Wednesday, April 30, 2025

ಅಕ್ಷಯ ತೃತೀಯ

 ##ತರಲೆ## ಹೆಂಡ್ತಿ ಅಂದ್ಲು ಇವತ್ತು ಅಕ್ಷಯ ತೃತೀಯ, ಇವತ್ತಿನ ದಿನ ಗೋಲ್ಡ್ ತಗೊಂಡ್ರೆ ತುಂಬಾ ಒಳ್ಳೇದು ಅಂತ. ನಾನಂದೆ ಇವತ್ತಿನ ಗೋಲ್ಡ್ ರೇಟ್ ನೋಡ್ತಾ ಇದ್ರೆ ಅಬ್ಬಬ್ಬಾ ಅಂದ್ರೆ Zomato ದಲ್ಲಿ gold membership ತಗೋಬೋದು ಅಷ್ಟೇ ಅಂತ**ಅಡುಗೆ ಮನೇಲಿ ಲಘು ಭೂಕಂಪ🤣🤣🤣**ಶ್ರೀ**

Tuesday, April 29, 2025

ಶಿರಾಡಿ

 ##ತರಲೆ ## ಯಾರೋ ಕೇಳಿದ್ರು ಧರ್ಮಸ್ಥಳಕ್ಕೆ ಹೋಗಕ್ಕೆ ಶಿರಾಡಿ ರಸ್ತೆ ಹೇಗಿದೆ ಅಂತ. ನಾನಂದೆ ನೀವು ಗೂಗಲ್ ಮ್ಯಾಪ್ ಅಲ್ಲಿ ಧರ್ಮಸ್ಥಳ destination ಹಾಕಿ ಶಿರಾಡಿ ಘಾಟಿ ರೂಟ್ select ಮಾಡಿದ್ರೆ, ಗೂಗಲ್ ಈ ದಾರಿಯಲ್ಲಿ ನಿಜವಾಗಿ ಹೋಗ್ಲೇಬೇಕಾ, ನಾನೇನಾದರೂ ಬೇರೆ ದಾರಿ ತೋರಿಸ್ಲಾ ಅಂತ ಕೇಳೋವಷ್ಟು ಕಿತ್ತು ಹೋಗಿದೆ ಅಂತ. ರೋಡಿನ ಪರಿಸ್ಥಿತಿ ನೋಡಿ ಸಕಲೇಶಪುರದಲ್ಲೇ ಮಂಜುನಾಥನ ದರ್ಶನ ಆದರೂ ಆಗಬಹುದು ಅಂದೆ🤣🤣🤣**ಶ್ರೀ**

Monday, April 28, 2025

OTP

 ##ತರಲೆ## ಇತ್ತೀಚಿಗೆ ಎಲ್ಲದಕ್ಕೂ OTP ಕೇಳ್ತಾರೆ..... ಎಲ್ಲಿಯವರೆಗೆ ಅಂದ್ರೆ ಹೊಗೆ ಹಾಕಿಸಿಕೊಳ್ಳೋ ಟೈಮ್ ಬಂದಾಗ ಯಮರಾಜರು ಬಂದು OTP ಕೇಳ್ತಾರೆ, ಕಡೆಗೆ ಯಮಲೋಕಕ್ಕೆ ಕರ್ಕೊಂಡು ಹೋಗೋದಕ್ಕಿಂತ ಮೊದಲು 5 ಸ್ಟಾರ್ ರೇಟಿಂಗ್ ಕೇಳಿದ್ರು ಕೇಳಬಹುದು... 🤣🤣**ಶ್ರೀ**

Saturday, April 26, 2025

ಬೆಲೆಯೇರಿಕೆ

 ##ತರಲೆ ## ಕಳೆದ ಕೆಲವು ವರ್ಷಗಳಿಂದ ಬೆಲೆಯೇರಿಕೆಯ ಪರಿ. ಹಾಲು -10%, ಮನೆಬಾಡಿಗೆ-20%, ಸ್ಕೂಲ್ ಫೀಸು-10-15%, ಕರೆಂಟ್-20%, ನೀರು-5%, ಚಿನ್ನ -40%, ಬೆಳ್ಳಿ-50%, ಇದೆಲ್ಲದರಿಂದ stress-100%. ಇನ್ನು ಸಂಬಳ....? ಅದು ಪಾತಾಳ 😭😭😭**ಶ್ರೀ**

Monday, April 21, 2025

ಕೇಶರಾಶಿಯಿಂದ ಕಸದ ರಾಶಿಯವರೆಗೆ

 ##ತರಲೆ ## ಮೊದಲು ತಲೆ ಮೇಲೆ ಕೇಶರಾಶಿ ಇರ್ತಾ ಇತ್ತು, ಈಗ ಉದುರಿ ಉದುರಿ ಕಸದ ರಾಶಿಗೆ ಹೋಗ್ತಾ ಇದೆ... ತಲೆ ಮೇಲೆ ಜಾಗ ಕೊಟ್ಟು ಎಣ್ಣೆ, ಶಾಂಪೂ, ಎಲ್ಲಾ ಹಾಕಿ ಇಷ್ಟು ವರ್ಷ ಚೆನ್ನಾಗಿ ನೋಡಿಕೊಂಡಿದ್ರೂ ತಲೆಗೆ ಡೈವೋರ್ಸ್ ಕೊಟ್ಟು ಕಾಲ ಕೆಳಗೆ ಕಸದ ರಾಶಿ ಸೇರ್ತಾ ಇದೆ. ಎಂತಾ ಅವಸ್ಥೆ ಮಾರ್ರೆ, ಒಳ್ಳೆಯತನಕ್ಕೆ ಕಾಲವೇ ಇಲ್ಲ🤣😭🤣**ಶ್ರೀ**

Thursday, April 17, 2025

Nonveg....

 ##ತರಲೆ ##Nonveg ತಿನ್ನೋವವರಿಗೆ ಪ್ರೊಟೀನ್, ವಿಟಮಿನ್ ಕೊರತೆ ಕಂಡುಬರೋದು ಕಮ್ಮಿ ಅಂತೆ.... ಯಾಕೆ ಅಂದ್ರೆ ಕೋಳಿ, ಕುರಿ, ಮೀನುಗಳು ಕಷ್ಟಪಟ್ಟು ಅದು ಇದು ಅಂತ ತಿಂದು ಪ್ರೊಟೀನ್ ವಿಟಮಿನ್ ಎಲ್ಲಾ ಸರಿ ಮಾಡಿಕೊಂಡಿರುತ್ತೆ. ಇವರು ಇಷ್ಟಪಟ್ಟು ಅದನ್ನು ತಿಂತಾರೆ, ಅಲ್ಲಿಗೆ ಫುಲ್ ಬ್ಯಾಲೆನ್ಸ್... 🤣🤣**ಶ್ರೀ**

Wednesday, April 16, 2025

ಟ್ರಂಪ್

 ##ತರಲೆ## Globalisation ಸೈಡ್ ಎಫೆಕ್ಟ್ ಗಳು ...?ಅಮೇರಿಕಾದಲ್ಲಿ ಎಣ್ಣೆ ತಿಂಡಿ ತಿಂದು  ಟ್ರಂಪ್ ಕೆಮ್ಮಿದರೆ ಬೇರೆ ದೇಶಗಳಲ್ಲಿ ಇರೋರು cough syrap ತೊಗೋಬೇಕು ಅನ್ನೋ ಪರಿಸ್ಥಿತಿ 🤣🤣 **ಶ್ರೀ **

Tuesday, April 15, 2025

ನಾಯಿಪಾಡು

 ##ತರಲೆ## ನಮ್ಮ ಬೆಂಗಳೂರಿನಲ್ಲಿ ಮೂಲ ಬೆಂಗಳೂರಿಗರು 40% ಇದಾರಂತೆ, ಬೀದಿ ನಾಯಿಗಳು 10% ಇದೆಯಂತೆ, ಉಳಿದ 50% ಇಂಜಿನಿಯರುಗಳಂತೆ... ಬೀದಿನಾಯಿಗೆ ಅಂತ ಕಲ್ಲೆಸೆದರೆ ಇಂಜಿನಿಯರುಗಳ ಮೇಲೆ ಬೀಳೋ ಚಾನ್ಸೇ ಜಾಸ್ತಿ, ಒಟ್ಟಿನಲ್ಲಿ ನಮ್ಮಂತ ಇಂಜಿನಿಯರುಗಳದ್ದು ನಾಯಿಪಾಡೇ ಸರಿ 🤣🤣**ಶ್ರೀ**

Monday, April 14, 2025

ಸೆಕೆ ಸೆಕೆ

 ##ತರಲೆ## ಎಂತಾ ಸೆಕೆ ಮಾರ್ರೆ. ಹೊರಗಡೆ 35°C ಇದ್ರೆ, ಮೆಟ್ರೋ ಮತ್ತೆ ಆಫೀಸಿಲ್ಲಿ 20°C. ಒಂತರಾ ತಂದೂರಿ ಬೇಯಿಸಿ ಫ್ರೀಜರ್ ಅಲ್ಲಿ ಇಟ್ಟ ಹಾಗೆ ಪರಿಸ್ಥಿತಿ. ಈ ಬಡ ಜೀವದ ಒಳಗೆ ಅದೇನಾಗ್ತಾ ಇದೆಯೋ ದೇವರಿಗೇ ಗೊತ್ತು 🤣🤣**ಶ್ರೀ**

Friday, April 11, 2025

RCB....

 ##ತರಲೆ## Dual Personality ಅಂದ್ರೆ...?ಒಂದು ಕಡೆ RCB ಸೊಲ್ತು ಅಂತ ಬೇಜಾರು..... ಇನ್ನೊಂದು ಕಡೆ KL ರಾಹುಲ್ ಚಚ್ಚಿದ ಅಂತ ಖುಷಿ 🤣🤣**ಶ್ರೀ **

ಸ್ಕೂಲ್ ಫೀಸು

 ##ತರಲೆ## ಇವತ್ತಿನ ಸ್ಕೂಲುಗಳು ಹೇಗಿದಾವೆ ಅಂದ್ರೆ ಮಕ್ಕಳು ಉದ್ದಾರ ಆಗ್ತಾರೋ ಇಲ್ವೋ ಗೊತ್ತಿಲ್ಲ, ಆದ್ರೆ fees ತಗೊಂಡು ತಗೊಂಡು school ಮ್ಯಾನೇಜ್ ಮೆಂಟ್ ಮಾತ್ರ ಉದ್ದಾರ ಆಗ್ತಾ ಇದಾರೆ🤣🤣 **ಶ್ರೀ**

Out of focus

 ##ತರಲೆ## ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ... ನಂತರ ಅನ್ನಿಸಿದ್ದು...ಮಗಳ ಹಾಡು ಮತ್ತು ಡಾನ್ಸ್ ರೆಕಾರ್ಡ್ ಮಾಡೋ ಬರದಲ್ಲಿ ದೇವ್ರು ಕೊಟ್ಟ sooper focus ಕಣ್ಣು ಬಿಟ್ಟು ಕ್ಯಾಮರಾ ಕಣ್ಣಲ್ಲಿ out of focus ಅಲ್ಲಿ ಪ್ರೋಗ್ರಾಮ್ ನೋಡಿದ್ನಲ್ಲ, ನೈಜತೆ ಮಿಸ್ ಆಯ್ತು ಅಂತ... 🤣🤣**ಶ್ರೀ**

Thursday, April 10, 2025

ಹೋಟೆಲ್

 ##ತರಲೆ ##ಹೋಟೆಲ್ ಗೆ ಹೋಗಿದ್ವಿ... ಯಾವುದೋ ಒಂದು item ಖಾರವಾಗಿತ್ತು. ಹೆಂಡ್ತಿ ಅಂದ್ಳು ಮನೆ ಅಡಿಗೆ ತರ ಮಾಡಕ್ಕೆ ಇವ್ರಿಗೆ ಏನು ಪ್ರಾಬ್ಲಮ್. ನಾನಂದೆ ಹೋಟೆಲ್ ಗೆ ಹೋಗಿ homely ಫುಡ್ ಕೇಳೋದಾದ್ರೆ ಅಲ್ಲಿವರೆಗೆ ಯಾಕೆ ಹೋಗ್ಬೇಕು. ಮನೇಲೇ ತಿನ್ನಬಹುದಲ್ಲ ಅಂತ. ಆಮೇಲೆ ಎದುರಿದ್ದ ತಟ್ಟೆ ಲೋಟಗಳು ಇದ್ದಕ್ಕಿದ್ದಂತೆ ಸೌಂಡ್ ಮಾಡಿದಂತೆ ಅನಿಸ್ತು 🤣🤣**ಶ್ರೀ**

Wednesday, April 9, 2025

Chilled beer

##ತರಲೆ ## ಒಬ್ಬ  ಬಾರಿನಲ್ಲಿ child ಬಿಯರ್ ಬೇಕು ಅಂತ ಗಲಾಟೆ ಮಾಡ್ತಾ ಇದ್ನಂತೆ ಬಾರಿನವರಿಗೆ ಆ ತರದ ಯಾವ ಬಿಯರ್ ಇಲ್ಲಾ ಅಂತ ಹೇಳಿ ಹೇಳಿ ಸಾಕಾಯ್ತಂತೆ. ಕಡೆಗೆ ಗೊತ್ತಾಗಿದ್ದು ಅವನು ಕೇಳ್ತಾ ಇದ್ದಿದ್ದು child beer ಅಲ್ಲ chilled beer ಅಂತ 🤣🤣**ಶ್ರೀ**

Tuesday, April 8, 2025

ಮನಿ ಪ್ಲಾಂಟ್ ಮತ್ತು ಗೋಲ್ಡ್

##ತರಲೆ## ಅಡಿಗೆ ಮನೆಯಲ್ಲಿ ತೂಗಿ ಹಾಕಿದ್ದ money plant ಇದ್ದಕ್ಕಿದ್ದಂತೆ ಕಪ್ಪಾಗಿ ಒಣಗಿತ್ತು, ಯಾಕಿರಬಹುದು ಅಂತ ಹೆಂಡ್ತಿ ಕೇಳ್ತಾ ಇದ್ಲು... ನಾನಂದೆ ನೀನು ದಿನಾ gold ರೇಟ್ ಜಾಸ್ತಿ ಆಗ್ತಾನೆ ಇದ್ಯಲ್ಲ ಅಂತ ಗೊಣಗಾಡ್ತಾ ಇರ್ತೀಯಲ್ಲ ಅದಕ್ಕೇ ಬೇಜಾರು ಮಾಡ್ಕೊಂಡು ಅದು ಆತ್ಮಹತ್ಯೆ ಮಾಡಿಕೊಂಡಿದೆ ಅಂದೆ... ""ಅಡುಗೆ ಮನೇಲಿ ಭೂಕಂಪ ""🤣🤣🤣**ಶ್ರೀ**

Puc ರಿಸಲ್ಟ್

 ##ತರಲೆ ##PUC result ಅಂತೆ, ಮುಂದಿನ ಆಯ್ಕೆಗಳು........Engineer ಆಗಿ ಕೆಲಸ ಮಾಡ್ತಾ ಇದೀನಿ ಅಂತ ಎಲ್ಲರಿಗೂ ಮೋಸ ಮಾಡೋದ? ಡಾಕ್ಟರ್ ಆಗಿ ರೋಗಿಗಳಿಗೆ ಅವರ ದೇಹದಲ್ಲಿ ಏನೂ ಸರಿಯಾಗಿ ಕೆಲಸ ಮಾಡ್ತಾ ಇಲ್ಲ ಅನ್ನೋದ?  Start up ಮಾಡಿ loss ಅಂತ close ಮಾಡೋದ?  ಲಾಯರ್ ಆಗಿ ಇವರೆಲ್ಲರಿಗೆ ನ್ಯಾಯ ಕೊಡಿಸ್ತೀನಿ ಅನ್ನೋದ? ಅಥವಾ Politician ಆಗಿ ಇವಲ್ಲರಿಗೆ ಆಶ್ವಾಸನೆ ಕೊಡೋದ?🤣🤣🤣**ಶ್ರೀ **

Saturday, April 5, 2025

ಇಸ್ಪೀಟು

 ##ತರಲೆ##ಯುಗಾದಿ ಟೈಮ್ ಅಲ್ಲಿ ಇಸ್ಪೀಟ್ ಆಡಿದ್ರೆ ಪೊಲೀಸ್ ಬಂದು ಅರೆಸ್ಟ್ ಮಾಡ್ತಾರಂತೆ.... ಆದ್ರೆ junglerummy ಅಲ್ಲಿ online ಆಡಿ ಅಂತ ಇರೋ ಬರೋ ದೊಡ್ಡ ಮನುಷ್ಯರೆಲ್ಲ ಟೀವೀಲಿ ಬಂದು ಹೇಳ್ತಾರೆ, ಕಾಸಿದ್ದವರು ಮಾಡಿದ್ದೆಲ್ಲ ಸರಿ ಅಲ್ವಾ.🤣🤣**ಶ್ರೀ**

Friday, April 4, 2025

ಗೂಗಲ್ ಮ್ಯಾಪು

 ##ತರಲೆ## ಇನ್ನು ಮುಂದೆ Google Map ಭಾರತದಲ್ಲಿ work ಆಗಲ್ಲ ಅಂತೆ.... ಕಾರಣ? ಸರಿ ಇರೋ ರೋಡ್ ಅಲ್ಲಿ ಯಾವಾಗ ಗುಂಡಿ ಬೀಳತ್ತೋ, ಯಾವ ಕಾರಣಕ್ಕೆ ಯಾವ ರೋಡ್ ಯಾವಾಗ ಮುಚ್ಚತ್ತೋ, ಸರಿ ಇರೋ ರೋಡನ್ನು ಯಾವಾಗ ಅಗೆಯುತ್ತಾರೋ ಅಂತ google ಗೆ ಗೊತ್ತಾಗದೆ server crash ಆಗ್ತಾ ಇದೆ ಅಂತೆ.... 🤣🤣***ಶ್ರೀ***

Thursday, April 3, 2025

RCB ಮತ್ತೆ ಟ್ಯಾಕ್ಸ್

 ##ತರಲೆ## ಬೆಂಗಳೂರಲ್ಲಿ ಮ್ಯಾಚ್ win ಆದ್ರೆ ಕರ್ನಾಟಕ govt ಅದಕ್ಕೂ tax ಹಾಕತ್ತೆ ಅಂತ RCB ಗೆ ಭಯ ಇತ್ತು.....ಅದ್ಕೇ ನಿನ್ನೆ ಮ್ಯಾಚ್ GT ಗೆ ಅರ್ಪಣೆ🤣🤣🤣 ***ಶ್ರೀ **

Tuesday, April 1, 2025

ಏಪ್ರಿಲ್ ಫೂಲ್

 ##ತರಲೆ ##ಆಡೋ ಮಕ್ಕಳಿಂದ ಹಿಡಿದು ಕಬ್ಬಿನಂತೆ ಅರೆಯೋ ಕೆಲಸದಿಂದ, ಕತ್ತು ಕುಯ್ಯೋ ಸರಕಾರದಿಂದ, ಅಗತ್ಯದ ಹಾಲಿನಿಂದ, relax ಮಾಡಿಸೋ ಆಲ್ಕೋಹಾಲ್ ನಿಂದ, ಕಣ್ಣೀರು ಹಾಕಿ ಮೋಸ ಮಾಡೋ ಒಳ್ಳೇ ಜನಗಳಿಂದ....ನಿರಂತರವಾಗಿ Fool ಆಗ್ತಾ ಇರೋ ಮಹಾಜನರೆಲ್ಲರಿಗೂ (ನನ್ನನ್ನೂ ಸೇರಿಸಿ) ಏಪ್ರಿಲ್ ಫೂಲ್ ಶುಭಾಶಯಗಳು🤣🤣🤣**ಶ್ರೀ**