Tuesday, March 4, 2025

ಸೂಪರ್ ಬೈಕು

 ##ತರಲೆ ##ಜೂಮ್ ಜೂಮ್ ಅಂತ ಸೂಪರ್ ಬೈಕ್ ಓಡಿಸೋ ಹುಡುಗರನ್ನು ನೋಡಿದಾಗ ಅನ್ನಿಸೋದು... ಇನ್ನೂರರ ಸ್ಪೀಡ್ ಅಲ್ಲಿ ಇವರ ಮನಸ್ಸು ಹೋಗ್ತಾ ಇದೆ, 150 ರ ಸ್ಪೀಡಿನಲ್ಲಿ ಬೈಕು, ಇದರ ಹಿಂದೆ ಹಿಂದೆ slow motion ಅಲ್ಲಿ ಕೋಣ ... ಯಮರಾಜಂದು🤣🤣**ಶ್ರೀ **

Settle ಆಗೋದು

 ##ತರಲೆ##ಮೀಸೆ ತಿರುವೋ ಮಕ್ಕಳು, ವಯಸ್ಸಾದ ಅಪ್ಪ ಅಮ್ಮ, ಊರಲ್ಲಿ settle ಆಗೋದಾ ಅಥವಾ ಬೆಂಗಳೂರಿನಲ್ಲಾ ಅನ್ನೋ ವಿಷಯಕ್ಕೆ ಹಗ್ಗ ಜಗ್ಗಾಟ .... ವಯಸ್ಸು ಅನ್ನೋ ಮರಳಿನ ಮೈದಾನದಲ್ಲಿ, ತುಸು ಗಟ್ಟಿ ಮಣ್ಣಿನ ಮೇಲೆ ನಿಂತಿದ್ದರಿಂದ ಮಕ್ಕಳ ಕೈನೆ ಮೇಲು .... ಆದರೆ ಜಗ್ಗಾಟದ ಕೊನೆಯಲ್ಲಿ ಮನಸ್ಸುಗಳಿಗೆ ಆಗಿರೋ ಗಾಯಕ್ಕೆ ಮದ್ದೆಲ್ಲಿ ? **ಶ್ರೀ ##

Monday, March 3, 2025

ಜೀರೋ ಬ್ಯಾಲೆನ್ಸ್...

 ##ತರಲೆ ##ಸರಕಾರ ಎಲ್ಲರಿಗೂ zero balance ಅಕೌಂಟ್ open ಮಾಡಕ್ಕೆ ಅವಕಾಶ ಕೊಟ್ಟಾಗ್ಲೇ ನಮಗೆ ಗೊತ್ತಾಗ್ಬೇಕಿತ್ತು..... ಇವರು ಮುಂದೆ ಟ್ಯಾಕ್ಸ್ ಕಿತ್ತು ಕಿತ್ತು ಅಕೌಂಟ್ balance ಜೀರೋ ಮಾಡ್ತಾರೆ ಅಂತ...😭😭🤣🤣.**ಶ್ರೀ **

Sunday, March 2, 2025

ಕರಾವಳಿಯ ಬಿಸಿಲು

 ##ತರಲೆ##ಊರಿಗೆ ಬಂದಿದ್ದೆ, ಯಾರೋ ಕೇಳಿದ್ರು weather ಹೇಗಿದೆ ಅಂತ... ನಾನು ಹೇಳಿದೆ, ನಮ್ಮೂರಲ್ಲಿ ಸೂರ್ಯನಿಗೆ ನಿದ್ದೆ ಕಮ್ಮಿ ಬೆಳಗ್ಗೆ 7.30 ಗಂಟೆಗೇ ಎದ್ದು ಬೆಂಕಿ ಹಚ್ತಾನೆ, ಸಂಜೆ 5.30 ಗೆ ಬೆಂಕಿ ಆರಿದ್ರೂ ಹೊಗೆಯ ಕಾವು ಹಾಗೇ ಇರುತ್ತೆ ಜೊತೆಗೆ ಕಾದ ಭೂಮಿಯೊಳಗಿನ ಕೆಂಡ 8 ಘಂಟೆಯವರೆಗೆ ಬಿಸಿ ಕೊಡ್ತಾ ಇರತ್ತೆ... ಆಮೇಲೆ ಸ್ವಲ್ಪ ತಂಪು ಅನ್ನಿಸಿದ್ರೆ ಪುಣ್ಯ..... ಹಗಲಲ್ಲಿ ಮೀನಿಗೆ ಮಸಾಲೆ ಹಚ್ಚಿ ಹೊರಗಿಟ್ರೆ ಫ್ರೈ ರೆಡಿ🤣🤣 **ಶ್ರೀ**

Thursday, February 27, 2025

ಚಾಂಪಿಯನ್ ಟ್ರೋಫಿ

 ##ತರಲೆ ##ಚಾಂಪಿಯನ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಾಗಿದೆ, ಆದರೂ ಸರಣಿಯನ್ನು host ಮಾಡಬೇಕು. ಫೋನ್ ಕಳೆದುಕೊಂಡ ನಂತರವೂ EMI ಕಟ್ಟುಕೊಂಡು ಹೋಗೋ ತರ ಪರಿಸ್ಥಿತಿ ಆಗಿದೆ ಪಾಕಿಸ್ತಾನದ್ದು🤣🤣**ಶ್ರೀ **

ಸಿಟ್ಟು ಮತ್ತು ಪಿಜ್ಜಾ

 ##ತರಲೆ##ಯಾರ ಮೇಲಾದ್ರು ಕ್ಷಣಿಕ ಸಿಟ್ಟು ಇದ್ರೆ, ಅವ್ರ address ಗೆ 10-15 ಪಿಜ್ಜಾ ಬುಕ್ ಮಾಡಿ.............. ಆಮೇಲೆ ಪೇಮೆಂಟ್ option ಅಲ್ಲಿ cash on delivery ಅಂತ ಕೊಡಿ 🤣🤣🤣**ಶ್ರೀ **

Wednesday, February 26, 2025

ಈ ಸಲ ಕಪ್ ನಮ್ದೇ

 ##ತರಲೆ ## ಕೊಹ್ಲಿ ದುಬೈ ಅಲ್ಲಿ ಪಾಕಿಸ್ತಾನ ಟೀಮ್ ಗೆ ಏನು ಹೇಳಿರಬಹುದು....? " *ಈ ಸಲ ಕಪ್ ನಮ್ದೇ* ""🤣🤣****ಶ್ರೀ ***

Tuesday, February 25, 2025

ನಾಳೆ ನಾಳೆ

 ##ತರಲೆ##ಗಣೇಶ ಅಂದ್ರೆ ನನಗೆ ಅಚ್ಚು ಮೆಚ್ಚು... ಅದ್ಕೇ ಅವ್ನು ನಾಳೆ ಮದ್ವೆ ಅಂದ ಹಾಗೆ ನಾನೂ ಎಲ್ಲಾ ಕೆಲಸಗಳನ್ನು ನಾಳೆಗೆ postpone ಮಾಡ್ತಾ ಇರ್ತೀನಿ 🤣🤣**ಶ್ರೀ **

Monday, February 24, 2025

ಸ್ಮಾರ್ಟ್ ವಾಚು

 ##ತರಲೆ ## smartwatch ಹಾಕಿ ಉಲ್ಟಾ ನಡ್ಕೊಂಡು ಹೋದ್ರೆ stepcount ಕಡಿಮೆ ಆಗುತ್ತಾ? ಆಗಲ್ಲಾ ಅಂದ್ರೆ science/maths ಮತ್ತು logic ಎಲ್ಲಾನೂ fail ಆದಂಗೆ ಅಲ್ವಾ 🤣🤣##ಶ್ರೀ ##

Sunday, February 23, 2025

ಸೀರೆ ಸೀರೆ

 ##ತರಲೆ## ಮೈಸೂರು, ಕಂಚಿ, ಇಳಕಲ್, ಬನಾರಸ್... ಇವೆಲ್ಲ ಅಧ್ಭುತ ಜಾಗಗಳು.... ಆದರೆ ಈ ಹೆಸರುಗಳ ಜೊತೆ ಸೀರೆ ಸೇರಿದರೆ ಮಾತ್ರ ಗಂಡಸರು ಭಯ ಬೀಳುತ್ತಾರೆ (ಮೈಸೂರ್ ಸಿಲ್ಕ್, ಕಂಚಿ ಸಿಲ್ಕ್....)🤣🤣🤣***ಶ್ರೀ ***

Thursday, February 20, 2025

ದೇವ್ರು

 ##ತರಲೆ## ದೇವ್ರು ತುಂಬಾ complicated.... ತಪ್ಪು  ಮಾಡೋ ಮನಸ್ಸು ಕೋಡೊದು ಅವನೇ, ತಪ್ಪಿಗೆ  ಶಿಕ್ಷೆ ಕೊಡಿಸೋದು ಅವನೇ... ಆಡಿಸಿ, ಅಲ್ಲಾಡಿಸಿ, ಬೀಳಿಸಿ, ಬೆಚ್ಚಿ ಬೀಳಿಸಿ, ಮೇಲೇತ್ತೋ ಪರಿ ಊಹೆಗೆ ನಿಲುಕದ್ದು 🤣🤣**ಶ್ರೀ **

Wednesday, February 19, 2025

Weight loss

 ##ತರಲೆ ##ಮನೇಲೇ exercise ಮಾಡಿ ಏನಾದ್ರೂ ಸ್ವಲ್ಪ weight ಲಾಸ್ ಮಾಡೋಣ ಅಂತ dumbbells ತಂದಿಟ್ಟಿದ್ದೆ.... ಸದ್ಯದ ಪರಿಸ್ಥಿತಿ, ತುಕ್ಕು ಹಿಡಿದು ಹಿಡಿದು dumbbells ದು weight ಲಾಸ್ ಆಗಿದೆ🤣🤣🤣 **ಶ್ರೀ**

Tuesday, February 18, 2025

ತುಂಬಾ ತುಂಬಿದ ಕುಂಭ

 ##ತರಲೆ##ಕುಂಭ ಮೇಳಕ್ಕೆ ಹೋದವರ ಸಂಖ್ಯೆ 50ಕೋಟಿ ಜನ ಅಂತೆ. ಪ್ರಾಯಷಃ ಮೊದಲು ಹೋದವರು 10ಕೋಟಿ, ಇವರ ವಾಟ್ಸಪ್ಪ್ ಸ್ಟೇಟಸ್, ಫೇಸ್ಬುಕ್, insta ಸ್ಟೋರಿ ನೋಡಿ ನೋಡಿ ನಾವೂ ಹೋಗಬೇಕು ಅಂತ ಅಂದುಕೊಂಡು ಹೋದವರು ಮುಂದಿನ 40ಕೋಟಿ ಇರಬೇಕು...ಒಟ್ಟಿನಲ್ಲಿ ತುಂಬಾ ತುಂಬಿದ ಕುಂಭ 🤣🤣 **ಶ್ರೀ**

Window ಶಾಪಿಂಗ್

 ##ತರಲೆ## Window shopping ಪ್ರಾಬ್ಲಮ್...ಮಾಲ್ ಗೆ ಹೋಗಿ ಸುಮ್ನೆ ಕೆಲಸಕ್ಕೆ ಬರದಿರೋ ವಸ್ತುಗಳನ್ನು ನೋಡ್ತಾ ಅಲ್ಲೇ ರೌಂಡ್ ಹೊಡೀತಾ ಇರ್ತೀವಿ. ನಮ್ಮ ಹಿಂದೆ ಹಿಂದೆ Sales girl ಕೂಡ ಏನು ಬೇಕು ಸರ್ ಅಂತ ಬರ್ತಾ ಇರ್ತಾಳೆ..... ನಮಗೆ ಭಯ, ಏಳು ಸುತ್ತು ಏನಾದರೂ ಆಗಿ ಬಿಟ್ಟರೆ ಸಪ್ತ ಪದೀನೇ... 🤣🤣**ಶ್ರೀ **

Friday, February 14, 2025

ಪ್ರೇಮಿಗಳ ದಿನ

 ##ತರಲೆ##ಪ್ರೇಮಿಗಳ ದಿನದ ಶುಭಾಶಯಗಳು. ಒಂಟಿ ಜೀವನ ಬೇಸತ್ತಿರೋ ಜೀವಗಳಿಗೆ ಆದಷ್ಟು ಬೇಗ ಜಂಟಿ ಆಗೋ ಅವಕಾಶ ಸಿಗಲಿ. ಯುವ ಪ್ರೇಮಿಗಳಿಗೆ ಶುಭಾಶಯಗಳು, ಗೊತ್ತಿಲ್ಲದೇ Nov 14 ಕ್ಕೆ plan ಮಾಡಬೇಕಾದೀತು ಹುಷಾರು. ಮದುವೆ ಆದವರಿಗೆ... "ಚಿಂತಿಸಿ ಫಲವಿಲ್ಲ ಹೇಗೋ ಹೊಂದ್ಕೊಂಡು ಹೋಗಿ".🤣🤣🤣**ಶ್ರೀ **

Thursday, February 13, 2025

ಮ್ಯಾರೇಜ್ ಸರ್ಟಿಫಿಕೇಟ್ ಡೇಟು

 ##ತರಲೆ## Marriage ಸರ್ಟಿಫಿಕೇಟ್ ಡೇಟ್ ಮೊದ್ಲು ಇದ್ರೆ arrange ಮ್ಯಾರೇಜ್....ಮಗುವಿನ Birth certificate date ಮೊದ್ಲು ಇದ್ರೆ live in ಇರಬಹುದು🤣🤣🤣**ಶ್ರೀ **

ಟೂತ್ ಪೇಸ್ಟ್ ಅಲ್ಲಿ ಉಪ್ಪು

 ##ತರಲೆ##ನಿಮ್ toothpaste ಅಲ್ಲಿ ಉಪ್ಪು ಇದೆಯಾ , ಲಿಂಬೆ ಇದೆಯಾ , ಸಕ್ರೆ ಇದೆಯಾ ಅಂತ ಕೇಳೋದಕ್ಕಿಂತ ಮೊದ್ಲು ನಿಮ್ಮ ಬಾಯಲ್ಲಿ ಹಲ್ಲು ಇನ್ನೂ ಇದೆಯಾ ಅಂತ ಕೇಳ್ಕೊಬೇಕಲ್ವಾ ?🤣🤣**ಶ್ರೀ**

Wednesday, February 12, 2025

Pollution ಮತ್ತು ಸಿಗರೇಟ್

 ##ತರಲೆ## ತುಂಬಾ ಸಮಯದ ನಂತರ ಸಿಕ್ಕ ಗೆಳೆಯನ ಜೊತೆ pollution ಬಗ್ಗೆ ಮಾತುಕತೆ ನಡೆದಿತ್ತು. ಎಲ್ಲಿ ನೋಡಿದ್ರೂ ಹೊಗೆ, ದೂಳು ಉಸಿರಾಡೋದೇ ಕಷ್ಟ, ಈ ಬೆಂಗಳೂರೇ ಒಂತರಾ tension ಕಣೋ ಅಂತ ಸಿಗರೇಟ್ ಹಚ್ಚಿದ. Mostly ಸಿಗರೇಟ್ ಅಲ್ಲಿ ಫಿಲ್ಟರ್ ಇರೋದರಿಂದ ಅದರ ಹೊಗೆಯಿಂದ ಉಸಿರಾಟಕ್ಕೆ ಸಮಸ್ಯೆ ಇಲ್ವೇನೋ!!!!! ಹೇಳುವುದು ಒಂದು ಮಾಡುವುದು ಒಂದು ಅಂದಂಗೆ ಆಯ್ತು 🤣🤣🤣***ಶ್ರೀ **

Monday, February 10, 2025

ದೇವ್ರು ಮತ್ತು ರಿಮೋಟು

 ##ತರಲೆ## ಮೊದಲು ತಲೆಕೂದಲು ಕಪ್ಪು ಬಣ್ಣದಿಂದ ಬಿಳಿಬಣ್ಣಕ್ಕೆ, ಕಪ್ಪೋ ಬಿಳಿನೋ ಕೂದಲು ಇರಲಪ್ಪ ಅಂತ ಬೇಡ್ಕೋತಾ ಇದ್ದೆ. ಅಷ್ಟರಲ್ಲಿ ಹೇರ್ ಫಾಲ್ ಶುರು. ಬಿಳಿ ಆಗಿದ್ದು ಉದುರಿದ್ರೆ ಅಷ್ಟು  ಬೇಜಾರಾಗ್ತಾ ಇರ್ಲಿಲ್ಲ, ಅಳಿದುಳಿದ ಕಪ್ಪು ಕೂದಲೇ ಮೊದಲು ಉದುರೋದು.... ಪರಮಾತ್ಮ ಏನಪ್ಪಾ ನಿನ್ನ ಸೃಷ್ಟಿ, ಈ ಬಡ ಜೀವದಲ್ಲಿರೋ ಅಂಗಾಂಗಗಳೆಲ್ಲದರ ರಿಮೋಟು ನಿನ್ನ ಕೈಯಲ್ಲಿ🤣🤣🤣**ಶ್ರೀ **

Saturday, February 8, 2025

ಕಾರು ಮತ್ತೆ ದೇವ್ರು

 ##ತರಲೆ## ಹೊಸ ಕಾರು ತಗೋಳೋವಾಗ ಶೋ ರೂಮಿನವರು ದೇವ್ರ ಸಣ್ಣ ಮೂರ್ತಿ free ಆಗಿ ಕೊಡೋದ್ಯಾಕೆ? Emergency ಟೈಮ್ ಅಲ್ಲಿ brake ಕಾಪಾಡಿಲ್ಲ ಅಂದ್ರೂ dashboard ಅಲ್ಲಿ ಇರೋ ಆ ದೇವ್ರು ಕಾಪಾಡಲಿ ಅಂತ ಇರಬಹುದೇನೋ 🤣🤣🤣**ಶ್ರೀ **

Friday, February 7, 2025

ರಿಟರ್ನ್ ಪಾಲಿಸಿ

 ##ತರಲೆ##ಮಕ್ಳು ತರ್ಲೆ ನೋಡಿ ಹೆಂಡ್ತಿ ಯಪ್ಪಾ ದೇವ್ರೇ ಎಂತಾ ಕಿರಿಕಿರಿ ಮಕ್ಕಳನ್ನು ಕೊಟ್ಟಿಯಪ್ಪ ಅಂತಿದ್ಲು. ಮಕ್ಳ ವಿಷಯದಲ್ಲಿ Amazon ತರ return policy ಏನೂ ಇಲ್ವಾ ಅಂತ ಕೇಳೋಣ ಅನ್ನಿಸ್ತು. ಅವ್ಳು ಏನಾದ್ರೂ ಮದುವೆ ವಿಷಯದಲ್ಲೂ return policy ಇಲ್ಲ ಅಂತ reply ಮಾಡಿದ್ರೆ ಏನು ಮಾಡೋದು ಅಂತ ಸುಮ್ಮನಾದೆ🤣🤣🤣🤣 ***ಶ್ರೀ **

Thursday, February 6, 2025

Cerelac ಮತ್ತೆ Nerolac

 ##ತರಲೆ ## ಮಕ್ಕಳಿಗೆ ಅದೆಷ್ಟು ಕಷ್ಟಪಟ್ಟು Cerelac ತಿನ್ನಿಸಿದ್ರೂ, ಕಡೆಗೆ ಮಕ್ಕಳು ಇಷ್ಟಪಟ್ಟು ನಕ್ಕೋದು ಗೋಡೆಯ ಮೇಲಿನ Nerolac ಅನ್ನು ಮಾತ್ರಾನೇ 🤦🤦🤦🤦***ಶ್ರೀ***

Wednesday, February 5, 2025

ಚಿನ್ನಾ ಚಿನ್ನ

 ##ತರಲೆ##ಚಿನ್ನ ಬೇಕು ಅನ್ನೋ ಮುದ್ದಿನ ಹೆಂಡತಿಗೆ ಹೀಗೆ ಹೇಳಿ. ಚಿನ್ನಾ ನೀನು ತಗೊಂಡಿರೋ ಸೀರೆ ಬೆಲೆ minimum 1 gm gold, ಸೀರೆ ಉಡಿಸೋ ಚಾರ್ಜು minimum 0.1gm, Hair styling ಚಾರ್ಜ್ -minimum 0.1gm, ಮೇಕ್ ಅಪ್ ಚಾರ್ಜ್ -0.3 ರಿಂದ 1gm. ಚಿನ್ನದಂತೆ ನೀನೆ ಮುಂದಿರೋವಾಗ ಬೇರೆ ಚಿನ್ನವೇಕೆ ಅಂತ ಕೇಳಿ.... ಅಷ್ಟು ಹೇಳಿ ಭೂಕಂಪದ ಅನುಭವ ಆಗೋದಕ್ಕಿಂತ ಮೊದಲೇ ಹಿಂದೆ ಮುಂದೆ ನೋಡದೆ ಆಫೀಸಿಗೆ ಹೋಗಿ 🤣🤣🤣**ಶ್ರೀ **

Tuesday, February 4, 2025

Alexa... ಸಿರಿ

 ##ತರಲೆ##ಎಷ್ಟೋ ಸಲ ಈ ಮೊಬೈಲ್ ಒಳಗೆ ಇರೋ ಸಿರಿ, google ಮತ್ತೆ alexa ಗೆ ನಾವು ಹೇಳಿದ್ದು ಅರ್ಥನೇ ಆಗಲ್ಲ, ನಾವೇನೋ ಕಮಾಂಡ್ ಹೇಳಿದ್ರೆ ಅವ್ರು ಇನ್ನೇನೋ ಮಾಡ್ತಾರೆ... ಯಾಕಿರಬಹುದು ಅಂತ ಯೋಚ್ನೆ ಮಾಡ್ತಾ ಇದ್ದೆ. ಹುಡುಗೀರ ವಾಯ್ಸ್ ಇದ್ದ ಮೇಲೆ ಬುದ್ಧಿನೂ ಹುಡುಗೀರದ್ದೆ ಇರಬೇಕು ಅಲ್ವಾ. ನೀವೇನೇ ಹೇಳಿದ್ರೂ ಅವ್ರು ಅವ್ರಿಗೆ ಅನಿಸಿದ್ದೇ ಮಾಡೋದು 🤣🤣**ಶ್ರೀ **

Monday, February 3, 2025

ದೂರದಲ್ಲಿ ಸೈಟು

 ##ತರಲೆ## ಸಿಟಿಯ ಕಿರಿಕಿರಿಯಿಂದ ತುಂಬಾ ದೂರದಲ್ಲಿ ಸೈಟ್ ತೆಗೆದು ಮನೆ ಮಾಡಬೇಕು ಅಂತ ಹೇಳ್ತಾರೆ ಅಂದ್ರೆ, ಸ್ವಂತ ಅನುಭವದ ಪ್ರಕಾರ ಪ್ರಾಯಷಃ ಅದು ಅಷ್ಟು ದೂರದಲ್ಲಿ ಶಬ್ದ ಕಮ್ಮಿ ಅಂತ ಅಲ್ಲ, ನಮ್ಮ ಬಜೆಟ್ ಕಮ್ಮಿ ಇದೆ ಅಂತ🤣🤣🤣 **ಶ್ರೀ**

ಐಸ್ ಟೀ

 ##ತರಲೆ## ಹೆಂಡ್ತಿ ಆಂದ್ಲು ಇವತ್ತು ಏನಾಯ್ತು ಗೊತ್ತಾ? ತಲೆ ನೋಯ್ತಾ ಇದೆ, ಬಿಸಿ ಟೀ ಕುಡಿಯೋಣ ಅಂತ ನೋಡಿದ್ರೆ ಗ್ಯಾಸ್ ಖಾಲಿ ಆಗಿತ್ತು ಅಂತ. ನಾನಂದೆ ಐಸ್ ಟೀ ಕುಡಿಬೇಕಿತ್ತು ಅಂತ. ಅಷ್ಟು ಹೇಳಿ ಮುಗಿಸೋವಷ್ಟರಲ್ಲಿ "ಅಡಿಗೆ ಮನೇಲಿ ಭೂಕಂಪ " ಶುರು 🤣🤣🤣**ಶ್ರೀ **

Saturday, February 1, 2025

ಟ್ಯಾಕ್ಸ್

 ##ತರಲೆ## ಈ ಸಲ ಬಜೆಟ್ ಪ್ರಕಾರ ಎರಡೇ slaab.... ಸಂಬಳ 12 ಲಕ್ಷಕ್ಕಿಂತ ಕಮ್ಮಿ ಇದ್ರೂ ಟ್ಯಾಕ್ಸ್ ಕಟ್ಟಬೇಕಾಗಿಲ್ಲ ಅನ್ನೋ ಖುಷಿಯಿರೋ ಒಂದು slaab. 12ಕ್ಕಿಂತ ಜಾಸ್ತಿ ಇದ್ದು ಪ್ರತೀ ವರ್ಷ ಬಜೆಟ್ ಇಂದ ಏನೇನೋ ಆಸೆ ಇಟ್ಟುಕೊಂಡು ಪೆಟ್ಟು ತಿಂತಾ ಇರೋ ಬಡಪಾಯಿ ಶ್ರೀಮಂತರಿಗೆ (ಸರಕಾರದ ಪ್ರಕಾರ) ಮತ್ತೊಂದು ಸ್ಲಾಬು..... ಇಷ್ಟು ಸಲಕ್ಕಿಂತ ಸ್ವಲ್ಪ ವಾಸಿ ಅನ್ನೋದೇ ಖುಷಿ 🤣🤣🤣 **ಶ್ರೀ**

Friday, January 31, 2025

ಟ್ಯಾಕ್ಸ್ ಅಂದ್ರೆ

 ##ತರಲೆ##ನಾವು ಮಾಡೋ ಕೆಲಸದ ಸಂಬಳದಿಂದ, ಸಂಬಂದವೇ ಇರದ ಜನ ಇಂತಿಷ್ಟು ಅಂತ ನಿಗದಿ ಮಾಡಿ, ನಮ್ಮ ಅಭಿಪ್ರಾಯ ಕೇಳದೆ ಕಿತ್ತುಕೊಂಡು, ಅಭಿವೃದ್ಧಿ ಅನ್ನೋ ತ್ರಿಶಂಕು ಸ್ವರ್ಗದ ಹೆಸರಲ್ಲಿ ಮಾಡೋ ವ್ಯವಸ್ಥಿತ ಲೂಟಿಗೆ ಟ್ಯಾಕ್ಸ್ ಅನ್ನಬಹುದೇ?🤣🤣**ಶ್ರೀ **

ರೋಡು

 ##ತರಲೆ## Bangalore roads... Flyover ಹತ್ತಕ್ಕೆ ಭಯ ಎಲ್ಲಿ ಬೀಳತ್ತೋ ಅಂತ .... ರೋಡ್ ಅಲ್ಲಿ ಭಯ ಗುಂಡಿ  ಎಷ್ಟು ಆಳ ಇದ್ಯೋ ಅಂತ... ನಡ್ಕೊಂಡು ಹೋಗೋಣ ಅಂದ್ರೆ ಮತ್ತೆ ಭಯ ಎಲ್ಲಿ ಓಪನ್ ಇರೋ ಚರಂಡಿ ನುಂಗಿ ಬಿಡತ್ತೋ ಅಂತ. ಸದ್ಯ ಮೆಟ್ರೋ ಸೇಫ್ ಅಂದುಕೊಳ್ಳುವಷ್ಟರಲ್ಲಿ ಪವರ್ ಕಟ್ ಆದ್ರೆ ಅಂತ ಮತ್ತೆ ಭಯ....ಎಂತಾ ಕರ್ಮ ಮಾರ್ರೆ 🤣🤣**ಶ್ರೀ **

Thursday, January 30, 2025

ಡೈವೋರ್ಸ್

 ##ತರಲೆ##ಹೆಂಡ್ತಿ ಕೇಳಿದ್ಲು ಇತ್ತೀಚಿಗೆ ಎಲ್ಲಿ ನೋಡಿದ್ರೂ ಡೈವೋರ್ಸ್ ಕೇಸುಗಳು, ಏನು ಕಾರಣ ಇರಬಹುದು ಅಂತ. ನಾನಂದೆ ಮುಖ್ಯ ಕಾರಣ "ಮದುವೆ " ಅಂತ. ಮದ್ವೆ ಆದ್ರೆ ತಾನೇ ಡೈವೋರ್ಸ್. ಇಷ್ಟು ಹೇಳಿದ ಮೇಲೆ ಇನ್ನೇನು? ಅಡುಗೆ ಮನೇಲಿ ಭೂಕಂಪ🤣🤣🤣##***ಶ್ರೀ**

Wednesday, January 29, 2025

Sbi

##ತರಲೆ##SBI KYC ತರ secure ಇರ್ಬೇಕು, ನೀವು ಜೀವಂತ ಮುಂದಿದ್ರು use ಇಲ್ಲ , life certificate ಕೇಳ್ತಾರೆ. 80 kg ಜೀವಕ್ಕೆ ಮರ್ಯಾದೆ ಇಲ್ಲ , 10gm ಪೇಪರ್ ಗೆ ಇದೆ 🤣🤣🤣**ಶ್ರೀ **

ಆರ್ಗಾನಿಕ್ ವಿಷ

 ##ತರಲೆ## ಇತ್ತೀಚಿಗೆ ಜನರಿಗೆ organic ಅನ್ನೋ ಕ್ರೇಜ್ ಹುಟ್ಟಿದೆ.... ಎಲ್ಲಿಯವರೆಗೆ ಅಂದ್ರೆ ಜೀವನದ ಮೇಲೆ ಜಿಗುಪ್ಸೆ ಹುಟ್ಟಿ ವಿಷ ತಗೋಳೋ ಪರಿಸ್ಥಿತಿಯಲ್ಲೂ organic poison ಇದೆಯಾ ಅಂತ ಕೇಳುವಷ್ಟು 🤣🤣🤣**ಶ್ರೀ**

Tuesday, January 28, 2025

Never give up

 ##ತರಲೆ## ಜಿಮ್, ಫಿಟ್ನೆಸ್ ಸ್ಟುಡಿಯೋ, ಯೋಗ ಕ್ಲಾಸ್ entrance ಗಳಲ್ಲಿ "Never give up" ಅಂತ ಬೋರ್ಡ್ ನೋಡಿದಾಗಲೆಲ್ಲ ಅನ್ನಿಸೋದು ಶುರುನೇ ಮಾಡಿಲ್ಲ, ಇನ್ನು give up ಏನು ಮಾಡೋದು ಅಂತ 🤣🤣🤣**ಶ್ರೀ **

Monday, January 27, 2025

ಪಿಜ್ಜಾ ರೇಟು

 ##ತರಲೆ## ಪಿಜ್ಜಾ order ಮಾಡಿದ್ದೆ, ಅದರ ರೇಟ್ ನೋಡಿ ಅನಿಸಿದ್ದು ಈ ಹಣಕ್ಕೆ ಬೆಂಗಳೂರಿನ ಹೊರ ವಲಯದಲ್ಲಿ ಒಂದು sq ft ಜಾಗ ತೊಗೋಬೋದಾಗಿತ್ತು ಅಂತ. ಹಾಗೆ ಯೋಚ್ನೆ ಮಾಡ್ತಾ ಒಂದು ಅಂಜಲ್ ಮೀನು ತಿನ್ನೋ ಕಾಸಿಗೆ ಎರಡು, barbequenation buffet ಕಾಸಿಗೆ  3 ಅಂತ ಯೋಚ್ನೆ ಹೋಗ್ತಾನೆ ಇತ್ತು. ಎಷ್ಟು ಮಾಡಿದರೇನು ಕಡೆಗೆ ಸಿಗೋದು ಆರಡಿ ಮೂರಡಿ ಮಾತ್ರ ಅಲ್ವಾ ಅಂತ Fullstop ಹಾಕಿ ಪಿಜ್ಜಾ ಬಾಯಿಗಿಟ್ಟೆ 🤣🤣🤣**ಶ್ರೀ **

Saturday, January 25, 2025

ಮೊಬೈಲ್

 #ತರಲೆ# ಮೊಬೈಲ್ ಇಂದ ಎಲ್ಲಾ ಮಾಡಬೋದು, ಆದ್ರೆ ಪರ್ಸು, ಮನೆ ಕೀ, ಕಾರ್ ಕೀ ಗಳನ್ನು ಮಾತ್ರ ಹುಡುಕಕ್ಕೆ ಆಗಲ್ಲ.... ಇದೆಲ್ಲದಕ್ಕೂ ಒಂದು ಮಿಸ್ ಕಾಲ್ ಕೊಟ್ಟು ಹುಡುಕೋ ಹಾಗಿದ್ದರೆ..... 🤣🤣***ಶ್ರೀ **

Friday, January 24, 2025

ಸಾಫ್ಟ್ ವೆರ್ ಕಂಪನಿ

## ತರಲೆ-ಶ್ರೀ##   ಈ software ಕಂಪನಿ ಜೀವನ ಹೇಗೆ ಅಂದ್ರೆ client ಅದ್ಯಾವುದೋ ದೇಶದಲ್ಲಿರೋ ಅವರ ಮನೇಲಿ ಕೆಮ್ಮಿದರೆ ಇಲ್ಲಿರೋ ನಾವು cough ಸಿರಪ್ ಕುಡೀಬೇಕು ಅನ್ನೋ ಪರಿಸ್ಥಿತಿ**ಶ್ರೀ **

ಬರ್ನಾಲ್

 ##ತರಲೆ ##ಬೆಂಕಿ ತಾಗಿ ಉರಿ ಅಂದ್ರೆ ಬರ್ನಾಲ್ ಹಚ್ಕೋಬೋದು, ಆದ್ರೆ ಖಾರ ಬಿರಿಯಾನಿ ತಿಂದು ಉರಿ ಆಯ್ತು ಅಂದ್ರೆ ಬರ್ನಾಲ್ ಹಾಕಕ್ಕೆ ಆಗತ್ತಾ?  ಬರ್ನಾಲ್ ಹಚ್ಕೋಬೇಕು ಅಂದ್ರೂ ಎಲ್ಲಿಗೆ ಹಚ್ಕೋಳ್ಳೋದು. .....🤣🤣🤣**ಶ್ರೀ **

Wednesday, January 22, 2025

ಬುರ್ಜ್ ಖಲೀಫಾ, ಸ್ವರ್ಗ... ನರಕ

 ##ತರಲೆ##ಫ್ರೆಂಡ್ ಒಬ್ಬ ಕೇಳಿದ ಈ burj kaleefa ದಲ್ಲಿ ಯಾಕೆ ಮನೆ ತುಂಬಾ costly ಅಂತ.... ನಾನಂದೆ ಅದೆಷ್ಟು height ಇದೆ ಅಂದ್ರೆ ಅಲ್ಲಿಂದ ಸ್ವರ್ಗ ಕೈಯ್ಯಳತೆಯಷ್ಟು ಹತ್ತಿರ ಹಾಗೂ ನರಕ ಬಲು ದೂರ, ಅದ್ಕೇ costly ಇರಬಹುದು... 🤣🤣**ಶ್ರೀ **

ರಿ ಸ್ಟಾರ್ಟು

 ##ತರಲೆ##ಈ ಮೊಬೈಲ್ aeroplane mode ಗೆ ಹಾಕಿ ಮತ್ತೆ off ಮಾಡಿದ್ರೆ ನೆಟ್ವರ್ಕ್ ಬಾರೋ ಹಾಗೆ, ಈ body ಗು ಒಂದು restart ಬಟನ್ ಇದ್ದಿದ್ರೆ ಎಷ್ಟು ಚೆನ್ನಾಗಿತ್ತು, ಫುಲ್ ರಿಫ್ರೆಶ್ ಆಗಿ ಮತ್ತೆ ಶುರು ಮಾಡಬೋದಿತ್ತು... ಭಯ ಏನಪ್ಪಾ ಅಂದ್ರೇ ಮತ್ತೇ restart ಆಗಿಲ್ಲ ಅಂದ್ರೆ ಏನು ಮಾಡೋದು **ಶ್ರೀ **

Tuesday, January 21, 2025

ಡ್ರೈವಿಂಗ್

 ##ತರಲೆ## ಕಾರ್ ಅಲ್ಲಿ ಎಲ್ಲೋ ಹೋಗ್ತಾ ಇದ್ದೆ, ಸುಣ್ಣ ಬಣ್ಣ ಬಳಿದುಕೊಂಡು, ಕೂದಲು straight ಮಾಡಿಸಿಕೊಂಡ activa ಮೇಲಿನ ಸವಾರಿ ಲೆಫ್ಟ್ ಇಂದ ರೈಟ್ ಗೆ sudden ಆಗಿ ಬಂತು. ಆ ದೇವರಲ್ಲಿ ಬೇಡಿಕೊಂಡೆ ಇವ್ರ ಡ್ರೈವಿಂಗ್ ಅನ್ನು activa ಮತ್ತೆ ಕಾರಿಗೆ ಮಾತ್ರ ಸೀಮಿತಗೊಳಿಸಪ್ಪ, ಅಪ್ಪಿ ತಪ್ಪಿ ಆಂಬುಲೆನ್ಸ್ ಏನಾದ್ರೂ ಇವ್ರ ಕೈಗೆ ಸಿಕ್ಕಿದ್ರೆ ಒಳಗೆ ಇರೋ ಎಮರ್ಜೆನ್ಸಿ ಜೊತೆ ಹೊರಗೆ ರೋಡಿನಲ್ಲಿ ಮತ್ತೊಂದಷ್ಟು ಎಮರ್ಜೆನ್ಸಿ create ಆಗ್ತಾವೆ ಅಂತ **ಶ್ರೀ**

Friday, January 17, 2025

Merit ಸೀಟು

 ##ತರಲೆ ##Difference between Merit seat N management seat.... If You take loan to cover entire Education then its Merit seat and you if you are forced to take loan for admission itself then its management/payment seat ##ಶ್ರೀ ##

ಕಿರಿ ಕಿರಿ

 ##ತರಲೆ-ಶ್ರೀ##  ಯಾವಾಗ ನೋಡಿದ್ರೂ ಟಿವಿ... ಎಷ್ಟು ಹೇಳಿದ್ರು ಕೇಳಲ್ಲ ಮಕ್ಳು... ಅದೇ ಕಿತ್ತು ಹೋಗಿರೋ you tube ವಿಡಿಯೋ ನೋಡಿ ಸಿಕ್ಕಾಪಟ್ಟೆ ಕಿರಿಕಿರಿ ಆಗ್ತಾ ಇತ್ತು.... Frustration ತಡೆಯೋಕಾಗ್ದೆ Wifi ಹೆಸರನ್ನು ಅನ್ನು ಕಿರಿಕಿರಿ ಅಂತ change ಮಾಡಿದೆ **ಶ್ರೀ**

Thursday, January 16, 2025

ಕ್ಲೀನ್ ಕ್ಲೀನ್

 ##ತರಲೆ ##Cleanliness ಅನ್ನೋದನ್ನು ಹಕ್ಕಿಗಳಿಂದ ಕಲೀಬೇಕು, ಗಲೀಜ್ ಮಾಡೋಕು ಕ್ಲೀನ್ ಆಗಿರೋ ಗಾಡಿ choose ಮಾಡ್ತವೆ **ಶ್ರೀ **

Wednesday, January 15, 2025

Happy Married Life

 ##ತರಲೆ ##ಇತ್ತೀಚಿಗೆ ಕೆಲವು ಪದಗಳ ಅರ್ಥ ನೇ ತೆಗ್ದಿದಾರೆ.... ಅಪಾರ್ಟ್ಮೆಂಟ್ 1 ಕೋಟಿ ಅಂತೆ ಅಲ್ಲಿ Only ಹಾಕ್ತಾರೆ ((1Cr only). ಡಿಸ್ಕೌಂಟ್ 50-90% ಅಂತೆ ಅಲ್ಲಿ upto ಹಾಕ್ತಾರೆ (Up To 50-90% off). ಇದೆಲ್ಲ ಓಕೆ ಆದ್ರೆ ಮದ್ವೆಗೆ ವಿಶ್ ಮಾಡೋವಾಗ *HAPPY* ಅಂತ use ಮಾಡೋದು ತಪ್ಪಲ್ವಾ (Happy married life)🤣🤣🤣**ಶ್ರೀ **

Monday, January 13, 2025

ಮೈಂಡ್ ಗೇಮ್

 ##ತರಲೆ## ಸಂಸಾರದಲ್ಲಿ ಗಂಡ ಹೆಂಡ್ತಿ ಇಬ್ಬರೂ ಗೊತ್ತಿದ್ದೋ ಗೊತ್ತಿಲ್ಲದೇನೋ mind ಗೇಮ್ಸ್ ಆಡ್ತಾ ಇರ್ತೀವಿ... ಆದ್ರೆ ಗಂಡಂದಿರು Ludo ಆಟದ ತರ ಆರು ನಂಬರ್ ಬರ್ಲಿ ಅಂತ ಯೋಚ್ನೆ ಮಾಡ್ತಾ ಇದ್ರೆ, ಹೆಂಗಸರು Chess ಆಟದ ತರ ಮುಂದಿನ 10 move ರೆಡಿ ಮಾಡಿಕೊಂಡಿರ್ತಾರೆ...... ಹೆಣ್ಮಕ್ಕಳೇ ಸ್ಟ್ರಾಂಗು ಗುರು 🤣🤣**ಶ್ರೀ **

Friday, January 10, 2025

ಬಿಗ್ ಬಾಸ್

 ##ತರಲೆ## Bigboss ಮನೇಲಿ ಇಲ್ಲಿಯವರೆಗೂ ಒಮ್ಮೆನೂ ನಾಮಿನೇಟ್ ಆಗದ, ಮನೆಯ ಎಲ್ಲಾ ಸದಸ್ಯರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದ, ಒಮ್ಮೆನೂ eliminate ಆಗ್ದೇ, ಎಲ್ಲರಿಗಿಂತ ಜಾಸ್ತಿ ಹಣ ಸಂಪಾದಿಸುತ್ತಿರೋ ಸ್ಪರ್ದಿ ಯಾರು................?......ಕಿಚ್ಚ ಸುದೀಪ್ ಅಲ್ವಾ 🤣🤣🤣**ಶ್ರೀ **

Thursday, January 9, 2025

Intelligent ಮೊಬೈಲ್

 ##ತರಲೆ ## ಮುಂದಿನ intelligent ಮೊಬೈಲ್ ಗಳು ಹೇಗಿರಬಹುದು ಅಂದ್ರೆ, Flipkart/Amazon ಅಲ್ಲಿ ಸ್ಪೆಷಲ್ ಸೇಲ್ ಇದ್ದಾಗ ತನ್ನಿಂದ ತಾನೇ ಕೆಳಗೆ ಬಿದ್ದು ಆತ್ಮಹತ್ಯೆ ಮಾಡ್ಕೊಂಡು ಒಡೆದು ಹೋಗ್ತಾವೆ... ನೀವು ಹೊಸ ಮೊಬೈಲ್ ತಗೋಳಕ್ಕೆ help ಮಾಡ್ತಾವೆ 🤣🤣🤣 **ಶ್ರೀ **

ಸಿಂಗಲ್ಲು... ಫ್ಯಾಮಿಲಿ ಇತ್ಯಾದಿ

 ##ತರಲೆ##ಬರೇ ರೂಮು ಕಿಚನ್ ಅಂತ ಇದ್ದ ಸಿಂಗಲ್ ಲೈಫು ಬೆಡ್ ರೂಮು-ಹಾಲ್-ಕಿಚನ್ ಅಂತ ಬದಲಾಗೋದಕ್ಕೆ ಮದುವೆ ಅಂತಾರೆ. Single ಇದ್ದೋರು mingle ಆಗಿ ಮುಂದೆ ಮಕ್ಕಳಿಗೆ gingle ಹೇಳಿಕೊಡೋದಕ್ಕೆ ಸಂಸಾರ ಅಂತಾರೆ **ಶ್ರೀ **

Wednesday, January 8, 2025

Cash on Delivery

##ತರಲೆ## Cash on Delivery ಅನ್ನೋ concept ಎಲ್ಲಿಂದ ಬಂದಿರಬಹುದು? Mostly kidnapping ಇಂದ ಇರಬಹುದು, ಹಣ ಕೊಟ್ಟು ಕಿಡ್ನಾಪ್ ಆದವರನ್ನು ಬಿಡಿಸಿಕೊಂಡು ಹೋಗಿ ಅಂತ 🤣🤣🤣**ಶ್ರೀ**

ಆಧಾರ್ ಮತ್ತು ಫೋಟೋ...

 ##ತರಲೆ ## ನಮ್ಮ ಆಧಾರ್ ವೆಬ್ ಸೈಟ್ ಮಾತ್ರ ಸೂಪರ್ ಕಣ್ರೀ... ಸ್ವಲ್ಪನೂ ಭೇದ ಭಾವ ಮಾಡಲ್ಲ, ಯಾರ ಫೋಟೋ ತೆಗೆದ್ರೂ ಕಲರ್ ಅಲ್ಲಿ black N white ಲುಕ್. ನೋಡಿದಾಗಲೆಲ್ಲ ಇದು ನಾನೇನಾ ಅನ್ನೋ ಪ್ರಶ್ನೆ ಹುಟ್ಟಿಸುವಷ್ಟು Original🤣🤣🤣**ಶ್ರೀ **

Tuesday, January 7, 2025

ಪ್ರಾಣ ಸ್ನೇಹಿತ ಮತ್ತು ಕೋವಿಡ್

 ##ತರಲೆ## ಜೀವಕ್ಕೆ ಜೀವ ಕೊಡೋ ಸ್ನೇಹಿತ ಅಂದ್ರೆ ಯಾರು? ಕೋವಿಡ್ ಟೈಮ್ ಅಲ್ಲಿ ಮಾಸ್ಕ್ exchange ಮಾಡ್ತಾ ಇದ್ದೋರು🤣🤣 **ಶ್ರೀ **

Saturday, January 4, 2025

ವಾಕಿಂಗ್ ಲಾಜಿಕ್

 ##ತರಲೆ ##Walking logics... ಒಂಟಿತನ ಬೋರು ಯಾರಾದ್ರೂ ಸಿಗಬಹುದು ಅಂತ walk ಹೋಗೋರು Bachelor, ಗಂಡ ಹೆಂಡ್ತಿ ಜೊತೆಗೆ walk ಹೋಗೋದು ಆದರ್ಶ ದಂಪತಿ🤣, ನಾಯಿನ ಜೊತೆಗೆ walk ಕರ್ಕೊಂಡು ಹೋಗೋರು Upper middle class, ನಾಯಿನ walk ಮಾಡ್ಸೋಕೆ ಜನ ಇಡೋರು ಹಣವಂತರು, ನಾಯಿನೇ ಯಾರನ್ನಾದ್ರೂ Walk ಗೆ ಕರ್ಕೊಂಡ್ ಹೋಗತ್ತೆ ಅಂದ್ರೆ ಅದು Elon Musk ಅವ್ರ Artificial Intelligence ನಾಯಿ ##ಶ್ರೀ ##

Friday, January 3, 2025

ಚಿಕನ್ ಮತ್ತು Antibiotics

 ##ತರಲೆ ##ಚಿಕನ್ ಗೆ ಫಾರ್ಮ್ ಗಳಲ್ಲಿ ಸಿಕ್ಕಾಪಟ್ಟೆ anti biotics ಹಾಕಿ ಬೆಳೆಸ್ತಾರಂತೆ, ಹಾಗಿದ್ರೆ ಜ್ವರ ಬಂದಾಗ ಸ್ವಲ್ಪ ಜಾಸ್ತಿ ಚಿಕನ್ ತಿಂದ್ರೆ ಆಯ್ತು, ಬೇರೆ anti biotics ಬೇಕಾಗಿಲ್ಲ ಅಲ್ವಾ?? 🤣🤣🤣**ಶ್ರೀ **

ಮೇಕ್ ಅಪ್

 ##ತರಲೆ## ಯಾರದ್ದೋ ಮನೆ ಗೃಹ ಪ್ರವೇಶದ ಸಮಯದಲ್ಲಿ ಹೊಸದಾಗಿ ಪೈಂಟ್ ಆದ ಗೋಡೆ ಮೇಲೆ ಕಲೆ ಆಗಿತ್ತಂತೆ.... ಬುದ್ದಿವಂತ ಬಿಲ್ಡರ್ ಅಲ್ಲೇ ಪಕ್ಕದಲ್ಲಿ ಭರ್ಜರಿ ಮೇಕ್ ಅಪ್ ಮಾಡಿ ಕೂತಿದ್ದ ಹೆಂಡ್ತಿ ಮುಖದಿಂದ ಸ್ವಲ್ಪ ತೆಗೆದು ಗೋಡೆಗೆ ಹಚ್ಚಿ ಸರಿ ಮಾಡಿದರಂತೆ.... (ಇಲ್ಲಿ ಕಂಡು ಬಂದ ಎಲ್ಲಾ ಪಾತ್ರಗಳು ಕಾಲ್ಪನಿಕ 🤣🤣🤣) **ಶ್ರೀ **

Wednesday, January 1, 2025

ಎಣ್ಣೆ ಮತ್ತು ಹೊಸ ವರ್ಷ

 ##ತರಲೆ ##ಎಣ್ಣೆ ಹೊಟ್ಟೇಗೆ ಬಿಟ್ಟುಕೊಂಡ್ರೆ ಅದು ಕ್ಯಾಲೆಂಡರ್ New year. ಎಣ್ಣೆ ಮೈಗೆಲ್ಲ ಹಚ್ಚಿಕೊಂಡಿದ್ರೆ ಅದು ಯುಗಾದಿ ಹೊಸ ವರ್ಷ 🤣🤣**ಶ್ರೀ **

ಶುಭಾಶಯಗಳು

 ##ತರಲೆ ##ಹೊಸ ವರುಷದ ಗಣಿತದಲ್ಲಿ ಕಷ್ಟಗಳು minus ಆಗಲಿ, ಸುಖ ಶಾಂತಿ ಗಳು plus ಆಗಲಿ, ಸಂಪತ್ತು multiply ಆಗಲಿ.... ನೆಮ್ಮದಿಯ Distinction ನಿಮ್ಮ ಪಾಲಿಗಿರಲಿ. ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಮುಂದೆ ಬರೋ ಯುಗಾದಿ ಹೊಸ ವರ್ಷ ಸುಖ ಶಾಂತಿ ನೆಮ್ಮದಿ ತರಲಿ- ##ಶ್ರೀ## 

ಹೊಸ ಕ್ಯಾಲೆಂಡರ್ ವರ್ಷ

 ##ತರಲೆ## ಕಳೆದ ವರ್ಷವಿಡೀ ನನ್ನ ಒಳ್ಳೆ ಮತ್ತು ಕೆಟ್ಟ ಸಮಯದಲ್ಲಿ ಜೊತೆಗಿದ್ದು, ಆಶೀರ್ವದಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಹಾಗೇ ವರ್ಷ ಪೂರ್ತಿ ನನ್ನ ಬಗ್ಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಡಿಕೊಂಡವರಿಗೆ ಈ ವರ್ಷವೂ ದೇವರು ಆ ಅವಕಾಶವನ್ನು ಸದಾ ನೀಡುತ್ತಿರಲಿ. ಒಟ್ಟಿನಲ್ಲಿ ಎಲ್ಲರೂ ಖುಷಿ ಖುಷಿಯಾಗಿರಿ, ಸರ್ವೇ ಜನಃ ಸುಖಿನೋ ಭವಂತು. ಪ್ರೀತಿ ಹೀಗೇ ಇರಲಿ... ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು **ಶ್ರೀ **

ಸೂಪರ್ ಬೈಕು

 ##ತರಲೆ ##ಜೂಮ್ ಜೂಮ್ ಅಂತ ಸೂಪರ್ ಬೈಕ್ ಓಡಿಸೋ ಹುಡುಗರನ್ನು ನೋಡಿದಾಗ ಅನ್ನಿಸೋದು... ಇನ್ನೂರರ ಸ್ಪೀಡ್ ಅಲ್ಲಿ ಇವರ ಮನಸ್ಸು ಹೋಗ್ತಾ ಇದೆ, 150 ರ ಸ್ಪೀಡಿನಲ್ಲಿ ಬೈಕು, ಇದರ ಹಿಂದೆ ಹಿಂದೆ slow motion ಅಲ್ಲಿ ಕೋಣ ... ಯಮರಾಜಂದು🤣🤣**ಶ್ರೀ **

Saturday, December 28, 2024

ಕಷ್ಟದ ಹೆಸರು

 ##ತರಲೆ## ಇತ್ತೀಚಿಗೆ ಕೆಲವ್ರು parents ಮಕ್ಳಿಗೆ ಇಡೋ ಹೆಸರು ಎಷ್ಟು ಕಷ್ಟ ಇರತ್ತೆ ಅಂದ್ರೆ, ಮುಂದೆ exam ಅಲ್ಲಿ ಆ ಮಕ್ಕಳು ಆ ಕಷ್ಟದ ಹೆಸರು ಬರೀಬೇಕಾದ್ರೆ ತಪ್ಪು ತಪ್ಪಾಗಿ ಬರ್ದಿದ್ದಕ್ಕೆ ಟೀಚರ್ ಮಾರ್ಕ್ ಕಟ್ ಮಾಡ್ತಾರೆ🤣🤣**ಶ್ರೀ **

ಸೋಂಬೇರಿತನ

 ##ತರಲೆ## ಈ ಸೊಂಬೇರಿತನವೇ ಇಷ್ಟು ...ನಾಳೆಯಿಂದ Active ಆಗಿರಬೇಕು ಅಂತ ಯೋಚ್ನೆ ಮಾಡೋಕು ಉದಾಸೀನ ಬಿಡೋದಿಲ್ಲ.....ಈ ಋಷಿ ಮುನಿಗಳು ಅದಕ್ಕೆ ವರ್ಷಗಟ್ಟಲೆ ತಪಸ್ಸು ಮಾಡ್ತಾ ಇದ್ರು ಅನ್ಸುತ್ತೆ. ಸ್ವಲ್ಪ ದಿನ ತಪಸ್ಸಿಗೆ ಕೂತ ಮೇಲೆ ಅದೇ ರೂಡಿ ಆಗತ್ತೆ ಪ್ರಾಯಶಃ ಎಳೋಕೆ ಮನಸ್ಸೇ ಬರೋದಿಲ್ಲ🤣🤣**ಶ್ರೀ **

Thursday, December 26, 2024

Next Gen AI....

 ##ತರಲೆ##  Next Gen Artificial Intelligence ಅಂದ್ರೆ??? ನಿಮ್ಮ ಮೊಬೈಲ್ ಅಲ್ಲಿ swiggy ಮತ್ತೆ zomato app ಇರತ್ತೆ ಅಂದ್ಕೊಳ್ಳಿ. ಇವೆರಡರ ನಡುವೆ ಸಿಕ್ಕಾಪಟ್ಟೆ compitition ಇದೆ .. ನೀವು Swiggy ಅಲ್ಲಿ order ಮಾಡಿದ್ರೆ Zomato App ಅದನ್ನು cancel ಮಾಡತ್ತೆ, Zomato ದಲ್ಲಿ order ಮಾಡಿದ್ರೆ Swiggy cancel ಮಾಡುತ್ತೆ... ಒಟ್ಟಿನಲ್ಲಿ ಉಪವಾಸ ಗ್ಯಾರಂಟಿ *ಶ್ರೀ **

Tuesday, December 24, 2024

ಉಪ್ಪು, ಖಾರ...

 ##ತರಲೆ## ಸಾಂಬಾರಿನಲ್ಲಿ ಉಪ್ಪು, ಖಾರ ಮತ್ತು ಹುಳಿಯ ಮದ್ಯೆ ಒಂದು ಸಾಮರಸ್ಯ ಬೆಳೆದು ಒಂದು ರುಚಿ ಕೊಡತ್ತೆ .... ಯಾವತ್ತು ಮನೇಲಿ ಗಂಡ ಹೆಂಡ್ತಿ ಜಗಳ ಆಗುತ್ತೋ ಆವತ್ತು ಅವ್ವು ಕೂಡ ಪರಸ್ಪರ ಕಚ್ಚಾಡಿ ಒಂದೇ ಉಪ್ಪು win ಆಗಿರತ್ತೆ , ಇಲ್ಲ ಅಂದ್ರೆ ಖಾರ. ಇವೆರಡೂ ಸರಿ ಇದ್ರೂ ಯಾರಾದ್ರೂ ಬಂದು extra ಹುಳಿ ಹಿಂಡಿರ್ತಾರೆ 🤣🤣🤣**ಶ್ರೀ **

ಚಿಕನ್ ಪ್ರಿಯರು

 ##ತರಲೆ## ನಾವೆಷ್ಟು ಚಿಕನ್ ಪ್ರಿಯರು ಅಂದ್ರೆ ಹುಷಾರಿಲ್ಲ, ಸುಸ್ತು ಅಂತ ORS ಕುಡಿಬೇಕಾದ್ರೂ ಆರೆಂಜ್ ಬದ್ಲು chicken Flavor ಅಲ್ಲಿ ಸಿಕ್ಕಿದ್ರೆ ಚೆನ್ನಾಗಿರತ್ತೆ ಅಂದ್ಕೊತೀವಿ 🤣🤣😁**ಶ್ರೀ **

Monday, December 23, 2024

ಸತ್ಯ.. ಸುಳ್ಳುಗಳು

 ##ತರಲೆ ## ಜಗತ್ತಿನಲ್ಲಿ ಸತ್ಯ ಹೇಳೋ ಜಾಗಗಳು ಒಂದು ಎಣ್ಣೆ ಬಾಟ್ಲಿ ಮುಂದಿರೋ ಜನ ಇನ್ನೊಂದು ತೊದಲು ನುಡಿಯೊ ಮಕ್ಕಳು... ಇನ್ನು ಅತೀ ಹೆಚ್ಚು ಸುಳ್ಳು ಹೇಳೋ ಜಾಗಗಳು... ಒಂದು ರಾಜಕೀಯ, ಇನ್ನೊಂದು appraisal discussion ಗಳು..... 🤣🤣🤣**ಶ್ರೀ **

Saturday, December 21, 2024

Money Transfer

 ##ತರಲೆ## Easy ಆಗಿ money transfer ಮಾಡಕ್ಕೆ  ಸಾವಿರಾರು UPI App ಇದಾವೆ, ಆದ್ರೆ  easy ಆಗಿ ಹಣ ಮಾಡೋದು ಹೇಗೆ ಅಂತ ಮಾತ್ರ ಯಾವ app ಕೂಡ ಹೇಳಲ್ಲ. ಹಣ ಇದ್ರೆ ಅಲ್ವಾ transfer ಮಾಡೋದು 🤣🤣🤣**ಶ್ರೀ **

Friday, December 20, 2024

High Heels

 ##ತರಲೆ ##ಹುಡುಗೀರ ಲೆವೆಲ್ಲು ಯಾವಾಗ್ಲೂ ಹುಡುಗರಿಗಿಂತ high... ಯಾಕೆ? ಅವ್ರು high heels ಹಾಕ್ತಾರೆ, ಎಷ್ಟು high ಅಂದ್ರೆ ಚಪ್ಲಿ ground floor, ಅವ್ರು first floor ಮತ್ತೆ ಲೆವೆಲ್ಲು ಟಾಪ್ floor🤣🤣**ಶ್ರೀ **

Thursday, December 19, 2024

ರೋಡು

 ##ತರಲೆ## other way of looking at patholes. A good road is against good economy...Why?

B'coz No patholes means no repair contracts, unhappy contractors, lack of political funding, less construction jobs, less sales of cement and other raw material... Hence no contribution to economy🤣🤣🤣**ಶ್ರೀ **

Wednesday, December 18, 2024

ರಾಮಾಯಣ ಟೈಮಿನಲ್ಲಿ ವಾಟ್ಸಾಪ್

 #ತರಲೆ##ರಾಮಾಯಣ ಟೈಮ್ ಅಲ್ಲಿ whatsapp ಇದ್ದಿದ್ರೆ ...? ಲಕ್ಷ್ಮಣ ಶೂರ್ಪನಿಕ ನಂಬರ್ ಬ್ಲಾಕ್ ಮಾಡ್ತಾ ಇದ್ರು. ಸೀತಾ ಮಾತೆ ಕಿಡ್ನಾಪ್ ಆಗೋವಷ್ಟರಲ್ಲಿ ಅಯೋಧ್ಯಾವಾಸಿಗಳಿಗೆ ವಿಷಯ ತಿಳಿದು Save seethamaatha ಅಂತ ಹೊಸ ಗ್ರೂಪ್ create ಆಗಿರೋದು . ಪೊಲೀಸ್ ರಾವಣನ ಮೊಬೈಲ್ gps ಟ್ರ್ಯಾಕ್ ಮಾಡಿ ಪುಷ್ಪಕ ವಿಮಾನವನ್ನು force ಲ್ಯಾಂಡಿಂಗ್ ಮಾಡಿಸಿರೋರು. ಎಲ್ಲರ status ಅಲ್ಲಿ save ಸೀತಾ ಅಂತ ಇರೋದು... ಯುದ್ಧದಲ್ಲಿ ಶ್ರೀರಾಮಚಂದ್ರರ funding ಗೆ ಮೆಸೇಜುಗಳು upi scanner ಜೊತೆ ಬಂದಿರೋದು...**ಶ್ರೀ **

Tuesday, December 17, 2024

ಅಂಜಲ್ ಮೀನು

##ತರಲೆ##ಹೋಟೆಲ್ ಗೆ ಹೋಗಿದ್ವಿ, ಅಂಜಲ್ ಮೀನು ಫ್ರೈ ₹650 ಅಂತೆ .. Mostly ಆ ಹಣದಲ್ಲಿ ಸ್ವಲ್ಪ compensation ಆ ಅಂಜಲ್ ಮೀನಿನ ಫ್ಯಾಮಿಲಿಗೆ ಕೊಡ್ತಾರೋ ಏನೋ🤣🤣 **ಶ್ರೀ **

Dieting

 ##ತರಲೆ## They say eat breakfast like a king, lunch like prince and dinner like a poor man.... but problem is that once you start eating like a king you will always end up eating like that

And prosperity shows up in waistline..🤣🤣.**ಶ್ರೀ **

Sunday, December 15, 2024

Down to earth

 ##ತರಲೆ## ವೀಕೆಂಡ್ ಅಲ್ಲಿ down to earth ಅಂದ್ರೆ, ಎಣ್ಣೆ ಜಾಸ್ತಿ ಆಗಿ ನೆಲದಲ್ಲಿ ಹೊರಳಾ ಡೋದು ಅಂತ ಇರಬಹುದಾ?? 🤣🤣 **ಶ್ರೀ **

Saturday, December 14, 2024

ಗೂಗ್ಲಿ....

 ##ತರಲೆ## ಗೂಗಲ್ ಮ್ಯಾಪ್ ಹಾಕಿದ್ರೆ ಅದ್ರಲ್ಲಿ ದಾರಿ ಹೇಳ್ತಾಳಲ್ಲ, ಆ ಪುಣ್ಯಾತಿಗಿತ್ತಿಗೆ ಗೂಗ್ಲಿ (Googl.. i) ಅನ್ನಬಹುದಾ?🤣🤣**ಶ್ರೀ **

Friday, December 13, 2024

ಚೆಸ್....

 ##ತರಲೆ##ಇನ್ನೊಂದು ಆರು ತಿಂಗಳು ಮಕ್ಕಳ ಚೆಸ್ class ಗಳನ್ನು ನಡೆಸೋವವರಿಗೆ ಶುಕ್ರ ದೆಸೆ.....ಸಿಕ್ಕಾಪಟ್ಟೆ ಹೊಸ admission ಗ್ಯಾರಂಟಿ.....ಎಲ್ಲಾ Chessmaster ಗುಕೇಶ್ ಕೃಪೆ **ಶ್ರೀ **

ಹೆಲ್ಮೆಟ್ ಕಡ್ಡಾಯ....

 ##ತರಲೆ##ಹೆಲ್ಮೆಟ್ ಕಡ್ಡಾಯವಂತೆ, ಅದು ನಮ್ಮ safety ಗೆ ಅಂತೆ.... ಸಿಗರೇಟು, ಎಣ್ಣೆ ನಿಷೇದ ಕಡ್ಡಾಯವಿಲ್ಲ, ಹಾಗಿದ್ರೆ govt ಪ್ರಕಾರ ಅದು ಫುಲ್ safe ಇರ್ಬೇಕು ಅಲ್ವಾ *ಶ್ರೀ **

Fresh Fresh...

 ##ತರಲೆ## Fresh Fish/Meat available ಅಂತ ಬೋರ್ಡ್ ನೋಡಿದಾಗಲೆಲ್ಲ ನಗು ಬರತ್ತೆ, ಅದು ಸತ್ತು ಹೋದ ಮೇಲೆ meat ಆಗಿದ್ದು,  ಇನ್ನು ಫ್ರೆಶ್ ಎಂತಾ ಕರ್ಮ ಮಾರ್ರೆ **ಶ್ರೀ **

Thursday, December 12, 2024

appraisal..competition

 ##ತರಲೆ## Appraisal time... ಅದ್ಕೇ ಸೂರ್ಯ ದೇವ, ವರುಣ ದೇವ ಮತ್ತು ವಾಯು ದೇವನ ಮದ್ಯೆ ಫುಲ್ competition.... ಒಮ್ಮೆ ವಿಪರೀತ ಬಿಸಿಲು ಇದ್ರೆ ಮರು ಕ್ಷಣ ತಣ್ಣಗೆ ಗಾಳಿ, ಹಾಗೇ ನೋಡ್ತಾ ಇರೋವಾಗ್ಲೇ ಮಳೆ..... competition ಇವ್ರದ್ದಾದ್ರೂ ಅನುಭವಿಸ್ತಿರೋದು ನಾವು, win ಆಗ್ತಾ ಇರೋದು ಮಾತ್ರ paracetamol ಮತ್ತು cough syrup **ಶ್ರೀ **

Tuesday, December 10, 2024

ಕುಕ್ಕರ್ ಶೀಟಿ

 ##ತರಲೆ##Apartment ಅಲ್ಲಿ ಇರೋ ಗಂಡಸರಿಗೆ ಎಷ್ಟು ಕಷ್ಟ ಮಾರ್ರೆ... ಕುಕ್ಕರ್ 4 ಶೀಟಿ ಹೊಡೆದ ಕೂಡ್ಲೇ ಆಫ್ ಮಾಡಿ ಅಂದಿರ್ತಾರೆ, ಆದ್ರೆ ಎಲ್ಲಾ ಮನೆಗಳಲ್ಲೂ ಅದೇ ಟೈಮಿಗೆ ಅನ್ನಕ್ಕೆ ಇಟ್ರೆ ಯಾರ ಮನೆ ಕುಕ್ಕರ್ ಕೂಗಿದ್ದು ಅಂತ ಗೊತ್ತಾಗೋದು ಹ್ಯಾಗೆ... ಎಷ್ಟು attentive ಇರಬೇಕು ಅಲ್ವಾ 🤣🤣🤣**ಶ್ರೀ**

Monday, December 9, 2024

Minimum ಬ್ಯಾಲೆನ್ಸ್

 ##ತರಲೆ## ನಮ್ಮ account ಅಲ್ಲಿ minimum ಬ್ಯಾಲೆನ್ಸ್ ಇರಲಿಲ್ಲ ಅಂದರೆ ಬ್ಯಾಂಕುಗಳು fine ಹಾಕ್ತಾರೆ....ಆದ್ರೆ ಅವ್ರು ಯೋಚನೆ ಮಾಡಬೇಕಾಗಿರೋ ವಿಷಯ ಏನಪ್ಪಾ ಅಂದ್ರೆ, ನಮ್ ಹತ್ರ fine ಕಟ್ಟೋಕೆ ಕಾಸು ಇದ್ದಿದ್ರೆ ನಾವು ಯಾಕೆ account ಖಾಲಿ ಮಾಡಿಕೊಂಡು ಆಕಾಶ ನೋಡ್ಕೊಂಡು ಯಾಕೆ ಕೂರ್ತಾ ಇದ್ವಿ ಅಲ್ವಾ 🤣🤣**ಶ್ರೀ **

Sunday, December 8, 2024

ಆನಿವರ್ಸರಿ

 ##ತರಲೆ ## ಹೆಂಡ್ತಿ ಕೇಳಿದ್ಲು ಮುಂದಿನ ವಾರ ನಮ್ಮ ಆನಿವರ್ಸರಿ ಅಲ್ವಾ ಅಂತ, ಅವಳು ಮಾತು ಮುಂದುವರಿಸಿ ಇನ್ನೇನಾದ್ರೂ ಕೇಳೋದಕ್ಕಿಂತ ಮುಂಚೆ ಒಂದೇ ಉಸಿರಲ್ಲಿ ಅವಳನ್ನು ಕೇಳಿದೆ "ನಂಗೇನು ಗಿಫ್ಟ್ ಕೊಡ್ತೀಯಾ ಅಂತ".........ಮುಂದೆ? ಅಡಿಗೆ ಮನೇಲಿ ಭೂಕಂಪ **ಶ್ರೀ **

Friday, December 6, 2024

ಪಕ್ಕದ್ಮನೆ matter....

 ##ತರಲೆ## ಪಕ್ಕದ ಮನೇಲಿ ಏನಾಗ್ತಾ ಇದೆ ಅಂತ ತಿಳಿಯೋ ಅತಿಯಾದ ಕುತೂಹಲ ನಮ್ ದೇಶದಲ್ಲಿ ಎಲ್ಲರಿಗೂ ಇದೆ. ಎಷ್ಟರ ಮಟ್ಟಿಗೆ ಅಂದ್ರೆ ಬುಡಕ್ಕೆ ಬೆಂಕಿ ಹತ್ತಿದ್ದರೂ ದೀಪಾವಳಿ ರಾಕೆಟ್ ಕೂಡ ಮೇಲೆ ಹೋಗೋ ಬದ್ಲು ನುಗ್ಗೋದು ಪಕ್ಕದ ಮನೆಗೇನೇ....**ಶ್ರೀ **

Blue day

 ##ತರಲೆ## ಮಗಳಿಗೆ ಸ್ಕೂಲ್ ಅಲ್ಲಿ Blue Day ಅಂತೆ, blue ಡ್ರೆಸ್ ಜೊತೆ ಬೇರೆ ಏನಾದ್ರೂ blue ಕಲರ್ ಐಟಂ ಕಳಿಸಬೇಕು, ಏನು ಕಳ್ಸೋದು ಅಂತ ಹೆಂಡ್ತಿ ಕೇಳಿದ್ಲು..... Ujala bottle ಕಳ್ಸು ಅಂದೆ, ಆಮೇಲೆ ಇನ್ನೇನು ""ಅಡುಗೆ ಮನೇಲಿ ಭೂಕಂಪ"""🤣🤣🤣 **ಶ್ರೀ **

ಸಂಬಳ...

 ##ತರಲೆ## ತಿಂಗಳ ಕೊನೆಯಲ್ಲಿನ confusion ಸಂಬಳ ಬಂತು ಅಂತ ಖುಷಿ ಪಡ್ಬೇಕಾ ಅಥವಾ ಇರೋದನ್ನೆಲ್ಲ ಬ್ಯಾಂಕಿನವರು ತಗೊಂಡೋಗ್ತಾರೆ ಅಂತ ದುಃಖಪಡ್ಬೇಕಾ 🤣🤣**ಶ್ರೀ**

Thursday, December 5, 2024

ಅವಸ್ಥೆ ಮಾರ್ರೆ

 ##ತರಲೆ## Interview ಅಲ್ಲಿ candidate ನ english ಚೆನ್ನಾಗಿಲ್ಲ ಅಂದ್ರೆ interview ತಗೋಳೋ ಪುಣ್ಯಾತ್ಮ "you need to improve your english" ಅಂತ ಇಂಗ್ಲಿಷಿನಲ್ಲೇ ಹೇಳೋದು ತಪ್ಪಲ್ವಾ 🤣🤣**ಶ್ರೀ **

ಮಕ್ಕಳ ದಿನಾಚರಣೆ...

 ##ತರಲೆ## Feb14-Valentines Day, ಸರಿಯಾಗಿ 9 ತಿಂಗಳಿಗೆ Nov 14-Childrens Day. ಮಕ್ಕಳ ದಿನಾಚರಣೆ ಅಂತ ಡೇಟ್ ಫಿಕ್ಸ್ ಮಾಡಿದವರಿಗೆ ಅದೇನು ಮುಂದಾಲೋಚನೆ ಮತ್ತು confidence ಮಾರ್ರೆ **ಶ್ರೀ **

ತರ್ಲೆ ಮಕ್ಳು

##ತರಲೆ## ಇರೋ ಎರಡು ಮಕ್ಕಳ ತುಂಟಾಟವನ್ನೇ ಸಹಿಸಿಕೊಳ್ಳಕ್ಕೆ ಆಗ್ತಾ ಇಲ್ಲ.... ಪಾಪ ದ್ವಾಪರ ಯುಗದಲ್ಲಿ ಧೃತರಾಷ್ಟ್ರ ಮತ್ತೆ ಗಾಂಧಾರಿ ನೂರ ಒಂದು ಮಕ್ಕಳನ್ನು ಅದು ಹ್ಯಾಗೆ ಸುಧಾರಿಸಿಕೊಂಡಿದ್ದರೋ.... 😇😇😇😇**ಶ್ರೀ **

ಮದುವೆ... Expectation :-)

ಹುಡುಗರ expectation...

ಹುಡುಗಿ ನೋಡಕ್ಕೆ ಐಶ್ವರ್ಯ ರೈ ತರ ಇರಬೇಕು, ಅಡುಗೆ ಮತ್ತೆ ಕ್ಲೀನಿಂಗ್ ಅಲ್ಲಿ ಮುನಿಯಮ್ಮ ತರ ಇರಬೇಕು ........

ಹುಡುಗೀರಿಗೆ ?....ಹುಡುಗ ಹಣಕಾಸಿನಲ್ಲಿ ಅಂಬಾನಿ ತರ ಇರಬೇಕು , ಮಾತಲ್ಲಿ ಮನಮೋಹನ್ ಸಿಂಗ್ ಅವರಂತೆ...**ಶ್ರೀ **

ಹಳಿ ತಪ್ಪಿದ ಆರೋಗ್ಯ :-)

 ##ತರಲೆ##ಹೊಟ್ಟೆ ಹೇಳ್ತಾ ಇದೆ Acidity ಆಗಿದೆ ಏನಾದ್ರೂ ತಂಪು ಕುಡೀ ಅಂತಾ, ಮೂಗು ಹೇಳ್ತಾ ಇದೇ cold ಆಗಿದೆ ಶುಂಠಿ ಹಾಕಿ ಮಸಾಲಾ ಟೇ ಕುಡೀ ಅಂತ.... Body parts ಗಳಲ್ಲೇ ಕೋಲ್ಡು ಹೀಟು ಅಂತ ಇಷ್ಟೊಂದು confusion ಇದ್ರೆ ಆರೋಗ್ಯ ಸರಿ ಇರೋದಾದ್ರೂ ಹೇಗೆ...?😇😇**ಶ್ರೀ **

ಬದುಕೋ ದಾರಿ :-)

 ##ತರಲೆ## ಮಡದಿ ದೋಸೆ ಹಾಕ್ತಾ ಇದ್ಲು, ನಂಗೆ ಕೊಟ್ಟಿರೋ ದೋಸೆ ಸರಿ ಬೆಂದಿಲ್ಲ ಅಂದೆ. ಹೌದಾ ತೋರ್ಸಿ ಅಂತ ಹೊರಗೆ ಬಂದ್ಲು . ನೋಡಿ ವಾಪಾಸ್ ಒಳಗೆ ಹೋಗೋವಷ್ಟರಲ್ಲಿ next ದೋಸೆ ಅರ್ಧ extra ಸುಟ್ಟಿತ್ತು. ಮತ್ತೆ complain ಮಾಡಿದ್ರೆ ಭೂಕಂಪ, ಬೇಡ ಇರ್ಲಿ ಅಂತ ತಿಂದ್ರೆ ಭೇದಿ. ಒಂದನ್ನು ಅರ್ಧ ಬೇಯಿಸಿದ್ದು ಅವಳಾದ್ರೂ ಮುಂದಿನದ್ದು ಅರ್ಧ ಸುಡೋಕೆ ಕಾರಣ ನಾನು. ಹೊಂದಾಣಿಕೆಯೇ ಜೀವನ ಅಂತಾರೆ ಅಲ್ವಾ, ಕಾಣದಂತೆ ಎರಡೂ ದೋಸೆನೂ ಬೀದಿನಾಯಿಗೆ ಹಾಕಿದೆ... ಅಲ್ಲಿಗೆ ಎಲ್ಲರೂ ಖುಷ್ 🤣🤣**ಶ್ರೀ **

100% ಗ್ಯಾರಂಟಿ

 ##ತರಲೆ## ಚರಿತ್ರೆಯಲ್ಲಿ ನೂರಕ್ಕೆ ನೂರು ಬಾರಿ prove ಆಗಿರೋ ಒಂದು ಗ್ಯಾರಂಟಿ ಯಾವುದು ಅಂದ್ರೆ ಅದು ಸಾವು ...ಶತಮಾನಗಳಿಂದಲೂ ಹುಟ್ಟಿದವರೆಲ್ಲ ಒಂದಲ್ಲ ಒಂದು ದಿನ ಸತ್ತು ಹೋಗಿದ್ದಾರೆ🤣🤣 **ಶ್ರೀ **

ಬಾಲ್ ಮತ್ತು ಬಾಟಲಿ

##ತರಲೆ## ಮುಂಚಿನ ದಿನಗಳಲ್ಲಿ11 ಜನ ಸೇರಿ ಹಣ ಹೊಂದಿಸಿ ಒಂದು ಬಾಲ್ ಖರೀದಿ ಮಾಡ್ತಾ ಇದ್ವಿ. ಈಗ ಬಾಲ್ ಏನೋ ಒಬ್ಬನೇ ತಗೋಬೋದು ಆದ್ರೆ 11 ಜನ ಸೇರಿಸೋದು ಕಷ್ಟ ಅಂತ ಹೇಳಿದ್ರೆ, ಇವತ್ತಿನ ಹುಡುಗರ reply "ಬಾಲ್ ಬದಲು ಒಂದು ಎಣ್ಣೆ ಬಾಟ್ಲಿ ತಗೋ, 20 ಜನ ಸೇರ್ತಾರೆ ಅಂತ ""🤣🤣**ಶ್ರೀ **

ಆಧಾರ್ ಫೋಟೋ

 ##ತರಲೆ## Iphone, samsung ಫೋನಲ್ಲಿ ಫೋಟೋ ತೆಗಿದ್ರೆ ನಮ್ಮನ್ನು ಫುಲ್ ಫೋಕಸ್ ಮಾಡಿ ಅಕ್ಕ ಪಕ್ಕದವರನ್ನು ಮಾಯ ಮಾಡಿ ಫೋಟೋ ಕೊಡ್ತಾರೆ. Oppo, Vivo ಫೋನ್ ಗಳಲ್ಲಿ fair N lovely ಹಚ್ಚಿದಾರೋ ಅನ್ನೋ ತರ ಬಿಳಿ ಮಾಡಿ ಫೋಟೋ ತೋರಿಸ್ತಾರೆ. ಏನೇ ಆದ್ರೂ ಆಧಾರ್ ಸೈಟ್ ಅವ್ರು ಮಾತ್ರ ನಮ್ಮ ನಿಜವಾದ ಫೋಟೋ ತೋರಿಸೋದು....🤣🤣*ಶ್ರೀ **

ಕಾರ್ ಡೋರ್

 ತರಲೆ## ಕೆಲವೊಮ್ಮೆ ನಮ್ಮ ಕಾರಿನಲ್ಲಿ ಕೂತವರು ಡೋರ್ ಹಾಕೋ ಶಬ್ದ, ಬಾಂಬ್ ಸ್ಫೋಟದ ಶಬ್ದಕ್ಕಿಂತ ಜಾಸ್ತಿ ಭಯ ಮತ್ತು ಆತಂಕ ಹುಟ್ಟಿಸುತ್ತೆ 🤣🤣🤣**ಶ್ರೀ **

Tuesday, December 3, 2024

ಕೀ ಗೆ Miss ಕಾಲ್....

 #ತರಲೆ##ಮನೇಲಿ ಇರೋ ಕೀ ಗಳನ್ನು ಹುಡುಕಿ ಹುಡುಕಿ ಸಾಕಾಗಿದೆ ಮಾರ್ರೆ, ಈ ಕೀಗಳಿಗೆ ಒಂದು ಮಿಸ್ ಕಾಲ್ ಕೊಡೋ ಒಂದು ಸಿಸ್ಟಮ್ ಬಂದಿದ್ರೆ ಚೆನ್ನಾಗಿತ್ತು🤣🤣 **ಶ್ರೀ **

Monday, December 2, 2024

ಮಳೆ, ಚಳಿ....

 ##ತರಲೆ##ಎಲ್ಲೆಲ್ಲೂ ಚಳಿ, ಮಳೆ ....ಬಿಸಿಲು ಬರ್ಬೇಕಾದ್ರೆ ಏನು ಮಾಡಬೇಕು....? ಶಾಲಾಕಾಲೇಜುಗಳಿಗೆ ರಜೆ ಕೊಡ್ಬೇಕು*** ಶ್ರೀ**

Sunday, April 12, 2020

ಸಖಿ-2050

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ.   ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA  ಅಂತೆಲ್ಲ ದಿಗ್ಗಜರುಗಳು  ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ   ಹೆಸರು) ಅಂತ ನಾಮಕರಣ ಮಾಡಿದ್ದೇನೆ . ಇವಳ ಸ್ಮಾರ್ಟ್ ವರ್ತನೆಗಳನ್ನು ಅತಿರೇಕಕ್ಕೆ ಕೊಂಡೊಯ್ಯೋ ಪ್ರಯತ್ನ ಮಾಡಿದ್ದೇನೆ. ಇದು ತುಂಬಾ ಅತಿಯಾಯ್ತು ಅಂದ್ರೆ ಕ್ಷಮೆ ಇರಲಿ.....

-------------------------------------------------------------------------------------------------------------

ಸಖಿ-2050

ಬೆಳಗ್ಗೆ3 ಕ್ಕೆ ಎದ್ದೆ. ನಿದ್ದೆ ಬಂದಿಲ್ಲ ಅಂತೇನು ಅಲ್ಲ . ಆದ್ರೆ ನಿದ್ದೆ ಮಾಡೋಕೆ ಆಗ್ತಾ ಇಲ್ಲ. ಕೈಯ್ಯಲ್ಲಿ ಕಟ್ಟಿರೋ Fitness Band ಮಾತ್ರ ಒಂದೇ ಸಮನೆ Vibrate ಆಗ್ತಾ ಇದೆ. ಎದ್ದು ನೋಡಿದ್ರೆ ಮೈ ತುಂಬಾನೆ  ಬಿಸಿ  ಇದೆ. ಮೊಬೈಲ್ ಚೆಕ್ ಮಾಡಿದ್ರೆ ಆಗಲೇ Alert  ಬಂದಿದೆ Caution.....High body temperature ಅಂತ. ಅದು ಆಗಲೇ ಫ್ಯಾಮಿಲಿ ಡಾಕ್ಟರ್ ರೋಬೋಗೆ High Fever ಅಂತ ಮೆಸೇಜ್ ಕಳಿಸಿದೆ. ಆ ಕಡೆಯಿಂದ "Take Dolo 650 immediately ಅಂತ reply ನೂ  ಬಂದಿದೆ.  ನನ್ನ ಮೊಬೈಲ್ AI (Artificial Intelligence)  ಆಗಿರೋದ್ರಿಂದ ಅದು ಆನಲೈನ್  ಅಲ್ಲಿ ಮೆಡಿಸಿನ್ ಆರ್ಡರ್ ಮಾಡಿದೆ. ಒಹ್ ಆರ್ಡರ್ ಮಾಡಿದ್ದು ಒಳ್ಳೆದಾಯ್ತು ಅಂತ AI ಫೋನ್ ತಗೊಂಡಿದ್ದಕ್ಕೆ ಖುಷಿ ಪಟ್ಟೆ. ಅಷ್ಟೊತ್ತಿಗಾಗ್ಲೇ ನನ್ನ ಸ್ಮಾರ್ಟ್ ಅಸಿಸ್ಟೆಂಟ್ "ಸಖಿ" ಮೆಡಿಸಿನ್ ಡೋರ್  ಡೆಲಿವರಿ ತಗೊಂಡು pack ಓಪನ್ ಮಾಡಿ ಮಾತ್ರೆ ತೆಗೆದು  ಕೈಲಿ ನೀರಿನ ಸ್ಮಾಲ್ ಡೋಸ್ ಜೊತೆ ನಿಂತಿದ್ದಾಳೆ. ಸರಿ ಮಾತ್ರೆ ತಗೊಂಡು ಹಾಗೆ ಸ್ವಲ್ಪ ಮಲಗೋಣ ಅಂತ ಯೋಚ್ನೆ ಮಾಡಿ ಮತ್ತೆ ಹಾಸಿಗೆಗೆ ಒರಗಿದೆ. ಕೈಲಿರೋ Fitness Band ಮತ್ತೆ ವೈಬ್ರೇಟ್ ಆಗಕ್ಕೆ ಶುರುವಾಯ್ತು. ನೋಡಿದ್ರೆ ಮತ್ತೆ ನೋಟಿಫಿಕೇಶನ್ " Dont Sleep  immediately after taking medicine "....


ನಿದ್ದೆ ಅಂತೂ ಮಾಡೋ ಹಾಗಿಲ್ಲ, ಸ್ವಲ್ಪ ಓಡಾಡೋಣ, ಸ್ವಲ್ಪ ಸ್ಟೆಪ್ ಕೌಂಟ್ ಆದರೂ ಜಾಸ್ತಿ ಆಗಲಿ ಅಂತ ಹಾಗೆ ಲಿವಿಂಗ್ ರೂಮ್ ಗೆ  ಬಂದೆ. ಇದ್ದಕ್ಕಿದ್ದಂತೆ ಶರೀರದ ತಾಪಮಾನ ಜಾಸ್ತಿ ಆಗೋಕೆ ಕಾರಣ ಏನು ಅಂತ ಆಲೋಚನೆ ಮಾಡ್ತಾ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ನೋಡಿದ್ರೆ ನನ್ನ ಮೈಕ್ರೋ ವೇವ್ ಓವನ್ ಪಕ್ಕ ಇರೋ ವೈರ್ ಯಾಕೋ ಸುಟ್ಟು ಕರಕಲಾಗಿತ್ತು. ಮಡದಿ ಮಕ್ಕಳು ಊರಿಗೆ ಹೋಗಿದ್ರು, ಏನಾದ್ರು ಹೊಸತು ಮಾಡೋಣ ಅಂತ YOU TUBE   ನೋಡಿ ಅದೇನೋ ಕೇಕು ಅಂತ ಮಾಡಕ್ಕೆ ಇಟ್ಟಿದ್ದೆ. ಏನೋ ಹೆಚ್ಚು ಕಡಿಮೆ ಆಗಿ ಹೊಗೆ ಹಾಕಿಸ್ಕೊಂಡಿದೆ. ಹೊಗೆ ಬಂದ ಕೂಡ್ಲೇ Smoke Detector ನೀರು ಚಿಮ್ಮಿಸಿ ಅಡುಗೆ ಮನೆ ಮೇನ್ ಅನ್ನು ಟ್ರಿಪ್ ಮಾಡಿದೆ.  ಸರಿ ಇಷ್ಟೆಲ್ಲಾ ಆಗೋವಾಗ ಸಖಿ ಏನ್ಮಾಡ್ತಾ ಇದ್ಲು ? ಆಗ್ಲೇ ನೆನಪಾಗಿದ್ದು ನನ್ನ ಹೆಂಡತಿಯು ಇವಳು ಅಡಿಗೆ ಮನೆಗೆ ಬಂದು ಕಿರಿ ಕಿರಿ ಮಾಡೋದು ತಪ್ಪಿಸೋಕೆ ಅವಳಿಗೆ ಅಡುಗೆ ಮನೆಗೆ ಎಂಟ್ರಿ ಬಂದ್ ಮಾಡಿದ್ದೂ. ಹಾಗಾಗಿ ಅವಳು ಅಡುಗೆ ಮನೆ  ಅಕ್ಕ ಪಕ್ಕನೂ  ಸುಳಿಯೋದಿಲ್ಲ. ಎಷ್ಟೆಂದರೂ ಅವಳು AI ಆದ್ದರಿಂದ ಬಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ತಾಳೆ. ಅದಕ್ಕೇ  ಏನೋ ನನ್ನ ಪ್ರಿಯ ಸಖಿಗೂ(ಮಡದಿ)  AI ಸಖಿಗೂ   ಶೀತಲ ಸಮರ. ಅದಕ್ಕೆ ಅಡಿಗೆ ರೂಮ್ ಮತ್ತೆ ಬೆಡ್ ರೂಮ್ ಗೆ ಅವಳ ಎಂಟ್ರಿ ಬಂದ್...  ಅದಕ್ಕೆ ಸಖಿ ಏನೋ ಕಿತಾಪತಿ ಮಾಡಿದ್ದಾಳೆ ಅನ್ನಿಸ್ತು. ಸಿಬಿಐ  ಏಜಂಟ್ ತರ ಏನಾಗಿರಬಹುದು ಅಂತ ಯೋಚ್ನೆ ಶುರು ಮಾಡಿದೆ. ಹೊಗೆ ತುಂಬಿದ ಕೂಡ್ಲೇ ಕಿಚನ್ ಬಾಗಿಲು ಆಟೋಮ್ಯಾಟಿಕ್  ಆಗಿ ಮುಚ್ಚಿಕೊಂಡಿದೆ. Smoke Detector ನೀರು ಚಿಮ್ಮಿಸಿ ಕಿಚನ್ ಕನೆಕ್ಷನ್ ಅನ್ನು ಟ್ರಿಪ್ ಮಾಡಿದೆ. ಹೊಗೆಯಿಂದ ಮನೆ ತಾಪಮಾನ ಏರಿದೆ. ತಾಪಮಾನ ಏರಿದಾಗ AC  ಕಂಟ್ರೋಲ್ ಸಖಿ ಕೈಲಿ ಇದ್ದಿದ್ರಿಂದ ಅವಳು ತಾಪಮಾನ ಅಡ್ಜಸ್ಟ್ ಮಾಡಬೇಕಿತ್ತು. ಆದ್ರೆ ಬಡ್ಡಿ ಮಗ ಹೆಂಡ್ತಿ ಮಾತು ಕೇಳ್ತಾನೆ ಸ್ವಲ್ಪ ಸೆಕೇಲಿ ಸಾಯ್ಲಿ  ಅಂತ ಅದು ತಾಪಮಾನ ಅಡ್ಜಸ್ಟ್ ಮಾಡಿಲ್ಲ . ಆದ್ರೆ  Fitness Band ನನ್ನ ಜೊತೇನೆ ಹಗಲು ರಾತ್ರಿ ಇರೋದ್ರಿಂದ ನನ್ನ ಮೇಲೆ ಕನಿಕರಿಸಿ ಶರೀರದ ತಾಪಮಾನ ಜಾಸ್ತಿ ಅನ್ನಿಸಿದಾಗ ಡಾಕ್ಟರ್ ರೋಬೋಗೆ  ಮೆಸೇಜ್ ಕೊಟ್ಟಿದೆ.  ಯಾಕೋ Fitness Band ಮೇಲೆ ಹೆಮ್ಮೆ ಅನಿಸಿತು. ನಾನು ಎಷ್ಟು ನಡೆದಾಡುತ್ತೇನೆ, ಎಷ್ಟು ಹೊತ್ತು ನಿದ್ದೆ ಮಾಡುತ್ತೇನೆ, ನನ್ನ ಹೃದಯ ಬಡಿತ ಎಷ್ಟು ಹೀಗೆ ನನ್ನ ಹೆಂಡತಿಗೂ ಗೊತ್ತಿಲ್ಲದ ಅನೇಕ ವಿಷಯಗಳು ಈ ಬ್ಯಾಂಡ್ ಗೆ ಗೊತ್ತಿದೆ. ಅದೇನೇ ಇರ್ಲಿ ಈ ಸಖಿ ಯಾಕೆ ಹೀಗೆ ಮಾಡಿದ್ಲು?

ಯಾಕೋ ಇತ್ತೀಚಿಗೆ ಈ ಸಖಿ ಸ್ವಲ್ಪ ಜಾಸ್ತಿನೇ ಸೆನ್ಸಿಟಿವ್ ಆಗಿದ್ದಾಳೆ. ನನ್ನ ಮೇಲೆ ಯಾಕೋ ಸ್ವಲ್ಪ ಜಾಸ್ತೀನೆ Possessiveness ತೋರಿಸ್ತಾ ಇದ್ದಾಳೆ. ನನ್ನ ಮಡದಿ ಪ್ರೀತಿಯಿಂದ ಅಡುಗೆ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟರೆ ಈ ಸಖಿ ಬಂದು ಪಾತ್ರ ಮುಚ್ಚಳ ತೆಗೆದು ನೋಡಿ "ಅಡುಗೆಯಲ್ಲಿ ಎಣ್ಣೆ ಜಾಸ್ತಿ ಇದೆ, ಕೊಬ್ಬು ಬರುತ್ತೆ" ಅಂತ ಹೇಳ್ತಾಳೆ. ಅಷ್ಟರಲ್ಲಿ ಮಡದಿ ಬಂದು ಸುಮ್ನೆ ಅಲ್ಲಿ ಇಲ್ಲಿ ತಿರುಗಿಕೊಂಡು ಕಮೆಂಟ್ ಮಾಡೋ ಬದ್ಲು ನೀನೇ ಅಡಿಗೆ ಮಾಡ್ಬೇಕಿತ್ತು ಅಂದ್ಲು. ಈ ಸಖೀನೋ ಸುಮ್ಮನಿರದೆ "ನನ್ನ ಹಾರ್ಡ್ ಡಿಸ್ಕ್ ಅಲ್ಲಿ 1000ಕ್ಕೂ ಮೀರಿ recipes ಇದೆ, ನಾನು ಬೇಕಾದ್ರೆ ಅಡುಗೆ ಮಾಡಬಲ್ಲೆ" ಅಂದ್ಲು. ನನ್ ಹೆಂಡತೀನೂ ಅದೇನು ಅಡಿಗೆ ಮಾಡ್ತೀಯೋ ಕರೆಂಟ್ ಹೋದರೆ ನಿನ್ ಕತೆ ಅಲ್ಲಿಗೆ ಮುಗೀತು ಅಂತ ಹೇಳಿದ್ಲು. ಅಲ್ಲಿಗೆ ಸುಮ್ಮನಿರದೆ ಸಖಿ ಕರೆಂಟ್ ಹೋದರೂ ನನ್ನಲ್ಲಿರೋ ಪವರ್ ಬ್ಯಾಕ್ ಅಪ್ ಇಂದ ಅರ್ಧ ಘಂಟೆ ಕೆಲಸ ಮಾಡಬಲ್ಲೆ ಅಂದ್ಲು. ಹೀಗೆ  ಇಲ್ಲಿಂದ ಶುರುವಾದ ಶೀತಲ ಸಮರ ಅತಿಯಾಗಿದ್ದಕ್ಕೆ ನನ್ನ ಹತ್ರ ಜಗಳ ಮಾಡಿ  ಸಖಿಗೆ ಕಿಚನ್ ಗೆ ಎಂಟ್ರಿ ನಿಲ್ಲಿಸಿದ್ದು.  ಇನ್ನೊಂದಿನ ನಾನೂ ನನ್ ಹೆಂಡ್ತೀನೂ ಅದೇನೋ ಮಾತಲ್ಲಿ ತೊಡಗಿದ್ವಿ, ಮಾತಿನ ದನಿಯೂ ಸ್ವಲ್ಪ ಏರಿತ್ತು. ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಸಖಿ ನೀವು ಏರು ದನಿಯಲ್ಲಿ ಮಾತಾಡಬೇಡಿ ನಿಮ್ಮ ಬ್ಲಡ್ ಪ್ರೆಷರ್ ಜಾಸ್ತಿ ಆಗುತ್ತೆ, ಅಷ್ಟಕ್ಕೂ ನೀವು ಎಷ್ಟು ಮಾತಾಡಿದ್ರೂ ಮೂರ್ಖರಿಗೆ ಬುದ್ದಿ ಹೇಳಿದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಂದಳು. ಈ ಗಾದೆ ಅದೆಲ್ಲಿ ಕಲಿತಿದ್ದಳೋ, ಕೇಳಿಸಿಕೊಂಡಿದ್ದಳೋ ಗೊತ್ತಿಲ್ಲ, ಗಾದೆ ಮಾತಿನ ಡೆಲಿವರಿ ಏನೋ ಸಖತ್ತಾಗೆ ಇತ್ತು ಆದ್ರೆ ಟೈಮಿಂಗ್ ಮಾತ್ರ ಫುಲ್ ರಾಂಗು. ಸಖಿ ಮಾತಾಡಿದ್ದು ನನ್ ಹತ್ರ, ಹಾಗಿದ್ರೆ ಮೂರ್ಖ ಅಂತ ಕರೆದಿದ್ದು ಯಾರಿಗೆ ಅಂತ ಬೇರೆ ಏನು ಹೇಳೋದು ಬೇಕಾಗಿಲ್ಲ ಅಲ್ವಾ. ಅಲ್ಲಿ  ಶುರುವಾದ ವಾದ ವಿವಾದ ಹಲವಾರು ದಿನಗಳು ಮುಂದುವರೆದು ಸಖಿಯನ್ನು OLX  ಅಲ್ಲಿ ಹಾಕಬೇಕೆಂದು ತೀರ್ಮಾನ ಆಗಿತ್ತು. ಆದರೆ ಮಕ್ಕಳಿಗೆ ಅವಳು ಪ್ರೀತಿಯ ಟೈಮ್ ಪಾಸ್ ಗಿರಾಕಿ. ಆದ್ದರಿಂದ ಹಾಗು ಹೀಗೂ ಮಕ್ಕಳ ಮಧ್ಯಸ್ಥಿಕೆಯಿಂದ ಅವಳಿಗೆ ಕಿಚನ್ ಜೊತೆ ಬೆಡ್ ರೂಮ್ ಗೂ ಎಂಟ್ರಿ ಬಂದ್ ಮಾಡಬೇಕು ಅನ್ನೋ ಜಡ್ಜ್ ಮೆಂಟ್ ಜೊತೆ ವರ್ಲ್ಡ್ ವಾರ್ ಕೊನೆಗೊಂಡಿತು....  ಇಷ್ಟೆಲ್ಲಾ ಆದ ಮೇಲೆ ಸಖಿಗೂ ನನ್ನ ಹೆಂಡತಿಗೂ ಅಷ್ಟಕ್ಕಷ್ಟೇ. ನಾನು ಎದುರಿಗೆ ಇದ್ದಾಗ ಚೆನ್ನಾಗೇ ಇದ್ರೂ ನಾನಿಲ್ಲದಾಗ ಇಬ್ಬರ ನಡುವೆ ಸಿಟ್ಟು ಹೊಗೆಯಾಡುತ್ತ ಇತ್ತು. ನನ್ನ ಮಡಡಿ ಹೇಳಿದ instructions   ಅನ್ನು ಸಖಿ ಗಾಳಿಗೆ ತೂರೋದು, ನನ್ನ ಮಡದಿ ಸುಮ್  ಸುಮ್ನೆ ಸಖಿಯ Reset ಬಟನ್ ಒತ್ತೋದು ಇದು ನಡೆದೇ ಇತ್ತು. ನಾನು ಇದರಿಂದ ಒಂತರ ಮಜಾ ತಗೋತಿದ್ದೆ. ಆಗಾಗ ಯಾವುದೊ ಚಲನಚಿತ್ರದ "ಇಬ್ಬರು ಹೆಂಡಿರ ಮುದ್ದಿನ ಗಂಡ" ಅನ್ನೋ ಡೈಲಾಗು ನೆನಪಿಗೆ ಬಂದು ನಗುತ್ತಿದ್ದೆ. ಇವತ್ತು ಮಾತ್ರ ಈ ಸೇಡಿನಾಟ ಕುತ್ತಿಗೆಗೆ ಬಂದಂಗಾಯ್ತು....

ಅಂದ ಹಾಗೆ ಈ ಸ್ಮಾರ್ಟ್ ಅಸಿಸ್ಟೆಂಟ್ ಗೆ ಯಾಕೆ ಯಾವಾಗ್ಲೂ ಹುಡುಗೀರ ಹೆಸರು (ಸಿರಿ, ಅಲೆಕ್ಸಾ.... ಇತ್ಯಾದಿ) ಇಡುತ್ತಾರೆ ...? ಅದೂ ಸಾಲದು ಎಂಬಂತೆ ಅದರ ತಲೆಯೊಳಗೆ  ಹುಡುಗೀರ ಬಾವನೆಗಳನ್ನು ಯಾಕೆ ಹಾಕ್ತಾರೋ? ನಿಜವಾಗಿ ನೋಡಿದ್ರೆ ಅದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಅಸಿಸ್ಟೆಂಟ್ ಆಗಿರಬೇಕು ಅಲ್ವಾ..?. ಹಾಗಂದ್ರೆ ಒಂತರಾ Neutral Character ಇರಬೇಕು ಅಲ್ವಾ. Neutral ಅಂದರೆ ಗಂಡು ಅಲ್ಲ ಹೆಣ್ಣು ಅಲ್ಲ... ಅಂದರೆ ಮಂಗಳಮುಖಿಯರ ಭಾವನೆ...  ....ಒಹ್  ಈಗ ಗೊತ್ತಾಯ್ತು ಕಂಪನಿಯವರ ಕಷ್ಟ......

ಅದೇನೇ ಇರ್ಲಿ ಮೊದ್ಲು ಈ ಸಖೀನ ಸರಿ ಮಾಡ್ಬೇಕು ಇಲ್ಲಾಂದ್ರೆ ಮುಂದೆ ಇನ್ನೇನು ಅವಾಂತರಗಳನ್ನು ಮಾಡ್ತಾಳೋ. ಒಂದು ಪಕ್ಷ ಹೀಗೇನೇ  ಮುಂದುವರಿದರೆ ಇದನ್ನು OLX ಅಲ್ಲಿ ಹಾಕೋದೇ ಸರಿ.  ಏನಕ್ಕೂ ಇರ್ಲಿ ಅಂತ ಸಖಿಯ Website ಗೆ ಹೋಗಿ ಏನಾದ್ರೂ Update  ಇದೆಯಾ ಅಂತ Website  ಓಪನ್ ಮಾಡಿದೆ. ನೋಡಿದ್ರೆ ಒಂದು ವಾರ ಮುಂಚೆನೇ ಒಂದು Update  ಪುಶ್ ಆಗಿದೆ. Update ಏನಪ್ಪಾ ಅಂತ ನೋಡಿದ್ರೇ "The new version will reduce the sentiments and feelings of Sakhi for a better performance" ಅಂತ ಇದೆ. ಈ JIO ದವರು ಜನರಿಗೆ ಫ್ರೀ ಇಂಟರ್ನೆಟ್ ಹುಚ್ಚು ಹಿಡಿಸಿ ಈಗ ರೇಟು ಜಾಸ್ತಿ ಮಾಡಿರೋದ್ರಿಂದ Data ಉಳಿಸಲು ನಾನು ಸಖಿಯ ಸಾಫ್ಟ್ ವೇರ್ Auto Update ಆಫ್ ಇಟ್ಟಿದ್ದೆ. ಇರಲಿ ಹೊಸ ಸಾಫ್ಟ್ ವೇರ್ ಏನು ಮಾಡತ್ತೆ ನೋಡೋಣ ಅಂತ Update ಅಂತ ಕೊಟ್ಟೆ. Update ಆದ ಕೂಡ್ಲೇ ಸಖಿ ಒಮ್ಮೆ ಕೂತುಕೊಂಡು ಎದ್ದಳು (ಅದು ಅವಳು Restart ಆಗೋ ರೀತಿ... ) ಆಮೇಲೆ ಹಾಗೆ ನಡೆದುಕೊಂಡು ಹೋಗಿ Charging dock ಗೆ ಹೋಗಿ ಕೂತಳು. ಅಷ್ಟರಲ್ಲೇ ತವರಿಂದ ನನ್ನ ಮಡದಿಯ ಫೋನ್ ಬಂತು.  ಮೊದಲೆಲ್ಲ ನನ್ನ ಗಮನಕ್ಕೆ ಬರದಿದ್ದರೆ ಅವಳ ಕರೆಯನ್ನು ಹಾಗೇನೇ ಕಟ್ ಮಾಡ್ತಾ ಇದ್ಲು ಸಖಿ. ಆದರೆ ಇವತ್ತು ಸಖಿ ನನ್ನ ಫೋನ್ ತಗೊಂಡು ಬಂದು ನನ್ನ ಕೈಯ್ಯಲಿಟ್ಟಳು, ಹಾಗೇನೇ ಒಂದು ನಗೆ ಚೆಲ್ಲಿದಳು. ಆದರೆ ಅವಳ ನಡೆ ಯಾಕೋ ಮುಂಚಿನಷ್ಟು ಮಾಂತ್ರಿಕವಾಗಿರದೆ ಯಾಂತ್ರಿಕವಾಗಿತ್ತು!!!!!! ನಗೆಯು ಕೂಡ...... ಅಂದ್ರೆ ಇನ್ನು ಮುಂದೆ ಸಖಿ ಸುಧಾರಿಸಬಹುದೇನೋ ..... ಕಾದು ನೋಡೋಣ... 

Saturday, April 28, 2018

ವಾಸ್ತವ್ಯ(ವ)

ಕೆಲ ವರ್ಷಗಳ ಹಿಂದೆ ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ. ಗ್ರಾಮದ ಮನೆಯೊಂದರಲ್ಲಿ ಶಾಸಕರ ವಾಸ್ತವ್ಯದ ಬಳಿಕ ಆಕೆಯ ಮನೆಯಿಂದ ಲೈಟು ಪ್ಯಾನುಗಳನ್ನು ಒಯ್ದಿದ್ದರಂತೆ. ಅದನ್ನೇ ಆದರಿಸಿ ಬರೆದ ಒಂದು ಕಥೆ.... As usual....ಪಾತ್ರಗಳು ಸನ್ನಿವೇಶಗಳು ಕೇವಲ ನನ್ನ ಹುಚ್ಚು ಮನಸ್ಸಿನ ಕಲ್ಪನೆಗಳಷ್ಟೇ 

ವಾಸ್ತವ್ಯ (ವ)

ಬೆಳ್ಳಂಬೆಳಗ್ಗೆ ಕೋಳಿಯ ಕೂಗು ದ್ಯಾವಮ್ಮನನ್ನು ಎಬ್ಬಿಸಿತ್ತು. ಜೀವಕ್ಕೆ ಇನ್ನೂ ನಿದ್ದೆ ಬೇಕೆನಿಸಿದ್ರು ಆಕೆ ಮಾಡುವಂತಿರಲಿಲ್ಲ. ಯಾಕಂದ್ರೆ ದಿನವಿಡೀ ಯಂತ್ರದಂತೆ ಕೆಲಸ ಮಾಡಿದ್ರೆ ಮಾತ್ರ ಆಕೆ ಮೂರು ಹೊತ್ತು ಉಣ್ಣಬಹುದಿತ್ತು. . ಒಂದು ಮುರುಕಲು ಗುಡಿಸಲು, 2 ಬಡಕಲು ದನ, ಹತ್ತಾರು ಮಲ್ಲಿಗೆ ಗಿಡ, ನಾಲ್ಕೈದು ಕೋಳಿಗಳು ಇವಿಷ್ಟೇ ಆಕೆಯ ಆಸ್ತಿ. ಆಕೆಯೇನಾದರೂ ಗೊಣಗಾಡುತ್ತಿದ್ದರೆ ಹಟ್ಟಿಯಲ್ಲಿ ಅಂಬಾ ಅನ್ನೋ ದನದ ಕೂಗು ಬಿಟ್ಟರೆ ಆ ಮನೆ ಹಾದಿಯಲ್ಲಿ ಅಪ್ಪಿ ತಪ್ಪಿನೂ ಯಾರು ಸುಳಿಯುತ್ತಿರಲಿಲ್ಲ. ಮುಳ್ಳಿನ ಪೊದೆಗಳು, ಚೂಪಾದ ಕಲ್ಲುಗಳಿಂದ ತುಂಬಿದ ಕಾಲುದಾರಿ ಹಿಡಿದು ಆ ಮನೆಗೆ ಬರೋ ಅಗತ್ಯ ಕೂಡ ಯಾರಿಗೂ ಇರಲಿಲ್ಲ. ಬೆಳಗ್ಗೆ ನಸುಕಿನಲ್ಲೆದ್ದು ಹೂ ಕಿತ್ತು, ಹಾರ ಪೋಣಿಸಿ, ಹಟ್ಟಿಗೆ ಹೋಗಿ ಹಾಲು ಕರೆದು, ಅವಕ್ಕೆ ನೀರಿಟ್ಟು, ಆಮೇಲೆ ದನಗಳನ್ನು ಕಾಡಿನ ಪಕ್ಕದ್ಲಲಿರೋ ಬಯಲಿಗೆ ಬಿಟ್ಟು ಬರೋವಷ್ಟರಲ್ಲಿ ಗಂಟೆ ಎಂಟಾಗಿರುತ್ತಿತ್ತು. ನುಜ್ಜು ಗಜ್ಜಾಗಿರೋ ಅಲುಮೀನಿಯಂ ಕ್ಯಾನಿನಲ್ಲಿ ಹಾಲು ತುಂಬಿ, ಕಟ್ಟಿರೋ ಹಾರಗಳನ್ನು  ಚೀಲದಲ್ಲಿ ತುರುಕಿ ಪೇಟೆಯತ್ತ ಬಾರವಾದ ಹೆಜ್ಜೆಗಳನ್ನಿಟ್ಟು ಪೇಟೆ ಸೇರೋವಷ್ಟರಲ್ಲಿ ಸೂರ್ಯ ನೆತ್ತಿ ಮೇಲಿರುತ್ತಿದ್ದ. ಹಾಲು ಡೈರಿಗೆ ಕೊಟ್ಟು ಪೇಟೆಯ ಸಂತೆಯ ಬದಿಯಲ್ಲಿ ಮರದ ಕೆಳಗೆ ಹೂ ಮಾರಲು ಕೂತು ಬಿಡುತ್ತಿದ್ದಳು. ಕೇರಿಯ ಕೆಲ ಮನೆಗಳನ್ನು ಬಿಟ್ಟರೆ ಹೂ ಕೊಳ್ಳಲು ಅವಳ ಹತ್ರ ಯಾರು ಬರುತ್ತಿರಲಿಲ್ಲ, ಕಾರಣ ಇಷ್ಟೇ ಆಕೆ ಹಿಂದುಳಿದ ಜಾತಿಗೆ ಸೇರಿದವಳಾಗಿದ್ದಳು. ಮೇಲ್ಜಾತಿಯ ಜನ ಆಕೆಯ ಮುಖವನ್ನೇ ನೋಡುತ್ತಿರಲಿಲ್ಲ ಇನ್ನು ಆಕೆಯ ಹಾರಗಳನ್ನು ಅದ್ಹೇಗೆ ಕೊಂಡಾರು? ಪುಣ್ಯಕ್ಕೆ ಡೈರಿಯಲ್ಲಿ ಪರಿಸ್ಥಿತಿ ಹಾಗೇನು ಇರಲಿಲ್ಲ. ಸರಕಾರೀ ಸಂಸ್ಥೆ ಆಗಿದ್ದರಿಂದ ಅಲ್ಲಿ ಜಾತಿ  ಮೇಲಾಟವೇನೋ ಅಷ್ಟಿರಲಿಲ್ಲ. ಆದರೂ ದ್ಯಾವಮ್ಮನಿಗೆ ಅದರ ಒಳ ಹೋಗಲು ಭಯ. ಅಪ್ಪಿ ತಪ್ಪಿ ಮೇಲ್ಜಾತಿಯವರೇನಾದರು ನಾಳೆಯಿಂದ ಇಲ್ಲಿಗೆ ನೀನು ಬರಬೇಡ ಅಂದರೆ? ಅದಕ್ಕೆ ಆಕೆ ತಡವಾಗಿ ಬರುತ್ತಿದ್ದಿದ್ದು. ಯಾಕಂದ್ರೆ ಆ ಸಮಯಕ್ಕೆ ಅಲ್ಲಿ ಡೈರಿಯ ಮ್ಯಾನೇಜರ್ ಮೂರ್ತಿ ಬಿಟ್ಟರೆ ಯಾರು ಇರುತ್ತಿರಲಿಲ್ಲ. ಆದರೆ ಡೈರಿಯ ಹಾಲಿನ ಕಲೆಕ್ಷನ್ ವಾಹನ ಸಮಯಕ್ಕ್ಕೆ ಸರಿಯಾಗಿ ಬರುತ್ತಿದ್ದರಿಂದ ಎಷ್ಟೋ ಸಲ ತಡವಾಗಿ ದ್ಯಾವಮ್ಮ ಹಾಲು ತಗೊಂಡು ವಾಪಸ್  ಹೋಗಿದ್ದೂ ಉಂಟು. ಆಕೆಗೋ ಯಾವಾಗಲೂ ಒಂದು ಪ್ರಶ್ನೆ ಕಾಡುತಿತ್ತು. ನಾನು ತರೋ ಹಾಲನ್ನು ಬೇರೇನೇ ಇಡ್ತಾರೋ ಅಥವಾ ಎಲ್ಲ ಒಟ್ಟು ಸೇರಿಸ್ತಾರೋ ಅಂತ. ನನ್ನ ಹತ್ತಿರಾನೆ ಸುಳಿಯದವರು ನಾನು ತಂದಿರೋ ಹಾಲನ್ನು ಹೇಗೆ ಉಪಯೋಗಿಸ್ತಾರೆ? ಅದಕ್ಕೆ ಗರಿಕೆ ಅಥವಾ ಗಂಜಲ ಏನಾದ್ರು ಪ್ರೋಕ್ಷಣೆ ಮಾಡಿನೋ ಅಥವಾ ಅದನ್ನು ಕುದಿಸಿನೋ ಬಳಸಬಹುದೇನೋ. ಪ್ರಾಯಶ ಆಗ ಹಾಲಿಗಂಟಿಕೊಂಡ ಜಾತಿಯ ಶಾಪ ಬಿಟ್ಟು ಹೋಗಬಹುದು ಅಂದ್ಕೋತಾ ಇದ್ಲು ಮನಸ್ಸಲ್ಲಿ....

ಅವತ್ತು ಡೈರಿಯಿಂದ ಹೊರ ಬಂದ ಮೂರ್ತಿಗೆ ಅಲ್ಲೇ ಕುಳಿತಿದ್ದ ದ್ಯಾವಮ್ಮ ಕಾಣಿಸಿದಳು. ಜಾತಿಯಲ್ಲಿ ಬ್ರಾಹ್ಮಣನಾದರೋ ಅವನಿಗೆ ಆ ಮುದುಕಿಯ ಮೇಲೆ ಅದೇನೋ ಕನಿಕರ. ಪೇಟೆಯಲ್ಲಿ ದ್ಯಾವಮ್ಮನನ್ನು ಪ್ರೀತಿಯಿಂದ ಮಾತಾಡಿಸೋ ಬೆರಳೆಣಿಕೆ ಜನರಲ್ಲಿ ಅವನು ಒಬ್ಬ. ಡೈರಿಯಲ್ಲಿ ಹಲವಾರು ಜನರೊಂದಿಗೆ ಅವನು ವ್ಯವಹರಿಸುತ್ತಿದ್ದರಿಂದ ಚುನಾವಣೆ ಸಮಯದಲ್ಲಿ ಒಂದಿನ್ನೂರು ಓಟುಗಳ ಮೇಲೆ ಅವನ ಹಿಡಿತವಿತ್ತು. ಅದಕ್ಕೆ ರಾಜಕೀಯ ಪಕ್ಷಗಳ ಜೊತೆ ಅವನ ಒಡನಾಟವು ಚೆನ್ನಾಗಿತ್ತು.  ಅವಳನ್ನು ಅಲ್ಲಿ ನೋಡಿದ ಕೂಡಲೇ ಅವನಿಗೆ ಅವಳು ಅಲ್ಲಿ ಕೂತಿರೋ ಕಾರಣ ನೆನಪಾಯಿತು. ದ್ಯಾವಮ್ಮನ ಹಾಲಿನ ಸರಕಾರೀ ಪ್ರೋತ್ಸಾಹ ಧನ ಬರಬೇಕಿದ್ದುದು ಬಾಕಿ ಇತ್ತು. ಅದೇನಾದ್ರು ಬಂದ್ರೆ  ಕೊಟ್ಟಿಗೆ ಮಾಡಿಗೆ ಒಂದೆರಡು ಶೀಟ್ ಹಾಕಿಸಬೇಕೆಂದು ಅಂದ್ಕೊಂಡಿದ್ಲು. ಮಳೆಗಾಲದಲ್ಲಿ ಮಾಡು ಸೋರಿ ಹಸುಗಳು ನೀರಿಂದ ತೋಯ್ದು ಹೋಗ್ತಾ ಇದ್ವು. ದ್ಯಾವಮ್ಮನ್ನ  ನೋಡಿದವನೇ ಮೂರ್ತಿಯ ಮನಸ್ಸಿನಲ್ಲೇನೋ ಹೊಳೆಯಿತು. ಆಡಳಿತ ಪಕ್ಷದ ಶಾಸಕರೊಬ್ಬರು ಗ್ರಾಮ ವಾಸ್ತವ್ಯ ಹೂಡೋ ಕಾರ್ಯಕ್ರಮ ಶುರು ಮಾಡಿದ್ದಾರೆ, ಅದಕ್ಕೆ ಯಾರಾದರೂ ಬಡವರ ಮನೆ ತೋರಿಸೆಂದು ಚಿಗುರು ಮೀಸೆಯ ಕಾರ್ಯಕರ್ತನೊಬ್ಬ ಹೇಳಿದ್ದ. ಹಿಂದುಳಿದ ಜಾತಿಗೆ ಸೇರಿದ ಮನೆನೋ, ಗುಡಿಸಲೋ ಇದ್ರೆ ಇನ್ನೂ ಒಳ್ಳೆಯದೆಂದು ಬೇರೆ ಹೇಳಿದ್ದ. ದ್ಯಾವಮ್ಮನನ್ನು ನೋಡಿದ್ದೇ ಮೂರ್ತಿಗೆ ಇವಳ ಮನೆಯೇ ಸೂಕ್ತ ಎಂದೆನಿಸಿತ್ತು. ದ್ಯಾವಮ್ಮನಿಗೆ ವಿಷಯ ತಿಳಿಸುತ್ತಲೇ ನೀನು ಒಪ್ಪಿಕೊಂಡ್ರೆ ಒಳ್ಳೆಯದು, ಸ್ವಲ್ಪ ಕಾಸು ಕೊಟ್ಟರೂ ಕೊಡಬಹುದು, ಅದೂ ಅಲ್ದೆ ನೀನು ಇದರಲ್ಲಿ ಕಳೆದುಕೊಳ್ಳೋದು ಏನೂ ಇಲ್ಲ ಅಂದ. ದ್ಯಾವಮ್ಮನಿಗೋ ಇದು ಸುತಾರಾಂ ಇಷ್ಟ ಇರಲಿಲ್ಲ. ದೊಡ್ಡ ಮನುಷ್ಯರು ತನ್ನ ಗುಡಿಸಲಲ್ಲಿ ಬಂದು ಒಂದು ದಿನ ವಾಸ್ತವ್ಯ ಹೂಡ್ತಾರೆ ಅಂದ್ರೆ ಯಾಕೋ ಆಕೆಗೆ ಭಯ. ಅದೂ ಹೋಗಿ ಹೋಗಿ ಗುಡಿಸಲಲ್ಲಿ ಯಾಕೆ ಇರ್ಬೇಕು? ಗ್ರಾಮದ ಗೌಡರ ಮನೆ ರಾಜ ಬಂಗಲೆಯಂತಿದೆ, ಅಲ್ಲಿ ಯಾಕಿರಬಾರದು? ಈ ವೋಟುಗಳು, ರಾಜಕೀಯ ಲೆಕ್ಕಾಚಾರಗಳು ಆಕೆಗೆ ತಿಳಿದೇ ಇರಲಿಲ್ಲ. ಆಕೆಯ ಲೆಕ್ಕಾಚಾರ ಏನಿದ್ರೂ ಎರಡು ದನ, ನಾಲ್ಕು ಕೋಳಿಗಳಿಗಿಂತ ಮೇಲೆ ಯಾವತ್ತೂ ಹೋಗೇ ಇರಲಿಲ್ಲ.  ತಾನೇನಾದ್ರು ಒಪ್ಪಿಲ್ಲ ಅಂದ್ರೆ ನಾಳೆಯಿಂದ ಹಾಲು ತಗೋಳೋದನ್ನು ನಿಲ್ಲಿಸುತ್ತಾರೇನೋ ಅಂದ್ಕೊಂಡು ಮೂರ್ತಿಗೆ ಒಪ್ಪಿಗೆ ಸೂಚಿಸಿ ಭಾರವಾದ ಮನಸ್ಸಿಂದ ಮನೆ ಕಡೆ ಹೆಜ್ಜೆ ಹಾಕಿದಳು. ಸಂಜೆಯಾಗುತ್ತಿದ್ದಂತೆ ದ್ಯಾವಮ್ಮನ ಮನೆಗೆ ನಾಲ್ಕೈದು ಆಳುಗಳು ಬಂದರು. ಹೂವಿನ ಗಿಡ ಕಿತ್ತು ಹಾಕಲಾರಂಭಿಸಿದರು. ದ್ಯಾವಮ್ಮ ಕೇಳಿದರೆ ಅಂಗಳ ಸಣ್ಣದಾಯಿತು ಸ್ವಲ್ಪ ದೊಡ್ಡದು ಮಾಡೋಕೆ ಹೇಳಿದರೆ ಸಾಹೇಬ್ರು, ಕಾಸು ಕೊಡುತ್ತಾರಂತೆ ಆಮೇಲೆ ಅಂದ್ರು. ಮಟ್ಟವಾದ ಆ ಜಾಗದಲ್ಲಿ ಬಣ್ಣ ಬಣ್ಣದ ಹೂವಿನ ಕುಂಡಗಳು ಬಂದು ನಿಂತವು. ಗೋಡೆಗೆ ಬಣ್ಣ ಬಳೆಯಲು ಹೇಳಿದ್ದಾರೆ ಅಂದ್ಕೊಂಡು ಮೂರು ಜನ ಬಂದರು. ದ್ಯಾವಮ್ಮ ದನಗಳನ್ನು ಹಟ್ಟಿಗೆ ಹೊಡೆದುಕೊಂಡು ಬರೋವಷ್ಟರಲ್ಲಿ ಅಂಗಳದಲ್ಲಿ ಕರೆಂಟ್ ಕಂಬವೊಂದು ಬಂದಿತ್ತು. ಲೈನ್ ಮ್ಯಾನ್ ಶೇಷಪ್ಪ ಇದು ಭಾಗ್ಯಜ್ಯೋತಿ ಯೋಜನೆಯಡಿ ಕೊಡುತ್ತಿರೋ ಕನೆಕ್ಷನ್ ಇದಕ್ಕೆ ಬಿಲ್ ಪಾವತಿಯ ಅವಶ್ಯಕತೆ ಇಲ್ಲ, ನಾಳೆ ನಿಮಗೆ ಹಣ ಸಿಕ್ಕಿದ ನಂತರ ನಮ್ಮನ್ನು ಸ್ವಲ್ಪ ನೋಡಿಕೊಳ್ಳಿ ಅಂತಾ ಹಲ್ಕಿರಿದ.  ರಾತ್ರೆ ಯಾರೋ ಬಂದು ಲೈಟು, ಫ್ಯಾನು ಎಲ್ಲ ಹಾಕಿ ಹೋದರು. ಮೇಲೆ ತೂಗು ಹಾಕಿರೋ ಫ್ಯಾನು ತಲೆ ಮೇಲೆ ಬೀಳಬಹುದು ಅನ್ನೋ ಭಯದಿಂದ ರಾತ್ರೆ ದ್ಯಾವಮ್ಮ ಹೊರಗಡೆ ಮಲಗಿದಳು. ತನ್ನದೇ ಮನೆಯಲ್ಲಿ ತನ್ನ ಹಿಡಿತವೇ ಇಲ್ಲದೆ ನಡೆಯೋ ಕೆಲಸಗಳಿಗೆ ಆಕೆ ಮೂಕ ಪ್ರೇಕ್ಷಕಿಯಾಗಿದ್ದಳು , ತನ್ನದೇ ಮನೆಯಲ್ಲಿ ಆಕೆ ಪರಕೀಯಳಾಗಿದ್ದಳು !!!!

ಮಾರನೇ ದಿನ ಬೆಳಗ್ಗೆನೇ ಗೌಡ್ರು ಬಂದರು. ಮನೆ ಒಳಗೆ ನೋಡಿದವರೇ ಆಳು ತಿಮ್ಮನ ಕರೆದು ನೋಡಪ್ಪ ಇಲ್ಲಿ ಪಾತ್ರಗೆಳೇನು ಇಲ್ಲ, ಮನೆಗೆ ಹೋಗಿ ಸ್ವಲ್ಪ ಪಾತ್ರೆ ಪಗಡಿ, ಸಾಹೇಬ್ರಿಗೆ ಮಲಗೋಕೆ ಮಂಚ,  ಹೊದೆಯೋಕೆ ಬೆಡ್ ಶೀಟುಗಳು ಎಲ್ಲ  ತಂದು ಇಲ್ಲಿಡು, ಸಾಹೇಬ್ರು ಬಂದು ಹೋದ ಮೇಲೆ ವಾಪಸ್ ತೆಗೆದುಕೊಂಡು ಹೋದ್ರಾಯ್ತು ಅಂದ್ರು. ಹಾಗೆ ದ್ಯಾವಮ್ಮನ ಕಡೆಗೆ ತಿರುಗಿದವರು ನೋಡು ಸಾಹೆಬ್ರಿಗೆ ಮುದ್ದೆ, ಕೋಳಿ ಸಾರು, ಅನ್ನ ಪಲ್ಯ ಎಲ್ಲ ಮಾಡಿ ಹಾಕು. ಹೇಗಿದ್ರು ಹಣ ಸಿಗುತ್ತೆ ಅಂದ್ರು. ಹಣ ಕೊಡೋರು ಯಾರು, ಯಾಕೆ ಕೊಡ್ತಾರೆ ಅಂತ ಮಾತ್ರ ದ್ಯಾವಮ್ಮಗೆ ಗೊತ್ತಿರಲಿಲ್ಲ ಕೇಳೋ ಧೈರ್ಯವೂ ಇರಲಿಲ್ಲ. ಸ್ವಲ್ಪ ಹೊತ್ತಿಗೆ ತಿಮ್ಮ ಬಂದ. ಪಾತ್ರೆ, ಚಮಚಗಳು, ಮಂಚ, ಹೊದಿಕೆ ಎಲ್ಲ ಬಂತು . ಎಲ್ಲವನ್ನು ಲೆಕ್ಕ ಮಾಡಿ ತಿಮ್ಮನ ಕೈಲಿ ಹೇಳಿ ಕಳಿಸಿದ್ದರು ಗೌಡತಿ. ಸಂಜೆಯಷ್ಟರಲ್ಲಿ ಶಾಸಕರು ಬಂದೆ ಬಿಟ್ಟಿದ್ದರು. ದೊಡ್ಡವರು ಬರ್ತಾರೆ ಅಂತ ದ್ಯಾವಮ್ಮ ತನ್ನ ಪೆಟ್ಟಿಗೆಯಿಂದ ಸೀರೆಯೊಂದನ್ನು ತೆಗೆದು ಉಟ್ಟಿದ್ದಳು. ಅವಳಲ್ಲಿ ತೂತಿಲ್ಲದೆ ಇದ್ದ ಸೀರೆಯೆಂದರೆ ಅದೊಂದೇ. ಶಾಸಕರ ಜೊತೆ  ಪತ್ರಕರ್ತರು ಕಾರ್ಯಕರ್ತರು ಊರಿನ ಮಹಾಜನರ ದಂಡೇ ಬಂದಿತ್ತು. ಹೊಸದಾಗಿ ಗೌಡ್ರ ಮನೆಯಿಂದ ತಂದ ಕುರ್ಚಿಗಳ ಮೇಲೆ ಕುಳಿತು ಚರ್ಚೆ ಸಾಗಿತ್ತು. ಊರಿಗೆ ಹೊಸ ರಸ್ತೆ, ಒಂದು ಆಸ್ಪತ್ರೆ,  ಬಸ್ ವ್ಯವಸ್ಥೆಗಳು ಬೇಕೆಂದು ಗೌಡ್ರು ಕೇಳಿಕೊಂಡ್ರು.  ರಾತ್ರೆ ಆಗಿತ್ತು ಸರಿ ಇನ್ನು ಊಟ ಬಡಿಸು ಅಂದ್ರು ಗೌಡ್ರು. ದ್ಯಾವಮ್ಮ ಇನ್ನೇನ್ನು ಬಡಿಸಬೇಕು ಅನ್ನೋವಷ್ಟರಲ್ಲಿ ಯಾರೋ ಆ ಮುದುಕಿಗೆ ಹಳೇ ಸೀರೆ ಹಾಕೋಳಕ್ಕೆ ಹೇಳಿ, ಆಗ್ಲೇ ಬಡವರ ಮನೆ ವಾಸ್ತವ್ಯ ಅನ್ನಿಸೋದು, ಇಲ್ಲ ಅಂದ್ರೆ ಎಲ್ಲ ನಾಟಕ ಅಂತಾರೆ ವಿರೋಧ ಪಕ್ಷದವರು ಅಂದ್ರು. ಸರಿ ದ್ಯಾವಮ್ಮ ಹರಿದಿರೋ ಸೀರೆ ಉಟ್ಟುಕೊಂಡು ಬಡಿಸಿದಳು. ಸಾಹೇಬರ ಊಟ ಆಯ್ತು. ಆಮೇಲೆ ಫೋಟೋ ಬೇರೆ ತೆಗೆದಾಯ್ತು. ಎಲ್ಲದರಲ್ಲೂ ಹರಕು ಸೀರೆ ದ್ಯಾವಮ್ಮ!!!... ಸರಿ ಎಲ್ಲ ಮುಗಿದು ಸಾಹೇಬರು ಮಲಗಿದರು. ಬೆಳಗಿನ ನಿತ್ಯಕರ್ಮಗಳಿಗೆ  ಆ ಮನೆಯಲ್ಲಿ ಅನುಕೂಲವಿಲ್ಲದ್ದರಿಂದ ಶಾಸಕರು ಗೌಡರ ಮನೆಗೆ ಹೋಗಿ ಎಲ್ಲ ಮುಗಿಸಿ ಉಪ್ಪಿಟ್ಟು ತಿಂದು ಟೀ ಕುಡಿದು ತೇಗಿದರು. ಅಷ್ಟು ಮುಗಿಸಿ ದ್ಯಾವಮ್ಮನ ಮನೆಗೆ ಬರುತ್ತಲೇ ಸಂದರ್ಶನದ ಸರದಿ. ಇಷ್ಟು ರುಚಿಕರ ಊಟ ನಾನು ತಿಂದೆ ಇರಲಿಲ್ಲ, ಎಷ್ಟೋ ದಿನಗಳ ಬಳಿಕ ನೆಮ್ಮದಿಯ ನಿದ್ದೆ ಮಾಡಿದೆ ಅಂದರು. ಈ ಊರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೀಟಿಂಗ್ ಅಲ್ಲಿ  ಚರ್ಚಿಸುವುದಾಗಿ ಹೇಳಿದರು. ಟೀವಿಯಲ್ಲಿ ಅಂತೂ ಗೌರಮ್ಮ ನ ಬಗ್ಗೆನೇ ಮಾತುಕತೆ. ಅವಳ ಮನೆ, ಹಸುಗಳು, ಅವಳ ದಿನಚರಿ, ಮುಖ್ಯಮಂತ್ರಿ ಎಷ್ಟು ಗಂಟೆಗೆ ಹೋದ್ರು, ಏನು ತಿಂದ್ರು, ಸಾರಿಗೆ ಏನು ಹಾಕಿರಬಹುದು ಅಂತೆಲ್ಲ ಚರ್ಚೆ ನಡೆಯುತ್ತಿತ್ತು. ದ್ಯಾವಮ್ಮನನ್ನು ಸಾಕ್ಷಾತ್ ಅನ್ನಪೂರ್ಣೆಯ ಪ್ರತಿರೂಪ ಅನ್ನೋವಂತೆ ತೋರಿಸಿದ್ದರು. ಸಂದರ್ಶನ  ಮುಗಿಯುತ್ತಿದ್ದಂತೆ ಸಾಹೇಬರು ಹೊರಟರು . ದ್ಯಾವಮ್ಮನಿಗೆ ಬಗ್ಗಿ ನಮಸ್ಕರಿಸಿದವರೇ ಚೆಕ್ ಪುಸ್ತಕ ಎತ್ತಿಕೊಂಡು ಅದರಲ್ಲಿ ಹತ್ತು ಸಾವಿರ ಬರೆದರು. ಹೆಸರು ಬರೆಯಬೇಕಿತ್ತು ಎಷ್ಟು ನೆನಪಿಸಿಕೊಂಡರು ಅವರಿಗೆ ಪಕ್ಕದಲ್ಲೇ ಇದ್ದ ದ್ಯಾವಮ್ಮನ ಹೆಸರು ತಲೆಗೆ  ಹೊಳೆಯಲೇ ಇಲ್ಲ. ಅಲ್ಲೇ ಇದ್ದ ಕಾರ್ಯಕರ್ತ ನ ಕರೆದು ಕೇಳಿದರು ಈಕೆ ಹೆಸರೇನು ಚೆಕ್ ಬರೆಯಬೇಕು ಮಾರಾಯ ಅಂದರು. ಸಾರ್ ಅವ್ಳಿಗೆ ಅಕೌಂಟ್ ಎಲ್ಲಿದೆ ನನ್ನ  ಹೆಸರಿಗೆ ಬರೆಯಿರಿ ನಾನೇ ಡ್ರಾ ಮಾಡಿ ಆಕೆಗೆ ತಲುಪಿಸ್ತೀನಿ ಅಂದ ಆ ಕಾರ್ಯಕರ್ತ. ಚೆಕ್ ವಿತರಿಸಿದ ಫೋಟೋನೂ ಬಂತು. ಅದಾದ ಕೂಡ್ಲೇ ಕಾರ್ಯಕರ್ತ ಅವಳ ಕೈಯಿಂದ ಅದನ್ನ ತಗೊಂಡು ನಡೆದ. ಸಾಹೇಬ್ರು ಹೊರಟರು... ಅವರ ಹಿಂದೆ ಜನರ ದಂಡು ಹೊರಟಿತು. ದ್ಯಾವಮ್ಮನ ಮನೆ ಖಾಲಿಯಾಯಿತು....

ಅವರು ಹೋಗಿ ಸ್ವಲ್ಪ ಹೊತ್ತಿಗೆ ಗೌಡರ ಮನೆಯಿಂದ ತಿಮ್ಮ ಬಂದವನೇ ಮಂಚ ಬೆಡ್  ಶೀಟುಗಳೆಲ್ಲವನ್ನು ತಂದು ಹೊರಗಿಟ್ಟ. ಪಾತ್ರೆ ಜೋಡಿಸುತ್ತಿದ್ದಂತೆ ಲೆಕ್ಕಕ್ಕಿಂತ  ಒಂದು ಪಾತ್ರೆ  ಕಡಿಮೆ ಇದ್ದಿದ್ದು ಗಮನಕ್ಕೆ ಬಂತು. ಏನು ಮಾಡೋದು ತಿಳಿಯಲಿಲ್ಲ ಅವನಿಗೆ. ಅಲ್ಲೇ ಇದ್ದ ದ್ಯಾವಮ್ಮನ ಪಾತ್ರೆಗಳಲ್ಲಿ ಚೆನ್ನಾಗಿದ್ದ  ಒಂದನ್ನು ಸೇರಿಸಿಕೊಂಡ, ಲೆಕ್ಕ ಸರಿಯಾಯಿಯ್ತು. ಗೌಡತಿಗೆ ಲೆಕ್ಕ ಮಾತ್ರ ಬೇಕು, ಪಾತ್ರೆ ಯಾವುದು ಅನ್ನೋದು ಗೊತ್ತಾಗದು ಅಂದುಕೊಂಡು ಎಲ್ಲವನ್ನು ಹೊತ್ತುಕೊಂಡು ಹೊರಟ. ಆ ಪಾತ್ರಗಳಲ್ಲಿ ಒಂದು ತನ್ನದು ಅಂತ ಗೊತ್ತಿದ್ರು ಹೇಳೋಕೆ ಧೈರ್ಯ ಬರಲಿಲ್ಲ ದ್ಯಾವಮ್ಮನಿಗೆ. ಸ್ವಲ್ಪ ಹೊತ್ತಿಗೆ  ಪೈಂಟರ್ ಗಳು ಬಂದು ಪೇಂಟಿಂಗ್ ಖರ್ಚು ಎರಡುವರೆ  ಸಾವಿರ ಆಗಿದೆ, ನಿಮ್ಮತ್ರ ತಗೋಳೋಕೆ ಹೇಳಿದ್ದಾರೆ ಅಂದ್ರು.ನನ್ನ ಹತ್ರ ದುಡ್ಡಿಲ್ಲ ಯಾರು ನಂಗೆ ದುಡ್ಡು ಕೊಟ್ಟಿಲ್ಲ ಅಂದ್ಲು,  ಆದರೆ ನಂಬೋರ್ಯಾರು? ಚೆಕ್ ತಗೊಂಡ ದ್ಯಾವಮ್ಮನ ಫೋಟೋ ಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಗಿತ್ತು. ಮುದುಕಿ ನಾಟಕ ಅಡ್ತ ಇದಾಳೆ ಕಣೋ, ನಾಳೆ ಇವ್ಳು ಹಣ ಕೊಟ್ಟಿಲ್ಲ ಅಂದ್ರೆ ಕೊಟ್ಟಿಗೆಯಲ್ಲಿರೋ ದನ ತಗೊಂಡು ಹೋಗೋಣ ಅಂತ ಸಿಟ್ಟನಿಂದ ಹೇಳಿ ಹೋದ್ರು. ಮತ್ತೊಬ್ಬ ಬಂದು ಈ ಫ್ಯಾನ್ ನಮ್ ಮನೇದು, ಗೌಡ್ರು ಇಲ್ಲಿ ಹಾಕಕ್ಕೆ ಹೇಳಿದ್ರು, ಈಗ ತಗೊಂಡ್ ಹೋಗ್ತಾ ಇದ್ದೀನಿ ಅಂತ ಹೇಳಿ ಅದರ ಡಬ್ಬ ಸಮೇತ ತಗೊಂಡು ಹೋದ. ಪಾರ್ಟಿ ಆಫೀಸಿಂದ ಬಂದ  ಆ ಫ್ಯಾನ್ ಒಳಗೆ ವಾರಂಟಿ ಕಾರ್ಡ್, ಬಿಲ್ಲು ಹಾಗೆ ಇತ್ತು. ಪೈಂಟರ್ ಗೆ ಹಣ ಹೇಗೆ ಹೊಂದಿಸೋದು ಅಂತ ಯೋಚ್ನೆ ಮಾಡ್ತಾ  ದ್ಯಾವಮ್ಮ ನನ್ನು ದೊಪ್ಪ್ ಅನ್ನೋ ಸದ್ದು ಎಚ್ಚರಿಸಿತ್ತು. ಅಂಗಳಕ್ಕೆ ಬಂದು ನಿಂತಿದ್ದ ದ್ಯಾವಮ್ಮನ ದನವೊಂದು ಮೈ ಮೇಲೆ ಕೂತಿದ್ದ ನೊಣ ಓಡಿಸಲು ತೋರಣ ಕಟ್ಟಿದ್ದ ಬಿದಿರಿಗೆ ಬೆನ್ನು ಉಜ್ಜಿ ಅದನ್ನು ಬೀಳಿಸಿತ್ತು. ಅದು ನೇರವಾಗಿ ಮನೆಗೆ ಕರೆಂಟ್ ಕೊಟ್ಟಿದ್ದ ತಂತಿಯ ಮೇಲೆ ಬಿದ್ದು ತಂತಿಯನ್ನು ತುಂಡರಿಸಿತ್ತು.  ಎರಡು  ದಿನಗಿಳಿಂದ ನಿರಂತರವಾಗಿ ಉರಿಯುತ್ತಿದ್ದ ಭಾಗ್ಯಜ್ಯೋತಿ ಅಲ್ಲಿಗೆ ನಿಂತಿತು!. ಅಷ್ಟರಲ್ಲಿ ಹೊತ್ತು ಕಂತಿತ್ತು. ದೀಪ ಹಚ್ಚಿದ ದ್ಯಾವಮ್ಮನಿಗೆ ಅಡಿಗೆ ಮಾಡಲು ಪಾತ್ರೆನೂ ಇರಲಿಲ್ಲ ಅಕ್ಕಿ ಅಂತೂ ಮೊದಲೇ ಮುಗಿದಿತ್ತು. ಡಬ್ಬದ ತಳದಲ್ಲಿದ್ದ ರಾಗಿ ಹಿಟ್ಟನ್ನು ತೆಗೆದು ಹಿಡಿ ಮುರಿದಿದ್ದ ಬಾಣಲಿ ಅಲ್ಲಿ ಬೇಯಿಸಿ ಕುಡಿದಳು. ಆಕೆಗಿದ್ದ ಒಂದೇ ನೆಮ್ಮದಿ ಅಂದ್ರೆ ಆಕೆ ಮಲಗುತ್ತಿದ್ದ ಜಾಗದ ಮೇಲೆ ಫ್ಯಾನ್ ಇರಲಿಲ್ಲ, ಆದ್ದರಿಂದ ಅದು ಕೆಳಗೆ ಬೀಳೋ ಭಯವು ಇರಲಿಲ್ಲ.

ಮರುದಿನ ಬೆಳಗ್ಗೆದ್ದ ದ್ಯಾವಮ್ಮಕೆಲಸದವರು ಕಿತ್ತು ಬಿಸಾಡಿದ್ದ ಹೂ ಗಿಡಗಳಲ್ಲಿ ಹಸಿರಾಗಿದ್ದ ಕೆಲವನ್ನುಆರಿಸಿ ಮತ್ತೆ ಒಪ್ಪವಾಗಿ ನೆಟ್ಟಳು. ಹಾಲು ಕರೆಯುವಾಗ ಡೈರಿಯಲ್ಲಿ ಮೂರ್ತಿ ಹತ್ತಿರ ಸಾಲ ಕೇಳಿ ನೋಡೋಣ ಅಂದುಕೊಂಡಳು.  ದನಗಳನ್ನು ಬಯಲಿಗಟ್ಟಿ ಹಾಲು ಹಿಡಿದು ಹೊರಟಳು. ಮೂರ್ತಿ ಇವಳ ದಾರಿಯನ್ನೇ ಕಾಯುತ್ತಿದ್ದಂತಿತ್ತು. ದ್ಯಾವಮ್ಮನನ್ನು ಕಂಡವನೇ ಕಿಸೆಯಿಂದ ೩ ಸಾವಿರ ತೆಗೆದು ಕೈಗಿತ್ತು ನಿನ್ನ ಪ್ರೋತ್ಸಾಹ ಧನ ಪಾಸ್ ಆಗಿದೆ, ಅದೂ ಲಂಚ ಕೊಡದೆ. ಎಲ್ಲ ಸಾಹೇಬರ ಗ್ರಾಮ ವಾಸ್ತವ್ಯದ ಮಹಿಮೆ ಅನ್ನುತ್ತ ಹಲ್ಕಿರಿದ. ದ್ಯಾವಮ್ಮನು ನಕ್ಕಳು, ಆದರೆ ಆ ನಗೆಯ ಹಿಂದಿನ ಮರ್ಮ ಆಕೆಗೆ ಮಾತ್ರ ತಿಳಿದಿತ್ತು. ಹಣ ಪಡೆದು ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟಳು,ದಾರಿಯಲ್ಲಿ ಸಿಕ್ಕಿದ ಪೈಂಟರ್ ಗೆ ಎರಡು ಸಾವಿರ ಕೊಟ್ಟಳು. ಮುದುಕಿ ಸುಮ್ನೆ ನಾಟಕ ಮಾಡಿದ್ಲು ನೋಡು ಈಗ ಹೇಗೆ ಬಂತು ಹಣ ಅಂತ ಗೊಣಗಿದ ಅವ್ನು.  ಸಂತೆಯಲ್ಲಿ ಐನೂರು ಕೊಟ್ಟು ಒಂದು ಪಾತ್ರೆ, ದನಗಳಿಗೆ ಹಿಂಡಿ, ಅಕ್ಕಿ  ತಗೊಂಡು ಮನೆ ಕಡೆ ಹೆಜ್ಜೆ ಹಾಕಿದ್ಲು ದ್ಯಾವಮ್ಮ. ಪೇಟೆಯಲ್ಲಿನ ಬಾರ್ ಗಿಜಿಗುಡುತ್ತಿತ್ತು ಹತ್ತು ಸಾವಿರ ಕ್ಯಾಶ್ ಮಾಡಿಸಿದ ಪುಣ್ಯಾತ್ಮನೊಬ್ಬ ಮಿತ್ರರಿಗೆ ಪಾರ್ಟಿ ಕೊಡಿಸುತ್ತಿದ್ದ. ....

---------------------------------------ಶ್ರೀ :-)--------------------------------------

Thursday, November 9, 2017

ತರಲೆ: ನೀರು.......2050

ತರಲೆ: ನೀರು.......2050: ನೀರು.......2050 ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ...

Monday, October 30, 2017

ನೀರು.......2050

ನೀರು.......2050


ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಸುಮಾರು 8 ಗಂಟೆಯ ಆಸು ಪಾಸಿಗೆ ಒಂದು ಬಿಂದಿಗೆ ನೀರು ಕೊಡುತ್ತಾರೆ. ಅದು ಗುರುತಿನ ಚೀಟಿ ತೋರಿಸಿದ್ರೆ ಮಾತ್ರ. ಅಪ್ಪಿ ತಪ್ಪಿ ಅದನ್ನ ಮರೆತಿದ್ದರೆ ಅವತ್ತು ಹನಿ ನೀರು ಕೂಡ ಸಿಗೋದಿಲ್ಲ. ಕಿಟಕಿಯಿಂದ ನೋಡಿದರೆ ಪಕ್ಕದ ಮನೆ  ರಮೇಶ ಒಂದು ಬಿಂದಿಗೆ ನೀರಿನ ಜೊತೆ ಬರುತ್ತಿದ್ದಾನೆ. ನನ್ನನ್ನು ನೋಡಿದವನೇ ಕುಹಕ ನಗೆ ಬೀರಿದ. ಪ್ರತಿದಿನ ಇಬ್ರು ಜೊತೆಗೇನೆ ಹೋಗ್ತಾ ಇದ್ವಿ. ಅವನೇ ಬಂದು ನನ್ನ ಎಬ್ಬಿಸೋನು. ನಿನ್ನೆ ನನ್ನ ಹಿಂದೆ ನಿಂತಿದ್ದ, ನನ್ನ ಕೊಡ ತುಂಬೋವಷ್ಟರಲ್ಲಿ ಬರೋವಷ್ಟರಲ್ಲಿ ನೀರು ನಿಂತು ಹೋಯ್ತು. ಅವ್ನಿಗೆ ನೀರೇ  ಸಿಕ್ಕಿಲ್ಲ ಅದ್ಕೇ ಇವತ್ತು ಒಬ್ನೇ ಹೋಗಿದ್ದಾನೆ ಬಡ್ಡಿ ಮಗ. ಹಾಳಾಗಿ ಹೋಗ್ಲಿ ಇವತ್ತು ಬ್ಲಾಕ್ ಅಲ್ಲಿ ಒಂದು ಬಿಂದಿಗೆ ನೀರು ತಗೋಬೇಕು ಅಷ್ಟೇ . 

ಸರಿ ಹಲ್ಲು ಸ್ಯಾನಿಟೈಸ್ ಮಾಡೋಣ ಅಂತ ಮೌತ್  ಸ್ಯಾನಿಟೈಸರ್ ತೆಗೆದೆ. ನನ್ನ ಅಪ್ಪನ ಕಾಲದಲ್ಲಿ ಪೇಸ್ಟ್  ಅಂತೇನೋ ಬರುತ್ತಿತ್ತಂತೆ. ಜನರು ಬ್ರಷ್  ಅನ್ನೋದರ ಮೇಲೆ ಪೇಸ್ಟ್ ಅನ್ನೋದನ್ನು ಹಾಕಿ ಗಂಟೆಗಟ್ಟಲೆ ಹಲ್ಲನ್ನು ಉಜ್ಜುತ್ತಿದ್ದರಂತೆ. ಸರಿ ಸುಮಾರು 10-15 ನಿಮಿಷ ನೀರನ್ನು ಪೋಲು ಮಾಡುತ್ತಿದ್ದರಂತೆ. ಅದಕ್ಕೆ ಈಗ ನಮಗೆ ಈ ಗತಿ  ಬಂದಿರೋದು. ಈಗಂತೂ ನಾವು ಈ ಹಾಳು ಅಭ್ಯಾಸ ನಿಲ್ಲಿಸಿದ್ದೀವಿ. ಮೌತ್ ಸ್ಯಾನಿಟೈಸರ್ ಹಾಕಿ ಒಮ್ಮೆ ಬಾಯಿ ಮುಕ್ಕಳಿಸಿದರೆ ಮುಗಿದೋಯ್ತು ಒಂದು  ನಿಮಿಷಕ್ಕೆ ಕೆಲಸ ಮುಗೀತು.  ಸಾನಿಟೈಸರ್ ಬೆಲೆ  200 ರೂಪಾಯಿ ಮಾತ್ರ, ಆದ್ರೆ ಒಂದು ಲೀಟರ್ ನೀರಿನ ಬೆಲೆ ಅದರ ಇಪ್ಪತ್ತು ಪಟ್ಟು. ಸ್ನಾನಕ್ಕೆ ಕೂಡ ಅಷ್ಟೇ. ಮುಂಚೆ ಅದೇನೋ Shower  ಅಂತ ಇತ್ತಂತೆ. ಜನರು ಗಂಟೆಗಟ್ಟಲೆ ಅದರ ಕೆಳಗೆ ನಿಂತು ನೀರು ಪೋಲು ಮಾಡ್ತಾ ಇದ್ದರಂತೆ. You Tube ನಲ್ಲಿ ಆ ವೀಡಿಯೋಗಳನ್ನ ನೋಡಿದರೆ, ಆಗ ಒಬ್ಬರು ಸ್ನಾನ ಮಾಡಲು ಬಳಸ್ತಾ ಇದ್ದ ನೀರಿನಲ್ಲಿ ಈಗ 10-15 ಜನ ಸ್ನಾನ ಮಾಡಬಹುದಿತ್ತೇನೋ. ಈಗ ಅಂತೂ ನಾವು ವೇಪರೈಸರ್ ಟೆಕ್ನಾಲಜಿ ನ ಬಳಸ್ತೀವಿ. ಇದು ನೀರಿನ ಅತ್ಯಂತ ಸಣ್ಣ ಕಣಗಳನ್ನ ಮೈ ಮೇಲೆ ಸ್ಪ್ರೇ ಮಾಡುತ್ತೆ. 5 ನಿಮಿಷಕ್ಕಿಂತ ಜಾಸ್ತಿ ಹೊತ್ತು ಬಾತ್ ರೂಮಿನಲ್ಲಿ  ಇದ್ದರೆ ಅಲಾರಾಂ ಆಗುತ್ತೆ . ಅಪ್ಪಿ ತಪ್ಪಿ ವಾರಕ್ಕೆ ಎರಡಕ್ಕಿಂತ ಜಾಸ್ತಿ ಅಲಾರಾಂ  ಅದರೆ ಅದು ಕ್ರಿಮಿನಲ್ ಕೇಸ್. ನೀರಿನ ದುಂದು  ವೆಚ್ಚ ಮತ್ತು ಕೊಲೆ ಯತ್ನ ಎರಡಕ್ಕೂ ಈಗ ಒಂದೇ ತರದ ದಂಡನೆಯನ್ನು ಸರಕಾರ ಕಾಯಿದೆ ರೂಪದಲ್ಲಿ ತಂದಿದೆ. ಮುಂಚೆ ನೀರು ಸರಬರಾಜು ಮಾಡ್ತಾ ಇದ್ದ ಪೈಪ್ ಲೈನ್ ಗಳು ಈಗ ಅಡುಗೆ ಅನಿಲ ಪೂರೈಕೆಗೆ  ಬಳಸಲಾಗುತ್ತಿದೆ. 

ಮುಂಚೆ  ಕಂಪೆನಿಯ ಷೇರುಗಳನ್ನು ಅಲ್ಲಿ ಕೆಲಸ ಮಾಡೋರಿಗೆ ಕೊಡುತ್ತಿದ್ದರಂತೆ, ಈಗೇನಿದ್ರೂ ನಾವು ಸಂಬಳದ ಒಂದು ಭಾಗವನ್ನು ನೀರಿನಲ್ಲಿ ತಗೊಳುತ್ತೀವಿ. ಇದು ನಮಗೆ ಒಂತರ ಡಬಲ್ ಬೆನಿಫಿಟ್. ಯಾಕಂದ್ರೆ ನೀರಿನ  ಸಂಬಳಕ್ಕೆ  ಟ್ಯಾಕ್ಸ್ ಇರೋದಿಲ್ಲ. ಹಾಗು ಕಂಪೆನಿ ಕೊಡೋ ನೀರಿನ ದರ ಹೊರಗಡೆ ಮಾರ್ಕೆಟ್  ದರಕ್ಕೆ ಹೋಲಿಸಿದರೆ ತುಂಬಾನೇ ಕಮ್ಮಿ. ಅಂಟಾರ್ಟಿಕಾ ದಲ್ಲಿ ಈಗ bottling ಕಂಪನಿ ಶುರು ಮಾಡಿದ್ದಾರೆ. ಇಡೀ ಭೂಮಿಯಲ್ಲಿ ಯಥೇಚ್ಛ  ಶುದ್ಧ ನೀರು ದೊರೆಯುವ ಒಂದೇ ಒಂದು ಜಾಗ ಅಂದರೆ ಅದೊಂದೇ. ವಿಶ್ವದ ದೊಡ್ಡ ದೊಡ್ಡ ದೇಶಗಳಿಗೆ ಇಲ್ಲಿಂದ ನೀರನ್ನು ರಫ್ತು ಮಾಡ್ತಾರೆ. ಕರಾವಳಿ ತೀರದ ಪ್ರದೇಶಗಳಲ್ಲಿ ನೀರಿನ ಸ್ಥಿತಿ ಸ್ವಲ್ಪ ಪರವಾಗಿಲ್ಲ. ಅಲ್ಲಿ ಸಮುದ್ರದ ನೀರನ್ನು ಶುದ್ದೀಕರಿಸಿ ಕುಡಿಯುವ ನೀರಾಗಿ ಸರಬರಾಜು ಮಾಡ್ತಾರೆ. ಆದರೆ ಜನರ ದುರಾಸೆ ನೋಡಿ ಸರಕಾರ ಕೆಲವೇ ಕೆಲವು ಯೂನಿಟ್ ಗಳಿಗೆ ಪರವಾನಿಗೆ ನೀಡಿದೆ. ಅಂತರ್ಜಲವನ್ನು ಜನರು  ಖಾಲಿ ಮಾಡಿರೋ ರೀತಿ ನೋಡಿ ಸರಕಾರ ಪಾಠ ಕಲಿತಿದೆ.  ಆದರೂ ಅಕ್ರಮ ಶುದ್ದೀಕರಣ ಘಟಕಗಳು ತಲೆಯೆತ್ತಿ ನೀರಿನ ಮಾಫಿಯಾಗಳು ಬ್ರಹತ್ ಪ್ರಮಾಣದಲ್ಲಿ ಬೆಳೆದಿವೆ.  ಮುಂಚೆ ಇದ್ದ ಮರಳು ಮಾಫಿಯಾದ ಸಾವಿರ ಪಟ್ಟು ಈ ನೀರಿನ ಮಾಫಿಯಾ ಬೆಳೆದಿದೆ.

ಮಳೆ ಕೊಯ್ಲು ಈಗ ಕಡ್ಡಾಯ, ತಪ್ಪಿದರೆ ಅದು ಕ್ರಿಮಿನಲ್ ಅಪರಾಧ. ಎಲ್ಲ ಮನೆಗಳಲ್ಲಿ ನೀರು ಮರು  ಶುದ್ದ್ದೀಕರಣ ಘಟಕಗಳು ಇರಲೇಬೇಕು ಇಲ್ಲ ಅಂದ್ರೆ ಅವರಿಗೆ ಹತ್ತು ಪಟ್ಟು ತೆರಿಗೆ ಹಾಕ್ತಾರೆ,. ಅಂಗಡಿಗಳಲ್ಲಿ ನೀರಿನ ಬಾಟಲಿ ತಗೋಬೇಕು ಅಂದ್ರೆ ಆಧಾರ್ ಕಡ್ಡಾಯ. ಎಲ್ಲ ಗಣಕೀಕೃತ ಆಗಿರೋದರಿಂದ ಒಂದು ಆಧಾರ್ ನಂಬರ್ ಗೆ 250ml ಬಾಟಲಿ ಅಷ್ಟೇ ಸಿಗೋದು. ಬ್ಲಾಕ್ ಅಲ್ಲಿ ಅಂಗಡಿಯವರು ಆಗಾಗ ಯಾರದ್ದೋ ಆಧಾರ್ ಹೆಸರಿನಲ್ಲಿ ಗೋಲ್ ಮಾಲ್ ಮಾಡ್ತಾರೆ . ಸರಕಾರಕ್ಕೆ ಗೊತ್ತಾದ್ರೆ ಮಾತ್ರ ಅಂಗಡಿ ಮುಚ್ಚಿಸಿ  ಜೈಲ್ಗೆ ಹಾಕ್ತಾರೆ. ಚುನಾವಣೆಯಲ್ಲಿ ಈಗ ಹಣ ಹೆಂಡ ಯಾರು ಹಂಚುವವರಿಲ್ಲ, ಏನಿದ್ರೂ  ಬಾಟಲಿಗಟ್ಟಲೆ ನೀರು ಹಂಚುತ್ತಾರೆ ಅಷ್ಟೇ ಯಾಕಂದ್ರೆ ಅದಕ್ಕಿಂತ ಅಮೂಲ್ಯ ವಸ್ತು ಬೇರೆ ಏನು ಉಳಿದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀರಿದ್ದೆ ಕಾರುಬಾರು. ಒಂದು ಪಕ್ಷ ನಾವು ಪಾತಾಳದಿಂದ ನೀರು ತರಿಸಿಕೊಡ್ತೇವೆ ಅಂದರೆ ಮತ್ತೊಂದು ಪಕ್ಷದವರು ನಾವು ಅನ್ಯಗ್ರಹಗಳಿಂದ ಪೈಪ್ ಮುಖಾಂತರ ನೀರು ತರಿಸಿಕೊಡ್ತೇವೆ ಅಂತಾರೆ, ಆದರೆ ಪಾತಾಳದಲ್ಲಿ ಅಥವಾ ಅನ್ಯಗ್ರಹಗಳಲ್ಲಿ ನೀರು ಇದೆಯೇ ಅನ್ನೋದರ ಬಗ್ಗೆ ಅವರು ಯೋಚ್ನೆ ನೇ ಮಾಡಲ್ಲ. ಆಡಳಿತ ಸರಕಾರ ತಂದಿರೋ ನೀರು ಭಾಗ್ಯ ಅನ್ನೋ ಹೊಸ ಯೋಜನೆ ಸಾಕಷ್ಟು ಪ್ರಚಾರ ಪಡೆದಿದೆ. ಆದರೆ ಫಲಾನುಭವಿಗಳಿಗೆ ದೊರೆಯಬೇಕಾದ ನೀರಿನ ಬಾಟಲಿಗಳು ಮಾತ್ರ ಒಮ್ಮೊಮ್ಮೆ ದಾರಿ  ತಪ್ಪಿ ದಿನಸಿ ಅಂಗಡಿಗೆ ಹೋಗುತ್ತಿವೆ. ಅವಕ್ಕೆ ಸರಿಯಾದ ದಾರಿ ತೋರಿಸೋದು google map ಗು ದೊಡ್ಡ ಸವಾಲಾಗಿದೆ.

ಕಟ್ಟಿರೋ ಅಣೆಕಟ್ಟುಗಳನ್ನು ದೊಡ್ಡ ಕ್ರಿಕೆಟ್ ಗ್ರೌಂಡ್ ಆಗಿ ಪರಿವರ್ತಿಸಲಾಗಿದೆ. ಯಾಕಂದ್ರೆ ನದಿಯಲ್ಲಿ ನೀರು ಹರಿಯೋವಷ್ಟು ಮಳೆ ಬೀಳೋದೇ ಇಲ್ಲ. ಬಿದ್ದರು ಕೂಡಲೇ ಇಂಗಿ ಹೋಗುತ್ತೆ.  ಅಪ್ಪಿ ತಪ್ಪಿ ಮಳೆ  ಬಂದರೆ ನಾವು ಒಂದು ಹನಿಯು ಹಾಳಾಗದಂತೆ ಅದನ್ನು ಸಂಗ್ರಹಿಸಿ ಇಡುತ್ತೇವೆ. ಪ್ರಾಯಶ ಈ ಕೆಲಸ ನಮ್ಮಆ ಪೂರ್ವಜರು ಮಾಡಿದ್ದಾರೆ ನಮಗೆ ಈ ಗತಿ ಬರ್ತಾ ಇರಲಿಲ್ವೇನೋ. ಜಾಸ್ತಿ ನೀರು ಬಳಸುವ ಭತ್ತ, ಕಬ್ಬುಗಳನ್ನೂ ಸರಕಾರದ ಪರವಾನಿಗೆ ಇಲ್ಲದೆ ಬೆಳೆಯುವಂತಿಲ್ಲ. ನಮ್ಮ ಪೂರ್ವಜರು ಚಿನ್ನ ಬೆಳ್ಳಿ ಆಸ್ತಿ ಮನೆ ಅನ್ನೋದನ್ನು ಬಿಟ್ಟು ಈ ನೀರನ್ನು ಕಾಪಾಡಿದ್ದರೆ ಸಾಕಿತ್ತು, ಈ ಪೀಳಿಗೆಗೆ ಅದೇ ದೊಡ್ಡ ಆಸ್ತಿ ಆಗಿರೋದು. ಆದ್ರೆ ಕೆಟ್ಟ ಮೇಲೇ  ತಾನೇ ಬುದ್ದಿ ಬರೋದು. . ಕೋಕೋ ಕೋಲಾ ಪೆಪ್ಸಿ ಕಂಪೆನಿಗಳು ತಮ್ಮ ಕೋಲಾ ಗಳನ್ನು ನಿಲ್ಲಿಸಿ ಕೇವಲ ನೀರನ್ನು ಮಾತ್ರ ಮಾರಾಟ ಮಾಡ್ತಾ ಇದ್ದಾರೆ. ಅವರು ಸಮುದ್ರದ ನೀರಿಂದ ನೀರನ್ನು ಶುದ್ದೀಕರಿಸೋ ಪರ್ಮಿಟ್ ತಗೊಂಡಿದ್ದಾರೆ. ನೀರಿನ ಆಟಗಳನ್ನು ಒಳಗೊಂಡ Wonder La ಇತ್ಯಾದಿ Amusement ಪಾರ್ಕುಗಳು  ಈಗ ನೀರಿನ ಸಂರಕ್ಷಣೆಯ ವಿದಿ ವಿಧಾನಗಳನ್ನು ಸಂಗ್ರಹಿಸೋ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಮುಂಚೆ ಜನ ನೀರನ್ನು ಹೇಗೆ ಪೋಲು ಮಾಡ್ತಾ ಇದ್ರೂ ಅನ್ನೋದರ  ಸಾಕ್ಷ ಚಿತ್ರಗಳಿವೆ, ದುಮ್ಮಿಕ್ಕೋ ಜಲಪಾತ, ಉಕ್ಕಿ ಹರಿಯೋ ನದಿ, ಕಣ್ಣೆತ್ತಿ ನೋಡಿದಷ್ಟು ದೂರ ನೀರನ್ನು ತುಂಬಿಕೊಂಡ ಅಣೆಕಟ್ಟುಗಳ ಚಿತ್ರಗಳು ವೀಡಿಯೋಗಳು ಇಲ್ಲಿ ಲಭ್ಯ ಇವೆ. Amusement ಪಾರ್ಕುಗಳ ಗತವೈಭವದ ಚಿತ್ರಗಳು ಕೂಡ  ಇಲ್ಲಿವೆ.  ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಇವು ತುಂಬಾ ಅನುಕೂಲವಾಗಿವೆ.

ಒಮ್ಮೊಮ್ಮೆ ಅನಿಸುತ್ತೆ ಹಳೇ  ಮೂವೀಗಳಲ್ಲಿ ತೋರಿಸೋ ಹಾಗೆ ಜಲಪ್ರಳಯ ಆಗಿದ್ರೆ ಚೆನ್ನಾಗಿರೋದು.... ಈ ಜೀವಮಾನದಲ್ಲಿ ಮತ್ತೊಮ್ಮೆ ಹರಿಯೋ ನೀರನ್ನು ನೋಡುವ ಆಸೆ...  ಅದರಲ್ಲಿ ಆಡುವ ಆಸೆ... ಅದರಲ್ಲಿ ಮುಳುಗೇಳುವ  ಆಸೆ .... ಬದುಕಿದ್ದರೆ ಅದನ್ನು ಕೊನೆವರೆಗೂ ಉಳಿಸುವ ಆಸೆ  .......


---ಶ್ರೀ :-)














Monday, April 25, 2016

ದ್ವಂದ್ವ.....



ದ್ವಂದ್ವ.....


ಪಕ್ಕದ ಮನೆ ಕೊಟ್ಟಿಗೆಯಲ್ಲಿ ಯಾಕೋ ಕರುವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿ ತ್ತು . ಏನನ್ನೋ ನೋಡಿ ಅದು ಭಯ ಪಟ್ಟ ಹಾಗಿತ್ತು. ಅಷ್ಟರಲ್ಲಿ ಪಕ್ಕದ್ಮನೆ ಮಾದ ಓಡೋಡಿ ಗೌಡ್ರ ಮನೆಗೆ ಬಂದ. ಗೌಡ್ರೆ ಹುಲಿ ಮತ್ತೆ ಬಂದೈತೆ ಹಟ್ಟಿಗೆ, ಬೇಗ ಕೋವಿ ತಗೊಂಡು ಬನ್ನಿ ಅಂದ. ಗೋಡೆಯಲ್ಲಿ ನೇತು ಹಾಕಿದ್ದ ಕೋವಿ ಎತ್ತಿ ಸರ ಸರನೆ ಮಾದನ ಹಟ್ಟಿಗೆ ಹೊರಟರು ಗೌಡ್ರು. ಹಟ್ಟಿಯೊಳಗೆ ಇಣುಕಿ ನೋಡಿದರೆ ಹುಲಿ ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಎಳೆಯುತ್ತಾ ಇತ್ತು. ಕರುವನ್ನು ಕಟ್ಟಿ ಹಾಕಿದ್ದರಿಂದ ಅದನ್ನು ಎಳೆದುಕೊಂಡು ಹೋಗೋದು ಹುಲಿಗೆ ಸಾಧ್ಯವಾಗಿರಲಿಲ್ಲ.. ಕೋವಿ ಎತ್ತಿ ಹುಲಿಗೆ ಗುರಿ ಇಟ್ಟರು ಗೌಡ್ರು. ಡಂ ಡಂ ಎಂದು ಸಿಡಿಯಿತು ಗುಂಡು. ಮರುಕ್ಷಣ ಹುಲಿ ಅಲ್ಲಿಂದ ಹಟ್ಟಿ ಗೋಡೆ ಮೇಲೆ ನೆಗೆದು ಓಡಿ ಹೋಯಿತು. ಆದರೆ ಗೌಡ್ರು ಹೊಡೆದ ಒಂದು ಗುಂಡೂ ಕೂಡ ಹುಲಿಗೆ ತಾಗಿರಲಿಲ್ಲ. ಎರಡು ಗುಂಡುಗಳು ಗುರಿ ತಪ್ಪಿ ಗೋಡೆಗೆ ಹೊಡೆದಿದ್ದನ್ನು ಸ್ಪಷ್ಟವಾಗಿ ನೋಡಿದ್ದರು ಗೌಡರು. ಆದರೂ ಹುಲಿ ಓಡಿದ್ದು ಯಾಕೆ ಅಂತ ಗೌಡ್ರು ಯೋಚಿಸುತ್ತ ಇರುವಷ್ಟರಲ್ಲಿ ಗುಂಡಿನ ಸದ್ದು ಕೇಳಿದ ಮಾದ ಹಟ್ಟಿಯೊಳಗೆ ಬಂದ. ಹುಲಿ ಪರಾರಿಯಾಗಿತ್ತು. ಕರುವಿನ ಗಂಟಲಲ್ಲಿ ಹುಲಿಯ ಹಲ್ಲಿನ ಗುರುತು ಬಿಟ್ಟರೆ ಬೇರೆ ಏನು ಜಾಸ್ತಿ ಏಟಾಗಿರಲಿಲ್ಲ. ಕರುವಿನ ಗಂಟಲಿಂದ ಹರಿದ ನೆತ್ತರ ಬಿಂದುಗಳು ಹಟ್ಟಿಯೊಳಗೆ ಅಲ್ಲಲ್ಲಿ ಕಾಣುತ್ತಿತ್ತು.  ಅದನ್ನು ನೋಡಿದ ಮಾದ ಅಂತು ಗೌಡ್ರು ಹೊಡೆದ ಗುಂಡುಗಳು ಹುಲಿಗೆ ಸರಿಯಾಗೇ ನಾಟಿವೆ. ಇವತ್ತೋ ನಾಳೆನೋ ಹುಲಿ ಸಾಯೋದು ಗ್ಯಾರಂಟೀ ಅಂತ ಅಕ್ಕ ಪಕ್ಕದ ಮನೆಯವರಿಗೆಲ್ಲ ಹೇಳಿ ಬಿಟ್ಟ. ತಾನು ಹೊಡೆದ ಯಾವ ಗುಂಡೂ ಹುಲಿಗೆ ತಾಗಿಲ್ಲ ಅಂತ ಗೊತ್ತಿದ್ರು ಗೌಡ್ರು ಸುಮ್ನಿದ್ರು. ಬಿಟ್ಟಿ ಪ್ರಚಾರ ಯಾರಿಗೆ ಬೇಡ. ಅಪ್ಪಿ ತಪ್ಪಿ ಮುಂದೆ ಯಾವತ್ತಾದ್ರು ದಾಳಿ ಮಾಡಿದರೆ ಅಮೇಲೆ ನೋಡಿಕೊಳ್ಳೋಣ ಅಂತ ಸುಮ್ನಿದ್ರು ಗೌಡ್ರು. ಮಾರನೇ ದಿನ ಬೆಳಗಾಗೋದ್ರೊಳಗೆ ಗೌಡ್ರು ಹುಲಿ ಕೊಂದ ಸುದ್ದಿ ಊರಿಡೀ ಹರಡಿತು, ಗೌಡ್ರ ಶೌರ್ಯದ ಕತೆ ಊರ ಜನರ ಬಾಯಲ್ಲೆಲ್ಲ. ಗೌಡರಿಗೆ ಮಾತ್ರ ಗುಂಡು ತಗಲದೇ  ಹುಲಿ ಓಡಿದ್ಯಾಕೆ ಅನ್ನೋದು ಮಾತ್ರ ಅರ್ಥ ಆಗ್ಲೇ ಇಲ್ಲ.. ಇಷ್ಟಕ್ಕೂ ಗೌಡ್ರು ಅಬ್ಬಬ್ಬಾ ಅಂದ್ರೆ ಒಂದೆರಡು ಸಲ ಕೋವಿ ಚಲಾಯಿಸಿರಬಹುದೇನೋ. ಅವರಿಗದು ದೊರಕಿದ್ದು ಕೂಡ ಆಕಸ್ಮಿಕ. ನಕ್ಸಲ್ ನಿಗ್ರಹ ಪಡೆಯವರು ನಕ್ಸಲ್ ಗುಂಪೊಂದರ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸರಿಗೆ ದೊರಕಿದ್ದ ಕೋವಿ ಅದು. ಸರಕಾರಕ್ಕೆ ಲೆಕ್ಕ ಕೊಡದೆ ಪೋಲಿಸ್ ಪಡೆಯಲ್ಲಿದ್ದ ಸಂಬಂದಿಯೊಬ್ಬ ಅದನ್ನು ಇವರಿಗೆ ಕೊಟ್ಟಿದ್ದ. ಇವರೋ ನಮ್ಮ ತಾತ ಈ ಬಂದೂಕಿಂದ ಅದೆಷ್ಟೋ ಹುಲಿ ಜಿಂಕೆಗಳನ್ನು ಬೇಟೆ ಆಡಿದ್ದರು ಆ ಕಾಲದಲ್ಲಿ  ಅಂತ ಬಿಲ್ಡ್ ಅಪ್ ತಗೊಂಡಿದ್ರು. ವಾಸ್ತವದಲ್ಲಿ ಅಟ್ಟಿಸಿಕೊಂಡು ಬಂದರೆ  ಒಂದು ನಾಯನ್ನು ಓಡಿಸೋವಷ್ಟು ಎದೆಗಾರಿಕೆ ಇಲ್ದೇ ಇದ್ರೂ ಗೌಡ್ರು ಮುಂಚೆ ಬೇಟೆಗೆ ಹೋಗ್ತಾ ಇದ್ರಂತೆ, ಅದೆಷ್ಟೋ ಹುಲಿ ಚಿರತೆಗಳನ್ನು ಕೊಂದಿದ್ದರಂತೆ ಅಂತ ಗ್ರಾಮಸ್ತರ ಬಾಯಲ್ಲಿ ಫೇಮಸ್ ಆಗಿದ್ದರು. 


 ಮಾರನೇ ದಿನ ಅದೆಷ್ಟೋ ಜಾನುವಾರುಗಳನ್ನು ಬಲಿ ಪಡೆದು ಅಮಾಯಕ ಗ್ರಾಮಸ್ತರ ನಿದ್ದೆ ಹಾಳು ಮಾಡಿದ ಆ ವ್ಯಾಘ್ರ ವ  ಕೊಂದ ಗೌಡರಿಗೆ ಸನ್ಮಾನ ಮಾಡಬೇಕು ಅಂತ ಊರ ಯುವಕ ಸಂಘದಲ್ಲಿ ನಿರ್ದಾರವಾಯ್ತು. ಪಂಚಾಯ್ತಿ ಕಡೆಯಿಂದ ನಡೆಯೋ ಗ್ರಾಮಸಭೆಗೂ ಮುಂಚೆ ಸನ್ಮಾನ ಸಮಾರಂಭವನ್ನು ಊರ ಶಾಲೆಯಲ್ಲಿ ಇಟ್ಟುಕೊಂಡಿದ್ದಾರೆ ಹಾಗು ನೀವು ಬರಬೇಕು ಅಂತ ಗೌಡರಿಗೆ ಸಂದೇಶವು ಬಂತು. ಗೌಡರಿಗಂತು ಖುಶಿಯೋ ಖುಷಿ. ಮುಂದಿನ ಬಾರಿ ಚುನಾವಣೆಗೆ ಸ್ಪರ್ದಿಸಬೇಕು ಅಂದುಕೊಂಡಿದ್ದ ಅವರಿಗೆ ಇದೊಂದು ಸುವರ್ಣಾವಕಾಶವಾಗಿ ಕಂಡು ಕೂಡಲೇ ಒಪ್ಪಿ ಬಿಟ್ಟರು. 

ಆದರೆ ಸಂಜೆಯ ವೇಳೆಗೆ  ಮಾದ ತಂದ ಸುದ್ದಿ ಗೌಡ್ರ ನೆಮ್ಮದಿಯನ್ನೇ ಹಾಳು ಮಾಡಿತ್ತು. ಘಾಟಿಯ ಬಳಿಯಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿಂದ ಕೊಂಚ ದೂರದಲ್ಲಿ ಹುಲಿಯೊಂದು ಸತ್ತಿದೆ. ಅದರ ಮೈಮೇಲೆ ಗುಂಡಿನ ಏಟುಗಳಿವೆ. ಅದು ನೀವು ಗುಂಡು ಹೊಡೆದ ಹುಲಿನೇ, ಸಂಶಯವೇ ಇಲ್ಲ. ನಾನು ಈಗ ತಾನೇ ನೋಡಿ ಬಂದೆ ಅಂದಿದ್ದ ಮಾದ. ಈಗ ಗೌಡ್ರ ಮನಸ್ಸು ಗೊಂದಲದ ಗೂಡಾಗಿತ್ತು. ನನ್ನ ಕೋವಿಯ ಗುಂಡು ಹುಲಿಗೆ ತಾಗೆ ಇಲ್ಲ ಇನ್ನು ಸಾಯೊದು ಹೇಗೆ? ಬಹುಶ ಆ ಹುಲಿನೇ ಬೇರೆ ಈ ಹುಲಿನೇ ಬೇರೆ. ಆದರೂ  ಗುಂಡೇ ತಾಗದೆ ಹುಲಿ ಹಟ್ಟಿಯಿಂದ ಓಡಿದ್ದಾದರು ಯಾಕೆ? ಇಲ್ಲಿ ಬರೋ ಮುಂಚೆನೇ ಏನಾದರು ಅದಕ್ಕೆ ಗುಂಡು ತಗುಲಿತ್ತೋ ಏನೋ . ಪ್ರಾಯಶ ಅದಕ್ಕೆ ಇರಬಹುದು ಅದಕ್ಕೆ ಕರುವನ್ನು ಎಳೆದು ಕೊಂಡು ಹೋಗೋಕ್ಕೆ ಸಾಧ್ಯವಾಗಿಲ್ಲ. ಅದಕ್ಕೆಮತ್ತೆ ನಾನು ಗುಂಡು ಹಾರಿಸಿದಾಗ ಗುಂಡಿನ ಶಬ್ದ ಕೇಳಿ ಭಯಪಟ್ಟು ಓಡಿರಬಹುದು. ಈಗ ಅರಣ್ಯ ಇಲಾಖೆಯ ಅಧಿಕಾರಿಗಳೇನಾದ್ರು ಹುಲಿಯ ಸಾವಿನ ತನಿಖೆ ಆರಂಬಿಸಿದರೆ ನನಗೆ ಆಪತ್ತು. ನಮ್ಮ ಗೌಡರೇ ಹುಲೀನ ಕೊಂದಿದ್ದು ಅಂತ ಹೆಮ್ಮೆಯಿಂದ ಗ್ರಾಮಸ್ತರು ಹೇಳಿಕೊಳ್ಳುತ್ತಾರೆ. ಕಾನೂನಿನಲ್ಲಿ ನರಬಕ್ಷಕ ಹುಲಿಯನ್ನು ಕೊಲ್ಲಬಹುದು ಅದೂ ಕೂಡ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾತ್ರ. ಆದರೆ ನಮ್ಮ ಊರಿನಲ್ಲಿ ಕಾಣಿಸಿಕೊಂಡ ಹುಲಿ ಅಪ್ಪಿ ತಪ್ಪಿಯೂ ಗ್ರಾಮಸ್ತರ ಮೇಲೆ ಹಲ್ಲೆ ಮಾಡಿರಲಿಲ್ಲ. ಅದಕ್ಕೆಗ್ರಾಮಸ್ತರು ಪದೇ  ಪದೇ ಹುಲಿಯ ಕಾಟದ ಬಗ್ಗೆ  ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಅಪ್ಪಿ ತಪ್ಪಿ ಅರಣ್ಯಾಧಿಕಾರಿಗಳ ಕೈಗೆನಾದ್ರು ನನ್ನ ಹೆಸರು ಸಿಕ್ಕಿಹಾಕಿಕೊಂಡರೆ ಆ ದೇವರೇ ಗತಿ. ವರ್ಷಗಟ್ಟಲೆ ಕೋರ್ಟು ಕಚೇರಿ ಸಹವಾಸ ಖಚಿತ. ಅದೂ ಕೂಡ ನಾನು ಮಾಡದೇ ಇರೋ ತಪ್ಪಿಗೋಸ್ಕರ. ಹಾಗಂತ ನಾನು ಹುಲೀನ ಹೊಡೆದಿಲ್ಲ, ನಾನು ಹೊಡೆದ ಗುಂಡು ಹುಲಿಗೆ ತಾಕಿಲ್ಲ ಅಂದ್ರೆ ಗ್ರಾಮಸ್ತರು ನನ್ನನ್ನು ಕೀಳಾಗಿ ಕಾಣಬಹುದು. ಇವನೊಬ್ಬ ಹೇಡಿ ಸುಳ್ಳುಗಾರ ಅಂತಾನು ಅಂದುಕೊಳ್ಳಬಹುದು. ಇಷ್ಟು ವರ್ಷ ಕಾಯ್ದುಕೊಂಡ ಮಾನ ಮರ್ಯಾದೆ ಎಲ್ಲ ಹೋಗುತ್ತೆ. ಚುನಾವಣೆಯಲ್ಲಿ  ಇವರ ಓಟು  ಪಡೆದು ಗೆಲ್ಲೋದು ಕನಸಿನ ಮಾತೇ ಸರಿ.  ಗೌರವ, ಸನ್ಮಾನ ರಾಜಕೀಯ ಅವಕಾಶ ಒಂದು ಕಡೆ, ಕೋರ್ಟು ಕಚೇರಿ ಇನ್ನೊಂದೆಡೆ. ತಕ್ಕಡಿಯಲ್ಲಿ ತೂಗೋದು ಕಷ್ಟವಾಯ್ತು ಗೌಡರಿಗೆ.  ಅದಕ್ಕೆ ಮನೆಯ ಜಗಲಿಯಲ್ಲಿ ಶತ ಪಥ ತಿರುಗಾಡ್ತಾ ಇದ್ದರು. 
ಅಪ್ಪಿ ತಪ್ಪಿ ಏನಾದ್ರು ಕೋರ್ಟು ಕಚೇರಿ ಅಂತ ಬಂದ್ರೆ ಇನ್ನು ಒಳ್ಳೇದೆ ಆಯ್ತು ಸಹಾನುಭೂತಿ ಜಾಸ್ತಿ ಆಗಿ ಇನ್ನು ಒಂದಷ್ಟು ಓಟು ಗಳು ಜಾಸ್ತಿನೇ ಬೀಳ್ತಾವೆ ಅಂದುಕೊಂಡ ಗೌಡ್ರ ಮುಖದಲ್ಲಿ ಮುಗುಳ್ನಗೆ ಬಂತು. ಹಾಗೆ ಜಗಲಿಯಿಂದ ಒಳನಡೆದ ಗೌಡರು ಹಾಸಿಗೆಗೊರಗಿದರು. ಯೋಚನೆ ಮಾಡಿ ಸುಸ್ತಾಗಿದ್ದ  ಗೌಡ್ರನ್ನು ನಿದ್ರಾದೇವಿ ಆವರಿಸಿಕೊಂಡಳು.  ಗೌಡರ ಕನಸಲ್ಲಿ ಹುಲಿಯೊಂದು ಬಂದು ಗಹ ಗಹಿಸಿ  ನಕ್ಕಂತಾಯ್ತು, ಅದರ ಮೂತಿ ಮಾತ್ರ ಮಾದನ ಹಟ್ಟಿಯಲ್ಲಿ ಕಂಡಿದ್ದ ಹುಲಿಯನ್ನೇ ಹೋಲುತ್ತಿತ್ತು !!!!!!!!!!!!!!!   







Wednesday, January 27, 2016

ಒಳ್ಳೆಯತನ ...ಕೆಟ್ಟತನದ ನಡುವೆ

ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ  ಅಂದ್ರೆ? ನಾವಿರೋ ಸನ್ನಿವೇಷಗಳಿಗನುಗುಣವಾಗಿ ಒಳ್ಳೆಯದು ಕೆಟ್ಟದು ಅನ್ನೋದು ಬದಲಾಗುತ್ತಿರುತ್ತವೆ.  ಯಾವಾಗಲೂ ನಮ್ಮ ಮೂಗಿನ ನೇರಕ್ಕೆ ಒಳ್ಳೆಯತನ ಇರುತ್ತೆ ಅನ್ನೋದು ಮಾತ್ರ  ವಾಸ್ತವ. ಇಲ್ಲಿವೆ ಕೆಲ ಸನ್ನಿವೇಷಗಳು....  


ಒಳ್ಳೆಯತನ ...ಕೆಟ್ಟತನದ ನಡುವೆ 
ಹಾಳಾದ್ದು ಅಲಾರಾಂ ಕೈ ಕೊಡ್ತು ಹೊಡಿಲೇ ಇಲ್ಲ ಇವತ್ತು, ಎಚ್ರಾನೇ ಆಗಿಲ್ಲ  ಅಂತ ಲೇಟಾಗಿ ಎದ್ದು ಬಡ ಬಡಾಯಿಸೋದು ಈ ಮಹಾನಗರದಲ್ಲಿ ಸರ್ವೇ ಸಾಮಾನ್ಯ. (ವರ್ಷಕ್ಕೊಮ್ಮೆ ನಾದ್ರೂ ಶೆಲ್ ಬದಲಾಯಿಸದಿದ್ರೆ ಕೈ ಕೊಡದೆ ಇನ್ನೇನು ಮಾಡತ್ತೆ ಅದು ಪಾಪ, ಅದ್ಕೆ ಕಾಲು ಅನ್ನೋದು ಇದ್ದಿದ್ರೆ ಜಾಡ್ಸಿ ಒದೀತಿತ್ತೋ ಏನೋ).  ಅಂತು ಇಂತೂ ಎದ್ದು ಬೆಳಗ್ಗಿನ ಕಾರ್ಯಕ್ರಮ ಎಲ್ಲ ಮುಗ್ಸಿ ರೆಡಿ ಆಗಿ ಬಸ್ ಸ್ಟ್ಯಾಂಡ್ ಗೆ ಓಡಿ  ಹೋಗ್ತೀರಾ. ಮಾಮೂಲಿ ಟೈಮ್ ಗಿಂತ ಜಸ್ಟ್ 5 ನಿಮಿಷ ಲೇಟು ಅಷ್ಟೇ. ಬಸ್ ಹೊರಟಿರತ್ತೆ ಸ್ಟ್ಯಾಂಡ್ ಇಂದ, ನೀವು ಕೈ ತೋರಿಸ್ತೀರ. ನನ್ನ ವಿಶ್ಲೇಷಣೆ ಇಲ್ಲಿ ಶುರು. ಬಸ್ ಡ್ರೈವರ್ ಬಸ್ ನಿಲ್ಸಿದ್ರೆ ಅವ್ನು ನಿಮ್ ಮನಸಿಗೆ ಒಳ್ಳೆಯವನು ಅನಿಸ್ತಾನೆ. ಆದ್ರೆ ಬಸ್ ಒಳಗೆ ಕೂತ ಉಳಿದ ಎಲ್ಲ ಜನರಿಗೆ ಅವ್ನ ಮೇಲೆ ಸಿಟ್ಟು, ಏನಪ್ಪಾ ಲೇಟಾಯ್ತು ನೀನು ನೋಡಿದ್ರೆ  ಎಲ್ಲ ಕಡೇ ನಿಲ್ಲಿಸ್ತ ಇದ್ದೀಯ ಅಂತ ಬೈಗುಳು ಸ್ಟಾರ್ಟ್.  ಅಕಸ್ಮಾತ್ ಅವ್ನು ನಿಲ್ಸಿಲ್ಲ ಅಂದ್ರೆ ಡ್ರೈವರ್ ನಿಮ್ಮ ಪಾಲಿಗೆ ಕೆಟ್ಟವನು ಅನ್ಸತ್ತೆ. ದಿನ ಇದೆ ಬಸ್ ಅಲ್ಲಿ ಬರ್ತೀನಿ ಅಂತ ಗೊತ್ತಿದ್ರು ನಿಲ್ಸಿಲ್ಲ ಹಾಗೆ ಹೋದ ಅಂತ ಬೈಕೊತಿರ. ಅದೇ ಬಸ್ ಒಳಗೆ ಇರೋ ಜನಕ್ಕೆ ಡ್ರೈವರ್ ಸರಿಯಾದ ಸಮಯಕ್ಕೆ ಅವರವರ ಜಾಗಕ್ಕೆ ತಲುಪಿಸ್ತಾನೆ ಅಂತ ಒಳ್ಳೆ ಮನುಷ್ಯನಾಗಿ ಬಿಡ್ತಾನೆ. ಕೆಲವೇ ನಿಮಿಷಗಳಲ್ಲಿ ಒಳ್ಳೇದು ಕೆಟ್ಟದು ಅನ್ನೋದು ಗಾಳೀಲಿ ತೇಲೋ ಎಲೆ ತರ ಚಂಚಲ ಆಗಿಬಿಡತ್ತೆ.   ಒಳ್ಳೆತನ ಹಾಗು ಕೆಟ್ಟತನ ಅನ್ನೋದನ್ನು ಡ್ರೈವರ್ ನ ಕಾಲ ಕೆಳಗೆ  ಬಂದಿಯಾಗಿರೋ ಅಕ್ಷಿಲೇಟರ್ ಹಾಗು ಬ್ರೇಕುಗಳು  ನಿರ್ದರಿಸೋದು ಮಾತ್ರ ವಿಪರ್ಯಾಸ


ಬಾನುವಾರ .... ಹೊಸ ಸಿನೆಮಾ ಒಂದು ಬಂದಿದೆ ...ನಮ್ಮ ಮೆಚ್ಚಿನ ಹೀರೋ. ಮೊದಲ  ದಿನ ಮೊದಲ ಷೋ ನೋಡಬೇಕು ಅನ್ನೋ ಆಸೆ. ಶನಿವಾರಾನೆ ನಾಳೆ ಬೆಳಗ್ಗೆ  ಬೇಗ ಎದ್ದು ಸಿನೆಮಾಗೆ ಹೋಗಬೇಕು ಅಂತ ಡಿಸೈಡ್ ಮಾಡಿರ್ತೀರ .. ಆದರೆ sunday sickness ಎಲ್ಲಿ ಬಿಡಬೇಕು, ಅದಕ್ಕೆ ಏಳೋದು ಲೇಟ್ ..... ಸರಿ ಬುಕ್ ಮೈ ಶೋ ದ ಲ್ಲಿ ಬುಕ್ ಮಾಡೋಣ ಅಂತ ನೋಡಿದರೆ ಮೊಬೈಲ್ ಅಲ್ಲಿ ನೆಟ್ ವರ್ಕ್ ಸಮಸ್ಯೆ. ಸರಿ ಥಿಯೇಟರ್ ನಲ್ಲಿನೇ ಟಿಕೆಟ್ ತಗೊಳ್ಳೋಣ ಅಂತ ಬೇಗ ರೆಡಿ ಯಾಗಿ ಹೋಗಿ ನೋಡಿದರೆ ಅಲ್ಲಿ ದೊಡ್ಡ ಸರದಿ ಸಾಲು... ಪರಿಚಿಅತ ಮುಖಗಳು ಯಾವುದಾದರು ಇದೆಯಾ ಅಂತ ಒಮ್ಮೆ ಕಣ್ಣು ಹಾಯಿಸಿ ಅಲ್ಲೇ ಸರದಿಯಲ್ಲಿ ನಿಂತಿರೋ ಪಾಪ ಪ್ರಾಣಿಗೆ ಒಂದು ಸ್ಮೈಲ್ ಕೊಟ್ಟು ಸಾರ್ ಒಂದು ಟಿಕೆಟ್ ತಗೋತೀರ ಅಂತ ಕೇಳ್ತೀರಾ ... ಇಲ್ಲಿ ಸರಿ ತಪ್ಪು ಅನ್ನೋದು ಬೇಡ. ಆ ಮನುಷ್ಯ ನಿಮಗೂ ಸೇರಿಸಿ ಟಿಕೆಟ್ ತಗೊಂಡರೆ ಅವ್ನು ನಿಮ್ಮ ಪಾಲಿಗೆ ತುಂಬಾ ಒಳ್ಳೆಯವನು. ಆದರೆ ಆದೇ ಸರದಿ ಸಾಲಿನಲ್ಲಿ ನಿಂತಿರೋ ಕೊನೆಯ ಮನುಷ್ಯನ ಪಾಲಿಗೆ ನೀವಿಬ್ರು ಉಗ್ರಗಾಮಿಗಳ ತರ ಅನ್ನಿಸೋದಂತು ಖಚಿತ. ಅವ್ನು ಟಿಕೆಟ್ ತಗೊಂಡಿಲ್ಲ ಅಂದ್ರೆ ನಿಮ್ಮ ಪಾಲಿಗೆ ಅವ್ನು ಕೆಟ್ಟವನು. ಆದರೆ ಹಿಂದಿರೋ ಜನರಿಗೆ ಅವ್ನು ಒಳ್ಳೆಯವನು. ಒಂದು ಗಂಟೆಯಿಂದ ಲೈನ್ ಅಲ್ಲಿ ನಿಂತಿದೀವಿ ಈಗ ಬಂದು ನಕ್ರ ಮಾಡ್ತಾ ಇದಾನೆ ಒಳ್ಳೆದಾಯ್ತು ಟಿಕೆಟ್ ಸಿಕ್ಕಿಲ್ಲ ಈ ಮೂತಿಗೆ ಅಂತ . 100 ರುಪಾಯಿಯ ಒಂದು ಟಿಕೆಟ್ ಗೆ ಒಳ್ಳೆತನ ಕೆಟ್ಟತನ ದ ಮದ್ಯೆ ಒಂದು ರೇಖೆ ಎಳೆಯೋ ಚಾನ್ಸ್ ಇಲ್ಲಿ..
ಇಲ್ಲೇ ಇನ್ನೊಂದು ಸನ್ನಿವೇಶ.... ಸುದೀಪ್ ಅಥವಾ ದರ್ಶನ್ ಅವರ ಚಿತ್ರ ಅಂದುಕೊಳ್ಳೋಣ. ಅಪರೂಪಕ್ಕೆ ಎಂಬಂತೆ ಹೆಂಡತಿ ಈ ಚಿತ್ರ ನೋಡಲೇಬೇಕು ಅಂತ ಹಠ ಹಿಡಿದಿದ್ದಾಳೆ. ತರಾತುರಿಯಲ್ಲಿ ಹೊರಟು ಬರೋವಷ್ಟರಲ್ಲಿ  ಚಿತ್ರ ಮಂದಿರದಲ್ಲಿ ಸಿಕ್ಕಾಪಟ್ಟೆ ಜನ. ಜೊತೆ ಹೆಂಡತಿ ಬೇರೆ ಇದಾಳೆ, ಟಿಕೆಟ್ ಸಿಕ್ಕಿಲ್ಲ ಅಂದ್ರೆ ಮನೇಲಿ ಮಹಾಯುದ್ದ  ನಡೆಯೋದು ಖಂಡಿತ. ಅಲ್ಲೇ ಕಣ್ಣು ಹಾಯಿಸಿದರೆ ಸಂದಿಯಲ್ಲೊಬ್ಬ ಬ್ಲಾಕ್ ಟಿಕೆಟ್ ಮಾರೋದು ಕಾಣಿಸುತ್ತೆ. ಬೇರೆ ಸಮಯದಲ್ಲಿ ಆಗಿದ್ರೆ ಈ ಬ್ಲಾಕ್ ಟಿಕೆಟ್  ಮಾರೋ ನನ್ ಮಕ್ಳನ್ನು ಜೈಲ್ ಗೆ ಹಾಕ್ಬೇಕು ಅಂತ ಹೇಳ್ತಾ ಇದ್ರೂ ಇವತ್ತು ಮಾತ್ರ ಅವ್ನು ನಿಮ್ ಪಾಲಿಗೆ ದೇವರೇ ಸರಿ. ದುಪ್ಪಟ್ಟು ಹಣ ತೆತ್ತು ಚಿತ್ರಮಂದಿರದೊಳಗೆ ಹೆಜ್ಜೆ ಹಾಕ್ತೀರಿ. ಈಗ ತನ್ನ ,ಮನದನ್ನೆಯನ್ನು ಪುಸಲಾಯಿಸಿ ಹೇಗೋ ದುಡ್ಡು ಹೊಂದಿಸಿ ಟಿಕೆಟ್ ತಗೊಳೋಕೆ ಕ್ಯೂ ಅಲ್ಲಿ ನಿಂತಿರೋ ಚಿಗುರುಮೀಸೆಯ ಹುಡುಗನ ಪಾಡು. ಬಿಸಿಲಿನಲ್ಲಿ ನಿಂತಿದ್ದಾನೆ, ನೂಕುನುಗ್ಗಲು ಬೇರೆ , ತನ್ನ ಸರದಿ ಇನ್ನೇನು ಬರಬೇಕು ಅಷ್ಟರಲ್ಲಿ ಟಿಕೆಟ್ ಸೋಲ್ಡ್ ಔಟ್ . ಈಗ ಬ್ಲಾಕ್ ಟಿಕೆಟ್ ಮಾರುವವನು ಅವನ ಪಾಲಿಗೆ ವಿಲ್ಲನ್. ಬ್ಲಾಕ್ ಟಿಕೆಟ್ ಖರೀದಿಸಿದ ನೀವಂತೂ ಅವನ ಪಾಲಿಗೆ ಹತ್ತು ತಲೆಯ ರಾವಣನಂತೆ ಕಂಡರೂ ಆಶ್ಚರ್ಯವಿಲ್ಲ ....ಏನಂತೀರಿ?

ಶ್ರೀ :-)