Monday, June 30, 2025

ಛತ್ರಿ

 ##ತರಲೆ##ಛತ್ರಿ.... ನಮ್ಮನ್ನ ಮಳೆ ಬಿಸಿಲಿಂದ ಕಾಪಾಡತ್ತೆ...ಆದರೆ ಸಮಯಕ್ಕೆ ಕೈ ಕೊಡೋ ಇಲ್ಲಾ ಬತ್ತಿ ಇಡೋ ಕೆಲಸ ಮಾಡೋ ಜನರಿಗೆ ಛತ್ರಿ ಅಂತ ಯಾಕೆ ಕರೀತಾರೆ?? 🤣🤣🤣**ಶ್ರೀ**

Friday, June 27, 2025

ಜಿಯೋ ನೆಟ್ವರ್ಕ್

 ##ತರಲೆ##ಇತ್ತೀಚಿಗೆ ಜಿಯೋ ನೆಟ್ವರ್ಕ್ ಎಷ್ಟು ಚೆನಾಗಿದೆ ಅಂದ್ರೆ OTP ಮೊಬೈಲಿಗೆ ಬರೋವಷ್ಟರಲ್ಲಿ ಅದು expire ಆಗಿರತ್ತೆ🤣🤣**ಶ್ರೀ**

Wednesday, June 25, 2025

ಟ್ರಂಪ್

 #ತರಲೆ## ಈ ಟ್ರಂಪ್ alarm ಗಡಿಯಾರ ತರ, ರಾತ್ರಿ alarm ಇಡೋದು ಬೆಳಗ್ಗೆ off ಮಾಡೋದು. .......ಮೊದ್ಲು ಯುದ್ಧ ಮಾಡಿಸೋದು ಆಮೇಲೆ ಬಿಡಿಸಿ, ನಾನೇ ಯುದ್ಧ ನಿಲ್ಲಿಸಿದ್ದು ಅನ್ನೋದು🤣🤣🤣**ಶ್ರೀ**

Monday, June 23, 2025

Intelligent mobile

 ##ತರಲೆ ## ಮುಂದಿನ intelligent ಮೊಬೈಲ್ ಗಳು ಹೇಗಿರಬಹುದು ಅಂದ್ರೆ, Flipkart/Amazon ಅಲ್ಲಿ ಸ್ಪೆಷಲ್ ಸೇಲ್ ಇದ್ದಾಗ ತನ್ನಿಂದ ತಾನೇ ಕೆಳಗೆ ಬಿದ್ದು ಆತ್ಮಹತ್ಯೆ ಮಾಡ್ಕೊಂಡು ಒಡೆದು ಹೋಗ್ತಾವೆ... ನೀವು ಹೊಸ ಮೊಬೈಲ್ ತಗೋಳಕ್ಕೆ help ಮಾಡ್ತಾವೆ 🤣🤣🤣 **ಶ್ರೀ **

Thursday, June 19, 2025

ರಿಮೋಟ್ ವರ್ಕ್

 ##ತರಲೆ##ರಿಮೋಟ್ working ಅಂದ್ರೆ ಟಿವಿ ರಿಮೋಟ್ ಅಲ್ಲಿ ಚಾನೆಲ್ change ಮಾಡ್ತಾ ಇರೋದ🤣🤣🤣**ಶ್ರೀ**

Wednesday, June 18, 2025

ಮಳೆ...

##ತರಲೆ##ಲ್ಯಾಪ್ಟಾಪ್ ನ್ನು  ಮಗು ತರ ಅಪ್ಪಿಕೊಂಡು, ನಮ್ಮನ್ನು ತೊಯ್ಯಿಸಿಬಿಡೊ ಶಪಥ  ತೊಟ್ಟಿರೋ ವರುಣ ದೇವನಿಗೆ ಛತ್ರಿ ತೋರಿಸಿ, ರಸ್ತೇಲಿರೋ ಹೊಂಡಗಳ ಮೇಲೆ ಹನುಮಂತನ ತರ ಹಾರಿ, ಕೆಲವೊಮ್ಮೆ ಉರುಳು ಸೇವೆ ಮಾಡಿ ಮನೆ ತಲುಪೋವಷ್ಟರಲ್ಲಿ ಫಾರ್ಮಲ್ ಶೂ ICU ಗೆ, ಪ್ಯಾಂಟು ಶರ್ಟು ದೋಬಿ ಅಂಗಡಿಗೆ ಹೋಗಲೇಬೇಕು ಅಂತಿರುತ್ತೆ. ಬಡಪಾಯಿ ಜೀವ ಒಂದು dolo 650 ಕೇಳಿರುತ್ತೆ. ಎಂತಾ ಮಳೆ ಮಾರ್ರೆ🤣🤣**ಶ್ರೀ**

Monday, June 16, 2025

ಡ್ರೈವಿಂಗ್

 ##ತರಲೆ##ಬೆಂಗಳೂರಿನಲ್ಲಿ ಕೆಲವರ ಡ್ರೈವಿಂಗ್ ಎಷ್ಟು ಚೆನ್ನಾಗಿರತ್ತೆ ಅಂದ್ರೆ ಹಿಂದುಗಡೆಯಿಂದ ಗಾಡಿಗೆ ಗುದ್ದಿ ಮುಂದೆ ಬಂದು ನಮ್ಮ ಹತ್ರ ಕೇಳ್ತಾರೆ, ಯಾಕೋ ಕಣ್ಣು ಕಾಣಿಸಲ್ವಾ ಅಂತ... ಕಣ್ಣು ಮುಖದ ಮೇಲೆ ಇರತ್ತೆ ಬೇರೆ ಕಡೆ ಅಲ್ಲ ಅಂತ ಮರತೇ ಬಿಟ್ಟಿರ್ತಾರೆ🤣🤣🤣**ಶ್ರೀ***

Friday, June 13, 2025

ಸೂಪರ್ ಫಾಸ್ಟು

##ತರಲೆ ## Loan 3 ನಿಮಿಷದಲ್ಲಿ, ಪಿಜ್ಜಾ 5 ನಿಮಿಷದಲ್ಲಿ, ಬಿರಿಯಾನಿ 15 ನಿಮಿಷದಲ್ಲಿ.... ನಮ್ಮ ಪುಣ್ಯ birthday ಮಾತ್ರ ಇನ್ನೂ 365 ದಿನಕ್ಕೆ ಒಮ್ಮೆ ಬರ್ತಾ ಇದೆ, ಇಲ್ಲಾ ಅಂದ್ರೆ retirement ನಲವತ್ತು ವರ್ಷಕ್ಕೇನೆ ಆಗಿರ್ತಾ ಇತ್ತು 🤣🤣**ಶ್ರೀ ##

Thursday, June 12, 2025

ನೊಂದ ಕಾಳೂರು

 ##ತರಲೆ ## ಬೆಂಗಳೂರಿನಲ್ಲಿ ಟ್ರಾಫಿಕ್, ಮೆಟ್ರೋ, ಮಳೆ, ದೂಳು ಅಂತ ಜನ ಎಷ್ಟು ನೊಂದಿದಾರೆ ಅಂದ್ರೆ ಇದು ಬೆಂದಕಾಳೂರು ಅಲ್ಲ ಇದು ನೊಂದ ಕಾಳೂರು ಆಗಿದೆ🤣🤣**ಶ್ರೀ**

Wednesday, June 11, 2025

ಸೊಳ್ಳೆ

 ತರಲೆ##ಮಳೆಗಾಲ, ಸೊಳ್ಳೆ ಗಳು ಡ್ರೋನ್ ತರ ಬಂದು ಕಾಟ ಕೊಡಕ್ಕೆ ಶುರು. ಬೇಡ ಅಂದ್ರೂ ರಕ್ತ ಹೀರಿ ರಕ್ತ ಸಂಬಂಧಿ ಆಗಕ್ಕೆ try ಮಾಡ್ತಾವೆ. ಸಂಬಂಧ ಹಳಸಿದರೆ ಡೆಂಗ್ಯೂ, ಮಲೇರಿಯ ಕೊಟ್ಟು ಹೋಗ್ತಾವೆ🤣🤣🤣**ಶ್ರೀ**

Tuesday, June 10, 2025

ಲಾಕ್ಡೌ ನ್

 ##ತರಲೆ ##ಯಾವಾಗ್ಲೂ ಗಾಡೀಲಿ ಜೂಮ್ ಅಂತ ಬರೋ ಫ್ರೆಂಡ್ ನಡೆದುಕೊಂಡು ಬರ್ತಾ ಇದ್ದ, ಯಾಕಪ್ಪಾ ಅಂದ್ರೆ ನಮ್ದು ಒಂತರಾ ಲಾಕ್ ಡೌನ್ ಆಗಿದೆ ಅಂದ. ಒಹ್ ಕೊರೋನ ಮತ್ತೆ ಜಾಸ್ತಿ ಆಯ್ತೆನೋ ಅನ್ನೋವಷ್ಟರಲ್ಲಿ ಹೇಳಿದ, ಚರಂಡಿ ಅಗೆದಿದ್ದಾರೆ ಗಾಡಿ ಹೊರಗೆ ತೆಗೆಯಂಗಿಲ್ಲ ಅಂತ...... ಸರಕಾರದ ಬೆಂಬಲದ ಲಾಕ್ ಡೌನ್ 🤣🤣**.ಶ್ರೀ**

Tuesday, June 3, 2025

ಕಪ್ ನಮ್ದೇ

 ##ತರಲೆ ##ಮರುಭೂಮಿಯಲ್ಲಿ ಪ್ರವಾಹದ ಮಳೆ.....ಅಂತೂ ಕಡೆಗೆ  RCB.... R-oyals ಗೆ C-up B-antu...... 🤣🤣🤣**ಶ್ರೀ **

Monday, June 2, 2025

ಹಾಲು ಮತ್ತು ಮೊಬೈಲು

 ##ತರಲೆ##ಹಾಲು ಬಿಸಿಗೆ ಇಟ್ಟಿದೀನಿ ಕುದ್ರೆ ಆಫ್ ಮಾಡಿ ಅಂದಿದ್ಳು ಹೆಂಡ್ತಿ. ಮೊಬೈಲ್ ನೋಡ್ತಾ ಮೈ ಮರೆತಿರೋವಾಗ ಹಾಲು ಕುದ್ದು ಸ್ಟೋವ್ ಮೇಲಿಂದ ಇಳಿದು ಅರ್ಧ ಅಡುಗೆ ಮನೆ ಆಗಿತ್ತು. ಏನಿದು off ಮಾಡಿಲ್ವಾ ಅಂತ ಕೇಳಿದ್ರೆ, ಹಾಲು ನಿನ್ನ ಹುಡುಕಿಕೊಂಡು ಪಾತ್ರೆಯಿಂದ ಹೊರಗೆ ಬಂದಿತ್ತು ಅಂದೆ. ಮುಂದೆ...? ಅಡುಗೆ ಮನೇಲಿ ಭೂಕಂಪ🤣🤣 **ಶ್ರೀ**