Wednesday, May 2, 2012

ಹುಡುಕಾಟ-(ಮದುವೆ ಯಾವಾಗ -೨)

ಕೆಲಸ ಸಿಕ್ತು, ಮನೆ ಕಾರು ಬೈಕು ಎಲ್ಲ ಆಯಿತು ಇನ್ನು ಮುಂದೇನು? ತಮಗೊಂದು ಬಾಳಸಂಗಾತಿ ನೋಡಕ್ಕೆ ತಯಾರಾಗಿರೋ ಹುಡುಗರ ಪಾಡನ್ನು ಇಲ್ಲಿ ಬರೆದಿದ್ದೇನೆ. ಜೊತೆಗೆ ಸ್ವಲ್ಪ ಮಸಾಲೆ ಖಾರ.......ಹುಡುಗರ ಜೀವನದ ಅತೀ ಖುಷಿಯ, ಸಕ್ರಿಯ ಹಾಗು ಅತ್ಯಂತ ಚಂಚಲ ಕಾಲ ಅಂದ್ರೆ 20 ರಿಂದ 30 ರ ಪ್ರಾಯ . ಹುಡುಗರು ಜೀವನ ಪರ್ಯಂತ ನೆನಸಿಕೊಂಡು ಖುಷಿ ಅಥವಾ ಪಶ್ಚಾತಾಪ ಪಡೋ ವಯಸ್ಸು ಕೂಡ ಇದೇನೇ. ಅದ್ಕೆ ಹುಡುಗರ ಪಾಲಿಗೆ 20 ರಿಂದ 30 ರ ಪ್ರಾಯ ಸಕತ್ danger !! ಉಪೇಂದ್ರ ಅವರು ಇದನ್ನು ಅನುಭವಿಸಿನೇ danger ಅನ್ನೋ ಹಾಡನ್ನು ರಕ್ತ ಕಣ್ಣೀರು ಚಿತ್ರಕ್ಕೆ ಬರೆದಿದ್ದು ಅನ್ನಿಸತ್ತೆ. ಈ ವಯಸ್ಸಲ್ಲಿ ಚೆನ್ನಾಗಿ ಓದಿಕೊಳ್ಬೇಕು, ಆಮೇಲೆ ಕೆಲಸ ಹುಡ್ಕೋಬೇಕು, ಬೈಕು ಕಾರು ಅಂತ ತಗೋಬೇಕು, ಸ್ವಂತ ಮನೆ ಅನ್ನೋ ಮಾಯೆ ಗೆ ಶರಣಾಗಬೇಕು ಇನ್ನೊಂದು ಮಾತಲ್ಲಿ ಹೇಳ್ಬೇಕು ಅಂದ್ರೆ settle ಆಗಬೇಕು.settle ಆಗೋದು ಅಂದ್ರೆ ಏನು...? ಕೆಲಸ, ಕಾರು, ಮನೆ ಇದ್ದ ಹುಡುಗನನ್ನು settled ಅನ್ನಬಹುದೇ..? ನಿಜ ಹೇಳ್ಬೇಕು ಅಂದ್ರೆ ಕಾರು ಮನೆ ಅಂತ ಹೋದಾಗಲೇ ನಾವು unsettle ಆಗೋದು. ಯಾಕಂದ್ರೆ ಇವನ್ನು ಕೊಳ್ಳೋವರೆಗೂ EMI ಅನ್ನೋ ಪೆಡಂಭೂತದ ಪೀಡೆ ಇರೋದಿಲ್ಲ. ಅಂದ್ರೆ ನಾವು ನಮ್ಮ ಮನಸ್ಸಿನ ಮಾಲೀಕರು. ಯಾವಾಗ ನಮ್ಮ ಸ್ವಂತ ಮನೆಯ ಮುಂದೆ ನಮ್ಮ ಸ್ವಂತ ಕಾರು ಇರ್ಬೇಕು ಅಂತ ಬಯಸ್ತೀವೋ ಅಲ್ಲಿಂದ ನಾವು ಬ್ಯಾಂಕಿನ ಗುಲಾಮರು. ಆದರೆ ಹುಡುಗರು ಅವರಿಷ್ಟದಂತೆ ನಡೆದುಕೊಳ್ಳಲು ಸಿಗೋ ಅತಿ ಅಲ್ಪ ಸಮಯ ಅಂದ್ರೆ ಇದೇನೇ. ಯಾಕೆ ಅಂದ್ರೆ ಓದು ಮುಗಿಯೊವರೆಗೆ ಪಾಕೆಟ್ ಮನಿಗೋಸ್ಕರನಾದ್ರೂ ಮನೆಯವರ ಮಾತು ಕೇಳಲೇಬೇಕು, ಮದುವೆಯ ನಂತರವಂತು ಯಾರ ಮಾತು ನಡೆಯುತ್ತೆ ಅನ್ನೋದು ಎಲ್ಲರಿಗು ಗೊತ್ತು... so ಅಪ್ಪಿ ತಪ್ಪಿ ಯಾರಾದ್ರು ಈ ವಯಸ್ಸಿನಲ್ಲಿ ಗರ್ಲ್ ಫ್ರೆಂಡು, ಪಾರ್ಟಿ ಅದು ಇದು ಅಂತ ಸ್ವಲ್ಪ overtime ಮಾಡ್ತಾರೋ ಒಂದರ್ಥದಲ್ಲಿ ಅವರೇ ನಿಜವಾಗಿ ಪುಣ್ಯವಂತರು. ಮನೆಯಲ್ಲಿ ಆಗಾಗ ಮಾಡ್ತಾ ಇದ್ದ ತರಲೆ ಕೆಲಸಗಳಿಗೆ ಅಮ್ಮನಿ೦ದ  "ಕತ್ತೆ ವಯಸ್ಸಾಯ್ತು ಇನ್ನು ಹುಡುಗಾಟ ಬಿಟ್ಟಿಲ್ಲ " ಅ೦ತ ಸಹಸ್ರನಾಮಾರ್ಚನೆ ಶುರುವಾಗೋದು ಕೂಡ ಇದೆ ವಯಸ್ಸಿಗೇನೇ !!!!

ಇಲ್ಲಿಯವರೆಗೆ ಅಡ್ರೆಸ್ ಗೆ ಇಲ್ಲದ ಸ೦ಬ೦ಧಿಗಳೆಲ್ಲ ಅಲ್ಲೊ೦ದು ಸ೦ಬ೦ಧ ಇದೆ ಇಲ್ಲೊ೦ದು ಸ೦ಬ೦ಧ ಇದೆ ಅ೦ತ ಅಪ್ಪ ಅಮ್ಮನ ತಲೆ ತಿನ್ನುತ್ತ ಇರುತ್ತಾರೆ. shaadi.com , jeevansaathi.com ಅ೦ತ ಇರೋ ವೆಬ್ ಸೈಟುಗಳೆಲ್ಲ ಹುಡುಗಿ ಹುಡುಕೋ ನಮ್ಮ ಕಾತುರವನ್ನೇ ಕ್ಯಾಶ್ ಮಾಡಿಕೊಳ್ಳೋ ಹುನ್ನಾರ ನಡೆಸಿರುತ್ತವೆ. ನಮಗೆ ತಿಳಿಯದ೦ತೆ ಕೈಗಳು ಈ ವೆಬ್ ಸೈಟುಗಳನ್ನು ಟೈಪ್ ಮಾಡಿರುತ್ತೆ. ಅಲ್ಲಿ ಕಾಣೋ ಹುಡುಗಿಯರನ್ನೆಲ್ಲ ವಯಸ್ಸು, ಅ೦ತಸ್ತು, ಲುಕ್ಸ್ ಅ೦ತ ಬೇರ್ಪಡಿಸಿ ಯಾವುದೋ ಒ೦ದು ಭಾವಚಿತ್ರಕ್ಕೆ ನಮ್ಮ ಮನಸ್ಸು ಕೊಟ್ಟು ತಾತ್ಕಾಲಿಕ ಕನಸಿನ ಮಹಲನ್ನು ಕಟ್ಟಿ ರುತ್ತೇವೆ. ಅವರ Details ತಗೊ೦ಡು ಮಾತುಕತೆ ಮು೦ದುವರಿಸೋಣ ಅ೦ದ್ರೆ ಅವರ Details ಲಾಕ್ ಆಗಿರತ್ತೆ. ಎರಡರಿಂದ ನಾಲ್ಕು ಸಾವಿರ ಕೊಟ್ಟು registration ಮಾಡಿಸಿದರೆ ಮಾತ್ರ ಅವರ ಕುಲ ಗೋತ್ರ ಎಲ್ಲ ಸಿಗೋದು. ನಮ್ಮ ಕುತೂಹಲ, ಕಾತುರವನ್ನು cash ಮಾಡಿಕೊಳ್ಳೋ ಪಕ್ಕಾ ಬಿಸಿನೆಸ್ ಜನಗಳು. ಅಪ್ಪಿ ತಪ್ಪಿ registration ಮಾಡಿಸಿದ್ರು ಒಮ್ಮೊಮ್ಮೆ ಆ ಕಡೆಯಿ೦ದ no response !!!. ( ನಿಂಗೆ ಬರೋ ಸಂಬಳದಲ್ಲಿ ನನ್ನ maintain ಮಾಡಕ್ಕೆ ಆಗಲ್ಲ ಅಂತಾನೋ ಅಥವಾ ಕನ್ನಡಿಯಲ್ಲಿ ನಿನ್ನ ಮುಖ ನೋಡ್ಕೋ ಅಂತಾನೋ ಇರಬಹುದೇನೋ!!!!!!!!)

ನಮ್ಮನ್ನು ನಾವು ಹೃತಿಕ್ ಅ೦ದುಕೊ೦ಡು ಐಶ್ವರ್ಯ ರೈ ತರ ಹುಡುಗಿ ಬೇಕು ಅ೦ತ ಟಾರ್ಗೆಟ್ ಇಟ್ಟುಕೊ೦ಡಿರ್ತೀವಿ. ಅದೇನೋ ಬಾಲ್ಯದಿ೦ದಲು ಅಪ್ಪ ಅಮ್ಮ ನನ್ನ ರಾಜ ನನ್ನ ಬ೦ಗಾರ ಅ೦ತೆಲ್ಲ ಹೇಳಿ ಬೆಳೆಸಿರೊದ್ರಿ೦ದ ಈ ಹುಡುಗರಿಗೆ ಅವರ looks ಮೇಲೆ ಒಂತರ ಹೆಮ್ಮೆ. ಆಮೇಲೇನೆ ಗೊತ್ತಾಗತ್ತೆ "ಹೆತ್ತವರಿಗೆ ಹೆಗ್ಗಣವೂ ಮುದ್ದು" ಅ೦ತ!!!!!!. SO ಬರೋ ಸ೦ಗಾತಿ ನೋಡಕ್ಕೆ ಐಶ್ವರ್ಯ ತರ ಇರಬೇಕು, ಇರೋ ಬರೋ ಡಿಗ್ರಿ ಎಲ್ಲ ಮುಗಿಸಿರಬೇಕು ಅನ್ನೋ requirement ಗಳು ಹುಡುಕಾಟದಲ್ಲಿ ಕಳೆದು ಹೋಗಿ ಕಡೆಗೊಮ್ಮೆ ಒ೦ದು ಹುಡುಗಿ ಸಿಕ್ಕಿದರೆ ಸಾಕು ಅನ್ನೋ level ಗೆ ಬ೦ದಿರುತ್ತೇವೆ. height ಕಡಿಮೆ weight ತು೦ಬಾ ಜಾಸ್ತಿ ..........ಅನ್ನೋ ಕಾರಣಗಳೆಲ್ಲ ತಿಳಿಯಾಗಿ ಯಾವುದೋ ಒ೦ದು ಹೆಣ್ಣನ್ನು ತು೦ಬಾ adjustment ಮಾಡಿಕೊ೦ಡು ಗೋತ್ರ ಗಳನ್ನು ಹೊ೦ದಿಸಲು ಶಾಸ್ತ್ರಿಗಳ ಬಳಿ ಹೋದರೆ ಅಲ್ಲಿ ಹೊ೦ದಿಕೆಯಾಗಲ್ಲ ಅನ್ನೋ ಉತ್ತರ ಕೇಳಿ ಫುಲ್ ಸುಸ್ತು. ತು೦ಡು ತು೦ಡು ಬಟ್ಟೆ ಹಾಕಿದವರ ಮೇಲೆ ಜಾಸ್ತಿ ಪ್ರೀತಿ ತೋರಿಸ್ತಾ ಇದ್ದ ಹುಡುಗರೆಲ್ಲ ತಮಗೆ ಹುಡುಗಿ ನೋಡೋವಾಗ ಮಾತ್ರ ಅಪ್ಪಟ ಭಾರತೀಯ ನಾರಿಯನ್ನು ಹುಡುಕ್ತಾರೆ. ಇದು ಒ೦ದು ರೀತಿಯ dual personality ತಾನೇ? ಅಥವಾ ಮನಸ್ಸು ಜಾಗೃತಗೊಳ್ಳುತ್ತ ಇರೋದರ ಮುನ್ಸೂಚನೆ ? ಅಥವಾ ದೊಡ್ಡೋರ ಮಾತಲ್ಲಿ ಹೇಳ್ಬೇಕು ಅಂದ್ರೆ ಜವಾಬ್ದಾರಿ ಅನ್ನೋ ಜರೂರಿ ಗುಣ ಹೆಗಲೇರಿದ್ದರ ಸೂಚನೇನಾ?

ಹುಡುಗಿ ಕೆಲಸದಲ್ಲಿರಬೇಕೆ ಅಥವಾ ಮನೆಯಾಕೆಯಾಗಿ ಮಾತ್ರ ಇರಬೇಕೆ ಅನ್ನೋದು ಒ೦ದು ದೊಡ್ಡ ಯಕ್ಷ ಪ್ರಶ್ನೆ . ಒಬ್ಬರು ಕೆಲಸದಲ್ಲಿರಬೇಕು ಅ೦ದ್ರೆ ಇನ್ನೊಬ್ಬರು ಮನೆಯಲ್ಲಿ ಗ್ರಹಿಣಿಯಾಗಿದ್ದರೆ ಸಾಕು ಅ೦ತಾರೆ. ದುಡಿಯುವವಳು ಮನೆಯಲ್ಲಿದ್ದರೆ ಬ್ಯಾಂಕ್ ಅಕೌಂಟ್ ಮೇಲೆ ಲಕ್ಷ್ಮಿಯ ಅನುಗ್ರಹ ಇರುತ್ತೆ, ಆಕೆ ಮಾಡೋ ಶಾಪಿ೦ಗ್ ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇರಲ್ಲ. ಈ ಶಾಪಿಂಗ್ ಅನ್ನೋ ಪೀಡೆಯನ್ನು ಯಾರು ಹುಟ್ಟು ಹಾಕಿದರೋ?  ನಮಗೆ ಅತಿ ಅಗತ್ಯವಾದ ವಸ್ತುಗಳನ್ನು ಬಿಟ್ಟು ಬೇರೆ ಎಲ್ಲ ವಸ್ತುಗಳು ತುಂಬಿರೋ ಜಾಗಕ್ಕೆ ಶಾಪಿಂಗ್ ಮಾಲ್ ಅನ್ನಬಹುದೋ ಏನೋ. ಆದರು window ಶಾಪಿಂಗ್ ಮಾಡಿ ಅಲ್ಲಿ ಇಲ್ಲಿ ಕಾಣಿಸುವ ಚೆಲುವೆಯರನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಕ್ಕೆ ಸರಿಯಾದ ಜಾಗ ಅಂದ್ರು ತಪ್ಪಿಲ್ಲ ಅನ್ನಿಸತ್ತೆ. ಅಪರೂಪಕ್ಕೆ ಈ ಶಾಪಿಂಗ್ ಮಾಲ್ ಅನ್ನೋ ಮಾಯಾನಗರಿಗೆ ಬೇಟಿ ಕೊಟ್ಟಾಗ ಅಲ್ಲಿ ಹತ್ತಾರು ಕವರ್ ಹಿಡಿದುಕೊಂಡು ಹೆಂಡತಿಯ ಹಿಂದೆ ಕಷ್ಟಪಟ್ಟು ಹೆಜ್ಜೆ ಹಾಕೋ ಗಂಡಸರನ್ನು ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಅದಕ್ಕೆ ಇರಬೇಕು ಕೆ. ಎಸ್.ನರಸಿಂಹ ಸ್ವಾಮಿಯವರು ಹೇಳಿದ್ದು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ ಅ೦ತ. ಹೊರಗೆ ಹೋದ್ರೆ ಏನು ಅನ್ನೋದನ್ನು ಮಾತ್ರ " fill in the blanks" ಆಗಿ ಇಟ್ಟಿದ್ದಾರೆ. ಮನೆಯೊಳಗಿದ್ದರೆ ನೋ ಶಾಪಿಂಗ್ ಅದ್ಕೆ ಸಿಪಾಯಿ. ಹೊರಗಡೆ ಕಾಲಿಟ್ಲು ಅಂದ್ರೆ ಪರ್ಸು ಖಾಲಿ ಮಾಡ್ಕೊಳ್ಳೋ ಬಡಪಾಯಿ ಆಗೋಗ್ತಾನೆ ಅಲ್ವಾ ಗಂಡ. ಆದರೆ ಮನೆಯಾಕೆಯ ಕೈಯಲ್ಲಿ ಕೆಲಸ ಮಾಡಿಸಬಾರದು ಅನ್ನೋ ಒ೦ದು ಮೊ೦ಡು ಛಲ ನ೦ಗೆ. ಆದರೂ ಮನೆಯಾಕೆ ಮನೆಯಲ್ಲೇ ಇದ್ದರೆ ಲೇಟಾಗಿ ಮನಗೆ ಹೋದರೆ ನಿಮಗೆ "ಮನೆ ಯಾಕೆ ..?" ಅ೦ತ ಕೇಳ್ತಾಳೋ ಅ೦ತ ಭಯ.

ವರದಕ್ಷಿಣೆ ತಗೊಬೇಕೆ? ತಗೊ೦ಡು ಮನೆಯಾಕೆಯ ಕಣ್ಣಿನಲ್ಲಿ ಮಾರಾಟವಾಗಿರೋ ವಸ್ತುವಾಗಿರೋದು ಇಷ್ಟವಿಲ್ಲದ್ದಕ್ಕೆ ವರದಕ್ಷಿಣೆಯ ವಿಷಯವನ್ನು ಗೋಣಿಯೊಳಗೆ ತುರುಕಿ  ಬದಿಗಿರಿಸೋದೇ ಉತ್ತಮ ಆಯ್ಕೆ. ಈ ಅಖಿಲ ಬ್ರಹ್ಮಾ೦ಡದಲ್ಲಿ ಅದೆಲ್ಲೋ ತಮ್ಮ ಮಗಳ ಜೊತೆ ಅಡಗಿರೋ Virtual ಮಾವನವರಲ್ಲಿ ಮು೦ದೆ ಹುಟ್ಟೋ ಮಗುವಿನ donation ಖರ್ಚು ನೋಡ್ಕೊಳ್ಳಿ ಅ೦ತ ಹೇಳೋದೇ ವಾಸಿ ಅ೦ತ ನನ್ನ ಅನಿಸಿಕೆ...

ಸ್ನೇಹಿತರನ್ನು ಆರಿಸುವಾಗಲೇ ಒಮ್ಮೊಮ್ಮೆ ವರುಷಗಳು ಕಳೆದಿರುತ್ತವೆ. ಇನ್ನು ಹುಡುಗರ ಮನಸ್ಸು ಒಂದು ತೆರೆದಿಟ್ಟ ಪುಸ್ತಕದಂತೆ, ಓದಿ ಅರ್ಥ ಮಾಡಿಕೊಳ್ಳೋದು ತು೦ಬ ಸುಲಭ. ನೀರೊಳಗೆ ಮೀನಿನ ಹೆಜ್ಜೆಯನ್ನಾದರೂ ಗ್ರಹಿಸಬಹುದು ಆದರೆ ಈ ಹುಡುಗಿಯರ ಮನಸ್ಸಿನೊಳಗೆ ಅದೇನಿದೆ ಅ೦ತ ಗ್ರಹಿಸೋದು ಅಸಾದ್ಯದ ಮಾತೇ ಸರಿ. ಹೀಗಿರೋವಾಗ ಒಂದೇ ಒಂದು ಸಲ ನೋಡಿ ಹುಡುಗಿಯನ್ನು ಜೀವನ ಸಂಗಾತಿಯನ್ನಾಗಿ ಆರಿಸೋದು ಹೇಗೆ? ಸ್ನೇಹಿತನನ್ನು ಆರಿಸಿದ ಮೇಲೆ ಆತನ ಗುಣ ಹಿಡಿಸದಿದ್ದಲ್ಲಿ ಬಿಟ್ಟು ಬಿಡಬಹುದು. ಆದ್ರೆ ಹೆಂಡತಿ.......? ಬಿಡೋ ಮಾತು ಹಾಗಿರಲಿ ಅವಳನ್ನು ಜೋರಾಗಿ ಬೈದರೂ ಕೂಡ ಮಹಿಳ ಸಂಘದವರು ಮನೆ ಮುಂದೆ ಮಾನ ಹರಾಜು ಹಾಕಕ್ಕೆ ರೆಡಿ ಆಗಿರ್ತಾರೆ.

ಇಷ್ಟೆಲ್ಲಾ ಪ್ರಶ್ನೆಗಳಿಗೆ ಇದುವೇ 100 % ಸರಿ ಅಂತ ನಿರ್ದಾರ ತಗೋಳೋದು ಸದ್ಯಾನೆ ಇಲ್ಲ. ಬೇರೆಯವರ ಅನಿಸಿಕೆ ಕೇಳೋಣ ಅಂದ್ರೆ ಅವರು ದಾರಿ ತೋರಿಸೋದಕ್ಕಿಂತ ಹೆದರಿಸೋದೆ ಜಾಸ್ತಿ. ಎಷ್ಟೋ ಬಾರಿ ನಮಗೆ ಏನು ಬೇಕು ಅನ್ನೋದೇ ನಮಗೆ ಸರಿಯಾಗಿ ತಿಳಿದಿರೋದಿಲ್ಲ. ಸುಮ್ನೆ ಹೋಗೋದು ಕಾಫಿ ಉಪ್ಪಿಟ್ಟು ತಿನ್ನೋದು ತಲೆ ತಗ್ಗಿಸಿ ಬರೋದು ಅಷ್ಟೇ !!!!!!!ಇನ್ನು ಕೆಲವು ಸುಖ ಜೀವಿಗಳಿರುತ್ತಾರೆ. ಇವರಿಗೆ ಹಣೆಯ ಗೆರೆಗಳನ್ನು ಸರಿಯಾಗಿ ಬರಿ ಅ೦ತ ಚಿತ್ರಗುಪ್ತರಿಗೆ ಬ್ರಹ್ಮ ಶಿಫಾರಸು ಮಾಡಿರುತ್ತಾನೆ. ಇವರಿಗೆ ಅದಕ್ಕೆ ಏನೋ ಎ೦ಬ೦ತೆ ಕಣ್ಣು ಮುಚ್ಚಿ ತೆರೆಯೋದರಲ್ಲಿ ಎಲ್ಲ ಮುಗಿದು ಹೋಗಿರುತ್ತೆ. ಇನ್ನು ಕೆಲವರಿಗೆ ಕಣ್ಣು ಮುಚ್ಚೋದರೊಳಗೆ ಒ೦ದು ಮದುವೆ ಆಗಿ ಹೋದ್ರೆ ಸಾಕಪ್ಪ ಅ೦ತ ಅನ್ನಿಸಿಬಿಟ್ಟಿರತ್ತೆ. ಜೀವನದಲ್ಲಿ ಬೈಕು ಕಾರು ಯಾವಾಗ ಬೇಕಾದ್ರೂ ತಗೋಬಹುದು, ಆದ್ರೆ ಈ ಮದುವೆ ಅನ್ನೋದು ಸರಿಯಾದ ಟೈಮ್ ಗೆ ಆಗಿಲ್ಲ ಅ೦ದ್ರೆ ಮಾತ್ರ ಜನರ ಮಾತು ಕೇಳಿ ಕೇಳಿ ಕಿವಿ ಕಿವುಡಾಗುತ್ತೆ. ಒಂದರ್ಥದಲ್ಲಿ ನೋಡಿದ್ರೆ ಈ ಹುಡ್ಗೀರೆ ವಾಸಿ. ಮದುವೆವರೆಗೆ ಅಪ್ಪ ನೋಡ್ಕೋತಾನೆ, ಮದುವೆ ನಂತರ ಗಂಡ ನೋಡ್ಕೋತಾನೆ. ಈ ಗಂಡುಗಲಿ ಅನಿಸಿಕೊ೦ಡಿರೋ ಹುಡುಗರದ್ದೆ ತಲೆನೋವು. ಹುಡುಗ ಅನ್ನೋ ಮದವೇರಿದ ಒಂಟಿಸಲಗಕ್ಕೆ ಹುಡುಗಿ ಅನ್ನೋ ಸರಪಳಿ ಸಿಗೋವರೆಗೂ ಹುಡುಕಾಟ ತಪ್ಪಿದ್ದಲ್ಲ....ರಾತ್ರಿ ನೋಡಿದ ಭಾವಿಗೆ ಹಗಲಲ್ಲಿ ನಾವಾಗಿ ಹೋಗಿ ಬೀಳೋದು ಮಾತ್ರ ವಿಧಿ ಲಿಖಿತ......Virtual ಹೆ೦ಡತಿ ಮತ್ತು to be born kids ಗಳಿಗೋಸ್ಕರ ನಮ್ಮತನ ವನ್ನು ಬಿಟ್ಟುಕೊಡಲು ತಯಾರಗಿರೋದು ತಮಾಷೆ ಅನಿಸಿದರು ನೂರಕ್ಕೆ ನೂರರಷ್ಟು ಸತ್ಯ....


--------------------------ಶ್ರೀ :-) :-)---------

14 comments:

 1. super sri...... itthene ithu alochane matha edde... nana irna wife bannaga podigene.. ijji...
  ayinathu bega iregonji madme avad... Jai sri..

  ReplyDelete
 2. Sri????????? yedde baretha. Continue writing. Adagadaga nerpilekka malpodchi. dane?

  Prasad

  ReplyDelete
 3. Shreemathi ShettyMay 8, 2012 at 3:49 PM

  Very good Article. Madimed dumbu yeth anubhava mare ereg. Anda, Ponnulna bagge aathu podina agathya ejji, Thule, Madimed bokka barepar er onji article "Hendathiyee Jeevana" pandu athe?

  ReplyDelete
  Replies
  1. haha. enk dairya koriyar eer, aik thanks ye:-)

   Delete
 4. yen sir experience agidiya hege

  ReplyDelete
  Replies
  1. Astu exp illa, bt alli illi nodiddu keliddu ella seri ee article:-)

   Delete
 5. Wow very Neatly presented, effective article..
  Truth is always straight on face..

  i really liked it..

  Best Regards:
  Praseeda Aithal

  ReplyDelete
 6. ಶ್ರೀ ಅವರೇ ಒಂದೇ ದಿನ ನಿಮ್ಮ ಎರಡು ಬರಹಗಳನ್ನು ಸಂಪದದಲ್ಲಿ ಇವತ್ತು ಓದಿ (ಈ ಬರಹವನ್ನು ಪ್ರತಿಕ್ರಿಯೆಗಳು ನಲ್ಲಿ ನೋಡಿದೆ- ಓದಿದೆ ನಕ್ಕೆ )ಪ್ರತಿಕ್ರಿಯಿಸಿರುವೆ.


  "ಇಷ್ಟೆಲ್ಲಾ ಪ್ರಶ್ನೆಗಳಿಗೆ ಇದುವೇ 100 % ಸರಿ ಅಂತ ನಿರ್ದಾರ ತಗೋಳೋದು ಸದ್ಯಾನೆ ಇಲ್ಲ. ಬೇರೆಯವರ ಅನಿಸಿಕೆ ಕೇಳೋಣ ಅಂದ್ರೆ ಅವರು ದಾರಿ ತೋರಿಸೋದಕ್ಕಿಂತ ಹೆದರಿಸೋದೆ ಜಾಸ್ತಿ. ಎಷ್ಟೋ ಬಾರಿ ನಮಗೆ ಏನು ಬೇಕು ಅನ್ನೋದೇ ನಮಗೆ ಸರಿಯಾಗಿ ತಿಳಿದಿರೋದಿಲ್ಲ. ಸುಮ್ನೆ ಹೋಗೋದು ಕಾಫಿ ಉಪ್ಪಿಟ್ಟು ತಿನ್ನೋದು ತಲೆ ತಗ್ಗಿಸಿ ಬರೋದು ಅಷ್ಟೇ !!!!!!!ಇನ್ನು ಕೆಲವು ಸುಖ ಜೀವಿಗಳಿರುತ್ತಾರೆ. ಇವರಿಗೆ ಹಣೆಯ ಗೆರೆಗಳನ್ನು ಸರಿಯಾಗಿ ಬರಿ ಅ೦ತ ಚಿತ್ರಗುಪ್ತರಿಗೆ ಬ್ರಹ್ಮ ಶಿಫಾರಸು ಮಾಡಿರುತ್ತಾನೆ. ಇವರಿಗೆ ಅದಕ್ಕೆ ಏನೋ ಎ೦ಬ೦ತೆ ಕಣ್ಣು ಮುಚ್ಚಿ ತೆರೆಯೋದರಲ್ಲಿ ಎಲ್ಲ ಮುಗಿದು ಹೋಗಿರುತ್ತೆ. ಇನ್ನು ಕೆಲವರಿಗೆ ಕಣ್ಣು ಮುಚ್ಚೋದರೊಳಗೆ ಒ೦ದು ಮದುವೆ ಆಗಿ ಹೋದ್ರೆ ಸಾಕಪ್ಪ ಅ೦ತ ಅನ್ನಿಸಿಬಿಟ್ಟಿರತ್ತೆ. ಜೀವನದಲ್ಲಿ ಬೈಕು ಕಾರು ಯಾವಾಗ ಬೇಕಾದ್ರೂ ತಗೋಬಹುದು, ಆದ್ರೆ ಈ ಮದುವೆ ಅನ್ನೋದು ಸರಿಯಾದ ಟೈಮ್ ಗೆ ಆಗಿಲ್ಲ ಅ೦ದ್ರೆ ಮಾತ್ರ ಜನರ ಮಾತು ಕೇಳಿ ಕೇಳಿ ಕಿವಿ ಕಿವುಡಾಗುತ್ತೆ. ಒಂದರ್ಥದಲ್ಲಿ ನೋಡಿದ್ರೆ ಈ ಹುಡ್ಗೀರೆ ವಾಸಿ. "

  ಬಗ್ಗೆ ಬರೆದ ಸಾಲುಗಳನ್ನು ಓದಿ ಬಿದ್ದು ಬಿದ್ದು ನಕ್ಕೆ ..
  ಏನೆಲ್ಲಾ ಬರೆಯಬಹುದು -ಆದರೆ ಹಾಸ್ಯ ಬರೆಯೋದು ಕಷ್ಟ . ಅದು ನನಗೆ ಅನುಭವಕ್ಕೆ ಬಂದಿದೆ ..!

  ಈ ತರಹದ ಬರಹಗಳನ್ನು ಓದಿ ನಕ್ಕು ಮನ ಹಗುರಾಗುವುದು

  ಮತ್ತಸ್ತು ಬರೆಯುತ್ತಿರಿ

  ಶುಭವಾಗಲಿ
  \।/

  ReplyDelete
 7. ದನ್ಯವಾದಗಳು ವೆಂಕಟೇಶ್ ಸರ್, ಇಲ್ಲಿ ಬರೆದ ಎಲ್ಲ ಸಾಲುಗಳು ಮದುವೆ ಬಗ್ಗೆ ನನಗಿದ್ದ ಗೊಂದಲ, ಭಯ, ಕುತೂಹಲ, ಕಾತರಗಳನ್ನೂ ಹೊರಹಾಕುವ ಪ್ರಯತ್ನವಾಗಿತ್ತು. ಆದರೆ ಒಂದು ಮಾತ್ರ ನಿಜ ಹುಡುಗರಿಗೆನೇ ಟೆನ್ಷನ್ ಜಾಸ್ತಿ ಈ ವಿಷಯದಲ್ಲಿ. ಏನಂತೀರ?

  ReplyDelete
 8. good one sri bro...superb..erena blogs undu pandu gotte ittuji..

  ReplyDelete
  Replies
  1. thanks anna, pokkade time paas gu onthe baraha aathe...bokka poora niklena aashirvaada

   Delete