Monday, August 24, 2026

ಬಾಳಿಗೊಂದು direction...

 #ತರಲೆ##ಮದ್ವೆ ಆದ ಮೇಲೆ ಬದುಕಿಗೆ ಒಂದು direction ಸಿಕ್ಕತ್ತೆ ಅಂತ ದೊಡ್ಡವರು ಸತ್ಯಾನೆ ಹೇಳ್ತಾ ಇದ್ರು ಅನ್ಸುತ್ತೆ..... ಇತ್ತೀಚಿಗೆ ಮದ್ವೆ ಆದ ಹುಡುಗರೆಲ್ಲ ಹೆಂಡ್ತೀರು ತೋರಿಸೋ direction ಅಲ್ಲೇ ಹೋಗ್ತಾ ಇದ್ದಾರೆ 🤣🤣**ಶ್ರೀ**

Friday, August 21, 2026

Online....

 #ತರಲೆ##ಇತ್ತೀಚೆಗೆ ಎಲ್ಲಾ online...... Bachelors insta, tinder, bumble ಅಲ್ಲಿ ಹಕ್ಕಿಗಳ ಹುಡುಕಾಟದಲ್ಲಿದ್ರೆ,  ಮದ್ವೆ ಅದ ಪುಣ್ಯಾತ್ಮರು bigbasket, zepto ಅಲ್ಲಿ ಆಫರ್ ಹುಡುಕಾಟದಲ್ಲಿ, ಮಕ್ಕಳು you tube ನಲ್ಲಿ 🤣🤣**ಶ್ರೀ**

Friday, August 14, 2026

ಪ್ರೀತಿ ಮತ್ತು ಭಯ

 #ತರಲೆ##ನಮ್ ದೇಶದ ಸದ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ honeymoon ಗೆ ಹೋಗೋವಾಗ safety ಗೆ ಅಪ್ಪ ಅಮ್ಮನನ್ನು ಜೊತೆಗೆ ಕರ್ಕೊಂಡು ಹೋಗೋವಷ್ಟು..... ಹುಡುಗ ಸೂಟ್ಕೇಸ್ ಅಲ್ಲಿ ತುಂಬುತ್ತಾನೋ ಅಥವಾ ಹುಡುಗಿ ಬೆಟ್ಟದಿಂದ ತಳ್ತಾಳೋ ಯಾರಿಗೆ ಗೊತ್ತು, ನಮ್ಮವ್ರು ಜೊತೆಗಿದ್ರೆ ಒಳ್ಳೇದಲ್ವಾ ...🤣🤣**ಶ್ರೀ**

Thursday, August 13, 2026

ಸಂಬಳ ಮತ್ತೆ ರಸಂ

 ##ತರಲೆ##ಸಂಬಳ ಅನ್ನೋದು ಬಾಳೆ ಎಲೆಯಲ್ಲಿ ಅನ್ನದ ಮೇಲೆ ಹಾಕಿದ ರಸಂ ತರ ... ಯಾವಾಗ ಎಲ್ಲಿಂದ ಹೇಗೆ ಸುರಿದು ಹೋಗತ್ತೆ ಅನ್ನೋದೇ ಗೊತ್ತಾಗಲ್ಲ. ಸಾಲದು ಅಂತ ಎಲೆಯಲ್ಲಿ emi, ಬಾಡಿಗೆ ಅನ್ನೋ ತೂತುಗಳು ಬೇರೆ ...ಮತ್ತೆ ರಸಂ ಬೇಕಾದರೆ ಬಡಿಸುವವನಿಗೆ ಕಾಯುವಂತೆ, ನಾವು ಒಂದನೇ ತಾರೀಕಿನ ವರೆಗೆ ಕಾಯಬೇಕು 🤣🤣##ಶ್ರೀ##


Tuesday, August 11, 2026

ಊರು

 ##ತರಲೆ##ಯಾರೋ ಕೇಳಿದ್ರು ಊರು ಯಾಕೆ ಇಷ್ಟ ಅಂತ? ನಾನು ಹೇಳಿದೆ ಅಲ್ಲಿ ಎಲ್ಲಾ ಇದೆ tension ಒಂದು ಬಿಟ್ಟು.... ಇಲ್ಲೂ ತಲೆ ಕೆಡಿಸೋಕೆ ಸಾವಿರ ವಿಷಯಗಳಿವೆ, ನೆಮ್ಮದಿಯೊಂದನ್ನು ಬಿಟ್ಟು..🙄🙄**ಶ್ರೀ**

Monday, August 10, 2026

Insta ತವರುಮನೆ

 ##ತರಲೆ##ಹಂಸದಂತ ಗಂಭೀರ್ಯದಿಂದ ನಡೆಯೋ ನಾರೀ ಮಣಿಯರು,  ತಿರುಗಿ ತಿರುಗಿ ತಿರುಗಿಸಿಕೊಂಡು catwalk ಮಾಡೋ ಸುರಸುಂದರಿಯರು, ಇವರ ಹಿಂದೆ ನವಿಲಿನ ನಾಟ್ಯ ಮಾಡ್ತಾ ಕಾಣಿಸಿಕೊಳ್ಳೋ ಹುಡುಗರು... Instagram ಅಂದರೆ ಇವರೆಲ್ಲರ ತವರುಮನೆ ಅನ್ನಬಹುದೇನೋ 🤣🤣**ಶ್ರೀ**

Friday, August 7, 2026

ಟ್ಯಾಕ್ಸ್

 ತರಲೆ##ದುಡಿದು ಸಂಬಳ ತಗೋತೀವಿ ಅಂದ್ರೆ tax, ಹಸಿದಿದೆ ಅಂತ ಹೋಟೆಲಿಗೆ ಹೋದ್ರೆ tax, ಗಾಡಿ ತಗೊಂಡ್ರೆ tax, ಗಾಡಿಗೆ ಪೆಟ್ರೋಲ್ ಹಾಕಿಸಿದ್ರೆ tax, ಖರ್ಚು ಮಾಡಿದ್ರೆ tax, ಕೂಡಿ ಇಟ್ರು tax.... ಏನು ಮಾಡೋದು ಅಂತ ಯೋಚ್ನೆ ಮಾಡಕ್ಕೂ ಭಯ, ಮುಂದೆ ಯೋಚ್ನೆ ಮಾಡಿದ್ದಕ್ಕೂ tax ಹಾಕ್ತಾರೋ ಏನೋ ಅಂತ 🤣🤣**ಶ್ರೀ**

Wednesday, August 5, 2026

ಸಾಧನೆ

 ##ತರಲೆ##ಸದ್ಯದ ಪರಿಸ್ಥಿತಿ.....ವಯಸ್ಸು ಏಣಿ ಏರ್ತಾ ಇದ್ರೆ, ಸಾಧನೆ ಪಾತಾಳದತ್ತ ನಾಗಲೋಟದಲ್ಲಿ ಹೋಗ್ತಾ ಇದೆ. ದುಡಿಮೆ ಆಮೆ ನಡಿಗೆಯಲ್ಲಿ ಹೋಗ್ತಾ ಇದ್ರೆ, ಖರ್ಚು ನೂರರ ವೇಗದಲ್ಲಿ ಸಾಗ್ತಾ ಇದೆ. ಜೀವನದ ಮೈಲಿಗಲ್ಲುಗಳಲ್ಲಿ ಸ್ಪಷ್ಟವಾಗಿ ಕಾಣಿಸ್ತಾ ಇರೋದು ಲೋನುಗಳು ಮಾತ್ರ 🤣🤣**ಶ್ರೀ **