕೊಡಿಸಿ ಪುರುಷರ ಆಸೆಗಳೆಲ್ಲ ಮಣ್ಣು ಆದವು ಅನ್ನಬಹುದೇ🤣🤣? ಖುಷಿ ಪಟ್ಟವರು ಮಾತ್ರ ಲಲಿತಾ ಜ್ಯುವೆಲರಿಯ ಗುಂಡು ಗುಂಡು ಮಾಲೀಕರು ಮಾತ್ರ 🤣🤣**ಶ್ರೀ**
Thursday, July 10, 2025
ಗುರು ಪೂರ್ಣಿಮೆ
##ತರಲೆ## ಮೊದಲ ಗುರುವಾಗಿದ್ದ ಅಪ್ಪ ಅಮ್ಮಂದಿರಿಂದ ಶುರುವಾಗಿ, ಸರಿಯನ್ನು ಬೆಂಬಲಿಸಿ, ಕಿವಿ ಹಿಡಿದು ತಪ್ಪನ್ನು ಸರಿಪಡಿಸಿದ ಅಧ್ಯಾಪಕರು, ಹೊಸತಾಗಿ ಏನೇನೋ ಹೇಳಿಕೊಟ್ಟ ಕಿಲಾಡಿ ಸ್ನೇಹಿತರುಗಳಿಗೆ, ದಿನ ಬೆಳಗಾದ್ರೆ ನಿರಂತರವಾಗಿ ಪಾಠ ಕಲಿಸ್ತಾನೇ ಇರೋ ಕೆಲವು ಮಹಾಜನರೆಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು😁😁**ಶ್ರೀ **
Wednesday, July 9, 2025
Plug N play
##ತರಲೆ## Plug and play best example ಹೆಣ್ಣು ಮಕ್ಳ ಹತ್ರ ಗೋಲ್ಡ್ ರೇಟ್ ಎಷ್ಟಾಯ್ತು ಗೊತ್ತಾ ಅಂತ ಕೇಳಿ (Plug)... ಆಮೇಲೆ continous ಹೇಳ್ತಾ ಇರ್ತಾರೆ (play)... 🤣🤣**ಶ್ರೀ**
Tuesday, July 1, 2025
5 ನಿಮಿಷ
##ತರಲೆ##ವಿಪರ್ಯಾಸ....ಈಗ Grocery 5 ನಿಮಿಷದಲ್ಲಿ ಬರತ್ತೆ, ಆದ್ರೆ ಜೀವ ಹೋಗ್ತಾ ಇದೆ ಡಾಕ್ಟರ್ ಬೇಕು, ಅಂದ್ರೆ ಮಾತ್ರ ಒಂದು ದಿನ ಮುಂಚೆನೇ appointment ತಗೊಂಡಿರಬೇಕು.🤣🤣**ಶ್ರೀ**
Monday, June 30, 2025
ಛತ್ರಿ
##ತರಲೆ##ಛತ್ರಿ.... ನಮ್ಮನ್ನ ಮಳೆ ಬಿಸಿಲಿಂದ ಕಾಪಾಡತ್ತೆ...ಆದರೆ ಸಮಯಕ್ಕೆ ಕೈ ಕೊಡೋ ಇಲ್ಲಾ ಬತ್ತಿ ಇಡೋ ಕೆಲಸ ಮಾಡೋ ಜನರಿಗೆ ಛತ್ರಿ ಅಂತ ಯಾಕೆ ಕರೀತಾರೆ?? 🤣🤣🤣**ಶ್ರೀ**
Friday, June 27, 2025
ಜಿಯೋ ನೆಟ್ವರ್ಕ್
##ತರಲೆ##ಇತ್ತೀಚಿಗೆ ಜಿಯೋ ನೆಟ್ವರ್ಕ್ ಎಷ್ಟು ಚೆನಾಗಿದೆ ಅಂದ್ರೆ OTP ಮೊಬೈಲಿಗೆ ಬರೋವಷ್ಟರಲ್ಲಿ ಅದು expire ಆಗಿರತ್ತೆ🤣🤣**ಶ್ರೀ**
Wednesday, June 25, 2025
ಟ್ರಂಪ್
#ತರಲೆ## ಈ ಟ್ರಂಪ್ alarm ಗಡಿಯಾರ ತರ, ರಾತ್ರಿ alarm ಇಡೋದು ಬೆಳಗ್ಗೆ off ಮಾಡೋದು. .......ಮೊದ್ಲು ಯುದ್ಧ ಮಾಡಿಸೋದು ಆಮೇಲೆ ಬಿಡಿಸಿ, ನಾನೇ ಯುದ್ಧ ನಿಲ್ಲಿಸಿದ್ದು ಅನ್ನೋದು🤣🤣🤣**ಶ್ರೀ**
Monday, June 23, 2025
Intelligent mobile
##ತರಲೆ ## ಮುಂದಿನ intelligent ಮೊಬೈಲ್ ಗಳು ಹೇಗಿರಬಹುದು ಅಂದ್ರೆ, Flipkart/Amazon ಅಲ್ಲಿ ಸ್ಪೆಷಲ್ ಸೇಲ್ ಇದ್ದಾಗ ತನ್ನಿಂದ ತಾನೇ ಕೆಳಗೆ ಬಿದ್ದು ಆತ್ಮಹತ್ಯೆ ಮಾಡ್ಕೊಂಡು ಒಡೆದು ಹೋಗ್ತಾವೆ... ನೀವು ಹೊಸ ಮೊಬೈಲ್ ತಗೋಳಕ್ಕೆ help ಮಾಡ್ತಾವೆ 🤣🤣🤣 **ಶ್ರೀ **
Thursday, June 19, 2025
Wednesday, June 18, 2025
ಮಳೆ...
##ತರಲೆ##ಲ್ಯಾಪ್ಟಾಪ್ ನ್ನು ಮಗು ತರ ಅಪ್ಪಿಕೊಂಡು, ನಮ್ಮನ್ನು ತೊಯ್ಯಿಸಿಬಿಡೊ ಶಪಥ ತೊಟ್ಟಿರೋ ವರುಣ ದೇವನಿಗೆ ಛತ್ರಿ ತೋರಿಸಿ, ರಸ್ತೇಲಿರೋ ಹೊಂಡಗಳ ಮೇಲೆ ಹನುಮಂತನ ತರ ಹಾರಿ, ಕೆಲವೊಮ್ಮೆ ಉರುಳು ಸೇವೆ ಮಾಡಿ ಮನೆ ತಲುಪೋವಷ್ಟರಲ್ಲಿ ಫಾರ್ಮಲ್ ಶೂ ICU ಗೆ, ಪ್ಯಾಂಟು ಶರ್ಟು ದೋಬಿ ಅಂಗಡಿಗೆ ಹೋಗಲೇಬೇಕು ಅಂತಿರುತ್ತೆ. ಬಡಪಾಯಿ ಜೀವ ಒಂದು dolo 650 ಕೇಳಿರುತ್ತೆ. ಎಂತಾ ಮಳೆ ಮಾರ್ರೆ🤣🤣**ಶ್ರೀ**
Monday, June 16, 2025
ಡ್ರೈವಿಂಗ್
##ತರಲೆ##ಬೆಂಗಳೂರಿನಲ್ಲಿ ಕೆಲವರ ಡ್ರೈವಿಂಗ್ ಎಷ್ಟು ಚೆನ್ನಾಗಿರತ್ತೆ ಅಂದ್ರೆ ಹಿಂದುಗಡೆಯಿಂದ ಗಾಡಿಗೆ ಗುದ್ದಿ ಮುಂದೆ ಬಂದು ನಮ್ಮ ಹತ್ರ ಕೇಳ್ತಾರೆ, ಯಾಕೋ ಕಣ್ಣು ಕಾಣಿಸಲ್ವಾ ಅಂತ... ಕಣ್ಣು ಮುಖದ ಮೇಲೆ ಇರತ್ತೆ ಬೇರೆ ಕಡೆ ಅಲ್ಲ ಅಂತ ಮರತೇ ಬಿಟ್ಟಿರ್ತಾರೆ🤣🤣🤣**ಶ್ರೀ***
Friday, June 13, 2025
ಸೂಪರ್ ಫಾಸ್ಟು
##ತರಲೆ ## Loan 3 ನಿಮಿಷದಲ್ಲಿ, ಪಿಜ್ಜಾ 5 ನಿಮಿಷದಲ್ಲಿ, ಬಿರಿಯಾನಿ 15 ನಿಮಿಷದಲ್ಲಿ.... ನಮ್ಮ ಪುಣ್ಯ birthday ಮಾತ್ರ ಇನ್ನೂ 365 ದಿನಕ್ಕೆ ಒಮ್ಮೆ ಬರ್ತಾ ಇದೆ, ಇಲ್ಲಾ ಅಂದ್ರೆ retirement ನಲವತ್ತು ವರ್ಷಕ್ಕೇನೆ ಆಗಿರ್ತಾ ಇತ್ತು 🤣🤣**ಶ್ರೀ ##
Thursday, June 12, 2025
ನೊಂದ ಕಾಳೂರು
##ತರಲೆ ## ಬೆಂಗಳೂರಿನಲ್ಲಿ ಟ್ರಾಫಿಕ್, ಮೆಟ್ರೋ, ಮಳೆ, ದೂಳು ಅಂತ ಜನ ಎಷ್ಟು ನೊಂದಿದಾರೆ ಅಂದ್ರೆ ಇದು ಬೆಂದಕಾಳೂರು ಅಲ್ಲ ಇದು ನೊಂದ ಕಾಳೂರು ಆಗಿದೆ🤣🤣**ಶ್ರೀ**
Wednesday, June 11, 2025
ಸೊಳ್ಳೆ
ತರಲೆ##ಮಳೆಗಾಲ, ಸೊಳ್ಳೆ ಗಳು ಡ್ರೋನ್ ತರ ಬಂದು ಕಾಟ ಕೊಡಕ್ಕೆ ಶುರು. ಬೇಡ ಅಂದ್ರೂ ರಕ್ತ ಹೀರಿ ರಕ್ತ ಸಂಬಂಧಿ ಆಗಕ್ಕೆ try ಮಾಡ್ತಾವೆ. ಸಂಬಂಧ ಹಳಸಿದರೆ ಡೆಂಗ್ಯೂ, ಮಲೇರಿಯ ಕೊಟ್ಟು ಹೋಗ್ತಾವೆ🤣🤣🤣**ಶ್ರೀ**
Tuesday, June 10, 2025
ಲಾಕ್ಡೌ ನ್
##ತರಲೆ ##ಯಾವಾಗ್ಲೂ ಗಾಡೀಲಿ ಜೂಮ್ ಅಂತ ಬರೋ ಫ್ರೆಂಡ್ ನಡೆದುಕೊಂಡು ಬರ್ತಾ ಇದ್ದ, ಯಾಕಪ್ಪಾ ಅಂದ್ರೆ ನಮ್ದು ಒಂತರಾ ಲಾಕ್ ಡೌನ್ ಆಗಿದೆ ಅಂದ. ಒಹ್ ಕೊರೋನ ಮತ್ತೆ ಜಾಸ್ತಿ ಆಯ್ತೆನೋ ಅನ್ನೋವಷ್ಟರಲ್ಲಿ ಹೇಳಿದ, ಚರಂಡಿ ಅಗೆದಿದ್ದಾರೆ ಗಾಡಿ ಹೊರಗೆ ತೆಗೆಯಂಗಿಲ್ಲ ಅಂತ...... ಸರಕಾರದ ಬೆಂಬಲದ ಲಾಕ್ ಡೌನ್ 🤣🤣**.ಶ್ರೀ**
Tuesday, June 3, 2025
ಕಪ್ ನಮ್ದೇ
##ತರಲೆ ##ಮರುಭೂಮಿಯಲ್ಲಿ ಪ್ರವಾಹದ ಮಳೆ.....ಅಂತೂ ಕಡೆಗೆ RCB.... R-oyals ಗೆ C-up B-antu...... 🤣🤣🤣**ಶ್ರೀ **
Monday, June 2, 2025
ಹಾಲು ಮತ್ತು ಮೊಬೈಲು
##ತರಲೆ##ಹಾಲು ಬಿಸಿಗೆ ಇಟ್ಟಿದೀನಿ ಕುದ್ರೆ ಆಫ್ ಮಾಡಿ ಅಂದಿದ್ಳು ಹೆಂಡ್ತಿ. ಮೊಬೈಲ್ ನೋಡ್ತಾ ಮೈ ಮರೆತಿರೋವಾಗ ಹಾಲು ಕುದ್ದು ಸ್ಟೋವ್ ಮೇಲಿಂದ ಇಳಿದು ಅರ್ಧ ಅಡುಗೆ ಮನೆ ಆಗಿತ್ತು. ಏನಿದು off ಮಾಡಿಲ್ವಾ ಅಂತ ಕೇಳಿದ್ರೆ, ಹಾಲು ನಿನ್ನ ಹುಡುಕಿಕೊಂಡು ಪಾತ್ರೆಯಿಂದ ಹೊರಗೆ ಬಂದಿತ್ತು ಅಂದೆ. ಮುಂದೆ...? ಅಡುಗೆ ಮನೇಲಿ ಭೂಕಂಪ🤣🤣 **ಶ್ರೀ**
Friday, May 30, 2025
ಲೆವೆಲ್
##ತರಲೆ## ಜನರು ಮುಂಚೆ ಸಮಾಜದಲ್ಲಿ ಹಣಕಾಸು ಮತ್ತು ಸ್ಥಾನಮಾನ ಇದ್ದವರ ಆದರ್ಶ ತಗೊಂಡು ಅವರ ಲೆವೆಲ್ ಗೆ ಹೋಗಕ್ಕೆ try ಮಾಡ್ತಾ ಇದ್ರು. ಈಗ ಹೇಗಪ್ಪಾ ಅಂದ್ರೆ ಅಷ್ಟೆಲ್ಲಾ ಕಷ್ಟಪಟ್ಟು ಯಾಕೆ ಮೇಲೆ ಹೋಗಬೇಕು, ಸ್ವಲ್ಪ ಕಷ್ಟಪಟ್ಟು ಅವರನ್ನೇ ನಮ್ಮ ಲೆವೆಲ್ ಗೆ ಇಳಿಸಿದರಾಯ್ತು ಅನ್ನೋರೇ ಜಾಸ್ತಿ🤣🤣🤣**ಶ್ರೀ**
ಕಪ್ ನಮ್ದೇ
##ತರಲೆ ##ಈ ಸಲ ಕಪ್....................ಎತ್ತೋದಷ್ಟೇ ಬಾಕಿ ಅಂದುಕೊಂಡಿದೀವಿ. Final ಮ್ಯಾಚ್ ಉಳಿದಿದೆ, ದೇವ್ರಿಗೆ ಅಂತಾನೋ, ಇಲ್ಲಾ opposite ಟೀಮ್ ಪಾಪ ಅಂತಾನೋ ಕೊಟ್ಟು ಬಿಡಬೇಡಿ ಪ್ಲೀಸ್. ನಮಗೂ ಕಾರಣ ಕೊಟ್ಟು ಕೊಟ್ಟು ಸಾಕಾಗಿದೆ. ಕೊಹ್ಲಿಗೋಸ್ಕರ ಒಂದು ಕಪ್ ತನ್ನಿ. ಪಾಪ ಅವ್ರಿಗೂ ಅನುಷ್ಕಾ ಮೇಡಂ ಇಷ್ಟು ವರ್ಷದಿಂದ ಅದೆಷ್ಟು ಆಡ್ಕೋತಿದಾರೋ ಏನೋ 🤣🤣**ಶ್ರೀ **
Tuesday, May 27, 2025
ಡ್ರೋನ್
##ತರಲೆ##ಪುಣ್ಯ ಮೊನ್ನೆ ಪಾಕಿಸ್ಥಾನದ ಡ್ರೋನ್ ಬೆಂಗಳೂರಿಗೆ ಬಂದಿಲ್ಲ... ಬಂದಿದ್ರೆ ಎಲ್ಲೋ ಡ್ರೋನಿನಲ್ಲಿ ಫೋಟೋ ತೆಗೀತಾ ಇದಾರೆ ಅಂತ ಫೋಸ್ ಕೊಡ್ತಾ ಇದ್ರು ಜನ🤣🤣**ಶ್ರೀ**
Monday, May 26, 2025
ಸ್ಕೂಲ್
##ತರಲೆ ##ಹೊಸತನದ ಕಾತರದಲ್ಲಿರೋ ಮಕ್ಕಳು, ಮಕ್ಕಳು ಶಾಲೆಗೆ ಹೊಂದುಕೊಳ್ಳುತ್ತಾರೋ ಇಲ್ಲವೋ ಅಂತ ಯೋಚನೆಯಲ್ಲಿ ಅಪ್ಪ ಅಮ್ಮಂದಿರು, ಅಲ್ಲಿ ಇಲ್ಲಿ ಸೆಲ್ಫಿ ತಗೋತಾ ಇರೋ ಜನ, ಮೊದಲ ದಿನ ಅಂತ ಕೆಲವರು ಮೇಕಪ್ ಅಲ್ಲಿದ್ದರೆ ಇನ್ನೂ ಕೆಲವರು ಲೇಟ್ ಆಯ್ತು ಅಂತ ಹಾಸಿಗೆಯಿಂದ ಹಾಗೇ ಬಂದಿದ್ದಾರೋ ಏನೋ, ಅಯ್ಯೋ ಮತ್ತೆ ಶುರು ಆಗೇ ಬಿಡ್ತು ಅಂದುಕೊಳ್ತಾ ಇರೋ ಬಡಪಾಯಿ ಟೀಚರುಗಳು... ಬಿಸಿ ಆಗಿರೋ ತಲೆಗಳನ್ನು ತಣ್ಣಗಾಗಿಸಲು ತುಂತುರು ಮಳೆ... ಅಂತೂ ಸ್ಕೂಲ್ ಶುರುವಾಯ್ತು 🤣🤣🤣**ಶ್ರೀ**
Saturday, May 24, 2025
ಯುದ್ಧ
##ತರಲೆ## ಇಂಡಿಯಾ ಪಾಕಿಸ್ತಾನ ಯುದ್ಧವೇನೋ 4 ದಿನದಲ್ಲಿ ಮುಗೀತು, ಆದ್ರೆ ಆರಡಿ ಮೂರಡಿ ಜಾಗದ ತಕರಾರಿಗೆ ಕೋರ್ಟಿನಲ್ಲಿ ವರ್ಷನುಗಟ್ಟಲೆಯಿಂದ ಹೋರಾಡ್ತಾ ಇರೋ ಅದೆಷ್ಟೋ ಕೇಸುಗಳು ಇನ್ನೂ ಮುಗಿದಿಲ್ಲ. ಮಾತಿನ ಮಿಸೈಲ್ ಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರ್ತಾನೆ ಇದಾವೆ 🤣🤣🤣**ಶ್ರೀ**
Thursday, May 22, 2025
ಟ್ರಂಪ್
##ತರಲೆ## ಟ್ರಂಪ್ ಬಂದಲ್ಲಿಂದ Dollar ಜಾರಿ ಬೀಳ್ತಾ ಇದೆ ಅಂತ ಅಂದ್ರೆ ಒಬ್ಬ ಹೇಳಿದ್ನಂತೆ ನಾನು ಅದ್ಕೇ jockey ಹಾಕ್ತೀನಿ, elastic tight ಇರತ್ತೆ ಜಾರಕ್ಕೆ ಬಿಡಲ್ಲ ಅಂದ್ನಂತೆ...🤣🤣**ಶ್ರೀ**
ಬೆಂಗಳೂರಿಗರು 🤣🤣
##ತರಲೆ##ಬೆಂಗಳೂರಿಗರು..... ಪ್ರತೀ ಬೇಸಿಗೆಯಲ್ಲಿ IPL ನಲ್ಲಿ ಕಪ್ ನಮ್ದೇ... ಮತ್ತೆ ಮಳೆಗಾಲದಲ್ಲಿ ರೋಡು, ಮೋರಿ, ಕೆರೆ ನೀರೆಲ್ಲ ನಮ್ದೇ🤣🤣**ಶ್ರೀ**
Settle ಆಗೋದು
##ತರಲೆ##ಮೀಸೆ ತಿರುವೋ ಮಕ್ಕಳು, ವಯಸ್ಸಾದ ಅಪ್ಪ ಅಮ್ಮ, ಊರಲ್ಲಿ settle ಆಗೋದಾ ಅಥವಾ ಬೆಂಗಳೂರಿನಲ್ಲಾ ಅನ್ನೋ ವಿಷಯಕ್ಕೆ ಹಗ್ಗ ಜಗ್ಗಾಟ .... ವಯಸ್ಸು ಅನ್ನೋ ಮರಳಿನ ಮೈದಾನದಲ್ಲಿ, ತುಸು ಗಟ್ಟಿ ಮಣ್ಣಿನ ಮೇಲೆ ನಿಂತಿದ್ದರಿಂದ ಮಕ್ಕಳ ಕೈನೆ ಮೇಲು .... ಆದರೆ ಜಗ್ಗಾಟದ ಕೊನೆಯಲ್ಲಿ ಮನಸ್ಸುಗಳಿಗೆ ಆಗಿರೋ ಗಾಯಕ್ಕೆ ಮದ್ದೆಲ್ಲಿ ? **ಶ್ರೀ ##
Wednesday, May 21, 2025
ಮಳೆ ನೀರು
##ತರಲೆ## ಸರಕಾರದವರು ಮನೆ ಮನೆಗೂ ನೀರು ಬರೋ ತರ ಮಾಡ್ತೀವಿ ಅಂತ ಹೇಳಿದಾಗ ಕುಡಿಯೋ ನೀರು ಅಂದುಕೊಂಡಿದ್ದೆ, ಮಳೆ ನೀರಲ್ಲಿ ಮುಳುಗಿಸ್ತಾರೆ ಅಂದುಕೊಂಡಿರ್ಲಿಲ್ಲ🤣🤣**ಶ್ರೀ
Tuesday, May 20, 2025
ಮಳೆ ಮಳೆ
##ತರಲೆ ## ಕೆರೆ ಮುಚ್ಚಿ ಅಪಾರ್ಟ್ಮೆಂಟ್ ಕಟ್ಟೊ ಬದಲು ಅದೇ ಕೆರೆ ನೀರಲ್ಲಿ ತೇಲೋ ತರ ಕಟ್ಟಿದ್ದರೆ ಚೆನ್ನಾಗಿರೋದು... ಅಬ್ಬಬ್ಬಾ ಅಂದ್ರೆ ಮಳೆ ಜಾಸ್ತಿ ಆದ್ರೆ ತೇಲಿ ರೋಡಿಗೆ ಬಂದು ರೋಡ್ ಬ್ಲಾಕ್ ಆದ್ರೂ jcb ಅಲ್ಲಿ ಎಳೆದುಕೊಂಡು ಹೋಗಿ ಮತ್ತೆ ಕೆರೆಯಲ್ಲಿ ತೇಲಿಸಬಹುದಿತ್ತು 🤣🤣**ಶ್ರೀ **
Thursday, May 15, 2025
GST
##ತರಲೆ## ಉತ್ಸಾಹದಿಂದ ಹುಡುಗ ಹುಡುಗಿಗೆ ಕೇಳಿದ್ನಂತೆ, ಚಿನ್ನಾ ನಿನಗೆ ಚಂದ್ರನ್ನ ತಂದ್ಕೊಡ್ಲಾ, ಸೂರ್ಯನ್ನ ತಂದು ಕೊಡ್ಲಾ ಅಂತ ... ಅಷ್ಟರಲ್ಲಿ ನಿರ್ಮಲ ಮೇಡಂ ಬಂದು ಹೇಳಿದ್ರಂತೆ ನೀನು ಏನಾದ್ರೂ ತಂದು ಕೊಡಪ್ಪ ಆದ್ರೆ GST ಮಾತ್ರ ಮೊದಲು ಬಿಡಪ್ಪ ಅಂತ 🤣🤣**ಶ್ರೀ**
Promotion
##ತರಲೆ## Promotion without pay hike is like a girl telling i love you, but all as a friend🤣🤣**ಶ್ರೀ**
Sunday, May 11, 2025
ಅಮ್ಮ ಅನ್ನೋ ಮಾಯೆ
##ತರಲೆ## ಜೀವನವಿಡೀ ಧನ್ಯವಾದ ಹೇಳಿದರೂ ತೀರದ ಋಣವಾದ ಅಮ್ಮ ಅನ್ನೋ ಮಾಯೆಗೆ, ಹೆತ್ತು,ಹೊತ್ತು, ನೀನೇ ನನ್ನ ಬಂಗಾರ ಅಂತ ಹೇಳ್ತಾ ಸಲಹಿ, ಗುರುವಾಗಿ ಒಳ್ಳೇದು ಕೆಟ್ಟದ್ದು ಅಂತ ತಿಳಿ ಹೇಳಿ, ಸಹನಾಮೂರ್ತಿಯಾಗಿ ಎಲ್ಲಾ ತರಲೆಗಳನ್ನು ಸಹಿಸಿಕೊಂಡು, ಮಕ್ಕಳಿಗಾಗಿ ಜೀವನವನ್ನೇ ಸವೆಸುತ್ತಿರೋ ಪ್ರೀತಿಯ ಅಮ್ಮಂದಿರಿಗೆಲ್ಲ Happy Mothers Day **ಶ್ರೀ**
Saturday, May 10, 2025
ಐಪಿಎಲ್....
##ತರಲೆ## IPL postpone ಆಗಕ್ಕೆ ಪಾಕಿಸ್ತಾನನೇ ಕಾರಣ ಅಂತ ಸಿಟ್ಟಲ್ಲಿ ಕೆಲವು ಕ್ರಿಕೆಟ್ ಪ್ರಿಯರು ಪಾಕಿಸ್ತಾನದ ಮೇಲೆ ಬಾಂಬ್ ಹಾಕಕ್ಕೆ ಹೊರಟಿದ್ದಾರಂತೆ🤣🤣**ಶ್ರೀ**
Tuesday, May 6, 2025
ಪ್ರೆಷರ್...
##ತರಲೆ## ಇವತ್ತಿನ ಜನರೇಷನ್ ಮೇಲೆ ಎಷ್ಟು presure ಇದೆ ಅಂದ್ರೆ ಕುಕ್ಕರ್ ಮುಚ್ಚಳ ತಲೆ ಮೇಲಿಟ್ಟರೆ ದಿನವಿಡೀ ನಿರಂತರ whistle ಹೊಡೆಯುವಷ್ಟು 🤣🤣🤣**ಶ್ರೀ**
Thursday, May 1, 2025
ಕಾರ್ಮಿಕರ ದಿನ
##ತರಲೆ ##ಮಕ್ಕಳಿಗೋಸ್ಕರ ಜೀವನವನ್ನೇ ಅರ್ಪಿಸಿರೋ ಅಪ್ಪ ಅಮ್ಮ ಅನ್ನೋ ನಿಸ್ವಾರ್ಥ ಕಾರ್ಮಿಕರಿಗೆ, ಸಂಸಾರಕ್ಕೆ ಜೀವ ಸವೆಸೋ ಸತಿಗೆ, ಮೌನಮುಖಿ ಯಾಗಿ ದುಡಿದು ತರೋ ಗಂಡನೆನ್ನೋ ಮೂಕಪ್ರಾಣಿಗಳಿಗೆ, ಬೆವರು ಸುರಿಸಿ ದುಡಿಯುತ್ತಿರೋ ಎಲ್ಲಾ ಕಾರ್ಮಿಕರಿಗೆ, ಕೆಲಸವಿಲ್ಲದಿದ್ದರೂ ಬ್ಯುಸಿ ಅಂತ ತೋರಿಸಿಕೊಳ್ಳೋ ಹಲವು ಮಹಾಜನರುಗಳಿಗೆ, ಹಗಲುರಾತ್ರಿ ಅನ್ನದೆ ಕೀಬೋರ್ಡ್ ಕುಟ್ಟುತ್ತಿರೋ IT ಕೂಲಿಕಾರ್ಮಿಕರೆಲ್ಲಗೂ ಕಾರ್ಮಿಕರ ದಿನದ ಶುಭಾಶಯಗಳು🤣🤣**ಶ್ರೀ**