#ತರಲೆ##ಕೆಲವರಿಗೆ ಮೊಬೈಲ್ ಚಾರ್ಜ್ ಯಾವಾಗ್ಲೂ 100% ಹತ್ರನೇ ಇರ್ಬೇಕು ಇಲ್ಲ ಅಂದ್ರೆ ನಿದ್ರೇನೇ ಬರಲ್ಲ, ಕನಸಲ್ಲೂ ಚಾರ್ಜರ್ ಹುಡುಕ್ತಾ ಇರ್ತಾರೆ..... ಇನ್ನು ಕೆಲವರು ಲಾಸ್ಟ್ ಬೆಂಚ್ ಜಸ್ಟ್ ಪಾಸ್ ಹುಡುಗರ ತರ 10% ಚಾರ್ಜ್ ಇದ್ರೂ instagram ನೋಡ್ಕೊಂಡು ಖುಷಿ ಖುಷಿಯಾಗಿ ಇರ್ತಾರೆ, ಕನಸಲ್ಲೂ scroll ಮಾಡ್ತಾರೆ 🤣🤣**ಶ್ರೀ **
Tuesday, July 28, 2026
Friday, July 24, 2026
ಬರ್ತ್ ಮಾರ್ಕ್
#ತರಲೆ##ಈಗೆಲ್ಲ form ಫಿಲ್ ಮಾಡೋವಾಗ identification ಮಾರ್ಕ್ ಕೇಳ್ತಾರೆ..... ನಾವು ಮಕ್ಕಳಾಗಿದ್ದಾಗ ದೇವ್ರು ಕೊಟ್ಟಿದ್ದು ಸಾಲದು ಅಂತ ಅಲ್ಲಿ ಇಲ್ಲಿ ಬಿದ್ದು ಮುಖ ಮೂತಿ ಒಡೆಸಿಕೊಂಡು ಹೊಸ ಮಾರ್ಕ್ಸ್ ನಾವೇ create ಮಾಡ್ಕೋತಾ ಇದ್ವಿ 🤣🤣**ಶ್ರೀ**
Thursday, July 23, 2026
Stove....
##ತರಲೆ##ಹೊಸತಾಗಿ ಮದ್ವೆ ಆದ ಗಂಡ ಬೆಳಬೆಳಗ್ಗೆ ಅಳ್ತಾ ಇದ್ನಂತೆ.... ಯಾಕಂದ್ರೆ ಹೆಂಡ್ತಿ ಬೆಳಗ್ಗೆ ಬೇಗ ಎದ್ದು ಟೀ ಮಾಡಕ್ಕೆ Induction stove ಅನ್ನು ಲೈಟರ್ ಇಂದ ಹಚ್ಚಕ್ಕೆ ಟ್ರೈ ಮಾಡ್ತಾ ಇದ್ದಳಂತೆ 🤣🤣🤣**ಶ್ರೀ**
Monday, July 20, 2026
ಸೋಂಬೇರಿ ಮತ್ತೆ ಸೊಳ್ಳೆ
##ತರಲೆ##ಸೊಳ್ಳೆ ಬಂದು ಬ್ಲಡ್ ಹೀರಿ, ಆಮೇಲೂ ಹಾರದೇ ಹಾಗೇ ಕೈ ಮೇಲೆ ಕೂತಿದೆ ಅಂದ್ರೆ ಅದು ನನ್ನಂತ ಸೋಂಬೇರಿಯ ಬ್ಲಡ್ ಹೀರಿ ಹೀರಿ ಸೋಂಬೇರಿ ಆಗಿ ಬಿಟ್ಟಿದೆ ಅಂತ ಅರ್ಥ 🤣🤣**ಶ್ರೀ**
Wednesday, July 15, 2026
ಹೆಂಡ್ತಿ ಮತ್ತೆ complants
#ತರಲೆ## ಹೆಂಡ್ತಿ ಮತ್ತು complaints.....ಕರೆಂಟ್ ಕಂಡು ಹಿಡಿದಿದ್ದು Thomas edison, ಆದ್ರೆ ಅವರ ಹೆಂಡ್ತೀನೂ ಕಂಪ್ಲೇಂಟ್ ಮಾಡ್ತಾ ಇದ್ರಂತೆ ಬಲ್ಬ್ ಹೋದ್ರೆ ಗಂಡ ಚೇಂಜ್ ಮಾಡೋದೇ ಇಲ್ಲ ಅಂತ....🤣🤣**ಶ್ರೀ**
Friday, July 10, 2026
ಬ್ಯಾಂಕ್ ಬ್ಯಾಲೆನ್ಸ್
##ತರಲೆ##ಬ್ಯಾಂಕ್ ಇಂದ ಮೆಸೇಜ್ ಬಂತು ATM ಪಿನ್ expiry ಆಗಿದೆ change ಮಾಡಿ ಅಂತ.... ಪಿನ್ change ಮಾಡಕ್ಕೆ ಲಾಗಿನ್ ಆದ್ರೆ pop-up ಮೆಸೇಜ್ ಬಂತು " ನಿಮ್ಮ account ಅಲ್ಲಿ ಇರೋ ಈ ಚಿಲ್ರೆ ಬ್ಯಾಲೆನ್ಸ್ ಗೆ ಪಿನ್ ಬೇಕಾ ಅಂತ "🤣🤣**ಶ್ರೀ**
Tuesday, July 7, 2026
Innovation
##ತರಲೆ##ಕಂಪನಿಯಲ್ಲಿ ಯಾವಾಗ್ಲೂ ಏನಾದ್ರೂ Innovation ಮಾಡಿ ಅಂತಾ ಇರ್ತಾರೆ.... ಯಾರಾದ್ರೂ ಇದನ್ನು ಸೀರಿಯಸ್ ಆಗಿ ತಗೊಂಡು AI ಅಂತದ್ದೇನಾದ್ರೂ invent ಮಾಡ್ತಾರೆ. ಆಮೇಲೆ Evacuation drive ಅಂತ ಹೇಳಿ ಕಂಪನಿಯಿಂದ ಹೊರಗೆ ಹಾಕಿ bye bye ಹೇಳ್ತಾರೆ 🤣🤣**ಶ್ರೀ**
Monday, July 6, 2026
ಸೊಳ್ಳೆ ಅನ್ನೋ ಡ್ರೋನ್
#ತರಲೆ##ಮಳೆಗಾಲ.....ಸೊಳ್ಳೆ ಅನ್ನೋ ಡ್ರೋನ್, ರೋಗಗಳ war head ಹೊತ್ಕೊಂಡು ನಮ್ಮ ಮನೆಗಳ ಮೇಲೆ attack ಶುರು. ಡ್ರೋನ್ attack ಆದ್ರೆ ಡೆಂಗ್ಯೂ ಮಲೇರಿಯ ಗ್ಯಾರಂಟಿ. ಇನ್ನು counter attack ಗೆ ಸೊಳ್ಳೆ ಬ್ಯಾಟ್ ಅನ್ನೋ brahmos ತಗೊಳ್ಳೋದೋ, goodnight ಅನ್ನೋ missile ತಗೊಳ್ಳೋದೋ ಅಥವಾ ಬರೀ ಕೈಲಿ ಮಷೀನ್ ಗನ್ ತರ ಹೊಸಕಿ ಹಾಕೋದೋ ಅಂತ ಮನೇಲಿರೋ ಸೈನಿಕರು ನಿರ್ಧಾರ ಮಾಡಬೇಕು ಅಷ್ಟೇ🤣🤣**ಶ್ರೀ**
Thursday, July 2, 2026
Surge pricing
#ತರಲೆ## ಈ ಓಲಾ ಉಬರ್ Surge pricing ಹೇಗೆ ಅನ್ನಿಸುತ್ತೆ ಅಂದ್ರೆ, ಈ ಥಿಯೇಟರ್ ನವ್ರು ಅವ್ರೇ ಹೊರಗೆ ಬಂದು ತಮ್ಮದೇ ಟಿಕೆಟ್ ಅನ್ನು ಬ್ಲಾಕ್ ಅಲ್ಲಿ ಡಬಲ್ ರೇಟ್ ಅಲ್ಲಿ ಸೇಲ್ ಮಾಡಿದ ಹಾಗೇ 🤣🤣🤣**ಶ್ರೀ **
Wednesday, July 1, 2026
Passion ಫಾಲೋ ಮಾಡೋದು
**ತರಲೆ**ಫ್ರೆಂಡ್ ಒಬ್ಬ ಟ್ರಾವೆಲ್ಲಿಂಗ್ ನನ್ನ passion ಅದನ್ನು follow ಮಾಡ್ತೀನಿ ಅಂತಿದ್ದ...... ಈಗ ola ಕ್ಯಾಬ್ ಓಡಿಸ್ತಾ ಇದಾನೆ🤣🤣🤣**ಶ್ರೀ **