Tuesday, July 29, 2025

ಆಂಟಿ ನ್ಯೂಸ್ ಚಾನೆಲ್

##ತರಲೆ##ಎಲ್ಲಕ್ಕಿಂತ ಸ್ಟ್ರಾಂಗ್ ಮೀಡಿಯಾ network ಯಾವ್ದು... ಮನೆ ಅಕ್ಕ ಪಕ್ಕದ ಆಂಟಿಯರದ್ದು. ಬೆಳಗ್ಗಿನಿಂದ ಸಂಜೆವರೆಗೆ ಜರ್ನಲಿಸ್ಟ್ ಆಗಿ ವಿಷಯ ಒಟ್ಟು ಮಾಡ್ತಾರೆ, ಸಂಜೆಯಷ್ಟರಲ್ಲಿ ಅವರೇ anchor ಆಗಿ broadcast ಶುರು. ಮದ್ಯ ಮದ್ಯದಲ್ಲಿ ಭೀಮ, ತನಿಷ್ಕ್, ಲಲಿತಾ ಜ್ಯುವೆಲರ್ ಆಫರ್ ಬಗ್ಗೆ ಮಾತಾಡ್ತಾ advertisement ಕೂಡ ಕೊಡ್ತಾರೆ🤣🤣 **ಶ್ರೀ**

Tuesday, July 22, 2025

Zepto ಮತ್ತು Zomato

##ತರಲೆ## Zepto ಮತ್ತೆ Zomato ಗೆ ಏನು difference...? ಅಡಿಗೆ ಮಾಡಬೇಕು ಅಂತ ಮನಸ್ಸು ಇದ್ರೆ Zepto, ಇಲ್ಲಾ ಅಂದ್ರೆ Zomato. ಒಂದ್ರಲ್ಲಿ order ಮಾಡಿದ್ರೆ ಬೇಯಿಸಿ ತಿನ್ಬೇಕು, ಇನ್ನೊಂದ್ರಲ್ಲಿ order ಮಾಡಿದ್ರೆ direct ತಿನ್ನಬಹುದು. Order ಮಾಡಕ್ಕೆ ಅಕೌಂಟ್ ಅಲ್ಲಿ ಕಾಸಿರಬೇಕು ಅಷ್ಟೇ 🤣🤣**ಶ್ರೀ **

Monday, July 21, 2025

Costly ಕಾರು

 ##ತರಲೆ##ಮಾರ್ಕೆಟಿಂಗ್ ಫೀಲ್ಡ್ ಅಲ್ಲಿ ಇರೋ ಫ್ರೆಂಡ್ ಕೇಳಿದ, car ತಗೋಬೇಕು ಅಂತ ಇದೀನಿ ಯಾವ್ದು ತಗೋಬೋದು ಅಂತ. Comfortable ಇರೋ ಯಾವುದಾದ್ರೂ high end ಕಾರ್ ತಗೋ ಅಂದೆ. ಫ್ಲಾಟ್ ಬುಕ್ ಮಾಡಿದೀನಿ, ಅಷ್ಟು costly ಕಾರಿಗೆ emi ಕಟ್ಟೋದು ಕಷ್ಟ ಆಗತ್ತೆ ಅಂದ. ಮನೆಗಿಂತ ಜಾಸ್ತಿ ಟೈಮು ಟ್ರಾಫಿಕ್ ಅಲ್ಲಿನೇ ಇರ್ತೀಯ, ಫ್ಲಾಟ್ cancel ಮಾಡಿ ಕಾರ್ ತಗೋ ಅಂದೆ... ಅದೃಷ್ಟ ಚೆನಾಗಿತ್ತು, ಅವ್ನು ದುರುಗುಟ್ಟಿ ನೋಡಿದ, ಪುಣ್ಯ ಹೊಡೀಲಿಲ್ಲ 🤣🤣🤣**ಶ್ರೀ **

Tuesday, July 15, 2025

Online order

 ##ತರಲೆ##ಮೊಬೈಲ್ ಅಲ್ಲಿ ಬುಕ್ ಮಾಡಿದ್ರೆ grocery, ಫುಡ್ಡು, ಬೆಡ್ಡು, ಟಿಕೆಟ್ ಎಲ್ಲಾನೂ ಬರತ್ತೆ. ಬುಕ್ ಮಾಡಿದ್ರೆ ಮಗು ಬರೋದು ಒಂದೇ ಬಾಕಿ.... ಅದಕ್ಕೆ 9 ತಿಂಗಳು ಬೇಕಲ್ಲ... 9 ನಿಮಿಷದಲ್ಲಿ ಆಗಿದ್ರೆ ಅದೂ ಬರ್ತಾ ಇತ್ತು ಅನ್ಸತ್ತೆ 🤣🤣**ಶ್ರೀ**

Friday, July 11, 2025

ಹೆಣ್ಣು ಹೊನ್ನು ಮಣ್ಣು

 ##ತರಲೆ##ಹೆಣ್ಣು ಹೊನ್ನು ಮಣ್ಣು...... ಹೆಣ್ಣಿಗೆ ಹೊನ್ನು ಕೊಡಿಸಿ ಕೊಡಿಸಿ ಪುರುಷರ ಆಸೆಗಳೆಲ್ಲ ಮಣ್ಣು ಆದವು ಅನ್ನಬಹುದೇ🤣🤣? ಖುಷಿ ಪಟ್ಟವರು ಮಾತ್ರ ಲಲಿತಾ ಜ್ಯುವೆಲರಿಯ ಗುಂಡು ಗುಂಡು ಮಾಲೀಕರು ಮಾತ್ರ 🤣🤣**ಶ್ರೀ**

Thursday, July 10, 2025

ಗುರು ಪೂರ್ಣಿಮೆ

 ##ತರಲೆ## ಮೊದಲ ಗುರುವಾಗಿದ್ದ ಅಪ್ಪ ಅಮ್ಮಂದಿರಿಂದ ಶುರುವಾಗಿ, ಸರಿಯನ್ನು ಬೆಂಬಲಿಸಿ, ಕಿವಿ ಹಿಡಿದು ತಪ್ಪನ್ನು ಸರಿಪಡಿಸಿದ ಅಧ್ಯಾಪಕರು, ಹೊಸತಾಗಿ ಏನೇನೋ ಹೇಳಿಕೊಟ್ಟ  ಕಿಲಾಡಿ ಸ್ನೇಹಿತರುಗಳಿಗೆ, ದಿನ ಬೆಳಗಾದ್ರೆ ನಿರಂತರವಾಗಿ ಪಾಠ ಕಲಿಸ್ತಾನೇ ಇರೋ ಕೆಲವು ಮಹಾಜನರೆಲ್ಲರಿಗೂ ಗುರು  ಪೂರ್ಣಿಮೆಯ ಶುಭಾಶಯಗಳು😁😁**ಶ್ರೀ **

Wednesday, July 9, 2025

Plug N play

 ##ತರಲೆ## Plug and play best example ಹೆಣ್ಣು ಮಕ್ಳ ಹತ್ರ ಗೋಲ್ಡ್ ರೇಟ್ ಎಷ್ಟಾಯ್ತು ಗೊತ್ತಾ ಅಂತ ಕೇಳಿ (Plug)... ಆಮೇಲೆ continous ಹೇಳ್ತಾ ಇರ್ತಾರೆ (play)... 🤣🤣**ಶ್ರೀ**

Tuesday, July 1, 2025

5 ನಿಮಿಷ

 ##ತರಲೆ##ವಿಪರ್ಯಾಸ....ಈಗ Grocery 5 ನಿಮಿಷದಲ್ಲಿ ಬರತ್ತೆ, ಆದ್ರೆ ಜೀವ ಹೋಗ್ತಾ ಇದೆ ಡಾಕ್ಟರ್ ಬೇಕು, ಅಂದ್ರೆ ಮಾತ್ರ ಒಂದು ದಿನ ಮುಂಚೆನೇ appointment ತಗೊಂಡಿರಬೇಕು.🤣🤣**ಶ್ರೀ**