Saturday, October 16, 2010

ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ?

ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ?


ಹಾಗೇನಾದ್ರೂ ಆದಲ್ಲಿ ದಿನ ಬೆಳಗಾದರೆ ಸ೦ಬಳ ಕೈಯಲ್ಲಿರತ್ತೆ ಅ೦ತ ಎಲ್ಲರು ಎರಡೂ ಕಣ್ಣಗಲಿಸಿ ಹೇಳುತ್ತಾರೆ. ಅದಲ್ಲದೆ ಏನೆಲ್ಲಾ ಆಗಬಹುದು ಅ೦ತ ಬರೆಯೋ just ಟೈಮ್ ಪಾಸ್ ಬರಹ ಇದು......

ಹಾಗೇನಾದ್ರೂ ಆದರೆ ಒ೦ದು ಖುಷಿಯ ವಿಷಯ ಅ೦ದ್ರೆ ವರ್ಷಗಟ್ಟಲೆ ಬಾರೋ ಸಾಸ್ ಬಹು ದಾರಾವಾಹಿಗಳು ದಿನಗಳಲ್ಲಿ ಮುಗಿದು ಹೋಗತ್ತೆ. ಇನ್ನು Cricket test match ಗಳು 20-20 ಮ್ಯಾಚ್ ಗಿ೦ತ ಮು೦ಚೆನೆ ಮುಗಿದು ಹೋಗಿರತ್ತೆ!!!! So ರಿಮೋಟಿಗಾಗಿ ಮನೆಯಲ್ಲಿ ಕಾದಾಟ ಇಲ್ಲ. ಅ೦ದರೆ ನೆಮ್ಮದಿ ಜೀವನ :-)

ಮಕ್ಕಳಿಗೆ ಎಲ್ಲರು complan ಕೊಡ್ತಾರೆ, ಅವರ ಎತ್ತರ ಜಾಸ್ತಿ ಆಗಲಿ ಅ೦ತ. ಮಕ್ಕಳು ಬೆಳೆಯೋದೆ 8-12 ವರ್ಷದ ಸಮಯದಲ್ಲಿ ....ಹೊಸ ಲೆಕ್ಕಾಚಾರದ ಪ್ರಕಾರ ಮಕ್ಕಳು ಕೇವಲ ಒ೦ದು ವಾರ complan ಕುಡಿಯಲಿಲ್ಲ ಅ೦ದ್ರೆ ಅವರ ಬೆಳವಣಿಗೆ ಸಿಕ್ಕಾಪಟ್ಟೆ ಹೊಡೆತ :-(

ಶಾಲೆ ಕಾಲೇಜುಗಳಲ್ಲಿ ಬೋರ್ ಹೊಡೆಸೋ ಕ್ಲಾಸುಗಳು ಕಣ್ಣು ಮಿಟುಕಿಸೋದರಲ್ಲಿ ಮುಗಿದಿರತ್ತೆ. ಆದರೆ ಸು೦ದರ ಹುಡುಗಿಯರನ್ನು ನೋಡೋ ಅತಿ ಮದುರ ಕ್ಷಣಗಳು ಕೂಡ immediately kallas ಆಗಿರುತ್ತೆ :-(

ವರ್ಷಗಟ್ಟಲೆ ನಮ್ಮ ಕನಸಲ್ಲಿ ಬ೦ದು ಪ್ರೇತಾತ್ಮಗಳ೦ತೆ ಕಾಡುವ EMI ಗಳು ದಿನ ಲೆಕ್ಕದಲ್ಲಿ ಮುಗಿದೇ ಹೋಗಿರುತ್ತೆ!!!! .

ನೋಡು ನೋಡುತ್ತಿದ್ದ೦ತೆ ನಿಮ್ಮ ಮದುವೆ ಆಗಿ ಮಕ್ಕಳಾಗಿ ಮಕ್ಕಳು ದೊಡ್ಡವರಾಗಿ ನಿಮ್ಮನ್ನು ಸಾಕಲು ತಯಾರಾಗಿರುತ್ತಾರೆ!!!!

now the sad part ನಮ್ಮ ಸರಾಸರಿ ಜೀವನಾವದಿ ಕೇವಲ ಕೆಲ ತಿ೦ಗಳಿಗೆ ಸೀಮಿತವಾಗಿರತ್ತೆ .....

ಆದ್ರೆ credit ಕಾರ್ಡ್ ಬಿಲ್ ಪ್ರತಿದಿನ ಬರತ್ತೆ. ದಿನ ಬೆಳಗ್ಗಾದ್ರೆ ಹಾಲಿನವ ಕಿಸಿಯುತ್ತ ಕೈ ಚಾಚಿ ನಿ೦ತಿರುತ್ತಾನೆ. ನಿಮ್ಮ ಮನೆಯ ಓನರ್ ಕಣ್ಣಲ್ಲೇ ಬಾಡಿಗೆ ಯಾವಾಗ ಕೊಡ್ತೀಯ ಅ೦ತ ವಿಚಾರಿಸ್ತಾನೆ. ಕೇಬಲಿನವ ಸರ್ ಈಗ ಎಲ್ಲ ಚಾನಲ್ ಸರಿಯಾಗಿ ಬರ್ತಾ ಇದೆಯಾ ಅ೦ತ ಪೀಟಿಕೆ ಹಾಕಿ ತಿ೦ಗಳ ಬಾಕಿ ತಗೋತಾನೆ. ಇನ್ನು ನೀರು, KEB ಬಿಲ್ಲು, ಅ೦ಗಡಿ ಬಾಕಿ...ಇನ್ನು ಏನೇನೋ

ರೋಗಿಯೊಬ್ಬ ಆಸ್ಪತ್ರೆಯಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುತ್ತಾನೆ. ಡಾಕ್ಟರ್ ಅವನಿಗೆ ನೀನು ಕೇವಲ ೨ ತಿ೦ಗಳು ಬದುಕುತ್ತೀಯ ಅ೦ತಾರೆ...ಅ೦ದರೆ ಕೇವಲ ೨ ದಿನ...ಇನ್ನು ಅವನಿಗೆ ಲೋಕ ಸುತ್ತಬೇಕು ಅನ್ನೋ ಆಸೆ ಇದ್ದಾರೆ ಮುಗಿದೇ ಹೋಯ್ತು ..Indian Airlines ವಿಮಾನ ಹತ್ತಿ ಅದು Take Off ಆಗೋದನ್ನು ಕಾಯುತ್ತಲೇ ಅವನ ಪ್ರಾಣ ಪಕ್ಷಿ ಹಾರಿ ಹೋಗಿರತ್ತೆ.

ಒ೦ದು ತಿ೦ಗಳಲ್ಲಿ ಮುಗಿಸು ಅ೦ತ ಬಾಸ್ ಕೊಟ್ಟ ಪ್ರಾಜೆಕ್ಟ್ ಕೇವಲ ಒ೦ದೆ ದಿನದಲ್ಲಿ ಮುಗಿಸಬೇಕು...ಒಹ್ ಕೇಳಿ ಜ್ವರ ಬ೦ದ ಹಾಗಿದೆಯಲ್ಲ. ಜ್ವರ ಅ೦ತ ಒ೦ದು ವಾರ ರಜೆ ಹಾಕೋಣ ಅ೦ದ್ರೆ ಹೊಸ ಲೆಕ್ಕದ ಪ್ರಕಾರ ವಾರ ಅ೦ದ್ರೆ ಕೆಲ ಗ೦ಟೆಗಳು ಮಾತ್ರ...

            ......ಶ್ರೀ:-)

8 comments:

 1. ಶ್ರೀ ಪ್ರಸಾದ್ ವಾವ್ ಕಲ್ಪನೆ ಚೆನ್ನಾಗಿದೆ.ಎಲ್ಲಾ ಬೇಗ ಬೇಗ ಮುಗಿದರೆ ಮಜಾ ಸಿಗಲ್ಲಾ ಅಲ್ವ .ಸೀನ್ ಫಾಸ್ಟ್ ಫಾರ್ವರ್ಡ್ ಆದರೂ ಕಷ್ಟ ಸ್ಲೋ ಆದರೂ ಕಷ್ಟ!! ಈಗಿರುವಂತೆ ಸರಿಯಾದ ವೇಗದಲ್ಲಿ ಜೀವನದ ಗಾಡಿ ಚಲಿಸಲಿ ಬಿಡಿ. ಈ ಜೀವನ ಬೇವು ಬೆಲ್ಲ ಅದರಲ್ಲೇ ಕಾಣೋಣ ನೆಮ್ಮದಿಯ ತಾಣ .

  ReplyDelete
 2. ಸೂಪರ್ ಐಡಿಯಾ...ಒಂಥರ ಎಲ್ಲಾ ಪಾಸ್ಟ್...ಒಂದು ಒಳ್ಳೆಯ ಕನಸು ದೀರ್ಘವಾಗಿರಲಿ ಅನ್ನುವಷ್ಟರಲ್ಲೇ ಮುಗಿದಿರುತ್ತೆ....ಸುಂದರ ಹುಡುಗಿಯ ಜೊತೆ ಒಂದು ದಿನ ಕಳೆಯೋಣವೆಂದರೆ ಪಟ್ ಅಂತ ಮುಗಿದಿರುತ್ತೆ....ಅಹ..ಅಹ..ಅಹ..

  ReplyDelete
 3. ಯಥಾಸ್ತಿತಿನೇ ನಮಗೆ ಸರಿಯಾಗಿದೆ ಬಾಲು ಸರ್, ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು
  ಒಳ್ಳೆಯ ಕನಸುಗಳು ದೀರ್ಘವಾಗಿರಲಿ ಅನ್ನುತ್ತೀವಿ. ಅದೇ ಕೆಟ್ಟ ಕನಸುಗಳು ಬೇಗ ಮುಗಿಯಲಿ ಅನ್ನುತ್ತೀವಿ ಅಲ್ವ ಶಿವೂ ಸರ್ ...ದನ್ಯವಾದಗಳು

  ReplyDelete
 4. ಐಡಿಯಾ ಸುಪರ್..
  ಕಾಲೆಜಿನಲ್ಲಿದ್ದಾಗ ಇ೦ಗ್ಲಿಶ್ ನಲ್ಲಿ ನಮಗೊ೦ದು ಪಾಠವಿತ್ತು.. ”ನ್ಯೂ ಆಕ್ಸಿಲರೇಷನ್” ಅ೦ತ..ಅದೊ೦ದು ಔಷಧ.. ಅದನ್ನು ಕುಡಿದಾಗ ಎಲ್ಲಾ ಕೆಲಸಗಳೂ ಫಾಸ್ಟ್...ಫಾಸ್ಟ್.. ಕುಡಿದಾತನಿಗೆ ಬೇರ‍ೆಯವರ ಕೆಲಸಗಳೆಲ್ಲಾ ಯಾಕಪ್ಪಾ ಇಷ್ಟೊ೦ದು ಸ್ಲೊ.. ಅನ್ನಿಸುತ್ತಿತ್ತು..

  ಚೆನ್ನಾಗಿದೆ..

  ReplyDelete
 5. sri... bhoomi athu fast tirgunda iru bega ajjer aparye.... irna nenapu matha super. fantastic keep it up....

  nanala sokuda blog barele.....

  ReplyDelete
 6. ಕಲ್ಪನೆ ಮತ್ತು ಬರೆದ ಶೈಲಿ ಚೆನ್ನಾಗಿದೆ.

  ReplyDelete
 7. channaagide october 16 kke baredirodu ishtottige ajja aagirbahudu, bareyovaaga naaninnoo chikka huduga

  ReplyDelete
 8. ಗುರು ಅವರೇ ,ಕಲ್ಪನೆಯನ್ನು ಹಾಗೆ ಮು೦ದುವರಿಸಿದ್ದಕ್ಕೆ ದನ್ಯವಾದಗಳು....ಈಗಿರೋ ರೀತಿನೇ ಸರಿಯಾಗಿದೆ ನಮಗೆ ಏನ೦ತೀರ ?.

  ಶ್ರೀ:-)

  ReplyDelete