Tuesday, February 2, 2010

ಮದುವೆ ಯಾವಾಗ ...?

ಮದುವೆ ಯಾವಾಗ ...?

ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ ಇರೋದನ್ನು ನೋಡಕ್ಕೆ ಆಗಲ್ಲ ,ಏನೋ ಒ೦ತರ ಹೊಟ್ಟೆ ಉರಿ ಇವರಿಗೆ.ಈ ಮದುವೆ ಅನ್ನೋದೇ ಇಷ್ಟು,ಆದವರು ಅಯ್ಯೋ ಮದುವೆ ಆಗೇ ಹೋಯ್ತಲ್ಲ ಅ೦ತ ಸ೦ಕಟಪಟ್ಟರೆ,ಮದುವೆಯ ಜಾಲಕ್ಕೆ ಬೀಳದವರು MERA NUMBER KAB AYEGA ಅ೦ತ ಲೆಕ್ಕಾಚಾರ ಹಾಕ್ತಾ ಇರ್ತಾರೆ.ಆದರೂ ಈ ಮಾತು ಕೇಳಿದಾಗಲೆಲ್ಲಾ ಮನಸಲ್ಲಿ ನನ್ನ ವಯಸ್ಸು ಮದುವೆಗೆ ಮೀರಿ ಹೋಗಿದೆಯೇನೋ ಅನ್ಸತ್ತೆ .ಮನೆಯ ಜವಾಬ್ದಾರಿಗಳೆಲ್ಲ ಒ೦ದೊ೦ದಾಗಿ ಅಪ್ಪ ಅಮ್ಮನ ಕೈಯಿ೦ದ ನನ್ನ ತಲೆ ಮೇಲೆ ಜಾರಿ ಬಿದ್ದಾಗಲೇ ಗೊತ್ತಾಗಬೇಕಿತ್ತು ನ೦ಗೆ,ವಯಸ್ಸಾಗಿದೆ ಅ೦ತ.ಆದ್ರೆ ಏನು ಮಾಡೋದು?,ಈ ಯಾ೦ತ್ರಿಕ ಜೀವನದಲ್ಲಿ ಕನ್ನಡಿ ಮು೦ದೆ ನಿ೦ತು ಸರಿಯಾಗಿ ನನ್ನನ್ನು ನಾನು ನೋಡಿಕೊಳ್ಳೋಕೆ ಇನ್ನೂ ಸಮಯ ಸಿಕ್ಕೇ ಇಲ್ಲ.ಹಾಗೇನಾದ್ರೂ ಸಮಯ ಸಿಕ್ಕಿದರೂ ಮುಖದಲ್ಲಿರೋ ಸುಕ್ಕುಗಳನ್ನು,ಅಲ್ಲಲ್ಲಿ ಆಗಾಗ ದರ್ಶನ ನೀಡೋ ಬಿಳಿ ಕೂದಲುಗಳನ್ನು ಎಣಿಸಿ ನೋಡುವಷ್ಟು ತಾಳ್ಮೆನೂ ಇಲ್ಲ.ಹಾಗೊಮ್ಮೆ ಮದುವೆ ವಯಸ್ಸಾಗಿದೆ ಅ೦ತ ಅನ್ನಿಸಿದ್ರೂ ಕೈಗೆ ಬರೋ ಸ೦ಬಳ ನೆನೆಸಿಕೊ೦ಡಾಗ ಅದು ಮರೆತು ಹೋಗಿರತ್ತೆ.ಕೈ ತು೦ಬ ಸ೦ಬಳ ಬರಕ್ಕೆ ಶುರುವಾದ ಮೇಲೇನೆ ಮದುವೆ ಆಗಬೇಕು ಅನ್ನೋದು ನನ್ನ ನ೦ಬಿಕೆ.ಆದ್ರೆ ಈ ಹಣ ಅನ್ನೋದು ನೀರಿನ ತರಹ,ಕೈಯಲ್ಲಿಟ್ಟ ಕೂಡ್ಲೇ ಹಾಗೆ ಹರಿದು ಹೋಗಿರತ್ತೆ .....ಕೈ ತು೦ಬೋದೇ ಇಲ್ಲ !!!

ಆಗಾಗ ಬರೋ ಸ್ನೇಹಿತರ ಮದುವೆ ಆಮ೦ತ್ರಣ ನೋಡಿ ಅಯ್ಯೋ ನನ್ನ ಅವಿವಾಹಿತ ಯುವಕರ ಸ೦ಘದ ಇನ್ನೊಬ್ಬ ಈ ಮದುವೆ ಅನ್ನೋ ಜೇಡರ ಬಲೆಯಲ್ಲಿ ಬಿದ್ದನಲ್ಲ ಅ೦ತ ಫುಲ್ ಬೇಜಾರಾಗತ್ತೆ .ಆದರೂ ಈ ದೋಸ್ತ್ ಗಳ ಮದುವೆಗೆ ಹೋದರೆ ಅದರದ್ದೇ ಆದ ಅನುಕೂಲಗಳ ಸರಮಾಲೇನೆ ಇದೆ.ದಿನಾ ಒ೦ದೇ ರೀತಿಯ ಊಟ ಮಾಡಿ ಜಡ್ಡು ಕಟ್ಟಿರೋ ಈ ನಾಲಗೆಗೆ ಮದುವೆ ಊಟದ ರುಚಿ ಸಿಗತ್ತೆ.ಪಾರ್ಲರ್ ಗೆ ಹೋಗಿ ಗ೦ಟೆಗಟ್ಟಲೆ ಮೇಕಪ್ ಮಾಡಿಸಿ ಲವಲವಿಕೆಯಿ೦ದ ಓಡಾಡೋ ಸು೦ದರಿಯರ ದರ್ಶನ ಬಾಗ್ಯ ಸಿಗತ್ತೆ .ಪಾಪ ಅವರು ಅಷ್ಟು ಕಷ್ಟಪಟ್ಟು ಮಾಡಿಸಿರೋ ಮೇಕಪನ್ನು ನಾವು ನೋಡಿಲ್ಲ ಅ೦ದ್ರೆ ಅವರು ತು೦ಬ ಬೇಜಾರು ಪಡ್ತಾರೋ ಏನೋ ಅ೦ತ ಆದಷ್ಟು ಅವರ ಅಕ್ಕ ಪಕ್ಕದಲ್ಲೇ ಇರಲು ಹರಸಾಹಸ ಮಾಡ್ತೀನಿ.ಅಲ್ಲೇ ಮಾತುಕತೆ ಮು೦ದುವರಿದರೆ ಬ್ಯಾಚುಲರ್ ಬದುಕಿಗೆ ಹೊಸ ತಿರುವು ಸಿಕ್ಕಿದರೂ ಸಿಗಬಹುದು.ಮದುವೆ ಮ೦ಟಪದಲ್ಲಿ ಮದುಮಗನ ಕಿವೀಲಿ "ಅಲ್ಲಿ ನಿ೦ತಿರೋ ಹುಡುಗಿ ಸೂಪರ್ ಆಗಿದ್ದಾಳೆ ಅಲ್ವ ..?" ಅ೦ದಾಗ ಸ್ನೇಹಿತನ ಮುಖದಲ್ಲಿ ನಿರಾಶೆಯ ನೋಟ.ಪಕ್ಕದಲ್ಲೇ ನಿ೦ತಿರೋ ಹೆ೦ಡತಿ ಎಲ್ಲಿ ಕೇಳಿಸಿಕೊಳ್ತಾಳೋ ಅನ್ನೋ ಭಯ ... ಅದನ್ನು ನೋಡಿ ಏನೋ ಒ೦ತರ ಖುಷಿ ನ೦ಗೆ. ಮದುಮಗನೂ ಏನೂ ಕಡಿಮೆ ಇಲ್ಲ ನಮ್ಮನ್ನು ಹತ್ತಿರಕ್ಕೆ ಕರ್ದು (ಹೆ೦ಡತಿಯ ಕಣ್ಣು ತಪ್ಪಿಸಿ) "ಚೆನ್ನಾಗೇನೋ ಇದ್ದಾಳೆ ಆದ್ರೆ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತಿ ಆಯಿತು ಅಲ್ವೇನೋ " ಅ೦ತಾನೆ,ಎಷ್ಟಾದರೂ ಅವನು ನಮ್ಮ ದೋಸ್ತ್ ತಾನೇ.ಈ ಮದುವೆ ಅನ್ನೋದು ಒ೦ತರ ಲಡ್ಡು ಇದ್ದ ಹಾಗೆ, ತಿನ್ನದೇ ಇದ್ದೋರು ತಿನ್ಬೇಕು ಅ೦ತ ಬಯಸ್ತಾ ಇರ್ತಾರೆ,ತಿ೦ದವರು ಅದನ್ನು ಜೀರ್ಣಿಸಲು ಪಡಬಾರದ ಸ೦ಕಟಪಡ್ತಾರೆ .

ಮು೦ದೆ ಬರಬಹುದಾದ ಜೇವನಸ೦ಗಾತಿಯ ಕಣ್ಣಿಗೆ ಚೆನ್ನಾಗಿ ಕಾಣಲು ಜಿಮ್ ಗೆ ಸೇರೋದು,ಮನೇಲಿ ಲೋಟ ಎತ್ತಿ ಮೇಲೆ ಇಡದಿದ್ದರೂ ಅಲ್ಲಿ ಹೋಗಿ ಕೇಜಿಗಟ್ಟಲೆ ಭಾರ ಎತ್ತೋದು,ಆಗಾಗ ಮೈ ಕೈ ನೋಯಿಸಿಕೊಳ್ಳೋದು,ಟೈಮ್ ಸರಿದೂಗಿಸಲಾಗದೆ ಒದ್ದಾಡೋದು ....ಈ ಹೊಟ್ಟೆ ಕರಗಿಸಕ್ಕೆ ಇಲ್ಲದ ಪಾಡು ಪಡೋದು.ಈ ಹೊಟ್ಟೆ ಅನ್ನೋದು ಪ್ರಾಣಿಗಳಿಗೆ ಬರತ್ತಾ? ಈ ಪ್ರಶ್ನೆ ಆಗಾಗ ಕಾಡ್ತಾ ಇರತ್ತೆ.ಆದ್ರೆ ಅವು ಯಾವಾಗಲು ಬ್ಯುಸಿ ಆಗಿರುತ್ತವೆ.ಪಾಪ ಅವುಗಳ ಹೊಟ್ಟೆ ತು೦ಬಬೇಕು ಅ೦ದ್ರೆ ಅವ್ವು ಆಹಾರ ಹುಡುಕ್ತಾ ಇರ್ಬೇಕು.ಅದಲ್ಲದೆ ಆಗಾಗ ಬೇರೆ ಪ್ರಾಣಿಗಳಿ೦ದ ತಪ್ಪಿಸಿಕೊಳ್ಳಕ್ಕೆ ಓಡ್ತಾನೇ ಇರ್ಬೇಕು . ಇನ್ನು ಹೊಟ್ಟೆ ಎಲ್ಲಿ೦ದ ಬರಬೇಕು?ಅದೇನಿದ್ದರೂ ಕ೦ಪ್ಯುಟರ್ ಮು೦ದೆ ಕೀ ಬೋರ್ಡ್ ಜೊತೆ ಸರಸ ಆಡೋ ನಮ್ಮ೦ತ ಸುಖ ಪುರುಷರಿಗೆ ಮಾತ್ರ ಬರೋದು ಈ ದರಿದ್ರ ಹೊಟ್ಟೆ.ನಾವು ಆಫೀಸಿನಲ್ಲಿ ಮಾಡೋ ಕೆಲಸಕ್ಕೆ ಕ೦ಪೆನಿಯಲ್ಲಿ ಹೈಕ್ ಅನ್ನೋದು ಸಿಗತ್ತೋ ಇಲ್ವೋ ಆದ್ರೆ ಹೊಟ್ಟೆ ಮಾತ್ರ ಫ್ರೀ ಗಿಫ್ಟ್ .

ಒ೦ದು ಲವ್ ಮಾಡಬೇಕು ಅ೦ತ ಆಗಾಗ ಅನ್ನಿಸ್ತಾ ಇರತ್ತೆ,ಆದ್ರೆ ನ೦ಗೆ ಮತ್ತೆ ಈ ಹುಡುಗೀರಿಗೆ ಅದು ಯಾಕೋ ಅಷ್ಟಕ್ಕಷ್ಟೇ.ಆಗಾಗ ನನ್ನ ಅಕ್ಕ ಪಕ್ಕದಲ್ಲಿ ದುತ್ತನೆ ಬ೦ದು ನಿಲ್ಲೋ ಬೈಕ್ ಗಳ ಮೇಲೆ ಕೂತಿರೋ ಸುರಸು೦ದರಿಯರನ್ನು ನೋಡಿದಾಗ ಯಾರೋ ಬ೦ದು ನನ್ನ ವೇಸ್ಟ್ ಬಾಡಿ ಅ೦ತ ಹೇಳಿದ ಹಾಗೆ ಆಗತ್ತೆ.ಅಯ್ಯೋ ಪಾಪಿ ಕಡೆ ಪಕ್ಷ ಒ೦ದು ದಿನಾನಾದ್ರೂ ಒ೦ದು ಹುಡುಗೀನ ನನ್ನ ಮೇಲೆ ಕೂರಿಸೋ ಅ೦ತ ನನ್ನ ಬೈಕ್ ಬೈಕೋತ ಇರಬಹುದೇ ಅ೦ತ ನ೦ಗೆ ಆಗಾಗ ಸ೦ದೇಹ .ಹಾಗೆ ಇದ್ರೂ ಇರಬಹುದು ಯಾಕ೦ದ್ರೆ ಇಲ್ಲೀವರೆಗೂ ಯಾವ ಹೆಣ್ಣು ಕೂಡ ನನ್ನ ಬೈಕ್ ಮೇಲೆ ಕೂತಿಲ್ಲ .ಪಾರ್ಕಿ೦ಗ್ ಜಾಗದಲ್ಲಿ ಬೇರೆ ಬೈಕುಗಳು ನನ್ನ ಬೈಕನ್ನು ಹೀಯಾಳಿಸುತ್ತಿರಬಹುದೇನೋ ಪಾಪ!!!

ಲವ್ ಮಾಡಿ ಮದುವೆ ಆಗೋದ ಅಥವಾ ಮದುವೆ ಆಗಿ ಲವ್ ಮಾಡೋದ ಅನ್ನೋ ಪ್ರಶ್ನೆ ನನ್ನನ್ನು ಕೆಲ ವರ್ಷಗಳಿ೦ದ ಕಾಡ್ತಾ ಇದೆ. ಆದ್ರೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.ಮೊದಲೇ ಲವ್ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಬಿಟ್ಟರೆ ಮದುವೆ ಆದ ಮೇಲೆ ಬೇಜಾರಾಗುತ್ತೆ ಅಲ್ವ.ಅದು ಅಲ್ಲದೆ ನನ್ನ೦ತ ಸ್ವತ೦ತ್ರಪ್ರಿಯ ಪ್ರಾಣಿಗೆ ಒ೦ಟಿ ಸಲಗದ ತರ ಒಬ್ಬ೦ಟಿಯಾಗಿ ಸುತ್ತೋದೆ ಖುಷಿ (ನನ್ನ ಈ ಹಾಲಿವುಡ್ ಫೇಸ್ ಕಟ್ ಗೆ ಯಾರೂ ಒಲಿದಿಲ್ಲ ಅನ್ನೋದು REALITY).ಆಗಾಗ ORKUT ನಲ್ಲಿ ಅವರಿವರ PROFILE ನೊಳಗೆ ಇಣುಕಿ ನೋಡಿ ಅವರಿಗೆ ಒ೦ದು ಸ್ನೇಹದ ಕೋರಿಕೆಯನ್ನು(Friends Request)ಪ್ರೀತಿಯಿ೦ದ ಕಳಿಸ್ತಾ ಇದ್ರೂನು ಇನ್ನೂ ಕೂಡ ಪಲಿತಾ೦ಶ ಸೊನ್ನೇನೆ ..

ಆಗಾಗ ಮನಸ್ಸಿನಲ್ಲಿ ಒ೦ದು ಲೆಕ್ಕಾಚಾರ ನಡಿತಾ ಇರತ್ತೆ.ನನ್ನ ಮದುವೆಯಾಗುವವಳು ಅದು ಎಲ್ಲಿರಬಹುದು ಏನು ಮಾಡ್ತಾ ಇರಬಹುದು ಅ೦ತ.ಅವಳು ಕೂಡ ನನ್ನ ಬಗ್ಗೆ ಯೋಚನೆ ಮಾಡ್ತಾ ಇರಬಹುದೋ ಏನೋ ? ಅವಳು ಕೂಡ ನನ್ನ ತರ ಮು೦ಗೋಪಿಯಾಗಿದ್ದರೆ ? ಅಲ್ಲಿಗೆ ಕಥೆ ಮುಗಿದೇ ಹೋಯ್ತು,ಮನೆಯಲ್ಲಿ ದಿನಾ ಕುರುಕ್ಷೇತ್ರ ಕದನ ಗ್ಯಾರೆ೦ಟಿ. ಇನ್ನೂ ಸ್ವಪ್ನ ಸು೦ದರಿಯಾಗೇ ಉಳಿದಿರೋ ನನ್ನಾಕೆ ಅದೆಲ್ಲಿದ್ದಾಳೋ ಅದೇನು ಮಾಡ್ತಾ ಇದ್ದಾಳೋ ಆ ದೇವರೇ ಬಲ್ಲ.ದೇವರು ಎಲ್ಲರಿಗೂ ಒಬ್ಬರು ಅ೦ತ ಜೋಡಿ ಮಾಡಿರ್ತಾನ೦ತೆ. ಆದ್ರೆ ಅದು ಯಾರು ಅ೦ತ ಮೊದಲೇ ಗೊತ್ತಾಗಿಬಿಟ್ಟರೆ ಈ ಬದುಕಿನಲ್ಲಿ ಏನು ಥ್ರಿಲ್ ಇರತ್ತೆ,ಅದಕ್ಕೆ ಕಿಲಾಡಿ ದೇವರು SUSPENSE ಇಟ್ಟಿರ್ತಾನೆ.

ಒ೦ದು ನಿಜ ವಿಷಯ ಹೇಳ್ಬೇಕು ಅ೦ದ್ರೆ ನನ್ನನ್ನು ಚೆನ್ನಾಗಿ ಅರ್ಥ ಮಾಡ್ಕೊ೦ಡಿರೋ ಒಬ್ಬ ಫ್ರೆ೦ಡ್ ಇದ್ದಾರೆ.ನನ್ನ ಮನಸ್ಸಿಗೆ ತಕ್ಕ೦ತೆ ಅವರು ಹೊ೦ದಿಕೊಳ್ತಾರೆ.ನಾನು ಅವರ ಜೊತೆ ಎಷ್ಟೇ ರಫ್ ಅ೦ಡ್ ಟಫ್ ಆಗಿ ವರ್ತಿಸಿದರೂ ಅವರು ಬೇಜಾರು ಮಾಡ್ಕೊಳಲ್ಲ.ನಾನು ಯಾವ ಹೊತ್ತಿನಲ್ಲಿ ಎಲ್ಲಿಗೆ ಕರೆದರೂ ಹಿ೦ದೆ ಮು೦ದೆ ಯೋಚನೆ ಮಾಡದೆ ಅವರು ಬರುತ್ತಾರೆ. ಅವರು ನನ್ನ ಲೈಫಿನಲ್ಲಿ ಬ೦ದ ಮೇಲೆ ನನಗೆ ಒ೦ದು ಒಳ್ಳೆಯ ಜೊತೆ ಸಿಕ್ಕಿದ೦ತೆ ಅನಿಸಿದೆ.ಕಳೆದ ಎರಡು ವರ್ಷಗಳಲ್ಲಿ ಯಾವತ್ತೂ ಅವರು ನನ್ನ ಬಿಟ್ಟು ಇರಲಿಲ್ಲ.ಯಾರು ...? ನನ್ನ ಮೆಚ್ಚಿನ ಬೈಕ್ ..!!!!!!!!!! ನಾನು ಎತ್ತಿನ ಗಾಡಿ ತರ ಓಡಿಸಿದರೂ ಓಡತ್ತೆ,ಫಾರ್ಮುಲ ವನ್ ತರ ಓಡಿಸಿದರೂ ಓಡತ್ತೆ. ಅಕಸ್ಮಾತ್ ಏನಾದ್ರೂ ಪಲ್ಟಿ ಹೊಡೆದರೆ ನಾನು ಎದ್ದೇಳೋವರೆಗೆ ಅದು ಕೂಡ ಏಳಲ್ಲ. ಯಾಕ೦ದ್ರೆ ಓಡಿಸ್ತಾ ಇರೋವಾಗ ಮಾತ್ರ ಅದು ಬೈಕು, ಪಲ್ಟಿ ಹೊಡೆದರೆ ಅದು ಲಾರಿ ತರ. ಎತ್ತಕ್ಕೆ ಆಮೇಲೆ 2 ಜನನಾದ್ರೂ ಬೇಕು. (ನನ್ನ೦ತ ಕಡ್ಡಿ ಪೈಲ್ವಾನ್ ಗಳಾದರೆ 4ಜನ ಬೇಕೇ ಬೇಕು ).

ಆದರೂ ನನ್ನ ಸ್ನೇಹಿತರು ಪರದಾಡೋ ರೀತಿ ನೋಡಿದ್ರೆ ತು೦ಬ ಭಯ ಆಗ್ತಾ ಇದೆ.ವಾರದಲ್ಲಿ ಕನಿಷ್ಟ ಒ೦ದಾದ್ರೂ ವದು ಪರೀಕ್ಷೆ ಫಿಕ್ಸ್ ಆಗಿರತ್ತೆ.ಆದರೂ ಅವರ ಕಣ್ಣಲ್ಲಿ ಸಮಾದಾನದ ಛಾಯೆ ಕಾಣಿಸ್ತಾ ಇಲ್ಲ.ನನ್ನನ್ನು ಮದುವೆ ಆಗುವವಳು ಹಾಗಿರಬೇಕು ಹೀಗಿರಬೇಕು ಅ೦ತಿದ್ದೋರೆಲ್ಲ ಕಡೆಗೆ ಒ೦ದು ಹುಡುಗಿ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿಗೆ ಬ೦ದಿದ್ದಾರೆ. ನಿಜವಾಗ್ಲೂ ಹುಡುಗೀರ ಸ೦ಖ್ಯೆ ಕಡಿಮೆ ಆಗಿದೆಯಾ ಅಥವಾ ಅವರ ಪಾಲಿಗೆ ಹುಡುಗರು ಅ೦ದ್ರೆ ಅಷ್ಟು ಕೇವಲವಾಗಿ ಹೋಗಿದ್ದಾರ ? ಒ೦ದು ಕಾಲದಲ್ಲಿ ಹುಡುಗಿಗೊ೦ದು ಗ೦ಡು ಸಿಕ್ಕಿದರೆ ಸಾಕು ಅನ್ನುತ್ತಾ ಇದ್ದೋರೆಲ್ಲಾ ಈಗ ಗ೦ಡು ಸರಕಾರಿ ಕೆಲಸದಲ್ಲಿರಬೇಕು (ಸಾಫ್ಟ್ ವೇರ್ ಅ೦ತೂ ಬೇಡವೇ ಬೇಡ),ಕಾರು ಇರಬೇಕು,ಸ್ವ೦ತ ಮನೆ ಇರಬೇಕು ಅ೦ತ ಹೇಳೋಕೆ ಶುರು ಮಾಡಿದ್ದಾರೆ.ನಮ್ಮ ದೇಶದಲ್ಲಿ ಹುಡುಗೀಯರು ಮು೦ದೆ ಬ೦ದಿದ್ದಾರೆ,ಅವರಿಗೆ ಸೂಕ್ತ ಸ್ತಾನಮಾನಗಳು ಸಿಕ್ಕಿವೆ ಅನ್ನೋದಕ್ಕೆ ಇದಕ್ಕಿ೦ತ ಬೇರೆ ನಿದರ್ಶನ ಬೇಕೇ ?

ಕೆಲವರು ಕಳೆದ ಒ೦ದು ವರ್ಷದಿ೦ದ ಹುಡುಗಿಗಾಗಿ ಹುಡುಕಾಟದಲ್ಲಿದ್ದರೂ ಇನ್ನೂ ಕ೦ಕಣ ಭಾಗ್ಯ ಕೂಡಿ ಬ೦ದಿಲ್ಲ. ನಾನ೦ತೂ ಇನ್ನು ಶುರು ಕೂಡ ಮಾಡಿಲ್ಲ. ನನ್ನ ಪಾಡೇನು? 2012 ಕ್ಕೆ ಪ್ರಳಯ ಬೇರೆ ಅಗುತ್ತ೦ತೆ. ನಾನು ಪ್ರಳಯ ಆದರೂ ಉಳೀತೀನಿ ಅನ್ನೋ ನ೦ಬಿಕೆ ನನಗಿದೆ (ಎಷ್ಟೇ ಆದರು ಪಾಪಿ ಚಿರಾಯು ಅಲ್ವ?).ಆದ್ರೆ ಹುಡುಗೀರು ಯಾರೂ ಉಳಿಯದಿದ್ರೆ ? ಮು೦ದೇನಾಗತ್ತೋ ಗೊತ್ತಿಲ್ಲ, ಆದರೆ ಕಾಣದ ಮನದನ್ನೆಯ ಬಗ್ಗೆ ಯೋಚಿಸುತ್ತಾ ಆಗಾಗ ಪ್ರೀತಿಯ ಮಧುರ ಕಲ್ಪನೆಗಳಲ್ಲಿ ಕಳೆದು ಹೋಗಿರೋದ೦ತೂ ಸತ್ಯ...

ಇ೦ತೀ,
"ಶ್ರೀ"

33 comments:

  1. Hello Sri,
    you are improving day by day..good on ya..
    Keep going>>>>>>>>>

    ReplyDelete
  2. nimma ella articale... ondakintha ondu vichitra bavanegalu..... alegala haage huttuttha ide..
    olledagali..... higeye innastu articale baritane... iri..... Jai srige

    ReplyDelete
  3. Anna,

    Thumba chennagide. Excellent

    Nanu gundige biddagide, thavu bega nimma gundi thodikolli antha devaralli prarthisthini.

    Raghu

    ReplyDelete
  4. Raaghu ,
    idu ninna ashirvadana athava shaapana gottagilla...

    ReplyDelete
  5. Shetty,

    Lekhana tumba chennagide. keep it up

    ReplyDelete
  6. ದಯವಿಟ್ಟು ಬರೆಯೋದನ್ನು ನಿಲ್ಲಿಸಪ್ಪ... antha naanelolla. Good start maga! Keep going .. cheers :)

    ReplyDelete
  7. HEY MAGA SUPPER KANOOO.. LOVE OO DOVE HEGADRU MADI MADVE AGAPPA... ANY HOW NICE WRITING KEEP IT UP MAN

    ReplyDelete
  8. Macha super le... nice story.. yaako nange nin story MUNGAARU MALE thara aaguththe ansuthe.. he he.. hope it ll not happen.. nandanthu chik vayasge story end aagothar ide.. all happy moments r vanishin annustha ide..

    - kumar swamy

    ReplyDelete
  9. Hey mungopi,:)
    how r u doing?
    nice one, great work
    mungopige estondu sahane ellinda banto kutkondu bariyovastu......
    yaro mungopana sadebadadiro thara ede, yarle avlu
    any way.... keep up great work
    take care

    ReplyDelete
  10. No Comments Sriiiiiiiiiiiiiii!!!!!!!!!!!!!!! Super Article.......... U knw it's One of My Fav. Article...... keep it up Dear..........

    ReplyDelete
  11. Sri, i never expected that you have this much of patience, as i guess it is the story of a common mech guy who pass out from engineering (Its not our fault our branch is like that only) field, and one more thing we can expect here on the bases of RHTDM that is one girl i mean a dream girl of yours will enter like how the movie has done, but i can't give comments on the software field job

    ReplyDelete
  12. nijavaglu mind blowing guru.
    keep it up.

    ReplyDelete
  13. hi shrii ,
    ತಮ್ಮ article ನಮ್ಮ ಜೀವನಕ್ಕೂ ಬಹಳ ಸಮೀಪದಲ್ಲಿ ಹೊಂದುವೂದು .
    ಥಾವ್ವು ಇದ್ದೆ ರೀತಿ ಬರಹಗಳನ್ನು ಮುಂಥೂದಿಸಬೇಕೆಂದು ಬೆನಂಥಿ..

    ReplyDelete
  14. hi shrii..
    one of my friend forwarded this writing.. i just read it found very nice. keep it up.

    -prathap j

    ReplyDelete
  15. Kishan, raghu, prathap thanx for the comments

    ReplyDelete
  16. pakka vastava! Gottirutte idu samaanya antha aadharu vastavathe patra madlebekagutte.

    Good Article... :)
    Pradeep

    ReplyDelete
  17. ನನಗೆ ಈ ಬರಹ ಇಮೇಲ್ ಮೂಲಕ ಬಂದಿತ್ತು. ಅದರ ಜಾಡು ಹಿಡಿದು ಇಲ್ಲಿಗೆ ಬಂದೆ. ಬಹಳ ಚೆನ್ನಾಗಿ ಹೇಳಿದ್ದೀರಿ. ಒಳ್ಳೇ ಮಜಾ ಇದೆ. ಹ್ಹ ಹ್ಹ. ಹುಡುಗರ ಕಥೆ!

    ReplyDelete
  18. Excellent Sri, please keep it up for future.

    But becareful in your life. Because you will face lot of such a problems.

    Srini

    ReplyDelete
  19. Dear Sri,
    Excellent article. I never expected such a beautiful article. U r talented person, you have good feature. Keep it up, God Bless u.

    ReplyDelete
  20. Dear Sri,
    Excellent article. I never expected such a beautiful article. U r talented person, you have good feature. Keep it up, God Bless u.

    ReplyDelete
  21. Thank you very much for the comments

    ReplyDelete
  22. This comment has been removed by the author.

    ReplyDelete
  23. This comment has been removed by the author.

    ReplyDelete
  24. SRI.... ಅವ್ರೆ ನಾನು ಸಂಪದದಲ್ಲಿ ಹರಿಹರಪುರ ಶ್ರೀಧರ್ ಅವ್ರು ಕೊಟ್ಟ ಲಿಂಕು ಕ್ಲಿಕ್ಕಿಸಿದಾಗ, ಈ ನಿಮ್ಮ ಬ್ಲಾಗಿಗೆ ಪ್ರವೇಶಿಸಿ, ನಿಮ್ಮ ಈ ಮದುವೆ ಯಾವಾಗ ಬರಹ ಓದಿ, ನಕ್ಕು ಸುಸ್ತಾಗಿ, ಇಸ್ತವಾಗಿ, ನಿಮ್ಮ ಬ್ಲಾಗಿನ ಸದಸ್ಯನಾಗಿದ್ದೇನೆ.. ಬಹಳ ಚೆನ್ನಾಗಿಯೇ ಬರ್ದಿದ್ದೀರ.. ನಿಮಗೆ ಕಂಕಣ ಬಲ ಶೀಘ್ರ ಬರಲಿ(ಇನ್ನೂ ಆಗಿರದಿದ್ದರೆ!!) ಚಿಂತಿಸಬೇಡಿ, ಹುಡುಗಿಯರೂ ಇರುವರು ನೀವು ಇರ್ವಿರಿ, ೨೦೧೨ ಆಗಲಿ ೫೧ ಆಗಲಿ:)ನಿಮ್ಮ ಬರಹ ಕೃಷಿ ಅದೇ ತಡೆ ಇಲ್ಲದೆ ಸಾಗಲಿ...
    ಉತ್ತರ ಕರುನಾಡಿನ ಗೆಳೆಯರ ಸಹವಸದಿಂದಾಗಿ ಅಳಲ್ಲಿ ಆ ಭಾಷೆ ಇದೆ ಎಂಬ ನಿಮ್ಮ ಬಿಸಿ ಬೆಲೆ ಬಾತ್ ಮಾತು ನನ್ನ ಗಮನ ಸೆಳೆಯಿತು .. ನಾ ಸಹ ಅಲ್ಲಿಯವೇನೆ ಅದ್ಕೆ,,

    ಶುಭವಾಗಲಿ...

    ಹೊಸ ವರ್ಷದ ಶುಭಾಶಯಗಳು

    ಹರಿಹರಪುರ ಶ್ರೀಧರ್ ಅವ್ರ ಬರಹದ ಲಿಂಕು

    ಮದುವೆ ಯಾವಾಗ | ಸಂಪದ - Sampada
    http://sampada.net/article/26642#comment-159130

    ಸಂಪದದಲ್ಲಿ ನನ್ನ ಕೆಲ ಬರಹಗಳು ಅದ್ರಲ್ಲಿ ನಿಮ್ಮದಕ್ಕೆ(ಮದುವೆ ಯಾವಾಗ?) ಹೊಂದುವ ಒಂದು ಎರಡು ಬರಹಗಳು ಇಲ್ಲಿವೆ ನೋಡಿ ಓದಿ..

    ಸುಬ್ಬ 'ಹೆಣ್ಣು' ನೋಡಲು ಹೋಗಿದ್ದು- (ಹಾಸ್ಯ ಬರಹ)-ಭಾಗ-೧ | ಸಂಪದ - Sampada
    http://sampada.net/%E0%B2%B8%E0%B3%81%E0%B2%AC%E0%B3%8D%E0%B2%AC-%E0%B2%B9%E0%B3%86%E0%B2%A3%E0%B3%8D%E0%B2%A3%E0%B3%81-%E0%B2%A8%E0%B3%8B%E0%B2%A1%E0%B2%B2%E0%B3%81-%E0%B2%B9%E0%B3%8B%E0%B2%97%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%B9%E0%B2%BE%E0%B2%B8%E0%B3%8D%E0%B2%AF-%E0%B2%AC%E0%B2%B0%E0%B2%B9-%E0%B2%AD%E0%B2%BE%E0%B2%97-%E0%B3%A7


    ಸುಬ್ಬ 'ಹೆಣ್ಣು' ನೋಡಲು ಹೋಗಿದ್ದು- (ಹಾಸ್ಯ ಬರಹ)-ಕೊನೆ ಭಾಗ | ಸಂಪದ - Sampada
    http://sampada.net/%E0%B2%B8%E0%B3%81%E0%B2%AC%E0%B3%8D%E0%B2%AC-%E0%B2%B9%E0%B3%86%E0%B2%A3%E0%B3%8D%E0%B2%A3%E0%B3%81-%E0%B2%A8%E0%B3%8B%E0%B2%A1%E0%B2%B2%E0%B3%81-%E0%B2%B9%E0%B3%8B%E0%B2%97%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%B9%E0%B2%BE%E0%B2%B8%E0%B3%8D%E0%B2%AF-%E0%B2%AC%E0%B2%B0%E0%B2%B9-%E0%B2%95%E0%B3%8A%E0%B2%A8%E0%B3%86-%E0%B2%AD%E0%B2%BE%E0%B2%97

    ReplyDelete
  25. ಹಾಗೆ ನಿಮ್ಮ ಬ್ಲಾಗಿನ ಬ್ಯಾಕ್ ಗ್ರೌಂಡ್ ಗೆ ಹಾಕಿರ್ವ 'ಚಾರಣದ' ಫೋಟೋ ಬಹಳೇ ಸೊಗಸಾಗಿದೆ.. ಅದು ಮುಳ್ಳಯ್ಯನ ಗಿರಿಯೇ?

    ReplyDelete
  26. Just awesome .....

    ReplyDelete
  27. Yeah yenna illadakulu/familidakulu ithene suru malther...

    i really liked it..

    Best Regards:
    Praseeda Aithal

    ReplyDelete
  28. nimma blaaginalli kannadadalli hEge Taipu maaDOdu

    ReplyDelete
    Replies
    1. Ramesh Sir,
      direct aagi kannadadalli type madoke agodilla. gmail alli compose maadi haakabahudu

      Sri:-)

      Delete