Monday, March 31, 2025

Gen Zzzzz

 ##ತರಲೆ## Gen "Z" ಹುಡುಗರು ಅಂದ್ರೆ? ನಾವು A ಇಂದ ಸ್ಟಾರ್ಟ್ ಮಾಡಿದ್ರೆ ಅವ್ರು Z ಇಂದ ಶುರು ಮಾಡ್ತಾರೆ, ನಾವು Z ಇಂದ zoo ಅಂದ್ರೆ ಅವ್ರು z ಇಂದ zoom ಅಂತಾರೆ. Fast ಇರಬೇಕಾದಲ್ಲಿ slow, ಇನ್ನು slow ಇರಬೇಕಾದಲ್ಲಿ ಫುಲ್ fast. ಅಪ್ಪ ಅಮ್ಮನನ್ನು amazon ಅಲ್ಲಿ exchange ಮಾಡಬಹುದಾ ಅಂತ ಯೋಚ್ನೆ ಮಾಡೋ ಜನರೇಷನ್ 🤣🤣🤣***ಶ್ರೀ**

Friday, March 28, 2025

Cctv

 ##ತರಲೆ## ಊರಲ್ಲಿರೋ ಫ್ರೆಂಡ್ ಮನೇಲಿ ಕಳ್ಳರ ಭಯದಿಂದ ಅವರ ಅಪ್ಪ ಅಮ್ಮ ಸರಿಯಾಗಿ ನಿದ್ದೆ ಮಾಡ್ತಾ ಇರ್ಲಿಲ್ಲ ಅಂತೆ. ಅದಕ್ಕೇ CCTV ಹಾಕಿಸಿದ್ರೆ ಈಗಲೂ ಮಲಗ್ತಾ ಇಲ್ವಂತೆ... CCTV ನೇ ಕದ್ದುಕೊಂಡು ಹೋದ್ರೆ ಅಂತ... ಭಯಕ್ಕೆ ಕೊನೆಯೆಲ್ಲಿ?.... 🤣🤣**ಶ್ರೀ**

ಗಡಿ.....

 ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ತ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು... ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ...

ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು ಕೃಷಿಯಲ್ಲಿ ಚೆನ್ನಾಗಿದ್ದ ಅಣ್ಣೇಗೌಡರಿಗೆ ಎಕರೆಗಟ್ಟಲೆ ಕಾಫಿ ತೋಟ ಹಂಚಿದ್ದರೆ, ವ್ಯಾವಹಾರಿಕ ದೂರ ದೃಷ್ಟಿ ಇದ್ದ ತಮ್ಮ ಮರಿ ಗೌಡರಿಗೆ ಸಣ್ಣ ತೋಟದ ಜೊತೆ ಅಡಿಕೆ ಮಂಡಿ, ಗೊಬ್ಬರದ ಅಂಗಡಿ ಎಲ್ಲಾ ಹಂಚಿಕೆ ಮಾಡಿದ್ರು. ಇನ್ನುಳಿದಿದ್ದು ಗುಡ್ಡದ ತುದಿಯಲ್ಲಿದ್ದ ಸುಮಾರು 5 ಎಕ್ರೆ ಆಗೋವಷ್ಟು ಇಳಿಜಾರಿನ ಜಾಗ. ಪಕ್ಕದಲ್ಲೇ ವರ್ಷದಲ್ಲಿ 6-8 ತಿಂಗಳು ಹರಿಯೋ ಸಣ್ಣ ತೊರೆ. ಕಣ್ಣು ಹಾಯಿಸಿದಷ್ಟು ದೂರ ಹಸಿರೇ ಹಸಿರು. ಒಮ್ಮೆ ನೋಡಿದರೆ ಮನಸ್ಸಿನ ಭಾರಗಳೆಲ್ಲ ಓಡಿ ಹೋಗೋ ರೀತಿ ವಾತಾವರಣ. ಕುಲದೇವರ ಗುಡಿ ಇರೋ ಜಾಗ ಅನ್ನೋದಕ್ಕೆ ದೊಡ್ಡ ಗೌಡರು ಇನ್ನೂ ಆಸ್ತಿ ಹಂಚಿಕೆ ಮಾಡಿರಲಿಲ್ಲ. ಕುಲದೇವರು ಅಂದಿದ್ದಕ್ಕೆ ಇಬ್ಬರೂ ಗೌಡರ ತಲೆ ದೇವಿಯ ಎದುರು ಅರಿವಿಲ್ಲದೆ ಬಾಗುತ್ತಿತ್ತು. ಗೌಡತಿಯ ಸಮಾಧಿನು ಅಲ್ಲೇ ಕೊಂಚ ದೂರದಲ್ಲಿತ್ತು. ಈ ಜಾಗವನ್ನು ಕ್ರಮೇಣ ಹಂಚಿಕೆ ಮಾಡಿದ್ರಾಯ್ತು ಅಂತ ಅಂದ್ಕೊಂಡಿದ್ದ ಗೌಡರು ಒಂದು ದಿನ ನಿದ್ದೆಯಲ್ಲೇ ಶಿವನ ಪಾದ ಸೇರಿದ್ರು.

ನೀರಿನ ಹರಿವು ಇದ್ದ ಕೊಡಗಿನ ಇಳಿಜಾರಿನ ಪ್ರದೇಶ. ಮುಂದೆ ಆ ಜಾಗದಲ್ಲಿ ಕಾಫಿ ತೋಟ ಮಾಡಬೇಕು ಅಂತ ಒಬ್ಬ ಅಂದುಕೊಂಡಿದ್ದರೆ, ಮತ್ತೊಬ್ಬ ರೆಸಾರ್ಟ್ ಕಟ್ಟಿ ಸ್ವಿಮ್ಮಿಂಗ್ ಪೂಲಿಗೆ ತೊರೆಯ ನೀರನ್ನು ಹರಿಸಬೇಕು ಅಂದುಕೊಂಡಿದ್ದ. ಆದರೆ ಇದ್ದಕ್ಕಿದ್ದಂತೆ ಗೌಡರು ಹೋಗಿದ್ದರಿಂದ ಜಾಗ ಹಂಚಿಕೆಯಾಗದೆ ಹಾಗೇ ಉಳಿದಿತ್ತು. ಅಪ್ಪ ಹೋದ ಮೇಲೆ ಸ್ವಲ್ಪ ಸಮಯ ಅಣ್ಣ ತಮ್ಮ ಇಬ್ಬರೂ ಅನ್ಯೋನ್ಯವಾಗೇ ಇದ್ದರು. ನಿದಾನಕ್ಕೆ ಮನೆ ಹೆಂಗಸರು ಮತ್ತು ಹಿತಶತ್ರುಗಳ ಕುಮ್ಮಕ್ಕಿನಿಂದ ಶೀತಲ ಸಮರ ಶುರುವಾಗಿತ್ತು. ಕಡೆಗೆ ಆ ಜಾಗ ಪೂರ್ತಿ ತನಗೇ ಬೇಕು ಅಂತ ಇಬ್ಬರೂ ಹಠ ಹಿಡಿದು ಆಡಿದ ಜಗಳ, ಮಾತುಕತೆಯನ್ನೇ ನಿಲ್ಲಿಸಿ ಚಾಕು ಚೂರಿ ಹಿಡಿಯೋ ಹಂತಕ್ಕೆ ಬಂದು ನಿಂತಿತ್ತು. ಸದ್ಯ ದೊಡ್ಡಪ್ಪನ ಮದ್ಯಸ್ತಿಕೆಯಲ್ಲಿ ಮಾತುಕತೆ ನಡೆದಿದ್ದರೂ ಪೂರ್ತಿ 5 ಎಕ್ರೆ ತನಗೇ ಬೇಕೆಂದು ಇಬ್ಬರೂ ಹಠ ಹಿಡಿದು ಕೂತಿದ್ದರು. ಕುಲದೇವಿಯ ಸನ್ನಿದಿಯಲ್ಲಿ ಪ್ರತಿ ವರ್ಷ ನಾಗರಪಂಚಮಿ ಪೂಜೆಯ ಸಮಯದಲ್ಲಿ ವಾರ್ಷಿಕ ಪೂಜೆ ನಡೆಯುತ್ತಿತ್ತು. ಈ ಬಾರಿ ಪೂಜೆಗೆ ಬಂದವರು ಊರಿನ ಇತರ ಹಿರಿಯರ ಸಮ್ಮುಖದಲ್ಲಿ ಈ ಸಮಸ್ಯೆಗೆ ಏನಾದರೊಂದು ಪರಿಹಾರ ಕಂಡುಹಿಡಿಯುವುದಾಗಿ ದೊಡ್ಡಪ್ಪ ಹೇಳಿದ್ದರು.

ಈ ಬಾರಿ ಮುಂಗಾರು ಸಿಕ್ಕಾಪಟ್ಟೆ ಜೋರು. ಹೇಳಿ ಕೇಳಿ ಕೊಡಗಿನ ಮಳೆ. ಬಿಡದೇ 15 ದಿನದಿಂದ ಸುರಿಯುತ್ತಿದೆ. ಕುಲದೇವರ ಗುಡಿ ಪಕ್ಕದ ತೊರೆ ತುಂಬಿ ಹರಿಯುತ್ತಿದೆ ಅಂತ ಆಳುಗಳು ಬಂದು ಇಬ್ಬರಿಗೂ ತಿಳಿಸಿದ್ದರು. ಏನೇ ಇರಲಿ ಪಂಚಮಿ ದಿನ ಜಾಗದ ಸಮಸ್ಯೆ ಇತ್ಯರ್ಥ ಆದ್ರೆ ಮಹಾಪೂಜೆ ಸಲ್ಲಿಸೋದಾಗಿ ಇಬ್ಬರೂ ಮನಸ್ಸಿನಲ್ಲೇ ದೇವಿಗೆ ಹರಕೆ ಹೊತ್ತಿದ್ರು. ನಾಗರಪಂಚಮಿ ಹಿಂದಿನ ದಿನ ಇಬ್ಬರೂ ಅದೇನೋ ಸಮಾಧಾನದಿಂದ ಮಲಗಿದ್ದರು. ಮದ್ಯ ರಾತ್ರಿ ಅದೇನೋ ಭಯಂಕರ ಸದ್ದು, ಭೂಮಿಯೆಲ್ಲ ನಡುಗಿದಂತೆ ಅನುಭವ. ಭೂಕಂಪ ಇದ್ದರೂ ಇರಬಹುದೇನೋ ಅನ್ನಿಸಿತು. ಕರೆಂಟ್ ಬೇರೆ ಇರಲಿಲ್ಲ. ಅಣ್ಣೇಗೌಡರು ಕಿಟಕಿಯಿಂದ ನೋಡುತ್ತಿದ್ದಂತೆ ಬದಿಯಲ್ಲಿದ್ದ ಹಳೆ ಹಟ್ಟಿ ನೆಲಕ್ಕೊರಗಿತ್ತು. ಸುಮಾರು ಹತ್ತು ಹನ್ನೆರಡು ಹಸುಗಳು ಹೊಸ ಹಟ್ಟಿಯಲ್ಲಿ ಇದ್ದಿದ್ದಕೆ ಉಳಿದಿದ್ದವು. ಕಾಳರಾತ್ರಿ ಮತ್ತು ಭೋರ್ಗರೆಯೋ ಮಳೆಯಲ್ಲಿ ನಿಸ್ಸಹಾಯಕರಾಗಿ ನೋಡೋದು ಬಿಟ್ಟು ಇನ್ನೇನು ಮಾಡೋದು ಸಾದ್ಯವಿರಲಿಲ್ಲ.

ರಾತ್ರೆಯಿಡೀ ಭೋರ್ಗರೆದು ನಸು ಮುಂಜಾನೆಗೆ ಮಳೆ ಸ್ವಲ್ಪ ಬಿಟ್ಟಿತ್ತು. ಅಷ್ಟರಲ್ಲೇ ಆಳು ತಿಮ್ಮ ಓಡಿ ಬಂದು ಗುಡ್ಡಕ್ಕೆ ಗುಡ್ಡವೇ ಕೊಚ್ಚಿ ಹೋಗಿದೆ ಅಂದಾಗ ಅಣ್ಣೇಗೌಡರು ದಿಗ್ಬ್ರಾಂತರಾಗಿದ್ದರು. ಓಡುತ್ತಲೇ ಗುಡ್ಡದ ಅಂಚಿನ ಹತ್ತಿರ ಹೋಗಿ ನೋಡಿದರೆ ಗುಡ್ಡದ ದೊಡ್ಡ ಭಾಗವೊಂದು ತೊರೆಯೊಂದಿಗೆ ಕೊಚ್ಚಿ ಹೋಗಿತ್ತು. ಅಲ್ಲೊಂದು ತೋಟ ಇತ್ತು ಅನ್ನೋ ಯಾವ ಕುರುಹೂ ಇರಲಿಲ್ಲ. ಕುಲದೇವರ ಗುಡಿಯ ಪ್ರಾಂಗಣ ಪೂರ್ತಿ ಕೊಚ್ಚಿ ಹೋಗಿದ್ದರೆ ಗರ್ಭ ಗುಡಿಯು ವಿಗ್ರಹ ಸಮೇತ ನೀರಿನ ರಭಸಕ್ಕೆ ತೇಲಿ ಹೋಗಿ ಗುಡ್ಡದ ತುದಿಯಲ್ಲಿ ಉರುಳಿದ್ದ ಮರವೊಂದಕ್ಕೆ ತಾಗಿ ನಿಂತಿತ್ತು. ಮಂಡಿ ಕೆಲಸದಿಂದ ತಡರಾತ್ರಿ ಊರಿಗೆ ಮರಳಿದ್ದ ಮರೀಗೌಡನೂ ವಿಷಯ ತಿಳಿದು ಆತುರಾತುರವಾಗಿ ಗುಡ್ಡದಂಚಿಗೆ ಬಂದಿದ್ದ. ಅಲ್ಲಿನ ಪರಿಸ್ಥಿತಿ ನೋಡಿ ತಮ್ಮನಿಗೆ ಸಿಡಿಲು ಬಡಿದಂತಾಗಿತ್ತು. 90ರ ದಶಕದಲ್ಲಿ ಆಸ್ತಿ ಅಳತೆ ಮಾಡಿಸಿದ್ದಾಗ ಕಂದಾಯ ಇಲಾಖೆಯವರು ಹಾಕಿದ್ದ ಗಡಿಕಲ್ಲು, ಹಂದಿ ಬರದಂತೆ ಎಳೆದಿದ್ದ ತಂತಿಬೇಲಿ, ಬೆಳೆದು ನಿಂತಿದ್ದ ಮರಗಳೆಲ್ಲ ಹೆಸರಿಲ್ಲದಂತೆ ತೊಳೆದು ಹೋಗಿತ್ತು. ರೆಸಾರ್ಟ್,ತೋಟ ಎರಡೂ ಇಲ್ಲದೆ ಅದ್ಯಾವ ಸರ್ವೇಯಲ್ಲೂ ಅಳತೆ ಮಾಡಲಾಗದಂತೆ ಅಷ್ಟೂ ಜಾಗವು ಗುಡ್ಡದ ಜೊತೆ ಕುಸಿದು, ಕೊಚ್ಚಿ ನದಿ ಸೇರಿತ್ತು. ದೂರದಲ್ಲಿ ಮೂಖನಾಗಿ ನಿಂತಿದ್ದ ಅಣ್ಣನನ್ನು ನೋಡಿ ತಮ್ಮನಿಗೆ ಅದೇನು ಅನಿಸಿತೋ, ಓಡಿ ಹೋಗಿ ಅವನನ್ನು ತಬ್ಬಿಕೊಂಡ. ಅದ್ಯಾಕೋ ಗೊತ್ತಿಲ್ಲ ಇಬ್ಬರ ಕಣ್ಣಿಂದಲೂ ಒಂದೇ ಸಮನೆ ಕಣ್ಣೀರು ಸುರಿಯುತ್ತಿತ್ತು. ಅದೆಷ್ಟೋ ದಿನದಿಂದ ಬಿಡದೆ ಸುರಿಯುತ್ತಿದ್ದ ಮಳೆ ಇವತ್ತು ಸರಿದು ನಿದಾನಕ್ಕೆ ಹೊಂಬಿಸಿಲು ಮೂಡಿತ್ತು. ಅಷ್ಟರಲ್ಲೇ ಗೌಡರ ಮನೆಯ ಹಿರಿಯ ಆಳು ಪಕ್ಕದಲ್ಲೇ ಅರಳಿದ್ದ ಹೂಗಳನ್ನು ಕೊಯ್ದು ದೇವಿಯ ಮುಡಿಗಿಟ್ಟ. ನೆರೆದಿದ್ದವರೆಲ್ಲ ಕೈ ಮುಗಿದು ದೇವಿಗೆ ತಲೆಬಾಗಿದರು. ಬಗೆ ಹರಿಯದ ಜಾಗದ ಗಡಿ ಸಮಸ್ಯೆಯನ್ನು ಪರಿಹರಿಸಲು, ಆ ದೇವಿ ಗಡಿಯೇ ಇಲ್ಲದಂತೆ ಮಾಡಿದ್ದಳು. ದೇವಿಯ ಮುಖದ ಮೇಲೆ ಮೋಡದ ಮರೆಯಿಂದ ಕಿರಣ ಸ್ಪರ್ಶಿಸುತ್ತಿರಲು ಅದೇನೋ ಹೊಸಕಳೆ ಕಾಣ್ತಾ ಇತ್ತು. ಆ ದೇವಿ ಮುಗುಳ್ನಗೆ ಬೀರಿದಂತಿತ್ತು......


Thursday, March 27, 2025

ಬಿಸ್ಕೆಟ್ ಮತ್ತು cookies

 ##ತರಲೆ## biscuit ಮತ್ತೆ cookies ಮದ್ಯೆ ಇರೋ ವ್ಯತ್ಯಾಸ...? Biscuit ಪಾಪ govt ಸ್ಕೂಲ್ ಅಲ್ಲಿ ಕಲಿತಿದ್ದು ಅದ್ಕೇ ಜನ ಕಮ್ಮಿ ಮರ್ಯಾದೆ ಕೊಡ್ತಾರೆ, ಅದೇ cookies ದು MBA ಆಗಿದೆ, ಅದ್ಕೇ ಮರ್ಯಾದೆ ಜಾಸ್ತಿ. ಒಂತರಾ ಬಿಸ್ಕೆಟ್ middle ಕ್ಲಾಸ್, cookies premium ಕ್ಲಾಸ್ ..🤣🤣**ಶ್ರೀ**

Wednesday, March 26, 2025

ಬೀದಿ ದೀಪದ ಕೆಳಗೆ

 ##ತರಲೆ ## **on a lighter note**ಹಿಂದಿನ ತಲೆಮಾರಿನವರು ಯಾವಾಗ್ಲೂ "ನಾವೆಲ್ಲಾ ಮುಂಚೆ ಎಷ್ಟು ಕಷ್ಟಪಡ್ತಾ ಇದ್ವಿ ಗೊತ್ತಾ, ನಾವು ಬೀದಿ ದೀಪದ ಕೆಳಗೆ ಓದ್ತಾ ಇದ್ವಿ ಅಂತಿರ್ತಾರೆ".......ಪ್ರಶ್ನೆ ಏನಪ್ಪಾ ಅಂದ್ರೆ ಇವ್ರು ಹಗಲಲ್ಲಿ ಯಾಕೆ ಓದ್ತಾ ಇರ್ಲಿಲ್ಲ? ಓದೋದು ಬಿಟ್ಟು ಏನ್ ಮಾಡ್ತಾ ಇದ್ರು ಅಂತ 🤣🤣🤣**ಶ್ರೀ**

Tuesday, March 25, 2025

RCB ಫ್ಯಾನ್

 ##ತರಲೆ## RCB ಫ್ಯಾನ್ ತನ್ನ ಹೆಂಡತಿಗೆ ಹೀಗೆ ಹೇಳಬಹುದೇನೋ. "ನೀನು ನನ್ನ ಪಾಲಿಗೆ RCB ಟೀಮ್ ಇದ್ದ ಹಾಗೆ, ನಾನು ನಿನ್ನ ಅಭಿಮಾನಿ, ಸೋಲಿರಲಿ ಗೆಲುವಿರಲಿ ಕಡೆಯವರೆಗೂ ಜೊತೆಗಿರುತ್ತೇನೆ. ಈ ಸಂಸಾರದಲ್ಲಿ ನೆಮ್ಮದಿಯ ಕಪ್ ನಮ್ಮದೇ..""🤣🤣🤣***ಶ್ರೀ**

Friday, March 21, 2025

Hand writing

 ##ತರಲೆ## ಮಕ್ಕಳಿಗೆ Handwriting ಚೆನ್ನಾಗಿಲ್ಲ, ಬರೆದಿದ್ದು ಓದಕ್ಕೆ ಆಗಲ್ಲ ಅಂತ ಬೈಯ್ಯಬೇಡಿ........ ಮುಂದೆ ಅವ್ರು ಡಾಕ್ಟರ್ ಆದ್ರೂ ಆಗಬಹುದು,  Handwriting ಚೆನ್ನಾಗಿಲ್ಲ ಅಂದ್ರೆ ಡಾಕ್ಟರ್ ಆಗಕ್ಕೆ entrance exam ಪಾಸ್ ಆದ ಹಾಗೇನೇ..... 🤣🤣🤣**ಶ್ರೀ***

Thursday, March 20, 2025

Mankind

 ##ತರಲೆ## ಮನುಕುಲಕ್ಕೆ Mankind ಅಂತ ಹೇಳ್ತಾರೆ..... ಪ್ರಶ್ನೆ ಏನಪ್ಪಾ ಅಂದ್ರೆ Womenkind ಅಂತ ಯಾಕೆ ಹೇಳಲ್ಲ, women ಯಾರು kind ಇರಲ್ಲ ಅಂತಾನಾ? 🤣🤣🤣**ಶ್ರೀ**

Wednesday, March 19, 2025

ಮೊಬೈಲ್ ಸತ್ಯ

 ##ತರಲೆ##ಮೊಬೈಲ್ ಗಾದೆ ----ತನ್ನ ಮೊಬೈಲ್ ಅಲ್ಲಿ 5% ಚಾರ್ಜ್ ಉಳಿಸಿಕೊಂಡಿರುವವನಿಗಿಂತ, 75% ಚಾರ್ಜ್ ಇರೋ ಮೊಬೈಲ್ ಅನ್ನು ಕೈಲಿ ಹಿಡಿದಿರೋ ಫ್ರೆಂಡ್ ಗೆ ಚಾರ್ಜ್ ಗೆ ಹಾಕಕ್ಕೆ ಜಾಸ್ತಿ urgent ಇರತ್ತೆ**ಶ್ರೀ**

ಸೊಪ್ಪಿನ ಪಲ್ಯ

 ##ತರಲೆ## ಸೊಪ್ಪಿನ ಪಲ್ಯ ತಿನ್ನಲ್ಲ ಅಂತ ಹಠ ಮಾಡ್ತಾ ಇದ್ದ ಮಗಳಿಗೆ ಹೆಂಡ್ತಿ ಹೇಳ್ತಾ ಇದ್ಲು ಸೊಪ್ಪು ಕಣ್ಣಿಗೆ ಒಳ್ಳೇದು ತಿನ್ನು ಅಂತ... ಟಿವಿ ನೋಡ್ತಾ ನಾನಂದೆ ನಮಗೆ ಒಳ್ಳೇದೋ ಏನೋ ಗೊತ್ತಿಲ್ಲ ಆದ್ರೆ ಈ concept ಸೊಪ್ಪಿಗೆ ಮಾತ್ರ ಒಳ್ಳೇದಲ್ಲ, ಯಾಕಂದ್ರೆ ಜನ ಅದನ್ನ ಕೊಚ್ಚಿ ಕೊಚ್ಚಿ ಉಪ್ಪು ಖಾರ ಹಾಕ್ತಾರೆ ಅಂತ.... ಆಮೇಲೆ ಇನ್ನೇನು #ಅಡುಗೆ ಮನೇಲಿ ಭೂಕಂಪ#🤣🤣🤣**ಶ್ರೀ**

Tuesday, March 18, 2025

ಪಕ್ಕದ್ಮನೆ ವಿಷಯ

 ##ತರಲೆ## ಪಕ್ಕದ ಮನೇಲಿ ಏನಾಗ್ತಾ ಇದೆ ಅಂತ ತಿಳಿಯೋ ಅತಿಯಾದ ಕುತೂಹಲ ನಮ್ ದೇಶದಲ್ಲಿ ಎಲ್ಲರಿಗೂ ಇದೆ. ಎಷ್ಟರ ಮಟ್ಟಿಗೆ ಅಂದ್ರೆ ಬುಡಕ್ಕೆ ಬೆಂಕಿ ಹತ್ತಿದ್ದರೂ ದೀಪಾವಳಿ ರಾಕೆಟ್ ಕೂಡ ಮೇಲೆ ಹೋಗೋ ಬದ್ಲು ನುಗ್ಗೋದು ಪಕ್ಕದ ಮನೆಗೇನೇ....**ಶ್ರೀ **

Wednesday, March 12, 2025

CTC ಪ್ರಾಬ್ಲಮ್

## ತರಲೆ## ಕುಲ, ಗೋತ್ರ, ಜಾತಕ ಎಲ್ಲಾ match ಆಗಿದ್ರೂ ಇತೀಚೆಗೆ ಮದುವೆಗಳು ಮುರಿದು ಬೀಳ್ತಾ ಇರೋದಕ್ಕೆ ಕಾರಣ ಏನಿರಬಹುದು..? ಒಂದು ಕಾರಣ ಇಬ್ಬರೂ working ಇದ್ದಾಗ ಇಬ್ಬರ CTC match ಆಗದೆ ಇರೋದು🤣🤣🤣 **ಶ್ರೀ**

Good ಮಾರ್ನಿಂಗ್ ಮೆಸೇಜುಗಳು

##ತರಲೆ##ಒಂದು ದಿನವೂ ತಪ್ಪದೆ, ಪ್ರತಿನಿತ್ಯ, ಯಾವುದೇ ಫಲಾಪೇಕ್ಷೆ ಇಲ್ಲದೆ ವಾಟ್ಸಾಪ್ ಗ್ರೂಪ್ ಗಳಲ್ಲಿ good morning ಮೆಸೇಜ್/ವೀಡಿಯೋ ಕಳಿಸೋ ಸಹೃದಯಿಗಳಲ್ಲಿ ಒಂದು ವಿನಂತಿ.... ವಾರಕ್ಕೊಮ್ಮೆಯಾದ್ರು ಮೆಸೇಜ್ ಜೊತೆ ಒಂದು ದೋಸೇನೋ ಅಥವಾ ಇಡ್ಲಿ ವಡೆಯನ್ನೋ ನಮ್ಮ ಅಡ್ರೆಸ್ ಗೆ ಪಾರ್ಸೆಲ್ ಮಾಡಿದರೆ ಆ morning ಅದ್ಬುತವಾಗಿರುತ್ತೆ... ಅಲ್ವಾ🤣🤣🤣**ಶ್ರೀ**

Tuesday, March 11, 2025

OTP

 ##ತರಲೆ##OTP ಅನ್ನೋ concept ಯಾಕೆ ತಂದಿರ್ಬೋದು?. ಹಳೆ girlfriend ಹೆಸ್ರು password ಆಗೋದು ಲೋಕರೂಡಿ, ಈ password ಶೇರ್ ಮಾಡಿ ಅದೆಷ್ಟು ಡಿವೋರ್ಸ್ ಆಗಿದ್ದವೋ ಗೊತ್ತಿಲ್ಲ... ಅದಕ್ಕೆ OTP, ಎಷ್ಟು ಸರ್ತಿನಾದ್ರು request ಮಾಡಿ....... ವ್ಯಾಲಿಡಿಟಿ ಬರೇ 5 ನಿಮಿಷ ಅಷ್ಟೇ...🤣🤣🤣**ಶ್ರೀ***

Monday, March 10, 2025

ಸೋಮಾರಿತನ

 ##ತರಲೆ##ಸೋಮಾರಿತನದ ಪರಮಾವದಿ.... Exercise ಮಾಡೋವಾಗ ಯಾವುದಾದ್ರೂ ಜಾಯಿಂಟ್ ಹಿಡ್ಕೊಂಡ್ರೆ ಪರವಾಗಿಲ್ಲ ಆದ್ರೆ ಖಾಲಿ ಕೂತು ಆಕಳಿಸೋವಾಗ ದವಡೆ ಜಾಯಿಂಟ್ ಹಿಡ್ಕೊಂಡ್ರೆ? 🤣🤣🤣**ಶ್ರೀ **

ಕಲರ್ ಮತ್ತು ಡಿಸೈನ್

 ##ತರಲೆ##ಈ ಕಲರ್ ಅಲ್ಲಿ ಬೇರೆ ಡಿಸೈನ್ ತೋರಿಸಿ, ಈ ಡಿಸೈನ್ ಅಲ್ಲಿ ಬೇರೆ ಕಲರ್ ತೋರಿಸಿ ದಿನದ ಶುಭಾಶಯಗಳು 🤣🤣🤣**ಶ್ರೀ **

Saturday, March 8, 2025

Happy womens day

##ತರಲೆ ##ಎಲ್ಲಾ ನಾರೀ ಮಣಿಯರಿಗೂ ಮಹಿಳಾ ದಿನದ ಶುಭಾಶಯಗಳು 😍😍 ಎಷ್ಟು ಹೇಳಿದ್ರೂ ಗಂಡಸರಿಗಿಂತ ಹೆಂಗಸರೇ ಯಾವಾಗಲೂ ಮೇಲು..........................ಯಾಕಂದ್ರೆ ಅವ್ರು high heels ಹಾಕಿರ್ತಾರೆ 🤣🤣🤣🤣**ಶ್ರೀ **

Friday, March 7, 2025

ರೀಲ್ಸ್....

 ##ತರಲೆ## ಟೇಪ್ ರೆಕಾರ್ಡರ್ ಇದ್ದಾಗ casset ರೀಲ್ ಆಗಾಗ ಸಿಕ್ಕಿ ಹಾಕ್ಕೊಳ್ತಾ ಇತ್ತು.... ಈಗ instagram ಅಲ್ಲಿ Reels ಇದೆ,  ಆ Reels ಅಲ್ಲಿ ನಾವು ನೋಡ್ತಾ ನೋಡ್ತಾ ಘಂಟೆಗಟ್ಟಲೆ ಸಿಕ್ಕಿಹಾಕ್ಕೊಂಡಿರ್ತೀವಿ. 🤣🤣🤣**ಶ್ರೀ **

Wednesday, March 5, 2025

ಪೊಲೀಸ್ ಮತ್ತು ಫೈನ್

 ##ತರಲೆ## ದೇಶದ ಪೊಲೀಸ್ ನಾಗರೀಕರ ಬಗ್ಗೆ ತುಂಬಾ ಕೇರ್ ಮಾಡ್ತಾರೆ. ನಮ್ಮ ದೇಶದಲ್ಲಿ ಬಡವರು ಜಾಸ್ತಿ ಅಂತ ಅವ್ರಿಗೆ ಗೊತ್ತು, ಅದಕ್ಕೇ drink and drive ಗೆ ಸರಕಾರ 10000 ಅಂತ ಫೈನ್ ಸೆಟ್ ಮಾಡಿದ್ರೂ ಪೊಲೀಸಿನವ್ರು 1000 ತಗೊಂಡು ಹೋಗು ಅಂತ ಬಿಟ್ಟು ಬಿಡ್ತಾರೆ 🤣🤣***ಶ್ರೀ **

ಸಂಜೆ 7ಕ್ಕೆ ಮೊದಲು ಊಟ

 ##ತರಲೆ ##ಸಂಜೆ 7 ಘಂಟೆಗಿಂತ ಮುಂಚೆ ಊಟ ಮಾಡಿದ್ರೆ ತುಂಬಾ ಪ್ರಯೋಜನ ಇದೆ ಅಂತೆ.... ನನ್ನ ಪ್ರಕಾರ ಒಂದು ಮುಖ್ಯ ಪ್ರಯೋಜನ ಅಂದ್ರೆ 7 ಘಂಟೆಗೆ ಊಟ ಮಾಡಿದ್ರೆ 10 ಘಂಟೆಗೆ ಮತ್ತೆ ಹಸಿಯುತ್ತೆ, ಏನಾದ್ರೂ ರುಚಿ ರುಚಿಯಾಗಿ ಮತ್ತೇನಾದ್ರು snacks ತಿನ್ನಬಹುದು, ಅಲ್ವಾ?. ತಿಂದು ತಿಂದು ಈ ತಲೆಗೆ ಬರೋದು ಇಂತ ಖತರ್ನಾಕ್ ಐಡಿಯಾಗಳೇ 🤣🤣🤣 **ಶ್ರೀ **

Tuesday, March 4, 2025

ಸೂಪರ್ ಬೈಕು

 ##ತರಲೆ ##ಜೂಮ್ ಜೂಮ್ ಅಂತ ಸೂಪರ್ ಬೈಕ್ ಓಡಿಸೋ ಹುಡುಗರನ್ನು ನೋಡಿದಾಗ ಅನ್ನಿಸೋದು... ಇನ್ನೂರರ ಸ್ಪೀಡ್ ಅಲ್ಲಿ ಇವರ ಮನಸ್ಸು ಹೋಗ್ತಾ ಇದೆ, 150 ರ ಸ್ಪೀಡಿನಲ್ಲಿ ಬೈಕು, ಇದರ ಹಿಂದೆ ಹಿಂದೆ slow motion ಅಲ್ಲಿ ಕೋಣ ... ಯಮರಾಜಂದು🤣🤣**ಶ್ರೀ **

Settle ಆಗೋದು

 ##ತರಲೆ##ಮೀಸೆ ತಿರುವೋ ಮಕ್ಕಳು, ವಯಸ್ಸಾದ ಅಪ್ಪ ಅಮ್ಮ, ಊರಲ್ಲಿ settle ಆಗೋದಾ ಅಥವಾ ಬೆಂಗಳೂರಿನಲ್ಲಾ ಅನ್ನೋ ವಿಷಯಕ್ಕೆ ಹಗ್ಗ ಜಗ್ಗಾಟ .... ವಯಸ್ಸು ಅನ್ನೋ ಮರಳಿನ ಮೈದಾನದಲ್ಲಿ, ತುಸು ಗಟ್ಟಿ ಮಣ್ಣಿನ ಮೇಲೆ ನಿಂತಿದ್ದರಿಂದ ಮಕ್ಕಳ ಕೈನೆ ಮೇಲು .... ಆದರೆ ಜಗ್ಗಾಟದ ಕೊನೆಯಲ್ಲಿ ಮನಸ್ಸುಗಳಿಗೆ ಆಗಿರೋ ಗಾಯಕ್ಕೆ ಮದ್ದೆಲ್ಲಿ ? **ಶ್ರೀ ##

Monday, March 3, 2025

ಜೀರೋ ಬ್ಯಾಲೆನ್ಸ್...

 ##ತರಲೆ ##ಸರಕಾರ ಎಲ್ಲರಿಗೂ zero balance ಅಕೌಂಟ್ open ಮಾಡಕ್ಕೆ ಅವಕಾಶ ಕೊಟ್ಟಾಗ್ಲೇ ನಮಗೆ ಗೊತ್ತಾಗ್ಬೇಕಿತ್ತು..... ಇವರು ಮುಂದೆ ಟ್ಯಾಕ್ಸ್ ಕಿತ್ತು ಕಿತ್ತು ಅಕೌಂಟ್ balance ಜೀರೋ ಮಾಡ್ತಾರೆ ಅಂತ...😭😭🤣🤣.**ಶ್ರೀ **

Sunday, March 2, 2025

ಕರಾವಳಿಯ ಬಿಸಿಲು

 ##ತರಲೆ##ಊರಿಗೆ ಬಂದಿದ್ದೆ, ಯಾರೋ ಕೇಳಿದ್ರು weather ಹೇಗಿದೆ ಅಂತ... ನಾನು ಹೇಳಿದೆ, ನಮ್ಮೂರಲ್ಲಿ ಸೂರ್ಯನಿಗೆ ನಿದ್ದೆ ಕಮ್ಮಿ ಬೆಳಗ್ಗೆ 7.30 ಗಂಟೆಗೇ ಎದ್ದು ಬೆಂಕಿ ಹಚ್ತಾನೆ, ಸಂಜೆ 5.30 ಗೆ ಬೆಂಕಿ ಆರಿದ್ರೂ ಹೊಗೆಯ ಕಾವು ಹಾಗೇ ಇರುತ್ತೆ ಜೊತೆಗೆ ಕಾದ ಭೂಮಿಯೊಳಗಿನ ಕೆಂಡ 8 ಘಂಟೆಯವರೆಗೆ ಬಿಸಿ ಕೊಡ್ತಾ ಇರತ್ತೆ... ಆಮೇಲೆ ಸ್ವಲ್ಪ ತಂಪು ಅನ್ನಿಸಿದ್ರೆ ಪುಣ್ಯ..... ಹಗಲಲ್ಲಿ ಮೀನಿಗೆ ಮಸಾಲೆ ಹಚ್ಚಿ ಹೊರಗಿಟ್ರೆ ಫ್ರೈ ರೆಡಿ🤣🤣 **ಶ್ರೀ**