Wednesday, April 29, 2026

ಲೈಟು ಮತ್ತು ಫೋನು

##ತರಲೆ## ಲೈಟ್ ಹಾಕಿ ಹುಡುಕಿದ್ರೂ ಮೊಬೈಲ್ ಸಿಕ್ತಾನೇ ಇರ್ಲಿಲ್ಲ .... ಮೊಬೈಲ್ ಅಲ್ಲಿ ಲೈಟ್ ಆಫ್ ಮಾಡಿದ ಮೇಲೆನೇ ಗೊತ್ತಾಗಿದ್ದು ಇಷ್ಟು ಹೊತ್ತು ಫೋನ್ ಕೈಲೇ ಇತ್ತು ಅಂತ😂😂... **ಶ್ರೀ**

Saturday, April 25, 2026

ಸೆಕೆ

 ##ತರಲೆ## ಯಾರೋ ಕೇಳಿದ್ರು ಊರಲ್ಲಿ ಸೆಕೆ ಇದೆಯಾ ಆಂತ. ನಾನಂದೇ ಇತ್ತೀಚಿನ ಕೆಲವು ವರ್ಷಗಳಿಂದ ಊರಲ್ಲಿ ಸೆಕೆ ಅನ್ನೋದೇ ಇಲ್ಲ......... ಬರೀ ಬೆಂಕಿಯ ಕಾವು ಅಷ್ಟೇ ಅಂತ 😭**ಶ್ರೀ**

Tuesday, April 21, 2026

ಅಕ್ಷಯ ತೃತೀಯ

 ##ತರಲೆ##ಹೆಂಡ್ತಿ ಹೇಳ್ತಾ ಇದ್ಲು ಅಕ್ಷಯ ತ್ರಿತೀಯಕ್ಕೆ ಮನೆಗೆ ಹೊಸದು ಏನಾದ್ರೂ ತಂದ್ರೆ  ಅದು ಶುಭ ಸಂಕೇತವಂತೆ.  1-2 ಗ್ರಾಂ ಅಂತ ಸಣ್ಣ ಚಿನ್ನದ coin ಏನು ತರೋದು ಅಂತ ಈ ಸಲ ದೊಡ್ಡ ಐಟಂ ತಂದೆ......35ಕೆಜಿ ತೂಗೋ Almera....ಮತ್ತೇನು, ಅಡುಗೆ ಮನೇಲಿ ಲಘು ಭೂಕಂಪದ ಅನುಭವ🤣🤣**ಶ್ರೀ**

Friday, April 10, 2026

ಶಾರುಖ್ ಮತ್ತೆ ರೋಮ್ಯಾನ್ಸ್

 #ತರಲೆ## ಶಾರುಕ್ ಖಾನ್ ರೋಮ್ಯಾಂಟಿಕ್ ಅನ್ನೋ ಹೆಣ್ಮಕ್ಕಳಿಗೆ. ಅವ್ನು ರೋಮ್ಯಾನ್ಸ್ ಮಾಡಕ್ಕೆ ಕೋಟಿ ಕೋಟಿ ಹಣ ಕೊಡ್ತಾರೆ... ಅದಕ್ಕಿಂತ ಮುಖ್ಯ ಅಂದ್ರೆ ಅವ್ನಿಗೆ ರೋಮ್ಯಾನ್ಸ್ ಮಾಡೋಕ್ಕೆ ಪ್ರತೀ ಸಲ ಬೇರೆ ಬೇರೆ ಹುಡುಗೀರು. ಅದ್ಕೇ ರೋಮ್ಯಾನ್ಸ್ ಹೊಳೆ ಹರಿಯುತ್ತೆ 🤣🤣.. **ಶ್ರೀ**

Thursday, April 9, 2026

ಆಟೋ ಡ್ರೈವರ್

 ##ತರಲೆ##ಆಟೋದಲ್ಲಿ ವಿಡಿಯೋ ನೋಡ್ತಾ ಇದ್ದ ಡ್ರೈವರ್ ಮಹಾರಾಜನ ಹತ್ರ ಕೇಳಿದ್ರಂತೆ "ಮೆಜೆಸ್ಟಿಕ್ ಗೆ ಬರ್ತೀರಾ" ಅಂತ. ಅವ್ನು ಹೇಳಿದ್ನಂತೆ ನಾನು ಬ್ಯುಸಿ ಇದೀನಿ ನೀವು ಹೋಗಿ ಬನ್ನಿ ಅಂತ 🤣🤣**ಶ್ರೀ**

Thursday, April 2, 2026

ಯೋಗ ಪ್ಯಾಂಟ್

 #ತರಲೆ##ಕಾಲೇ ಹೊರಗೆ ಬರುತ್ತೇನೋ ಅನ್ನೋವಷ್ಟು ಟೈಟ್ ಆಗಿರೋ ಯೋಗ ಪ್ಯಾಂಟ್ ಹಾಕಿರೋರನ್ನು ನೋಡಿದಾಗ ಅನ್ನಿಸೋದು... ಇವರು ಪ್ಯಾಂಟ್ stitch ಮಾಡಿ ಹಾಕ್ಕೋತಾರ ಅಥವಾ ಹಾಕಿಕೊಂಡು stitch ಮಾಡ್ತಾರಾ ಅಂತ. 🤣🤣**ಶ್ರೀ *

Wednesday, April 1, 2026

ಟ್ಯಾಕ್ಸ್

 #ತರಲೆ##ನಾವು ಮಾಡೋ ಕೆಲಸದ ಸಂಬಳದಿಂದ, ಸಂಬಂದವೇ ಇರದ ಜನ ಇಂತಿಷ್ಟು ಅಂತ ನಿಗದಿ ಮಾಡಿ, ನಮ್ಮ ಅಭಿಪ್ರಾಯ ಕೇಳದೆ ಕಿತ್ತುಕೊಂಡು, ಅಭಿವೃದ್ಧಿ ಅನ್ನೋ ತ್ರಿಶಂಕು ಸ್ವರ್ಗದ ಹೆಸರಲ್ಲಿ ಮಾಡೋ ವ್ಯವಸ್ಥಿತ ಲೂಟಿಗೆ ಟ್ಯಾಕ್ಸ್ ಅನ್ನಬಹುದೇ?🤣🤣**ಶ್ರೀ **