Thursday, July 23, 2026

Stove....

 ##ತರಲೆ##ಹೊಸತಾಗಿ ಮದ್ವೆ ಆದ ಗಂಡ ಬೆಳಬೆಳಗ್ಗೆ ಅಳ್ತಾ ಇದ್ನಂತೆ.... ಯಾಕಂದ್ರೆ ಹೆಂಡ್ತಿ ಬೆಳಗ್ಗೆ ಬೇಗ ಎದ್ದು ಟೀ ಮಾಡಕ್ಕೆ Induction stove ಅನ್ನು ಲೈಟರ್ ಇಂದ ಹಚ್ಚಕ್ಕೆ ಟ್ರೈ ಮಾಡ್ತಾ ಇದ್ದಳಂತೆ 🤣🤣🤣**ಶ್ರೀ**

Monday, July 20, 2026

ಸೋಂಬೇರಿ ಮತ್ತೆ ಸೊಳ್ಳೆ

 ##ತರಲೆ##ಸೊಳ್ಳೆ ಬಂದು ಬ್ಲಡ್ ಹೀರಿ, ಆಮೇಲೂ ಹಾರದೇ ಹಾಗೇ ಕೈ ಮೇಲೆ ಕೂತಿದೆ ಅಂದ್ರೆ ಅದು ನನ್ನಂತ ಸೋಂಬೇರಿಯ ಬ್ಲಡ್ ಹೀರಿ ಹೀರಿ ಸೋಂಬೇರಿ ಆಗಿ ಬಿಟ್ಟಿದೆ ಅಂತ ಅರ್ಥ 🤣🤣**ಶ್ರೀ**

Wednesday, July 15, 2026

ಹೆಂಡ್ತಿ ಮತ್ತೆ complants

 #ತರಲೆ## ಹೆಂಡ್ತಿ ಮತ್ತು complaints.....ಕರೆಂಟ್ ಕಂಡು ಹಿಡಿದಿದ್ದು Thomas edison, ಆದ್ರೆ ಅವರ ಹೆಂಡ್ತೀನೂ ಕಂಪ್ಲೇಂಟ್ ಮಾಡ್ತಾ ಇದ್ರಂತೆ ಬಲ್ಬ್ ಹೋದ್ರೆ ಗಂಡ ಚೇಂಜ್ ಮಾಡೋದೇ ಇಲ್ಲ ಅಂತ....🤣🤣**ಶ್ರೀ**

Friday, July 10, 2026

ಬ್ಯಾಂಕ್ ಬ್ಯಾಲೆನ್ಸ್

 ##ತರಲೆ##ಬ್ಯಾಂಕ್ ಇಂದ ಮೆಸೇಜ್ ಬಂತು ATM ಪಿನ್ expiry ಆಗಿದೆ change ಮಾಡಿ ಅಂತ.... ಪಿನ್ change ಮಾಡಕ್ಕೆ ಲಾಗಿನ್ ಆದ್ರೆ pop-up ಮೆಸೇಜ್ ಬಂತು " ನಿಮ್ಮ account ಅಲ್ಲಿ ಇರೋ ಈ ಚಿಲ್ರೆ ಬ್ಯಾಲೆನ್ಸ್ ಗೆ ಪಿನ್ ಬೇಕಾ ಅಂತ "🤣🤣**ಶ್ರೀ**


Tuesday, July 7, 2026

Innovation

 ##ತರಲೆ##ಕಂಪನಿಯಲ್ಲಿ ಯಾವಾಗ್ಲೂ ಏನಾದ್ರೂ Innovation ಮಾಡಿ ಅಂತಾ ಇರ್ತಾರೆ.... ಯಾರಾದ್ರೂ ಇದನ್ನು ಸೀರಿಯಸ್ ಆಗಿ ತಗೊಂಡು AI ಅಂತದ್ದೇನಾದ್ರೂ invent ಮಾಡ್ತಾರೆ. ಆಮೇಲೆ Evacuation drive ಅಂತ ಹೇಳಿ ಕಂಪನಿಯಿಂದ ಹೊರಗೆ ಹಾಕಿ bye bye ಹೇಳ್ತಾರೆ 🤣🤣**ಶ್ರೀ**

Monday, July 6, 2026

ಸೊಳ್ಳೆ ಅನ್ನೋ ಡ್ರೋನ್

 #ತರಲೆ##ಮಳೆಗಾಲ.....ಸೊಳ್ಳೆ ಅನ್ನೋ ಡ್ರೋನ್,  ರೋಗಗಳ war head ಹೊತ್ಕೊಂಡು ನಮ್ಮ ಮನೆಗಳ ಮೇಲೆ attack ಶುರು. ಡ್ರೋನ್ attack ಆದ್ರೆ ಡೆಂಗ್ಯೂ ಮಲೇರಿಯ ಗ್ಯಾರಂಟಿ. ಇನ್ನು counter attack ಗೆ ಸೊಳ್ಳೆ ಬ್ಯಾಟ್ ಅನ್ನೋ brahmos ತಗೊಳ್ಳೋದೋ, goodnight ಅನ್ನೋ missile ತಗೊಳ್ಳೋದೋ ಅಥವಾ ಬರೀ ಕೈಲಿ ಮಷೀನ್ ಗನ್ ತರ ಹೊಸಕಿ ಹಾಕೋದೋ ಅಂತ ಮನೇಲಿರೋ ಸೈನಿಕರು ನಿರ್ಧಾರ ಮಾಡಬೇಕು ಅಷ್ಟೇ🤣🤣**ಶ್ರೀ**

Thursday, July 2, 2026

Surge pricing

 #ತರಲೆ## ಈ ಓಲಾ ಉಬರ್ Surge pricing ಹೇಗೆ ಅನ್ನಿಸುತ್ತೆ ಅಂದ್ರೆ,  ಈ ಥಿಯೇಟರ್ ನವ್ರು ಅವ್ರೇ ಹೊರಗೆ ಬಂದು ತಮ್ಮದೇ ಟಿಕೆಟ್ ಅನ್ನು ಬ್ಲಾಕ್ ಅಲ್ಲಿ ಡಬಲ್ ರೇಟ್ ಅಲ್ಲಿ ಸೇಲ್ ಮಾಡಿದ ಹಾಗೇ 🤣🤣🤣**ಶ್ರೀ **

Wednesday, July 1, 2026

Passion ಫಾಲೋ ಮಾಡೋದು

 **ತರಲೆ**ಫ್ರೆಂಡ್ ಒಬ್ಬ ಟ್ರಾವೆಲ್ಲಿಂಗ್ ನನ್ನ passion ಅದನ್ನು follow ಮಾಡ್ತೀನಿ ಅಂತಿದ್ದ...... ಈಗ ola ಕ್ಯಾಬ್ ಓಡಿಸ್ತಾ ಇದಾನೆ🤣🤣🤣**ಶ್ರೀ **

Monday, June 29, 2026

ಹೊಟ್ಟೆ ಮತ್ತು ಮೆಟ್ರೋ

 ##ತರಲೆ##gym membership ಕಾರ್ಡ್ ತೋರಿಸಿದ್ರೆ ಮೆಟ್ರೋ ಟಿಕೆಟ್ ದರದಲ್ಲಿ 5% ಡಿಸ್ಕೌಂಟ್ ಇದೆಯಂತೆ, ಯಾಕಂದ್ರೆ ಪೀಕ್ hours ಅಲ್ಲಿ ಮೆಟ್ರೋ ಡೋರ್ ಕ್ಲೋಸ್ ಅಗ್ತಾ ಇಲ್ವಂತೆ, ಜನರ ಹೊಟ್ಟೆ ಅಡ್ಡ ಬರ್ತಾ ಇದ್ಯಂತೆ 🤣🤣**ಶ್ರೀ **

Tuesday, June 16, 2026

ಟ್ರಂಪೇಶ್ವರ

 ##ತರಲೆ##ಮೊದ್ಲು ಇದು ಕಸ, ಸುಟ್ಟು ತೆಗೀಬೇಕು ಅಂತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದು, ಆಮೇಲೆ ಈ ಕಸ ತುಂಬಾ ಡೇಂಜರ್ ಅಂತಾ ಬೇರೆಯವರ ಕೈಲೂ ಪೆಟ್ರೋಲ್ ಹಾಕಿಸೋದು. ಬೆಂಕಿ ಜೋರಾದಾಗ ಕಂಟ್ರೋಲ್ ಮಾಡಿಲ್ಲ ಅಂದ್ರೆ ಎಲ್ರಿಗೂ ದೊಡ್ಡ ಪ್ರಾಬ್ಲಮ್ ಆಗತ್ತೆ ಅಂತಾ ಆರಿಸೋಕೆ ಇನ್ನಷ್ಟು ಜನರನ್ನು ಸೇರಿಸಿಕೊಳ್ಳೋದು. ಕಡೆಗೊಂದು ದಿನ ಪೆಟ್ರೋಲ್ ಸುರಿಯೋದನ್ನು ನಿಲ್ಲಿಸಿ ಬೆಂಕಿ ಆರಿಸಿ ನಿಮ್ಮೆಲ್ಲರ ಪರವಾಗಿ ನಾನು ಬೆಂಕಿ ಆರಿಸಿದ್ದೇನೆ ಅನ್ನೋದು... ಟ್ರಂಪೇಶ್ವರ 🤣🤣**ಶ್ರೀ **


ಹೊಟ್ಟೆ ಮತ್ತು ಫೋಟೋ....

##ತರಲೆ##ಫೋನ್ ಕ್ಯಾಮರದಲ್ಲಿ ಅದೆಷ್ಟೇ AI ಇದ್ರೂ, ಫೋಟೋ ದಲ್ಲಿ ಮುಖ ಚೆನ್ನಾಗಿ ಬಂದಿಲ್ಲ ಅಂದ್ರೂ ಹೊಟ್ಟೆ ಮಾತ್ರ ಗುಂಡು ಗುಂಡಾಗಿ ಚೆನ್ನಾಗಿ ಬರುತ್ತೆ....ಅವಸ್ಥೆ ಮಾರ್ರೆ 🤣🤣🤣**ಶ್ರೀ**

Thursday, June 11, 2026

ಜಲ್ಲಿಕಟ್ಟು ಮತ್ತು ತಾಳಿ ಕಟ್ಟು

 ##ತರಲೆ## ಯಾರೋ ಅಂತಿದ್ರು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಅಂತಾ ಒಂದು ಕ್ರೀಡೆ ಇದೆ, ಅದು ಸಿಕ್ಕಾಪಟ್ಟೆ ಡೇಂಜರಸ್ ಅಂತ... ನಾನಂದೆ ನಮ್ಮ ದೇಶವಿಡೀ ಇದಕ್ಕಿಂತ ಡೇಂಜರ್ ಆಗಿರೋ ಕ್ರೀಡೆ ಇದೆ... ಅದರ ಹೆಸರು "ತಾಳಿಕಟ್ಟು "" ಅಂತಾ 🤣🤣**ಶ್ರೀ**

Wednesday, June 10, 2026

ಬೆಂಗಳೂರು ಮತ್ತು ಟ್ರಾಫಿಕ್

 ##ತರಲೆ##ಬೆಂಗಳೂರಿಗೆ ಬಂದು 20 ವರ್ಷಗಳು ತುಂಬಿದೆ.... ವಿಪರ್ಯಾಸ ಅಂದ್ರೆ ಅದರಲ್ಲಿ 10 ವರ್ಷ ಟ್ರಾಫಿಕ್ ಅಲ್ಲಿ ಕಳೆದಿದೆ 🤣🤣**ಶ್ರೀ**

Friday, June 5, 2026

ಡಿವೋರ್ಸ್

 ##ತರಲೆ##ಡೈವೋರ್ಸ್ ಗಳನ್ನು ಕಡಿಮೆ ಮಾಡಬೇಕು ಅಂದ್ರೆ ಏನು ಮಾಡಬೇಕು? ಮದ್ವೆ ಆದ ಕೂಡ್ಲೇ ಇಬ್ರು ಸೇರಿ joint ಹೋಂ ಲೋನ್ ಮಾಡಬೇಕು... ಅಕಸ್ಮಾತ್ ಗಂಡ ಹೆಂಡಿರ ಜಗಳ ವಿಕೋಪಕ್ಕೆ ಹೋದ್ರೆ ಬ್ಯಾಂಕಿಂದ relationship ಮ್ಯಾನೇಜರ್ ಓಡೋಡಿ ಬಂದು ಜಗಳ ಬಿಡಿಸ್ತಾನೆ... ಲೋನ್ ಮುಗಿಯೋವಷ್ಟರಲ್ಲಿ ವೃದ್ದಾಶ್ರಮ ಸೇರೋ ಟೈಮ್ ಆಗಿರತ್ತೆ, ಡಿವೋರ್ಸ್ ಯೋಚ್ನೆ ನೇ ಬರಲ್ಲ 🤣🤣**ಶ್ರೀ **


Thursday, June 4, 2026

Cibil ಸ್ಕೋರು

 ##ತರಲೆ##ಸ್ಕೂಲ್, ಕಾಲೇಜುಗಳಲ್ಲಿ ಅದೆಷ್ಟು score ಮಾಡಿದ್ರೂ ಕಡೆಗೆ ಲೈಫು ನಡೆಯೋದು CIBIL Score ಇಂದ ಮಾತ್ರ🤣🤣🤣 **ಶ್ರೀ**

Monday, June 1, 2026

ಕಪ್ ನಮ್ದೇ

 ##ತರಲೆ##ಯಾರೋ ಹೋಟೆಲ್ ಅಲ್ಲಿ ಟೀ ಕುಡೀತಾ ಇದ್ದಾಗ ಜೋರಾಗಿ ಹೇಳ್ತಾ ಇದ್ರಂತೆ, ಅಂತೂ ಈ ಸಲ "ಕಪ್ ನಮ್ದೇ" ಅಂತಾ.... ವೇಟರ್ ಓಡೋಡಿ ಬಂದು ಹೇಳಿದ್ನಂತೆ ನೀವು ಟೀ ಗೆ ಮಾತ್ರ ಕಾಸು ಕೊಟ್ಟಿದ್ದು "ಕಪ್ ನಮ್ದು" ಅಂತಾ 🤣🤣**ಶ್ರೀ **


Friday, May 29, 2026

ಕಂಪನಿ ಮತ್ತು expectation

 ##ತರಲೆ##ಕಂಪನಿಯವರು employee ಗಳಿಗೆ ಸಂಬಳ ಕೊಡೋದು chinese ಬ್ಯಾಟರಿಗೆ ಆಗೋವಷ್ಟು ಕಾಸು... Performance Expectation ಮಾತ್ರ Duracell ದು 🤣🤣**ಶ್ರೀ **


Wednesday, May 27, 2026

ಪರಂಪರಾಗತ ಆಸ್ತಿ

 ##ತರಲೆ## Middle class ಅನ್ನೋದು.....ಯಾವುದೇ ವಿಲ್ ಅಥವಾ ಅಗ್ರಿಮೆಂಟ್ ಇಲ್ದೇ ಅಪ್ಪ ಅಮ್ಮನಿಂದ ಮಕ್ಕಳಿಗೆ ಬರೋ ಪರಂಪರಾಗತ ಆಸ್ತಿ🤣🤣**ಶ್ರೀ**

Tuesday, May 26, 2026

ನಾಳೆ ಮತ್ತು ಗಣೇಶ

 ತರಲೆ ##ನನಗೆ ಗಣೇಶ ಅಂದ್ರೆ ಅಚ್ಚು ಮೆಚ್ಚು... ಅದ್ಕೇ ಎಲ್ಲಾ ಕೆಲಸಗಳನ್ನು ನಾಳೆಗೆ postpone ಮಾಡ್ತಾ ಇರ್ತೀನಿ.....ಅವನೂ ತುಂಬಾ ಹುಷಾರೂ, ಮಗನೇ ಒಳ್ಳೇ ದಿನಗಳು ಕೂಡ ನಾಳೆಯಿಂದಲೇ ಆರಂಭ ಅಂತಾ ದಿನಾ ಹೇಳ್ತಾ ಇರ್ತಾನೆ 🤣🤣**ಶ್ರೀ**

Monday, May 25, 2026

ಹೊಸ ಸಂಧಿ

 ##ತರಲೆ##ಕನ್ನಡ ವ್ಯಾಕರಣದಲ್ಲಿ ಹೊಸ  ಸಂದಿಯ ಸೇರ್ಪಡೆ....... ಇರಾನ್ X ಅಮೇರಿಕಾ =ಹೊರ್ಮುಜ್ ಸಂದಿ 🤣🤣**ಶ್ರೀ **